ನಮ್ಮ ದೈನಂದಿನ ಜೀವನದಲ್ಲಿ ಹಣದಿಂದ ಆಗುವ ಹಲವಾರು ಅನಾಹುತಗಳನ್ನು ನಾವು ನೋಡಿದ್ದೇವೆ. ಎಷ್ಟೋ ಬಂಧುತ್ವಗಳು, ಸ್ನೇಹ ಸಂಬಂಧಗಳು ಹಣದ ವ್ಯವಹಾರದಿಂದ ಹಳಸಿ ಹೋಗಿವೆ. ಎಷ್ಟೋ ಮನಸ್ತಾಪಗಳು ನಿರ್ಮಾಣವಾಗಿವೆ. ಕೊಲೆ, ಸುಲಿಗೆ, ಮೋಸ, ಜಗಳ ಹೀಗೆ ಹಣದಿಂದ ಹಲವಾರು ಸಮಸ್ಯೆಗಳು ತಲೆದೋರುತ್ತಿವೆ. ಹಾಗಾಗಿ ಹಣದ ವ್ಯವಹಾರವನ್ನು ಮಾಡುವಾಗ ನಾವು ತುಂಬಾ ಜಾಗರೂಕರಾಗಿರಬೇಕು ಎಂದು ಹೇಳುವುದನ್ನು ನೀವು ಕೇಳಿರಬೇಕು. ಇನ್ನು ಸ್ನೇಹದಲ್ಲಿ ಹಣ ನಡುವೆ ಬಂದರೆ ಅಲ್ಲಿ ಅಪಾಯವೇ ಹೆಚ್ಚಾಗಿರುತ್ತದೆ. ಕಷ್ಟಕಾದಲ್ಲಿ ನೀವು ನಿಮ್ಮ ಸ್ನೇಹಿತರಿಗೆ ಧನಸಹಾಯ ಮಾಡುತ್ತೀರಿ ಆದರೆ ನೀವು ಕೇಳದೆಯೇ ಅವರು ಹಣವನ್ನು ಮರಳಿ ನೀಡುವುದು ಅವರ ಒಳ್ಳೆಯತನವಾದರೆ ನೀವು ಹಣಕ್ಕಾಗಿ ಅವರನ್ನು ಪದೇ ಪದೇ ಕೇಳುವುದು ಸ್ನೇಹಕ್ಕೆ ಸಂಚಕಾರವನ್ನು ತಂದೊಡ್ಡುತ್ತದೆ.
ಹಾಗಾದರೆ ಸ್ನೇಹವನ್ನು ಹಾಳುಮಾಡಿಕೊಳ್ಳದೆಯೇ ಹಣವನ್ನು ಮರಳಿ ಪಡೆದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿದೆ ಸರಳ ಉಪಾಯ
ಹಣ ಕೊಡುವ ಮುನ್ನ ಸಮಯ ನಿರ್ಧರಿಸಿ:
ನೀವು ಅವರ ಕಷ್ಟಕ್ಕೆ ಸ್ಪಂದಿಸಿ ಹಣವನ್ನು ನೀಡುತ್ತಿದ್ದೀರಿ ಎಂದಾದಲ್ಲಿ ಹಣವನ್ನು ಮರಳಿ ನೀಡಲು ಸರಿಯಾದ ಸಮಯವನ್ನು ನಿರ್ಧರಿಸಿ. ಯಾವುದಾದರೂ ಕಷ್ಟಕ್ಕೆ ಸಿಲುಕಿ ಅವರಿಗೆ ಹಣವನ್ನು ಮರಳಿ ನೀಡಲು ಸಾಧ್ಯವಾಗದೇ ಇದ್ದಲ್ಲಿ ನಿಮ್ಮೊಂದಿಗೆ ಸಂವಹನ ನಡೆಸಲಿ.
ನಿಮ್ಮ ಅಗತ್ಯಗಳಿಗೆ ಆದ್ಯತೆ ನೀಡಿ:
ಬೇರೆ ಯಾರಿಗಾದರೂ ಸಹಾಯ ಮಾಡಲು ನಿಮ್ಮ ಉಳಿತಾಯದ ಹಣವನ್ನು ನೀಡಬೇಕಾಗಿಲ್ಲ. ಇನ್ನೊಬ್ಬರಿಂದ ಹಣವನ್ನು ತೆಗೆದುಕೊಂಡು ನಿಮ್ಮ ಸ್ನೇಹಿತರಿಗೆ ಸಹಾಯ ಮಾಡಬೇಡಿ
ಧೈರ್ಯನೀಡುವುದು:
ಹಣಸಹಾಯ ಮಾಡಿ ಗೆಳೆತನವನ್ನು ಹಾಳುಮಾಡಿಕೊಳ್ಳಲು ನಿಮಗಿಷ್ಟವಿಲ್ಲ ಎಂದಾದಲ್ಲಿ ಅವರಿಗೆ ಸಾಂತ್ವಾನದ ಮಾತುಗಳನ್ನು ಹೇಳಿ. ನಿಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡಿದರೂ ನಿಮ್ಮ ಅಗತ್ಯಗಳಿಗೆ ನಿಮ್ಮ ಬಳಿ ಹಣವಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
ನಿಮ್ಮನ್ನು ನೀವು ದೂಷಿಸಿಕೊಳ್ಳಬೇಡಿ:
ನಿಮ್ಮ ಸ್ನೇಹಿತರ ಬಳಿ ನೀವು ನೀಡಿದ ಹಣವನ್ನು ಕೇಳುವುದಕ್ಕೆ ತಪ್ಪಿತಸ್ಥ ಭಾವನೆಯನ್ನು ಹೊಂದಬೇಡಿ. ಎಲ್ಲರಿಗೂ ಕಷ್ಟಗಳಿರುತ್ತದೆ ಮತ್ತು ಅಗತ್ಯಗಳಿಗೆ ಹಣ ಬೇಕಾಗುತ್ತದೆ ಹಾಗಾಗಿ ಹಣವನ್ನು ಮರಳಿ ಕೇಳಲು ಹಿಂಜರಿಯದಿರಿ.
ಸಾಲ ನೀಡುವ ಮುನ್ನ ಎಂದಿಗೂ ಯಾವಾಗಲೂ ಮಾನಸಿಕ ಲೆಕ್ಕಾಚಾರ ಮಾಡಿ. ಮುಂದಿನ ವೇತನ ದಿನ ಎಷ್ಟು ದೂರದಲ್ಲಿದೆ ಎಂಬುದನ್ನು ಲೆಕ್ಕಾಚಾರ ಮಾಡಿ ಅಥವಾ ಮೊತ್ತವನ್ನು ಕೇಳದೆ ಸ್ವಲ್ಪ ಸಮಯದವರೆಗೆ ಸಾಲವನ್ನು ನೀಡಲು ನಿಮಗೆ ಸಾಧ್ಯವಾದರೆ. ಕಲ್ಪನೆಯು ಸಹಾಯಕವಾಗುವುದು, ಕುರುಡಾಗಿ ಸಹಾಯಕವಾಗುವುದಿಲ್ಲ. ನಿಮ್ಮ ಬಜೆಟ್ಗೆ ಅವಲಂಬಿಸಿ ಸಹಾಯ ಮಾಡಿ.
ಹೀಗೆ ನಿಮ್ಮ ಸ್ನೇಹಿತರಿಗೆ ಸಹಾಯ ಮಾಡುವ ಮುನ್ನ ನಿಮ್ಮ ಅಗತ್ಯಗಳನ್ನು ನೋಡಿ ಸಹಾಯ ಮಾಡಿ ಒಮ್ಮೊಮ್ಮೆ ನೀವು ಅವರಿಗೆ ದೊಡ್ಡ ಮೊತ್ತವನ್ನು ನೀಡಿ ಈ ಸಮಯದ ಒಳಗೆ ನೀಡುತ್ತೇನೆ ಎಂದು ಹೇಳಿ ತೆಗೆದುಕೊಳ್ಳುತ್ತಾರೆ. ಆದರೆ ನೀಡುವ ದಿನಾಂಕ ಕಳೆದರೂ ಕೂಡ ಅವರು ಹಣವನ್ನು ಮರಳಿ ನೀಡುವುದಿಲ್ಲ. ಒಮ್ಮೊಮ್ಮೆ ಅವರು ಬೇಕೆಂದೇ ಈ ರೀತಿ ಮಾಡುತ್ತಿರುತ್ತಾರೆ. ಹಾಗಾಗಿ ಅವರು ಕೇಳಿದ ಒಡನೆಯೇ ಪೂರ್ತಿಯಾಗಿ ಹಣವನ್ನು ನೀಡದೇ 2% ದಷ್ಟು ಮಾತ್ರವೇ ಸಹಾಯ ಮಾಡಿ.
ಒಟ್ಟಿನಲ್ಲಿ ದುಡ್ಡು ನೀಡಿ ಉತ್ತಮ ಬಾಂಧವ್ಯವನ್ನು ಕಳೆದುಕೊಳ್ಳಬೇಡಿ ಎಂಬುದು ಕಿವಿಮಾತಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ