ಲೈಂಗಿಕತೆ ಬರೀ ಕ್ರಿಯೆಯಲ್ಲ, ಅದೊಂದು ಉನ್ಮಾದ: ನಿಮ್ಮ ಸೆಕ್ಸ್​ ಜೀವನ ಸುಖಕರವಾಗಿರಲು ಈ ಟಿಪ್ಸ್​ ಪಾಲಿಸಿ

ಸಾಮಾನ್ಯವಾಗಿ ಹೆಚ್ಚಿನವರು ಬೆಳಿಗ್ಗೆ ಬೇಗನೆ ಎದ್ದು ಕೆಲಸ ಹೊರಬೇಕೆಂಬ ಚಿಂತೆಯಲ್ಲೇ ನಮ್ಮ ಲೈಂಗಿಕ ಕ್ರಿಯೆಯನ್ನು ಮಾಡಿ ಮುಗಿಸುತ್ತಾರೆ. ಇಂದಿನ ಜೀವನ ಶೈಲಿಯಲ್ಲಿ ಇದು ಅನಿವಾರ್ಯ ಕೂಡ. ಆದರೆ ನೀವು ಪಡೆಯುವ ಸುಖವನ್ನು ನಿಮ್ಮ ಸಂಗಾತಿಗೂ ನೀಡಬೇಕಲ್ಲವೇ? ಇದಕ್ಕಾಗಿ ನೀವು ಮಾಡಬೇಕಿರುವುದು ಸಣ್ಣ ಪುಟ್ಟ ಬದಲಾವಣೆಗಳು ಅಷ್ಟೇ.

news18
Updated:July 8, 2019, 8:32 PM IST
ಲೈಂಗಿಕತೆ ಬರೀ ಕ್ರಿಯೆಯಲ್ಲ, ಅದೊಂದು ಉನ್ಮಾದ: ನಿಮ್ಮ ಸೆಕ್ಸ್​ ಜೀವನ ಸುಖಕರವಾಗಿರಲು ಈ ಟಿಪ್ಸ್​ ಪಾಲಿಸಿ
@Goop
  • News18
  • Last Updated: July 8, 2019, 8:32 PM IST
  • Share this:
ಕೆಲಸದಿಂದ ಮನೆಗೆ ಹೋದೆ. ಶೂ ಬಿಚ್ಚಿಟ್ಟೆ. ಒಂದಷ್ಟು ಸಮಯ ಮೊಬೈಲ್​ನಲ್ಲಿ ಆಡಿದೆ. ಹಾಗೆಯೇ ಸ್ವಲ್ಪತ್ತು ಸಿನಿಮಾ ನೋಡಿದೆ. ಇನ್ನೇನು ಹೆಂಡತಿ ಅಥವಾ ಸಂಗಾತಿಯೊಂದಿಗೆ ಕೆಲವೊತ್ತು ಹರಟೆ. ಹಾಗೆಯೇ ಊಟ ಮಾಡಿ ಮಲಗಿದೆ. ಲೈಫು ಇಷ್ಟೇನೇ ಎಂದು ನೀವಂದು ಕೊಂಡರೆ ತಪ್ಪು. ಯಾಕೆಂದರೆ ಜೀವನ ಉನ್ಮಾದ ಅಡಗಿರುವುದೇ ಪರಸ್ಪರ ದೈಹಿಕ ಬಂಧದಲ್ಲಿ.

ಆದರೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಸಿಗುವ ಮಸ್ತಿ ನಿಧಾನಕ್ಕೆ ಕಡಿಮೆಯಾಗುತ್ತೆ ಅನ್ನುವವರಿದ್ದಾರೆ. ಮದುವೆ ಆಗಬೇಡ ಒಂಟಿ ಜೀವನವೇ ಸೂಪರ್ ಗುರೂ ಎಂದೇಳುವವರು ಸಿಗುತ್ತಾರೆ. ಅದು ಅವರವರ ವೈಯುಕ್ತಿ ವಿಷಯ. ಆದರೆ ನೆನಪಿಟ್ಟುಕೊಳ್ಳಿ ಜೀವನ ಎಂಬುದು ವೈನ್ ಇದ್ದಂತೆ. ಹಳೆಯದಾದಷ್ಟು ರುಚಿ ಹೆಚ್ಚಿಸುತ್ತಾ..ಕಿಕ್ ಏರಿಸುತ್ತಾ ಸಾಗುತ್ತದೆ. ಆ ಮಾರ್ಗದಲ್ಲಿ ನಾವು ಸಾಗಬೇಕಷ್ಟೇ.

ನೀವು ಹೆಂಡತಿ ಅಥವಾ ಸಂಗಾತಿಯೊಂದಿಗೆ ಕೇವಲ ಪ್ರೀತಿಯನ್ನು ಮಾತ್ರ ತೋರಿಸಿದಷ್ಟೇ ಸಾಕಾಗುವುದಿಲ್ಲ. ಇಲ್ಲಿ ಮುಖ್ಯವಾಗಿ ಬೇಕಿರುವ ಪರಸ್ಪರ ಅನ್ಯೋನ್ಯತೆ. ಅಂದರೆ ಉಂಡು ಮಲಗುವ ತನಕ ಇಬ್ಬರು ಪರಸ್ಪರ ಅರ್ಥ ಮಾಡಿಕೊಳ್ಳಬೇಕು. ಈ ಒಂದು ಅಂಡರ್​ಸ್ಟ್ಯಾಂಡಿಂಗ್ ನಿಮ್ಮಲ್ಲಿದ್ದರೆ ದಾಂಪತ್ಯ ಜೀವನದ ಸರಸ ಸಲ್ಲಾಪಗಳ ಅಸಲಿ ಸುಖ ನಿಮ್ಮದಾಗುತ್ತದೆ.

ಸಾಮಾನ್ಯವಾಗಿ ಪುರುಷರು ತಮ್ಮ ಸಂಗಾತಿಯ ಜೊತೆ ಸದಾ ಲೈಂಗಿಕತೆಯನ್ನು ಬಯಸುತ್ತಾರೆ. ಆದರೆ ಅದೇ ವೇಳೆ ಅವರಿಗೆ ಮಿಲನಕ್ಕೆ ಆಸಕ್ತಿ ಇದೆಯೇ ಎಂಬುದನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಹಾಗೆಯೇ ಸಮ್ಮಿಲನದಲ್ಲಿ ಪುರುಷನು ತನ್ನ ಸುಖವನ್ನು ಮಾತ್ರ ಎದುರು ನೋಡುತ್ತಾನೆ ಎಂಬ ಅಭಿಪ್ರಾಯ ಹಲವು ಮಹಿಳೆಯರಲ್ಲಿದೆ. ಇದು ನಿಜ ಎಂಬುದು ಕೂಡ ಹಲವು ಅಧ್ಯಯನದಿಂದ ದೃಢಪಟ್ಟಿದೆ. ಆದರೆ ನೀವು ಮಾಡುವ ಈ ತಪ್ಪೇ ನಿಮ್ಮ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ನೆನಪಿರಲಿ.

ಸಾಮಾನ್ಯವಾಗಿ ಹೆಚ್ಚಿನವರು ಬೆಳಿಗ್ಗೆ ಬೇಗನೆ ಎದ್ದು ಕೆಲಸ ಹೊರಬೇಕೆಂಬ ಚಿಂತೆಯಲ್ಲೇ ನಮ್ಮ ಲೈಂಗಿಕ ಕ್ರಿಯೆಯನ್ನು ಮಾಡಿ ಮುಗಿಸುತ್ತಾರೆ. ಇಂದಿನ ಜೀವನ ಶೈಲಿಯಲ್ಲಿ ಇದು ಅನಿವಾರ್ಯ ಕೂಡ. ಆದರೆ ನೀವು ಪಡೆಯುವ ಸುಖವನ್ನು ನಿಮ್ಮ ಸಂಗಾತಿಗೂ ನೀಡಬೇಕಲ್ಲವೇ? ಇದಕ್ಕಾಗಿ ನೀವು ಮಾಡಬೇಕಿರುವುದು ಸಣ್ಣ ಪುಟ್ಟ ಬದಲಾವಣೆಗಳು ಅಷ್ಟೇ. ಅವುಗಳೆಂದರೆ..

1)ಮುತ್ತಿನ ಸುರಿಮಳೆ:
ನೀವು ನಿಮ್ಮ ಸಂಗಾತಿಯನ್ನು ಕಾಮಪ್ರಚೋದನೆಗೆ ಒಳಪಡಿಸದೇ ಅವರಿಗೆ ಸಂತೃಪ್ತಿ ಸಿಗುವುದಿಲ್ಲ ಎಂಬುದು ಗೊತ್ತಿರಲಿ. ಅದಕ್ಕಾಗಿ ಸಂಭೋಗಕ್ಕೂ ಮುನ್ನವೇ ನಿಮ್ಮ ಸಂಗಾತಿಯನ್ನು ಸಾಧ್ಯವಾದಷ್ಟು ಚುಂಬಿಸಿ. ಅದರಲ್ಲೂ ಅವರು ನಿರೀಕ್ಷಿಸದ ಭಾಗಗಳಿಗೆ ಮುತ್ತು ನೀಡಿ. ಇದರಿಂದ ಅವರು ಭಾವೋದಿಕ್ತರಾಗುತ್ತಾರೆ. ಹಾಗೆಯೇ ದೇಹದಲ್ಲಿ ಕಾಮೋತ್ತೇಜಕ ಹಾರ್ಮೋನುಗಳು ಕಾರ್ಯ ನಿರ್ವಹಿಸಲು ಪ್ರಾರಂಭಿಸುತ್ತದೆ. ಆ ಬಳಿಕವಷ್ಟೇ ನೀವು ಸಂಭೋಗದಲ್ಲಿ ಪಾಲ್ಗೊಳ್ಳಿ. ಇದರಿಂದ ಲೈಂಗಿಕ ಕ್ರಿಯೆಯ ವೇಳೆ ಅವರೂ ಕೂಡ ಪರಾಕಾಷ್ಠೆ ತಲುಪುವುದಲ್ಲದೆ, ಲೈಂಗಿಕ ಕ್ರಿಯೆಯಲ್ಲಿ ಸಂತೃಪ್ತಿ ಪಡೆಯುತ್ತಾರೆ.2) ಸಾಮಾನ್ಯ ಸ್ಥಳವನ್ನು ಬದಲಿಸಿ:
ಒಂದೇ ಸ್ಥಳದಲ್ಲಿ ನೀವು ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿದ್ದರೆ ಅದು ಕೂಡ ಬೋರಾಗಿ ಬಿಡುತ್ತದೆ. ಹೀಗಾಗಿ ಬೆಡ್​ ರೂಂ ಹೊರತುಪಡಿಸಿ ಮನೆಯ ಇತರೆಡೆ ಮಿಲನಕ್ಕೆ ಪ್ರಯತ್ನಿಸಿ. ಮನೆಯಲ್ಲಿ ಯಾರೂ ಇಲ್ಲದಿದ್ದರೆ ರೋಮ್ಯಾನ್ಸ್​ ಮಾಡುತ್ತಾ ಓಪನ್ ಸ್ಥಳದಲ್ಲಿ ಸಂಭೋಗಿಸಲು ಮುಂದಾಗಿ. ಇದರಿಂದ ಸಮ್ಮಿಲನ ಉತ್ಸಾಹ ಹೆಚ್ಚಾಗುತ್ತದೆ. ಹಾಗೆಯೇ ಅವರಿಗೂ ಹೊಸ ಅನುಭವ ಸಿಕ್ಕಂತಾಗುತ್ತದೆ. ಏಕೆಂದರೆ ಲೈಂಗಿಕ ಕ್ರಿಯೆಯಲ್ಲಿ ಸಂತೃಪ್ತಿ ಪಡೆಯಲು ಪರಸ್ಪರ ದೇಹ ಮಾತ್ರ ಒಂದಾದರೆ ಸಾಲುವುದಿಲ್ಲ. ಬದಲಾಗಿ ರೋಮಾಂಚನಕಾರಿ ಸನ್ನಿವೇಶಗಳು ಸೃಷ್ಟಿಯಾಗಬೇಕು.

3) ವಿವಸ್ತ್ರ ಮಾಡಬೇಡಿ:
ಸಾಮಾನ್ಯವಾಗಿ ಲೈಂಗಿಕಾಸಕ್ತಿಗೆ ಒಳಗಾದ ಪುರುಷರು ತಮ್ಮ ಸಂಗಾತಿಯನ್ನು ಒಂದೇ ಬಾರಿ ವಿವಸ್ತ್ರಗೊಳಿಸಲು ಮುಂದಾಗುತ್ತಾರೆ. ಆದರೆ ಈ ನಡೆ ಕೂಡ ಸುಖದ ಮೇಲೆ ಪರಿಣಾಮ ಬೀರುತ್ತದೆ. ಏಕೆಂದರೆ ನೀವು ಒಂದೊಂದೇ ಬಟ್ಟೆಗಳನ್ನು ಬಿಚ್ಚುವುದರಿಂದ ಸಮಯ ತೆಗೆದುಕೊಳ್ಳುತ್ತದೆ. ಇದರಿಂದ ರೋಮ್ಯಾನ್ಸ್​ಗೂ ಹೆಚ್ಚಿನ ಅವಕಾಶವಿರುತ್ತದೆ. ಇಲ್ಲಿ ನೀವು ನಿಧಾನವೇ ಪ್ರಧಾನ ಎಂಬ ಸೂತ್ರಕ್ಕೆ ಒಗ್ಗಿಕೊಳ್ಳಬೇಕು. ಹಾಗೆ ಅವರ ವಸ್ತ್ರಗಳನ್ನು ತ್ಯಜಿಸುತ್ತಾ ಹೋದಂತೆ ಆ ಭಾಗಗಳಿಗೆ ಮುತ್ತಿಕ್ಕಲು ಪ್ರಯತ್ನಿಸಿ. ಇದರಿಂದ ಬೇಗನೇ ಮಹಿಳೆಯರು ಪರಾಕಾಷ್ಠೆಗೆ ಒಳಗಾಗುತ್ತಾರೆ. ಹಾಗೆಯೇ ಒಂದೊಂದೇ ಭಾಗದ ನಿಮ್ಮ ಸ್ಪರ್ಶವನ್ನು ಅವರು ಆನಂದಿಸುತ್ತಾರೆ.

4) ಡರ್ಟಿ ಟಾಕ್:
ಸಂಗಾತಿ ಜೊತೆ ಸಮ್ಮಿಲನಕ್ಕೂ ಮೊದಲು ಒಂದಷ್ಟು ಪೋಲಿ ಮಾತುಗಳನ್ನಾಡಿ. ಏಕೆಂದರೆ ನಿಮ್ಮ ಸಂಗಾತಿ ಇಂಥದನ್ನೆಲ್ಲಾ ನಿಮ್ಮಿಂದ ಬಯಸುತ್ತಿರುತ್ತಾರೆ. ಹೀಗೆ ಕೆಲ ಪೋಲಿ ಜೋಕುಗಳನ್ನು ಹೇಳಿ ಅವರನ್ನು ಲೈಂಗಿಕ ಮೂಡ್​ಗೆ​ ಬರುವಂತೆ ಮಾಡಿ. ಅದರಲ್ಲೂ ಮುಖ್ಯವಾಗಿ ನೀವು ಅವಳಿಂದ ಯಾವ ರೀತಿಯಾದ ಲೈಂಗಿಕ ಸುಖವನ್ನು ಬಯಸುತ್ತಿದ್ದೀರಿ ಎಂಬುದನ್ನು ತಿಳಿಸಿ. ಹಾಗೆಯೇ ಅವರಿಗೆ ಯಾವ ರೀತಿಯಿಂದ ಹೆಚ್ಚಿನ ಸುಖ ಸಿಗುತ್ತಿದೆ ಎಂಬುದನ್ನು ತಿಳಿದುಕೊಳ್ಳಿ.

5) ಲೈಂಗಿಕ ಭಂಗಿ:
ನೀವು ಬಯಸುವ ಭಂಗಿಯಲ್ಲಿ ಒಂದು ವೇಳೆ ನಿಮ್ಮ ಸಂಗಾತಿಗೆ ಸುಖ ಸಿಗಬೇಕೆಂದಿಲ್ಲ. ಹೀಗಾಗಿ ಅವರೊಂದಿಗೆ ಚರ್ಚಿಸಿ. ಹಾಗೆಯೇ ತ್ವರಿತ ಗತಿಯ ಸೆಕ್ಸ್​ಗೆ ಮುಂದಾಗಬೇಡಿ. ಏಕೆಂದರೆ ಒರಟಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡರೆ ಸುಖಕ್ಕಿಂತ ನೋವಾಗುವುದೇ ಹೆಚ್ಚು. ಹೀಗಾಗಿ ನಿಧಾನಗತಿಯ ಲೈಂಗಿಕ ಕ್ರಿಯೆಯ ಮೂಲಕ ಅವರನ್ನು ಕಾಮೋತ್ತೆಜಿಸಲು ಪ್ರಯತ್ನಿಸಿ. ಅದಾದ ಬಳಿಕವಷ್ಟೇ ಸಂಭೋಗ ಕ್ರಿಯೆಯ ವೇಗ ಹೆಚ್ಚಿಸಿಕೊಳ್ಳಿ. ಇದರಿಂದ ನಿಮಗೂ ನಿಮ್ಮ ಸಂಗಾತಿಗೂ ಲೈಂಗಿಕ ಸಂತೃಪ್ತಿ ಸಿಕ್ಕಂತಾಗುತ್ತದೆ.

ಇದನ್ನೂ ಓದಿ11 ವರ್ಷಗಳ ಹಿಂದಿನ ಲೆಕ್ಕಾಚಾರ: ಸೆಮಿ ಫೈನಲ್​ನಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾಗೆ ಭರ್ಜರಿ ಜಯ?
First published: July 8, 2019, 8:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading