• Home
  • »
  • News
  • »
  • lifestyle
  • »
  • Child Care: ಪೋಷಕರೇ, ಮಗುವಿನ ಮೂಳೆ ಆರೋಗ್ಯಕ್ಕೆ ಈ ಸಲಹೆ ಪಾಲಿಸಿ

Child Care: ಪೋಷಕರೇ, ಮಗುವಿನ ಮೂಳೆ ಆರೋಗ್ಯಕ್ಕೆ ಈ ಸಲಹೆ ಪಾಲಿಸಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Child Bone Health: ಮೂಳೆಯ ಆರೈಕೆಯು ನಮ್ಮ ದೇಹಕ್ಕೆ ಅತ್ಯಗತ್ಯವಾಗಿದೆ. ಪೋಷಕರು ಹೆಚ್ಚಾಗಿ ತಮ್ಮ ಮಗುವಿನ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮದ ಬಗ್ಗೆ ಕಾಳಜಿ ವಹಿಸುತ್ತಾರೆ.

  • Share this:

ನಮ್ಮ ದೇಹದಲ್ಲಿರುವಂತಹ (Body) ಮೂಳೆಗಳ ಮತ್ತು ಕೀಲುಗಳ (Bones) ಪಾತ್ರ ತುಂಬಾನೇ ಮುಖ್ಯವಾಗಿರುತ್ತದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಅದರಲ್ಲೂ ಚಿಕ್ಕ ಮಕ್ಕಳಾಗಿರುವುದರಿಂದ ಹಿಡಿದು ವೃದ್ದರವರೆಗೆ ಈ ಮೂಳೆಗಳ ಮತ್ತು ಕೀಲುಗಳ ಆರೋಗ್ಯವನ್ನು (Health) ಚೆನ್ನಾಗಿ ಕಾಪಾಡಿಕೊಳ್ಳುವುದು ತುಂಬಾನೇ ಮುಖ್ಯವಾಗುತ್ತದೆ. ನಮ್ಮ ಸ್ನಾಯುಗಳನ್ನು ನಿರ್ವಹಿಸುವಲ್ಲಿ ಈ ಕ್ಯಾಲ್ಸಿಯಂ ಅನ್ನೋದು ತುಂಬಾನೇ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ, ಮೂಳೆಯ ಆರೈಕೆಯು ನಮ್ಮ ದೇಹಕ್ಕೆ ಅತ್ಯಗತ್ಯವಾಗಿದೆ. ಪೋಷಕರು ಹೆಚ್ಚಾಗಿ ತಮ್ಮ ಮಗುವಿನ ದೈಹಿಕ ಮತ್ತು ಮಾನಸಿಕ (Mental Health) ಯೋಗಕ್ಷೇಮದ ಬಗ್ಗೆ ಕಾಳಜಿ ವಹಿಸುತ್ತಾರೆ.


ಒಮ್ಮೆ ನಿಮ್ಮ ಮಗು ಪ್ರೌಢಾವಸ್ಥೆಯನ್ನು ತಲುಪಿದ ನಂತರ ಎಂದರೆ 18-25 ವರ್ಷ ವಯಸ್ಸಿನವರಾದಾಗ ಅವರ ಮೂಳೆ ಸಾಂದ್ರತೆಯು ಅಭಿವೃದ್ಧಿ ಹೊಂದುವುದನ್ನು ನಿಲ್ಲಿಸುತ್ತದೆ.


ಅವರ ಮೂಳೆಯ ದ್ರವ್ಯರಾಶಿಯ ಅಷ್ಟೊತ್ತಿಗೆ 90 ಪ್ರತಿಶತದಷ್ಟು ಅಭಿವೃದ್ಧಿಯಾಗಿರುತ್ತದೆ. ಆದ್ದರಿಂದ ಪೋಷಕರು ತಮ್ಮ ಮಗುವಿನ ಚಿಕ್ಕ ವಯಸ್ಸಿನಲ್ಲಿ ಪೌಷ್ಟಿಕ ಆಹಾರಗಳನ್ನು ನೀಡುವುದು ತುಂಬಾ ಅತ್ಯಗತ್ಯವಾಗುತ್ತದೆ.


ಮೂಳೆಗಳ ಆರೋಗ್ಯದ ಬಗ್ಗೆ ಏನ್ ಹೇಳ್ತಾರೆ ತಜ್ಞರು?


ಬೆಂಗಳೂರಿನ ಆಸ್ಟರ್ ಸಿಎಂಐ ಆಸ್ಪತ್ರೆಯ ಪೀಡಿಯಾಟ್ರಿಕ್ ಇಮ್ಯುನಾಲಜಿ ಮತ್ತು ರುಮಾಟಾಲಜಿಯ ಸಲಹೆಗಾರರಾದ ಡಾ.ಸಾಗರ್ ಭಟ್ಟಾಡ್ ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ "ದುರ್ಬಲ ಮೂಳೆಗಳು ಗಾಯಗಳು ಮತ್ತು ಮೂಳೆ ಮುರಿತಗಳ ಅಪಾಯವನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಲ್ಲಿ ಆಸ್ಟಿಯೊಪೊರೋಸಿಸ್ ಮತ್ತು ರಿಕೆಟ್ಸ್ ನಂತಹ ರೋಗಗಳಿಗೆ ಕಾರಣವಾಗುತ್ತವೆ.


ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ನಿಮ್ಮ ಮಗುವನ್ನು ಪ್ರೋತ್ಸಾಹಿಸುವುದು ಮತ್ತು ಅವರ ದೇಹವು ಎಲ್ಲಾ ಪ್ರಮುಖ ಪೋಷಕಾಂಶಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದು ಮೂಳೆಯ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ" ಎಂದು ಹೇಳುತ್ತಾರೆ.


ನಿಮ್ಮ ಮಗುವಿನ ಮೂಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಇಲ್ಲಿವೆ ಕೆಲವು ಅಗತ್ಯ ಸಲಹೆಗಳು:


1. ವಿಟಮಿನ್ ಡಿ ಇರುವ ಆಹಾರಗಳ ಸೇವನೆ ಜಾಸ್ತಿ ಮಾಡಿ


ವಿಟಮಿನ್ ಡಿ ಮೂಳೆಯ ಆರೋಗ್ಯವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ದೇಹವು ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.
ವಿಟಮಿನ್ ಡಿ ಕೊರತೆಯು ಯುವಕರು ಮತ್ತು ವಯಸ್ಕರಲ್ಲಿ ಸಾಮಾನ್ಯವಾಗಿದೆ. ಕಡಿಮೆ ವಿಟಮಿನ್ ಡಿ ಮಟ್ಟಗಳು ಮೂಳೆ ಸಾಂದ್ರತೆಯನ್ನು ಕಡಿಮೆ ಮಾಡಲು ಹೇಗೆ ಕಾರಣವಾಗುತ್ತವೆ ಮತ್ತು ಮೂಳೆ ನಷ್ಟದ ಅಪಾಯವನ್ನು ಹೇಗೆ ಹೆಚ್ಚಿಸುತ್ತವೆ ಎಂಬುದನ್ನು ಹಲವಾರು ಅಧ್ಯಯನಗಳು ಈಗಾಗಲೇ ತೋರಿಸಿವೆ.


ಆದ್ದರಿಂದ, ವಿಟಮಿನ್ ಡಿ ಯ ಹೇರಳತೆಯು ನಿಮ್ಮ ಮಗುವನ್ನು ಮೂಳೆಗೆ ಸಂಬಂಧಿಸಿದ ರೋಗಗಳಿಂದ ರಕ್ಷಿಸುತ್ತದೆ.


ವಿಟಮಿನ್ ಡಿ ಕಡಿಮೆ ಇರುವವರು ವಾರಕ್ಕೆ ಎರಡರಿಂದ ಮೂರು ದಿನಗಳವರೆಗೆ ಕನಿಷ್ಠ 5 ರಿಂದ 10 ನಿಮಿಷಗಳ ಕಾಲ ಸೂರ್ಯನ ಕಿರಣಗಳು ನಿಮ್ಮ ದೇಹದ ಮೇಲೆ ಬೀಳುವಂತೆ ನೋಡಿಕೊಳ್ಳಿ.


ಇದನ್ನೂ ಓದಿ: ಸೂಪರ್ ಸಂಡೇಗೆ ಚಿಕನ್ ಸಲ್ನಾ ರೆಸಿಪಿ ಮಾಡಿ ಸವಿಯಿರಿ


ಚೀಸ್ ಮತ್ತು ಕೊಬ್ಬಿನ ಮೀನುಗಳಂತಹ ಆಹಾರ ಪದಾರ್ಥಗಳನ್ನು ನಿಮ್ಮ ಮಗುವಿಗೆ ನೀಡಿ. ಸ್ಯಾಂಡ್ವಿಚ್ ಮತ್ತು ಪಾಸ್ತಾ ಇತ್ಯಾದಿಗಳನ್ನು ಮಾಡಿ ಸಹ ನೀವು ಮಕ್ಕಳಿಗೆ ನೀಡಬಹುದು.


2. ಮಗುವಿಗೆ ಸಾಕಷ್ಟು ಕ್ಯಾಲ್ಸಿಯಂ ಸಿಗುವಂತೆ ನೋಡಿಕೊಳ್ಳಿ


ಕ್ಯಾಲ್ಸಿಯಂ, ಮೂಳೆ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಸ್ನಾಯುಗಳನ್ನು ಬಲಪಡಿಸಲು ಮತ್ತು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಅತ್ಯಗತ್ಯವಾಗಿದೆ. ಹಾಲು, ಚೀಸ್ ಮತ್ತು ಮೊಸರಿನಂತಹ ಡೈರಿ ಉತ್ಪನ್ನಗಳು ಕ್ಯಾಲ್ಸಿಯಂನ ಮೂಲಗಳಾಗಿವೆ.


ಪೋಷಕರು ತಮ್ಮ ಮಗು ಪ್ರತಿದಿನ ಕನಿಷ್ಠ 2 ಲೋಟ ಹಾಲನ್ನು ಸೇವಿಸುವಂತೆ ಮಾಡುವುದು ಅವರ ಮೂಳೆಯ ಬೆಳವಣಿಗೆಗೆ ಅತ್ಯಗತ್ಯ.


ಹೆಚ್ಚುವರಿಯಾಗಿ, ನೀವು ದಿನಕ್ಕೆ ಒಮ್ಮೆಯಾದರೂ ನಿಮ್ಮ ಮಗುವಿನ ಊಟದಲ್ಲಿ ಒಂದು ಬಟ್ಟಲು ಮೊಸರನ್ನು ಸೇರಿಸಬೇಕು ಮತ್ತು ಅವರ ಆಹಾರದಲ್ಲಿ ಪಾಲಕ್, ಕೇಲ್ ಮತ್ತು ಬೆಂಡೆಕಾಯಿಯಂತಹ ಹಸಿರು ತರಕಾರಿಗಳನ್ನು ಸಹ ಸೇರಿಸಬೇಕು.


ವಿಟಮಿನ್ ಸಿ ಯನ್ನು ಒದಗಿಸುವುದರ ಜೊತೆಗೆ, ಕಿತ್ತಳೆಯನ್ನು ಕ್ಯಾಲ್ಸಿಯಂನ ಉತ್ತಮ ಮೂಲವೆಂದು ಸಹ ಕರೆಯಲಾಗುತ್ತದೆ ಮತ್ತು ನಿಮ್ಮ ಮಗುವಿನ ಕ್ಯಾಲ್ಸಿಯಂ ಸೇವನೆಯನ್ನು ಹೆಚ್ಚಿಸಲು ಇದು ಒಂದು ರುಚಿಕರವಾದ ಮಾರ್ಗವಾಗಿದೆ.


3. ಸರಿಯಾದ ಮೂಳೆ ಸಾಂದ್ರತೆಗಾಗಿ ವಿಟಮಿನ್ ಕೆ ಮತ್ತು ಮೆಗ್ನೀಸಿಯಮ್ ಅವಶ್ಯಕ


ಹೆಚ್ಚಿನ ಪ್ರಮಾಣದ ವಿಟಮಿನ್ ಕೆ ಮತ್ತು ಮೆಗ್ನೀಸಿಯಮ್ ಹೊಂದಿರುವ ಜನರು ಆರೋಗ್ಯಕರ ಮೂಳೆ ಸಾಂದ್ರತೆಯನ್ನು ಹೊಂದಿದ್ದಾರೆ ಮತ್ತು ರಿಕೆಟ್ಸ್ ಮತ್ತು ಆಸ್ಟಿಯೊಪೊರೋಸಿಸ್ ನಂತಹ ಮೂಳೆ ರೋಗಗಳಿಗೆ ಕಡಿಮೆ ಒಳಗಾಗುತ್ತಾರೆ ಎಂದು ಕಂಡು ಬಂದಿದೆ.


ಈ ಜೀವಸತ್ವಗಳು ಕ್ಯಾಲ್ಸಿಯಂನೊಂದಿಗೆ ಕೆಲಸ ಮಾಡಿ ನಿಮ್ಮ ಮಗುವಿನ ಮೂಳೆಗಳು ಬಲವಾಗಿ ಬೆಳೆಯುವಂತೆ ಮಾಡುತ್ತವೆ. ಪಾಲಕ್, ಎಲೆಕೋಸು ಮತ್ತು ಹಸಿರು ಮೊಳಕೆಕಾಳುಗಳಂತಹ ಹಸಿರು ತರಕಾರಿಗಳು ವಿಟಮಿನ್ ಕೆ ಮತ್ತು ಮೆಗ್ನೀಸಿಯಮ್ ನ ಉತ್ತಮ ಮೂಲಗಳಾಗಿವೆ.


ನಿಮ್ಮ ಮಗುವಿಗೆ ಸಣ್ಣ ವಯಸ್ಸಿನಲ್ಲಿಯೇ ಏಕದಳ ಧಾನ್ಯಗಳು ಮತ್ತು ಪೌಷ್ಟಿಕ ಉಪಾಹಾರವನ್ನು ತಿನ್ನುವ ಅಭ್ಯಾಸವನ್ನು ಬೆಳೆಸುವುದು ಅಗತ್ಯವಾಗಿದೆ.


4. ದೈಹಿಕವಾಗಿ ಸಕ್ರಿಯವಾಗಿರಲು ಮಗುವನ್ನು ಪ್ರೋತ್ಸಾಹಿಸಿ


ಇಂದಿನ ಡಿಜಿಟಲ್ ಯುಗದಲ್ಲಿ ಒಂದು ಬಟನ್ ಒತ್ತುವ ಮೂಲಕ ಅನೇಕ ಕೆಲಸಗಳು ಆಗುತ್ತವೆ. ಹೆಚ್ಚಿನ ಮಕ್ಕಳು ಮೊಬೈಲ್ ಫೋನ್ ಗಳು ಮತ್ತು ಕಂಪ್ಯೂಟರ್ ಆಟಗಳಿಗೆ ವ್ಯಸನಿಯಾಗುತ್ತಿರುವುದರಿಂದ, ಅವರು ಹಿಂದೆಂದಿಗಿಂತಲೂ ದೈಹಿಕ ಚಟುವಟಿಕೆಗಳನ್ನು ಕಡಿಮೆ ಮಾಡಿಕೊಂಡಿದ್ದಾರೆ.


ಇದನ್ನೂ ಓದಿ: ತುಪ್ಪವನ್ನು ಹೀಗೆ ಯೂಸ್ ಮಾಡಿದ್ರೆ ತೂಕನೂ ಇಳಿಯುತ್ತೆ, ಚರ್ಮನೂ ಹೊಳೆಯುತ್ತೆ!


ಹೀಗೆ ಮಾಡುವುದರಿಂದ ಮಕ್ಕಳಲ್ಲಿ ಮೂಳೆ ಸಂಬಂಧಿತ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ.


ವಾಕಿಂಗ್, ಜಾಗಿಂಗ್, ಓಡುವುದು ಮತ್ತು ಮೆಟ್ಟಿಲುಗಳನ್ನು ಹತ್ತುವುದು ಮುಂತಾದ ಚಟುವಟಿಕೆಗಳು ನಿಮ್ಮ ಮಗುವಿಗೆ ಬಲವಾದ ಮೂಳೆಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ ಮತ್ತು ಅವರ ಮನಸ್ಸು ಮತ್ತು ದೇಹವನ್ನು ಸಕ್ರಿಯವಾಗಿಡಲು ಸಹಾಯ ಮಾಡುತ್ತವೆ.


ಈ ವ್ಯಾಯಾಮಗಳು ಮೂಳೆಯ ಕೋಶಗಳ ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ ದೇಹಕ್ಕೆ ಸಹಾಯ ಮಾಡುತ್ತವೆ.

Published by:Sandhya M
First published: