ಈ ವಿಚಾರಗಳನ್ನು ಅಳವಡಿಸಿಕೊಂಡರೆ ಸಂಬಂಧಗಳಲ್ಲಿ ಯಾವತ್ತೂ ಬಿರುಕು ಮೂಡುವುದಿಲ್ಲ


Updated:December 29, 2017, 6:22 PM IST
ಈ ವಿಚಾರಗಳನ್ನು ಅಳವಡಿಸಿಕೊಂಡರೆ ಸಂಬಂಧಗಳಲ್ಲಿ ಯಾವತ್ತೂ ಬಿರುಕು ಮೂಡುವುದಿಲ್ಲ
  • Share this:
ಪ್ರೀತಿಯ ಸಂಬಂಧಗಳಲ್ಲಿ ಚಿಕ್ಕ ಪುಟ್ಟ ಜಗಳಗಳಾಗುವುದು ಸಾಮಾನ್ಯ. ಆದರೆ ಕೆಲವೊಂದು ಬಾರಿ ಈ ಜಗಳಗಳು ಅದೆಷ್ಟು ಗಂಭೀರ ಸ್ವರೂಪ ಪಡೆಯುತ್ತವೆ ಎಂದರೆ ಈ ಸಂಬಂಧಗಳೇ ಮುರಿದು ಬೀಳುವ ಹಂತಕ್ಕೆ ಹೋಗುತ್ತವೆ. ಹೀಗಿರುವಾಗ ಬಹುತೇಕರು ತಮ್ಮ ಸಂಗಾತಿಯನ್ನು ತುಂಬಾ ಪ್ರೀತಿಸುತ್ತಾರೆ ಹಾಗೂ ಅವರನ್ನು ಕಳೆದುಕೊಳ್ಳಲು ಇಚ್ಛಿಸುವುದಿಲ್ಲ, ಅದರೆ ಕೋಪದಿಂದಾಗಿ ಎಲ್ಲವೂ ಕೆಟ್ಟು ಹೋಗುತ್ತದೆ. ಒಂದು ವೇಳೆ ನಿಮಗೆ ನಿಮ್ಮ ಸಂಬಂಧದ ಮೇಲೆ ಪ್ರೀತಿ ಇದ್ದರೆ, ತಪ್ಪು ಯಾರದ್ದೇ ಅಗಿದ್ದರೂ, ನಿಮ್ಮ ನಡುವಿನ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಲು ಪ್ರಯತ್ನಿಸಿ.

ನಿಮ್ಮ ನಡುವಿನ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಲು ಈ ಕೆಳಗಿನ ಟಿಪ್ಸ್ ಬಳಸಿಕೊಳ್ಳಿ

* ತಪ್ಪು ನಿಮ್ಮದಾಗಿದ್ದರೆ ಕ್ಷಮೆ ಕೇಳಲು ತಡವರಿಸದಿರಿ. ಯಾಕೆಂದರೆ ಕ್ಷಮೆ ಕೇಳುವುದರಿಂದ ನಿಮಗೇನೂ ಕೆಡುಕಾಗುವುದಿಲ್ಲ. ಬದಲಾಗಿ ನಿಮ್ಮ ಸಂಬಂಧ ಸರಿಯಾಗುತ್ತದೆ.

*ನಿಮ್ಮ ಸಂಗಾತಿ ನಿಮ್ಮ ಜೀವನದಲ್ಲಿ ಎಷ್ಟು ಸ್ಪೆಷಲ್ ಎಂಬ ವಿಚಾರವನ್ನು ನಿಮ್ಮ ಸಂಗಾತಿಗೆ ಮನದಟ್ಟು ಮಾಡಿ.

*ಪುರುಷರಿಗೆ ಹೋಲಿಸಿದರೆ, ಮಹಿಳೆಯರು ಬಹಳಷ್ಟು ಸೂಕ್ಷ್ಮ, ಭಾವನಾತ್ಮಕ ಹಾಗೂ ಸಂವೇದನಾಶೀಲರಾಗಿರುತ್ತಾರೆ. ಹೀಗಾಗಿ ತನ್ನ ಸಂಗಾತಿ ಹೇಳುವ ಸಣ್ಣ ಪುಟ್ಟ ಕಹಿ ಮಾತು ಕೂಡಾ ಅವರ ಮನ ನೋಯಿಸುತ್ತದೆ. ಹೀಗಾಗಿ ನೀವು ಅವರ ಬಳಿ ಮಾತನಾಡುವಾಗ ಯಾವ ಧಾಟಿಯಲ್ಲಿ ಮಾತನಾಡುತ್ತಿದ್ದೀರೆಂದು ನಿಮ್ಮ ಗಮನದಲ್ಲಿರಲಿ.

*ನಿಮ್ಮ ಮೇಲೆ ನೀವೇ ಖುದ್ದು ನಿಗಾ ವಹಿಸಿ, ನಿಜಕ್ಕೂ ನಿಮ್ಮ ವರ್ತನೆ/ನಡತೆ ಕಠೋರವಾಗಿದೆಯೇ ಎಂಬುವುದನ್ನು ಖಚಿತಪಡಿಸಿಕೊಳ್ಳಿ. ಹಲವಾರು ಬಾರಿ ನಿಮ್ಮ ಅಸಹಾಯಕತೆಯೂ ನಿಮ್ಮ ಸಂಬಂಧದ ನಡುವೆ ಬಿರುಕು ಮೂಡಿಸಬಹುದು.

*ಸಂಗಾತಿಯೊಡನೆ ಮಾತನಾಡಿ ಅವರ ಕೋಪಕ್ಕೆ ಕಾರಣವೇನೆಂದು ತಿಳಿಯಲು ಪ್ರಯತ್ನಿಸಿ. ನೀವು ಮಾತನಾಡುವುದರಿಂದ ಅವರ ಕೋಪ ಮರೆಯಾಗುವ ಸಾಧ್ಯತೆಗಳೂ ಇವೆ.
First published:December 29, 2017
ಮತ್ತಷ್ಟು ಓದಿರಿ
ಮುಂದಿನ ಸುದ್ದಿ