Sexual Wellness: ಸಾಂಕ್ರಾಮಿಕದ ಸಮಯದಲ್ಲಿ ಲೈಂಗಿಕ ಆರೋಗ್ಯ, ಸ್ವಚ್ಛತೆಗಾಗಿ ಇಲ್ಲಿದೆ ಟಿಪ್ಸ್‌

ಲೈಂಗಿಕ ನಿರಾಸಕ್ತಿಯ ಕುರಿತು ಮುಕ್ತವಾಗಿ ಮಾತನಾಡಲು ಹಿಂಜರಿಯುವುದೂ ಸಮಸ್ಯೆ ಉಲ್ಬಣಗೊಳಿಸುತ್ತಿದೆ. ತೀವ್ರ ಮದ್ಯಪಾನ ಹಾಗೂ ಧೂಮಪಾನದಂತಹ ಹವ್ಯಾಸಗಳಿಂದಲೂ ಲೈಂಗಿಕ ಆರೋಗ್ಯ ಕುಂದುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಲೈಂಗಿಕ ನಿರಾಸಕ್ತಿಯ ಕುರಿತು ಮುಕ್ತವಾಗಿ ಮಾತನಾಡಲು ಹಿಂಜರಿಯುವುದೂ ಸಮಸ್ಯೆ ಉಲ್ಬಣಗೊಳಿಸುತ್ತಿದೆ. ತೀವ್ರ ಮದ್ಯಪಾನ ಹಾಗೂ ಧೂಮಪಾನದಂತಹ ಹವ್ಯಾಸಗಳಿಂದಲೂ ಲೈಂಗಿಕ ಆರೋಗ್ಯ ಕುಂದುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಲೈಂಗಿಕ ನಿರಾಸಕ್ತಿಯ ಕುರಿತು ಮುಕ್ತವಾಗಿ ಮಾತನಾಡಲು ಹಿಂಜರಿಯುವುದೂ ಸಮಸ್ಯೆ ಉಲ್ಬಣಗೊಳಿಸುತ್ತಿದೆ. ತೀವ್ರ ಮದ್ಯಪಾನ ಹಾಗೂ ಧೂಮಪಾನದಂತಹ ಹವ್ಯಾಸಗಳಿಂದಲೂ ಲೈಂಗಿಕ ಆರೋಗ್ಯ ಕುಂದುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

  • Share this:

ಲೈಂಗಿಕ ಆರೋಗ್ಯ ಎಂಬುದು ದಾಂಪತ್ಯ ಜೀವನದ ಸುಭದ್ರ ಅಡಿಪಾಯವಾಗಿದ್ದು ಇದರಿಂದ ದಂಪತಿ ನಡುವಿನ ಅನ್ಯೋನ್ಯತೆ ಹೆಚ್ಚಾಗುತ್ತದೆ. ಲೈಂಗಿಕ ಸುಖದಲ್ಲಿ ಆಸಕ್ತಿ ಕಳೆದುಕೊಳ್ಳುವುದರಿಂದ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ದಾಂಪತ್ಯ ಜೀವನದಲ್ಲಿ ಉಂಟಾಗುತ್ತಿರುವ ಹೆಚ್ಚಿನ ಸಮಸ್ಯೆಗಳಿಗೆ ಲೈಂಗಿಕ ಚಟುವಟಿಕೆಗಳಲ್ಲಿ ಆಸಕ್ತಿ ಕಳೆದುಕೊಂಡಿರುವುದೇ ಪ್ರಮುಖ ಕಾರಣ ಎಂಬುದು ಅಧ್ಯಯನಗಳಿಂದ ತಿಳಿದು ಬಂದಿರುವ ಮಾಹಿತಿಯಾಗಿದೆ. ಉದ್ಯೋಗ, ಕಚೇರಿ ಕೆಲಸಗಳ ಒತ್ತಡ, ಆರ್ಥಿಕ ಸಂಕಷ್ಟಗಳು, ಸಂಬಂಧದಲ್ಲಿ ಸಾಮರಸ್ಯ ಇಲ್ಲದಿರುವುದು, ಸಾಮಾಜೀಕರಣದ ಕೊರತೆ ಹೀಗೆ ಮುಂತಾದ ಕಾರಣಗಳಿಂದ ದಂಪತಿ ಲೈಂಗಿಕ ಜೀವನದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಲೈಂಗಿಕ ನಿರಾಸಕ್ತಿಯ ಕುರಿತು ಮುಕ್ತವಾಗಿ ಮಾತನಾಡಲು ಹಿಂಜರಿಯುವುದೂ ಸಮಸ್ಯೆ ಉಲ್ಬಣಗೊಳಿಸುತ್ತಿದೆ. ತೀವ್ರ ಮದ್ಯಪಾನ ಹಾಗೂ ಧೂಮಪಾನದಂತಹ ಹವ್ಯಾಸಗಳಿಂದಲೂ ಲೈಂಗಿಕ ಆರೋಗ್ಯ ಕುಂದುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.


ಲೈಂಗಿಕ ಆರೋಗ್ಯದ ಕೆಲವೊಂದು ಸಮಸ್ಯೆಗಳ ಮೇಲೆ ದೃಷ್ಟಿ ಹಾಯಿಸಿದರೆ ಇದರಲ್ಲಿ ಕ್ಯಾನ್ಸರ್, ಬಂಜೆತನ, ಮೂತ್ರದ ಸಮಸ್ಯೆಗಳು, ಮೂತ್ರದ ಸೋಂಕುಗಳು, ಲೈಂಗಿಕ ರೋಗಗಳು, ಸಂಭೋಗದಲ್ಲಿ ಉಂಟಾಗುವ ನೋವು, ಲೈಂಗಿಕ ಕಾಮನೆಗಳು ಇಲ್ಲದಿರುವುದು ಪ್ರಮುಖವಾಗಿವೆ.


ಹಾಗಾದರೆ ಲೈಂಗಿಕ ಆರೋಗ್ಯ ಕಾಪಾಡಿಕೊಳ್ಳಲು ಯಾವುದೇ ಸಲಹೆಗಳಿಲ್ಲವೇ ಎಂಬುದರತ್ತ ಕಣ್ಣು ಹಾಯಿಸಿದಾಗ ದೈಹಿಕ ಸ್ವಚ್ಛತೆ ಅತಿಮುಖ್ಯ ಪಾತ್ರ ವಹಿಸುವುದನ್ನು ನಾವು ಅರಿತುಕೊಳ್ಳಲೇಬೇಕಾಗುತ್ತದೆ. ಲೈಂಗಿಕ ಆರೋಗ್ಯ ಕಾಪಾಡಬೇಕು ಎಂದಾದಲ್ಲಿ ದೈಹಿಕ ಸ್ವಚ್ಛತೆ ಪ್ರಮುಖವಾದುದು. ಜೊತೆಗೆ ಇನ್ನೊಂದಿಷ್ಟು ಸಲಹೆಗಳನ್ನು ಪಾಲಿಸಬೇಕಾಗುತ್ತದೆ. ಆ ಸಲಹೆಗಳೇನು ಎಂಬುದನ್ನು ನೋಡೋಣ.


ಶೇವಿಂಗ್


ಪುರುಷರಿಗೆ ಅತಿ ಪ್ರಮುಖವಾದ ನೈರ್ಮಲ್ಯ ಸಲಹೆ ಇದಾಗಿದೆ. ನಿಯಮಿತವಾಗಿ ಶೇವ್ ಮಾಡುವುದು ಬೆವರನ್ನು ತೊಡೆದು ಹಾಕುತ್ತದೆ ಹಾಗೂ ಬ್ಯಾಕ್ಟೀರಿಯಾ ಸಂಗ್ರಹ ತಡೆಯುತ್ತದೆ. ಟ್ರಿಮ್ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. ಇನ್ನು ಖಾಸಗಿ ಭಾಗಗಳ ಶೇವಿಂಗ್ ಮಾಡುತ್ತಿದ್ದರೆ ರೇಜರ್‌ಗಳನ್ನು ಬಳಸದಿರಿ. ಇದರಿಂದ ತುರಿಕೆ ಉಂಟಾಗುವ ಸಾಧ್ಯತೆ ಇರುತ್ತದೆ.


ಮಾಯಿಶ್ಚರೈಸಿಂಗ್ ಉತ್ಪನ್ನಗಳು


ನಿಮ್ಮ ಜನನಾಂಗ ಪ್ರದೇಶದ ಶೇವಿಂಗ್ ಮಾಡಲು ನಿರ್ಧರಿಸಿದಲ್ಲಿ ಕ್ರಿಯೆಯ ನಂತರ ಮಾಯಿಶ್ಚರೈಸಿಂಗ್ ಹಚ್ಚಿಕೊಳ್ಳಿ. ಶೇವಿಂಗ್ ಫೋಮ್ ಹಚ್ಚಿ ನಂತರ ಶೇವ್ ಮಾಡಿ. ಮೃದುವಾದ ಮಾಯಿಶ್ಚರೈಸರ್ ಬಳಸಿ.


ಖಾಸಗಿ ಭಾಗಗಳ ಸ್ವಚ್ಛತೆ


ನಿಮ್ಮ ಜನನಾಂಗ ಭಾಗಗಳ ಸ್ವಚ್ಛತೆಗೆ ನೀವು ಪ್ರಮುಖ ಆಸಕ್ತಿ ವಹಿಸಬೇಕಾಗುತ್ತದೆ. ಈ ಭಾಗಗಳನ್ನು ನಿಯಮಿತವಾಗಿ ಸ್ವಚ್ಛಮಾಡುವುದು ಲೈಂಗಿಕ ಆರೋಗ್ಯದಲ್ಲಿ ಪ್ರಮುಖ ಹಂತವಾಗಿದೆ. ಇಂಟಿಮೇಟ್ ವಾಶ್ ಉತ್ಪನ್ನಗಳನ್ನು ಖರೀದಿಸುವಾಗ ಕೊಂಚ ದುಬಾರಿಯಾಗಿರುವ ಉತ್ಪನ್ನ ಖರೀದಿಸಿ ಇದರಿಂದ ತುರಿಕೆ, ಕಿರಿಕಿರಿ, ದದ್ದುಗಳು ಇರುವುದಿಲ್ಲ. ಹೆಚ್ಚು ತೊಳೆಯುವುದು ಇಲ್ಲವೇ ಒಣಗಿಸುವುದು ಈ ರೀತಿಯಾಗಿ ಮಾಡಬೇಡಿ.


ಉತ್ತಮ ಗುಣಮಟ್ಟದ ಒಳಉಡುಪುಗಳು


ನಿಮ್ಮ ಒಳಉಡುಪುಗಳನ್ನು ಧರಿಸುವಾಗ ತೊಳೆದು ಚೆನ್ನಾಗಿ ಒಣಗಿಸಿದ ಬಟ್ಟೆಗಳಿಗೆ ಆದ್ಯತೆ ನೀಡಿ. ಉತ್ತಮ ಗುಣಮಟ್ಟದ ಒಳಉಡುಪುಗಳ ಖರೀದಿ ಮಾಡಿ. ಹತ್ತಿಯಷ್ಟು ಮೃದುವಾದ ಒಳಉಡುಪುಗಳನ್ನು ಧರಿಸಿ. ಇದರಿಂದ ಬೆವರು ಉಂಟಾಗುವುದಿಲ್ಲ.


ಆರೋಗ್ಯಕರ ಆಹಾರ ಸೇವನೆ


ಆರೋಗ್ಯಕರ ಆಹಾರ ಸೇವನೆಯು ಬೆವರು ಹಾಗೂ ವಾಸನೆಯನ್ನು ನಿವಾರಿಸುತ್ತದೆ. ಸಿಟ್ರಸ್ ಹಣ್ಣುಗಳಾದ ಕಿತ್ತಳೆ, ಲಿಂಬೆ ಜೊತೆಗೆ ಪಾಲಾಕ್ ಸೊಪ್ಪುಗಳ ಸೇವನೆ ಕೂಡ ವೈಯಕ್ತಿಕ ಭಾಗಗಳ ಕಿರಿಕಿರಿ ನಿವಾರಿಸುತ್ತದೆ. ಸಾಕಷ್ಟು ನೀರು ಸೇವನೆ ಹಾಗೂ ಗ್ರೀನ್ ಟೀ ಸೇವನೆಯೂ ಪರಿಣಾಮಕಾರಿಯಾಗಿದೆ.


ವೈದ್ಯರೊಂದಿಗೆ ಸಮಾಲೋಚನೆ ನಡೆಸಿ


ನಿಮ್ಮ ಯಾವುದೇ ಲೈಂಗಿಕ ರೋಗಗಳ ಬಗ್ಗೆ ವೈದ್ಯರೊಂದಿಗೆ ಮುಕ್ತವಾಗಿ ಮಾತನಾಡಿ. ಪುರುಷರು ನಿಮಿರುವಿಕೆ ದೌರ್ಬಲ್ಯ ಸಮಸ್ಯೆಗಳಿಂದ ಬಳಲುತ್ತಿದ್ದರೆ ಕೂಡಲೇ ವೈದ್ಯರ ಸಲಹೆ ಪಡೆದುಕೊಳ್ಳುವುದು ಅನಿವಾರ್ಯವಾಗಿದೆ.

First published: