ಹಣ್ಣು ತಿನ್ನುವ ಮೊದಲು ಅದರ ಸಕ್ಕರೆ ಪ್ರಮಾಣವನ್ನು ತಿಳಿದುಕೊಳ್ಳಿ

news18
Updated:May 26, 2018, 4:12 PM IST
ಹಣ್ಣು ತಿನ್ನುವ ಮೊದಲು ಅದರ ಸಕ್ಕರೆ ಪ್ರಮಾಣವನ್ನು ತಿಳಿದುಕೊಳ್ಳಿ
news18
Updated: May 26, 2018, 4:12 PM IST
ನ್ಯೂಸ್ 18 ಕನ್ನಡ

ಹಣ್ಣುಗಳು ಅಂದರೆ ಯಾರಿಗೆ ತಾನೆ ಇಷ್ಟವಿಲ್ಲ. ರುಚಿ ರುಚಿಯಾದ ರಸಭರಿತ ಹಣ್ಣುಗಳನ್ನು ಮೆಲ್ಲುವುದೇ ಒಂದು ಖುಷಿ. ಆದರೆ, ಕೆಲವೊಮ್ಮೆ ಹಣ್ಣುಗಳು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹಣ್ಣಿನಲ್ಲಿ ಕಂಡು ಬರುವ ಸಕ್ಕರೆಯ ಅಂಶವು ದೇಹದ ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಸಾಧ್ಯತೆಯಿರುತ್ತದೆ. ಯಾವ ಹಣ್ಣಿನಲ್ಲಿ ಎಷ್ಟು ಪ್ರಮಾಣದ ಸಕ್ಕರೆಯ ಅಂಶವಿದೆ, ಯಾವುದನ್ನು ತಿಂದರೆ ಉತ್ತಮ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

ಕಿತ್ತಲೆ ಹಣ್ಣಿನಲ್ಲಿ ಹಲವಾರು ಔಷಧೀಯ ಗುಣಗಳಿವೆ. ಕಿತ್ತಲೆಯನ್ನು ರಸ ತೆಗೆಯುವುದಕ್ಕಿಂತ ತಿನ್ನುವುದು ಉತ್ತಮ. ಈ ಹಣ್ಣಿನಲ್ಲಿ ನೈಸರ್ಗಿಕವಾಗಿ 11 ಗ್ರಾಂ.ನಷ್ಟು ಸಕ್ಕರೆಯ ಪ್ರಮಾಣವಿರುತ್ತದೆ. ಇದನ್ನು ಜ್ಯೂಸ್ ಮಾಡುವುದರಿಂದ ಔಷಧೀಯ ಗುಣ ಕಡಿಮೆಯಾಗುತ್ತದೆ.

ದಿನಕ್ಕೊಂದು ಸೇಬು  ತಿಂದರೆ ವೈದ್ಯರಿಂದ ದೂರವಿರಬಹುದು ಎನ್ನುತ್ತಾರೆ. ಆದರೆ ಸೇಬಿನಲ್ಲೂ 17-18 ಗ್ರಾಂ.ನಷ್ಟು ಸಕ್ಕರೆಯ ಅಂಶವಿದೆ. ಇದನ್ನೂ ಸಹ ಜ್ಯೂಸ್ ಮಾಡುವುದಕ್ಕಿಂತಲೂ ಕಚ್ಚಿ ತಿನ್ನುವುದು ಉತ್ತಮ.

ಪೀಚ್ ತುಂಬಾ ರುಚಿಕರ ಹಣ್ಣಾಗಿದೆ. ಇದರಲ್ಲಿ 12 ಗ್ರಾಂ ಸಕ್ಕರೆಯ ಅಂಶವಿದ್ದು, ಇದನ್ನು ತಿನ್ನುವುದರಿಂದ ಸಿಹಿ ತಿನ್ನುವ ಬಯಕೆಯನ್ನು ಈಡೇರಿಸಿಕೊಳ್ಳಬಹುದು.

ರಸ್​ಬೆರ್ರಿ ಹಣ್ಣಿನಲ್ಲಿ ಸಕ್ಕರೆಯ ಅಂಶ ತುಂಬಾ ಕಡಿಮೆಯಿರುತ್ತದೆ. ಒಂದು ಲೋಟ ರಸ್​ಬೆರ್ರಿ ರಸದಲ್ಲಿ ಕೇವಲ 5 ಗ್ರಾಂ.ನಷ್ಟು ಸಕ್ಕರೆಯಿರುತ್ತದೆ.

ಅವಕಾಡೊ(ಬಟರ್ ಫ್ರೂಟ್) ಅಥವಾ ಬೆಣ್ಣೆಹಣ್ಣು ಕಡಿಮೆ ಪ್ರಮಾಣದ ಸಕ್ಕರೆ ಅಂಶ ಹೊಂದಿರುತ್ತದೆ. ಫೈಬರ್ ಮತ್ತು ಉತ್ತಮ ಕೊಬ್ಬಿನಾಂಶ ಹೆಚ್ಚಾಗಿರುವ ಈ ಹಣ್ಣಿನಲ್ಲಿ ಕೆಲವೇ ಕೆಲವು ಗ್ರಾಂಗಳಷ್ಟು ಸಕ್ಕರೆ ಅಂಶ ಕಂಡು ಬರುತ್ತದೆ.
Loading...

ನೇರಳೆ ಮತ್ತು ಬೆರ್ರಿಗಳಲ್ಲಿ ಪ್ರೋಟೀನ್ ಮತ್ತು ಫೈಬರ್ ಅಂಶಗಳು ಹೆಚ್ಚಾಗಿರುತ್ತದೆ. ಕಡಿಮೆ ಪ್ರಮಾಣದ ಸಕ್ಕರೆ ಅಂಶ ಹೊಂದಿರುವ ಇದು ತಿನ್ನಲು ತುಂಬಾ ರುಚಿಯಾಗಿರುತ್ತದೆ.

ಸ್ಟ್ರಾಬೆರಿಯಲ್ಲಿ ಸಕ್ಕರೆ ಪ್ರಮಾಣವು ತುಂಬಾ ಕಡಿಮೆಯಿದ್ದು, ಫೈಬರ್ ಅಂಶ ಜಾಸ್ತಿಯಿರುತ್ತದೆ. ಸಕ್ಕರೆ ಪ್ರಮಾಣದ ಭಯವಿಲ್ಲದೆ ತಿನ್ನಬಹುದಾದ ಹಣ್ಣುಗಳಲ್ಲಿ ಸ್ಟ್ರಾಬೆರಿ ಕೂಡ ಒಂದಾಗಿದೆ.

ದ್ರಾಕ್ಷಿಗಳಲ್ಲಿ ಸುಮಾರು 8 ಗ್ರಾಂ.ನಷ್ಟು ಸಕ್ಕರೆ ಅಂಶಗಳಿರುತ್ತದೆ. ಬಾಯಲ್ಲಿ ನೀರೂರಿಸುವ ದ್ರಾಕ್ಷಿಯನ್ನು ಕಡಿಮೆ ಪ್ರಮಾಣದಲ್ಲಿ ತಿನ್ನುವುದು ಉತ್ತಮ.
First published:May 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...