Green Chilly: ಹಸಿಮೆಣಸಿನಕಾಯಿ ಒಂದು ತಿಂಗಳವರೆಗೆ ತಾಜಾವಾಗಿರಬೇಕಂದ್ರೆ ಹೀಗೆ ಮಾಡಿ

ಊರುಗಳಲ್ಲಿ ಆದರೆ ತರಕಾರಿಗಳ ಮೇಲೆ ನೀರನ್ನು ಸಿಂಪಡಿಸಿ ಇರಿಸುತ್ತಾರೆ. ಈ ತರಕಾರಿಗಳನ್ನು ತಾಜಾವಾಗಿರಿಸಲು ಅನೇಕರು ಅನೇಕ ರೀತಿಯ ಮಾರ್ಗಗಳನ್ನು ಹುಡುಕುತ್ತಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಬನ್ನಿ ಹಾಗಾದರೆ ಇವತ್ತು ನಾವು ಈ ಹಸಿಮೆಣಸಿನಕಾಯಿಗಳನ್ನು ಒಂದಲ್ಲ, ಎರಡಲ್ಲ ತಿಂಗಳು ಗಟ್ಟಲೆ ಹೇಗೆ ತಾಜಾವಾಗಿರಿಸುವುದು ಅಂತ ತಿಳಿದುಕೊಳ್ಳೋಣ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಈ ಹಸಿರು ತರಕಾರಿಗಳನ್ನು (Vegetables) ಮಾರುಕಟ್ಟೆಯಿಂದ ಖರೀದಿ ಮಾಡಿಕೊಂಡು ಬಂದ ಕೂಡಲೇ ಅವುಗಳನ್ನು ಪ್ರತಿದಿನ ಒಂದರ ನಂತರ ಇನ್ನೊಂದು ಎಂಬಂತೆ ಅಡುಗೆ ಮಾಡಿ ಮುಗಿಸುವುದಕ್ಕೆ ನಮ್ಮ ನಿಮ್ಮ ಮನೆಯಲ್ಲಿರುವ ಗೃಹಿಣಿಯರು (Housewife) ಶುರು ಮಾಡುತ್ತಾರೆ. ಏಕೆಂದರೆ ಅವುಗಳನ್ನು ತುಂಬಾ ದಿನಗಳವರೆಗೆ ಇರಿಸಿದರೆ ಅವುಗಳು ತಮ್ಮ ತಾಜಾತನ ಕಳೆದುಕೊಳ್ಳುತ್ತವೆ ಎಂಬುದು ನಮಗೆಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಆದ್ದರಿಂದ ಪ್ರತಿದಿನ ಒಂದು ಹಸಿರು ಸೊಪ್ಪಿನ ಅಥವಾ ತರಕಾರಿಯ ಪಲ್ಯಗಳನ್ನು ಮಾಡಿ ಸೇವಿಸುತ್ತಾರೆ. ಅದರಲ್ಲೂ ಈ ಹಸಿರು ತರಕಾರಿಗಳು ಎಷ್ಟು ತಾಜಾವಾಗಿರುತ್ತವೆಯೋ (Fresh) ಅಷ್ಟು ಅಡುಗೆ ಮಾಡಿಕೊಂಡು ತಿನ್ನಲು ಯೋಗ್ಯವಾಗಿರುತ್ತವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಹಣ್ಣು ತರಕಾರಿಗಳನ್ನು ತಾಜಾವಾಗಿರಿಸುವುದು ಹೇಗೆ?
ಕೆಲವು ಹಸಿರು ತರಕಾರಿಗಳು ಒಂದೆರಡು ದಿನಗಳವರೆಗೆ ತಾಜಾವಾಗಿದ್ದರೆ, ಇನ್ನೂ ಕೆಲವು ತರಕಾರಿಗಳು ಬೇಗನೆ ತಾಜಾತನವನ್ನು ಕಳೆದುಕೊಳ್ಳುತ್ತವೆ ಎಂದು ಹೇಳಬಹುದು. ಕೆಲವರು ಈ ಹಸಿರು ತರಕಾರಿಗಳನ್ನು ಮನೆಗೆ ತಂದ ಕೂಡಲೇ ಅವುಗಳನ್ನು ಫ್ರಿಡ್ಜ್ ನಲ್ಲಿ ಇರಿಸುತ್ತಾರೆ. ಊರುಗಳಲ್ಲಿ ಆದರೆ ತರಕಾರಿಗಳ ಮೇಲೆ ನೀರನ್ನು ಸಿಂಪಡಿಸಿ ಇರಿಸುತ್ತಾರೆ. ಈ ತರಕಾರಿಗಳನ್ನು ತಾಜಾವಾಗಿರಿಸಲು ಅನೇಕರು ಅನೇಕ ರೀತಿಯ ಮಾರ್ಗಗಳನ್ನು ಹುಡುಕುತ್ತಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಬನ್ನಿ ಹಾಗಾದರೆ ಇವತ್ತು ನಾವು ಈ ಹಸಿಮೆಣಸಿನಕಾಯಿಗಳನ್ನು ಒಂದಲ್ಲ, ಎರಡಲ್ಲ ತಿಂಗಳು ಗಟ್ಟಲೆ ಹೇಗೆ ತಾಜಾವಾಗಿರಿಸುವುದು ಅಂತ ತಿಳಿದುಕೊಳ್ಳೋಣ.

ಮೆಣಸಿನಕಾಯಿಯನ್ನು ತಾಜಾವಾಗಿರಿಸುವುದು ಹೇಗೆ 
ಹಸಿರು ಮೆಣಸಿನಕಾಯಿಗಳು ಬಹಳ ಸುಲಭವಾಗಿ ಹಾಳಾಗುತ್ತವೆ ಮತ್ತು ಅವುಗಳನ್ನು ತಾಜಾವಾಗಿಡುವುದು ಗೃಹಿಣಿಯರಿಗೆ ಒಂದು ದೊಡ್ಡ ತಲೆ ನೋವು ಅಂತ ಹೇಳಿದರೆ ತಪ್ಪಾಗುವುದಿಲ್ಲ. ಏಕೆಂದರೆ ಹಸಿಮೆಣಸಿನಕಾಯಿ ನಾವು ಸಾರಿನಿಂದ ಹಿಡಿದು ಪಲ್ಯದವರೆಗೆ ಮತ್ತು ಅನೇಕ ರೀತಿಯ ತಿಂಡಿಗಳಲ್ಲಿಯೂ ಸಹ ವ್ಯಾಪಕವಾಗಿ ಬಳಸುತ್ತೇವೆ. ಹಾಗಾಗಿ ಹಸಿಮೆಣಸಿನಕಾಯಿಗಳನ್ನು ಖರೀದಿಸುವುದು ಮತ್ತು ಅದನ್ನು ತುಂಬಾ ದಿನಗಳವರೆಗೆ ತಾಜಾವಾಗಿರಿಸಿಕೊಳ್ಳುವುದು ತುಂಬಾನೇ ಮುಖ್ಯ ಸಹ ಆಗುತ್ತದೆ.

ಇದನ್ನೂ ಓದಿ: Breakfast: ಬೆಳಗಿನ ತಿಂಡಿಗೆ ರಾಜಗಿರಾ ಬಾಳೆಹಣ್ಣು ಪುರಿ ರೆಸಿಪಿ ಮಾಡಿ

ಆದರೆ ನೀವು ಹಸಿರು ಮೆಣಸಿನಕಾಯಿಗಳನ್ನು ಕೆಲವು ದಿನಗಳವರೆಗೆ ಅಲ್ಲ, ಒಂದು ತಿಂಗಳವರೆಗೆ ತಾಜಾವಾಗಿಡಬಹುದು ಎಂದು ನಾವು ನಿಮಗೆ ಹೇಳಿದರೆ ನೀವು ಒಂದು ಕ್ಷಣ ಆಶ್ಚರ್ಯ ಪಡಬಹುದು.

ಹಸಿಮೆಣಸಿನಕಾಯಿಗಳನ್ನು ತಾಜಾವಾಗಿರಿಸಲು ಈ ಸಲಹೆಗಳನ್ನು ಪಾಲಿಸಿರಿ
ಮೊದಲು, ಹಸಿಮೆಣಸಿನಕಾಯಿಯನ್ನು ಚೆನ್ನಾಗಿ ತೊಳೆಯಿರಿ. ಹಣ್ಣಾದ ಮತ್ತು ಹಾಳಾದವುಗಳನ್ನು ಬೇರ್ಪಡಿಸಿ. ನಂತರ ಹಸಿರು ಬಣ್ಣದಲ್ಲಿ ಕಾಣುವ ಮೆಣಸಿನಕಾಯಿಯ ಕಾಂಡಗಳನ್ನು ತೆಗೆದು ಹಾಕಿ. ಮೆಣಸಿನ ಕಾಯಿಗಳ ಮೇಲೆ ಇರುವ ಹೆಚ್ಚುವರಿ ನೀರನ್ನು ಒರೆಸಿ (ಕೊತ್ತಂಬರಿ ಸೊಪ್ಪು, ಪುದೀನ ಎಲೆಗಳು ಮತ್ತು ಟೊಮೆಟೊಗಳನ್ನು ಸಹ ನೀವು ಈ ರೀತಿ ಸಂಗ್ರಹಿಸಬಹುದು).

ಒಂದು ಗಾಳಿಯಾಡದ ಡಬ್ಬದ ಕೆಳಭಾಗದಲ್ಲಿ ಕೆಲವು ಟಿಶ್ಯೂ ಪೇಪರ್ ಗಳನ್ನು ಹರಡಿ. ಅದರ ಮೇಲೆ ತೊಳೆದ ಹಸಿಮೆಣಸಿನಕಾಯಿಗಳನ್ನು ಹಾಕಿರಿ. ಅವುಗಳ ಮೇಲೆ ಟಿಶ್ಯೂ ಶೀಟ್ ಅನ್ನು ಇರಿಸಿ. ವಾರಕ್ಕೊಮ್ಮೆಯಾದರೂ ಮೇಲ್ಭಾಗದಲ್ಲಿರುವ ಟಿಶ್ಯೂ ಶೀಟ್ ಅನ್ನು ಬದಲಾಯಿಸುವುದನ್ನು ಮರೆಯಬೇಡಿ. ಕೆಳಭಾಗದಲ್ಲಿ ಹಾಸಿರುವಂತಹ ಟಿಶ್ಯೂ ಶೀಟ್ ಅನ್ನು ಬದಲಾಯಿಸುವ ಅಗತ್ಯವಿಲ್ಲ.

ಇದನ್ನೂ ಓದಿ:  Ridge Gourd Benefits: ಕಣ್ಣಿನ ಸಮಸ್ಯೆಗೆ ಹೀರೆಕಾಯಿ ಪರಿಹಾರವಂತೆ, ಹೀಗೆ ಬಳಸಿ ನೋಡಿ

ಈ ರೀತಿ ಸಂಗ್ರಹಿಸಿದರೆ, ಹಸಿಮೆಣಸಿನಕಾಯಿಗಳನ್ನು ನೀವು ಒಂದು ತಿಂಗಳವರೆಗೆ ತಾಜಾವಾಗಿರಿಸಿಕೊಳ್ಳಬಹುದು. ಮತ್ತೊಂದು ವಿಧಾನವೆಂದರೆ ತೊಳೆದ ಹಸಿಮೆಣಸಿನಕಾಯಿಯನ್ನು ಮಿಕ್ಸರ್ ಜಾರ್ ನಲ್ಲಿ ರುಬ್ಬುವುದು. ಹಸಿರು ಮೆಣಸಿನ ಪೇಸ್ಟ್ ಅನ್ನು ಒಂದು ಟ್ರೇ ಗೆ ವರ್ಗಾಯಿಸಿ. ಕ್ಲಿಂಗ್ ಫಿಲ್ಮ್ ಬಳಸಿ ಈ ಟ್ರೇ ಯನ್ನು ಕವರ್ ಮಾಡಿ. ಇದನ್ನು ಕನಿಷ್ಠ 2 ಗಂಟೆಗಳ ಕಾಲ ಫ್ರಿಡ್ಜ್ ನಲ್ಲಿಡಿ ಮತ್ತು ನಂತರ ಹಸಿಮೆಣಸಿನ ಪೇಸ್ಟ್ ಅನ್ನು ಫ್ರೀಜರ್ ಸೇಫ್ ಬ್ಯಾಗ್ ಗೆ ವರ್ಗಾಯಿಸಿ ಮತ್ತು ಅದರಲ್ಲಿ ಗಾಳಿ ಹೋಗದಂತೆ ಮುಚ್ಚಿ ಅದನ್ನು ಫ್ರೀಜರ್ ನಲ್ಲಿರಿಸಿ. ಈ ಎರಡು ವಿಧಾನಗಳಿಂದ ಹಸಿಮೆಣಸಿನಕಾಯಿಗಳ ತಾಜಾತನವನ್ನು ತಿಂಗಳವರೆಗೆ ಕಾಪಾಡಿಕೊಳ್ಳಬಹುದು.
Published by:Ashwini Prabhu
First published: