Beauty Tips: ಕೊರೊನಾ ಸಮಯದಲ್ಲಿ ಬ್ಯೂಟಿಷಿಯನ್ ಸೇವೆ ಮನೆಯಲ್ಲಿ ಪಡೆಯಲು ಬಯಸಿದ್ರೆ ಈ ನಿಯಮ ಪಾಲಿಸಿ

Beauty Services At Home:  ಹೋಮ್ ಸಲೂನ್ ಸೇವೆಯು ಆಫ್ಲೈನ್ ಸಲೂನ್ ಸೇವೆಗಿಂತ ಹೆಚ್ಚು ದುಬಾರಿಯಾಗಿದೆ. ಆದರೆ ನೀವು ಮೋಸ ಹೋಗದಂತೆ ನೋಡಿಕೊಳ್ಳಿ. ಸೇವೆಗೆ ಕರೆ ಮಾಡುವ ಮೊದಲು ವಿವಿಧ ಸ್ಥಳಗಳಿಂದ ಬೆಲೆಯನ್ನು ಹೋಲಿಕೆ ಮಾಡಿ ಮತ್ತು ಶುಲ್ಕವನ್ನು ಕೇಳಿ ತಿಳಿದಿರಿ. ಆಗ ನಿಮಗೆ ಒಂದು ಸ್ಪಷ್ಟತೆ ಸಿಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕೊರೊನಾ(Corona), ಒಮೈಕ್ರಾನ್(Omicron) ಸೋಂಕಿನ ಹಾವಳಿ ದೇಶದ ತುಂಬೆಲ್ಲ ಹೆಚ್ಚಾಗಿದೆ. ಹೀಗಾಗಿ ರಾಜ್ಯ(State) ಹಾಗೂ ಕೇಂದ್ರ ಸರ್ಕಾರಗಳು (Central Government) ಕಟ್ಟುನಿಟ್ಟಿನ ಕ್ರಮ ತಂದು ಸೋಂಕು ನಿಯಂತ್ರಣಕ್ಕೆ ಮುಂದಾಗಿದೆ. ಅದರಲ್ಲೂ ಬಹುತೇಕ ರಾಜ್ಯಗಳು ಲಾಕ್ ಡೌನ್(Lock Down) ಘೋಷಣೆ ಮಾಡುವುದರ ಜೊತೆಗೆ ಟಫ್ ರೂಲ್ಸ್(Tuff Rules) ಸಹ ಜಾರಿಗೆ ತಂದಿದೆ. ಸೋಂಕಿನ ಹಾವಳಿ ಅಧಿಕ ಆಗುತ್ತಿರುವುದರಿಂದ ಮನೆಯಿಂದ(Home) ಹೊರಗೆ ಹೋಗುವುದು ಅಪಾಯಕಾರಿ ಹೀಗಾಗಿ ಅನೇಕರು ನಾವು ಅಂದುಕೊಂಡ ಕೆಲಸವನ್ನು ಸರಿಯಾದ ಸಮಯಕ್ಕೆ ಮಾಡಲು ಆಗುತ್ತಿಲ್ಲ.. ಅದರಲ್ಲೂ ಬಹುಮುಖ್ಯವಾಗಿ ಹೆಣ್ಣುಮಕ್ಕಳ ಆಗಲಿ ಗಂಡು ಮಕ್ಕಳಾಗಲಿ ಸಲೂನ್(Saloon) ಗಳಿಗೆ ಈ ಸಮಯದಲ್ಲಿ ಹೋಗುವುದು ಸುರಕ್ಷಿತವಲ್ಲ. ಹೀಗಾಗಿ ಮನೆಯಲ್ಲಿಯೇ ಸಲೂನ್ ಸೇವೆಯನ್ನು ಪಡೆಯಬಹುದು.. ಇದಕ್ಕಾಗಿ ಕೊರೋನಾ ಬಂದ ಬಳಿಕ ಅನೇಕ ಸಲೂನ್ ಗಳು ಆನ್ಲೈನ್ ಸೇವೆಯನ್ನ ಮಾಡುತ್ತೇವೆ. ಹೀಗಾಗಿ ನೀವು ಮನೆಯಲ್ಲಿ ಸಲೂನ್ ಸೇವೆ ಪಡೆಯಲು ಇಚ್ಚಿಸಿದರೆ ಕೆಲವೊಂದಷ್ಟು ನಿಯಮಗಳನ್ನು ಹಾಗೂ ಮಾಹಿತಿಗಳನ್ನ ಪಾಲಿಸುವುದು ಉತ್ತಮ.

    1) ಸಲೂನ್ ಬುಕ್ ಮಾಡುವ ಮುನ್ನ ಯೋಚಿಸಿ: ಕೊರೊನಾ ಇರುವ ಕಾರಣ ಅನೇಕ ಸಲೂನ್ ಗಳು ಹೋಂ ಸಲೂನ್ ಸೇವೆಯನ್ನು ನೀಡುತ್ತಿವೆ. ಹೀಗಾಗಿ ನೀವು ಆನ್ಲೈನ್ ಸರ್ಚ್ ಮಾಡುವಾಗ ಕಂಡಕಂಡ ಸಲೂನ್ ಆಯ್ಕೆ ಮಾಡಿ ಕೊಳ್ಳಬೇಡಿ.. ನೀವು ಸಾಮಾನ್ಯವಾಗಿ ಹೋಗುವ ಸಲೂನ್ ಆನ್ಲೈನ್ ಸರ್ವಿಸ್ ನೀಡುತ್ತಿದ್ದರೆ ಅದನ್ನು ಆಯ್ಕೆ ಮಾಡಿ. ಇಲ್ಲವೇ ಪ್ರಸಿದ್ಧ ಕಂಪನಿಗಳ ಸೇವೆ ಪಡೆಯಿರಿ. ಇದ್ಯಾವುದೂ ಸಾಧ್ಯವಿಲ್ಲ ಎಂದಾಗ ನೀವು ಬುಕ್ ಮಾಡ್ತಿರುವ ಸಲೂನ್ ಕಂಪನಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಪರಿಶೀಲಿಸಿ.

    ಇದನ್ನೂ ಓದಿ: ಎಷ್ಟು ತಿಂದ್ರೂ ಇನ್ನೂ ಹಸಿವಾಗ್ತಿದ್ಯಾ? ಅದಕ್ಕೆಲ್ಲಾ ಇದೇ ಕಾರಣವಂತೆ!

    2) ರೇಟಿಂಗ್ ಪರಿಶೀಲನೆ : ಇನ್ನೂ ಸಾಮಾನ್ಯವಾಗಿ ನಾವು ಯಾವುದೇ ಆನ್ಲೈನ್ ವಸ್ತುಗಳನ್ನು ಖರೀದಿ ಮಾಡುವ ಮುನ್ನ ಅದರ ರೇಟಿಂಗ್ ನೋಡುತ್ತೇವೆ.. ಅದೇ ರೀತಿ ನೀವು ಆನ್ಲೈನ್ ನಲ್ಲಿ ಹೋಂ ಸಲೂನ್ ಸರ್ವಿಸ್ ಪಡೆಯಲು ಮುಂದಾಗುವ ಮುನ್ನ ಅದರ ಸೇವೆಯ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಲು ಬಯಸಿದರೆ ಸಂಬಂಧಿಸಿದ ರೇಟಿಂಗ್ ಮತ್ತು ವಿಮರ್ಶೆಯನ್ನು ಪರಿಶೀಲನೆ ನಡೆಸಿ. ಹೀಗೆ ಮಾಡುವುದರಿಂದ ನೀವು ಯಾವುದೇ ಪಾರ್ಲರ್ ಬಗ್ಗೆ ಮೂಲಭೂತ ಮಾಹಿತಿಯನ್ನು ಪಡೆಯುತ್ತೀರಿ.

    3)ಸೇವೆಯ ಬೆಲೆ : ಹೋಮ್ ಸಲೂನ್ ಸೇವೆಯು ಆಫ್ಲೈನ್ ಸಲೂನ್ ಸೇವೆಗಿಂತ ಹೆಚ್ಚು ದುಬಾರಿಯಾಗಿದೆ. ಆದರೆ ನೀವು ಮೋಸ ಹೋಗದಂತೆ ನೋಡಿಕೊಳ್ಳಿ. ಸೇವೆಗೆ ಕರೆ ಮಾಡುವ ಮೊದಲು ವಿವಿಧ ಸ್ಥಳಗಳಿಂದ ಬೆಲೆಯನ್ನು ಹೋಲಿಕೆ ಮಾಡಿ ಮತ್ತು ಶುಲ್ಕವನ್ನು ಕೇಳಿ ತಿಳಿದಿರಿ. ಆಗ ನಿಮಗೆ ಒಂದು ಸ್ಪಷ್ಟತೆ ಸಿಗುತ್ತದೆ. ಜೊತೆಗೆ ಚೌಕಾಸಿ ಮಾಡಲು ಅವಕಾಶವಿರುತ್ತದೆ.

    4) ಕೋವಿಡ್ ನಿಯಮಗಳ ಬಗ್ಗೆ ಗಮನ ಕೊಡಿ: ಪ್ರಸ್ತುತ ಕೋವಿಡ್ ಸಮಯ ಆಗಿರುವ ಕಾರಣ ಇಂತಹ ಸಂದರ್ಭದಲ್ಲಿ ನೀವು ಹೊರಗಿನಿಂದ ಬ್ಯೂಟಿಷಿಯನ್ ಗಳನ್ನು ಕರೆಸುತ್ತಿದ್ದಾರೆ ಅಂತಹ ಸಂದರ್ಭದಲ್ಲಿ ಬ್ಯೂಟಿಷಿಯನ್ ಕೊರೊನಾ ನಿಯಮಗಳನ್ನು ಸರಿಯಾಗಿ ಅನುಸರಿಸಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ಗಮನಿಸಬೇಕು. ಬೇಕಿದ್ದರೆ ಬಂದ ಬ್ಯೂಟಿಷಿಯನ್ ನ ತಾಪಮಾನವನ್ನೂ ಪರೀಕ್ಷೆ ಮಾಡಬಹುದು. ಹಾಗೆಯೇ ಬ್ಯೂಟಿಷಿಯನ್ ಎರಡು ಡೋಸ್ ಲಸಿಕೆ ಪಡೆದಿದ್ದಾರೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

    5)ಹೊಸ ಕಿಟ್ ಬಗ್ಗೆ ಗಮನವಿರಲಿ: ಒಬ್ಬರಿಗೆ ಬಳಸಿದ ಬ್ಯೂಟಿ ಐಟಂಗಳನ್ನೇ ಅನೇಕ ಬಾರಿ ಇನ್ನೊಬ್ಬರಿಗೆ ಬಳಸಲಾಗುತ್ತದೆ. ನಿಮ್ಮ ಮನೆಗೆ ಬಂದ ಬ್ಯೂಟಿಷಿಯನ್ ಕೂಡ ಹಾಗೆ ಮಾಡ್ತಿದ್ದಾರಾ ಎಂಬುದನ್ನು ನೋಡಿ. ಮನೆಗೆ ತಂದ ಎಲ್ಲ  ಸೌಂದರ್ಯವರ್ಧಕ ಗಳನ್ನು ಪ್ಯಾಕ್ ಮಾಡಲಾಗಿದೆಯೇ ಅಥವಾ ಸೀಲ್ ಮಾಡಲಾಗಿದೆಯೇ ಎಂದು ಪರಿಶೀಲಿಸಿ. ಮರುಬಳಕೆಗೆ ಅವಕಾಶ ನೀಡಬೇಡಿ.

    ಇದನ್ನೂ ಓದಿ: ಹಸಿ ತೆಂಗಿನಕಾಯಿ ತಿಂದ್ರೆ ಸಿಗುವ ಲಾಭಗಳು ಒಂದೆರಡಲ್ಲ..!

    6) ವಿಲೇವಾರಿ ಬಗ್ಗೆ ಗಮನ ಇರಲಿ: ನೀವು ನಿಮ್ಮ ಮನೆಗೆ ಹೋಂ ಸರ್ವಿಸ್ ಕೊಡಲು ಕರೆಸಿಕೊಂಡಿರುವ ಬ್ಯೂಟಿಷಿಯನ್ ಎಲ್ಲವನ್ನೂ ಸಂಪೂರ್ಣವಾಗಿ ಸ್ವಚ್ಛಗೊಳಿಸುತ್ತಿದ್ದಾರೆ ಎಂದು ಖಚಿತಪಡಿಸಿಕೊಳ್ಳಿ.
    ಹಾಗೆಯೇ ಎಲ್ಲಾ ಬಳಸಿದ ವಸ್ತುಗಳನ್ನು ಸರಿಯಾಗಿ ವಿಲೇವಾರಿ ಮಾಡಿದ್ದಾರೆಯೇ ಎಂಬುದನ್ನು ನೋಡಿ. ನಿಮಗೆ ಬಳಸಿದ ವಸ್ತುವನ್ನು ಅವರು ಇನ್ನೊಬ್ಬರಿಗೆ ಬಳಸದಂತೆ ನೋಡಿಕೊಳ್ಳಿ
    Published by:ranjumbkgowda1 ranjumbkgowda1
    First published: