Freelance Jobs - ನಿರುದ್ಯೋಗ, ಹಣಕಾಸು ಸಮಸ್ಯೆಯೇ? ಇಲ್ಲಿವೆ ಹಣ ಮಾಡುವ ಮಾರ್ಗೋಪಾಯಗಳು

ಮನೆಯಲ್ಲೇ ಕುಳಿತು ಮಾಡಬಲ್ಲ ಅನೇಕ ಕೆಲಸಗಳು ಆನ್​ಲೈನ್​ನಲ್ಲಿ ಸಿಗುತ್ತವೆ. ನಿಮಗಿರುವ ಕೌಶಲ್ಯದ ಆಧಾರದ ಮೇಲೆ ಸೂಕ್ತವಾದ ಕೆಲಸಗಳನ್ನ ಆರಿಸಿಕೊಂಡು ಫ್ರೀಲ್ಯಾನ್ಸ್ ಆಗಿ ನೀವು ಕೆಲಸ ಮಾಡಬಹುದು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • News18
 • Last Updated :
 • Share this:
  ಕಳೆದ ಒಂದು ವರ್ಷದಿಂದ ದೇಶದಲ್ಲಿ ಆರ್ಥಿಕ ಹಿನ್ನಡೆಯಾಗುತ್ತಿದೆ. ಅದರಲ್ಲೂ ಕೊರೋನಾ ಬಿಕ್ಕಟ್ಟು ವಕ್ಕರಿಸಿದ ಬಳಿಕ ತೀವ್ರ ಆರ್ಥಿಕ ಸಂಕಷ್ಟ ಬಾಧಿಸುತ್ತಿದೆ. ಅನೇಕ ಕಂಪನಿಗಳು ನಷ್ಟಗೊಂಡ ಪರಿಣಾಮ ಕೋಟ್ಯಂತರ ಸಂಖ್ಯೆಯ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಇನ್ನೂ ಹಲವರು ಉದ್ಯೋಗ ಉಳಿಸಿಕೊಂಡರೂ ಸಂಬಳ ಏರಿಕೆಯಾಗದೇ ಹಣಕಾಸು ಕಷ್ಟಕ್ಕೆ ಸಿಲುಕಿದ್ದಾರೆ. ಈಗ ಕೆಲಸ ಇಲ್ಲ ಎಂದು ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ಕೆಲಸ ಇದ್ದು ಸಮಯ ಇಲ್ಲವೆಂದು ಹೊಸ ಆದಾಯಕ್ಕೆ ಪ್ರಯತ್ನಿಸದೆ ಕೈಚೆಲ್ಲಿ ಕೂರಲೂ ಸಾಧ್ಯವಿಲ್ಲ. ಏನಾದರೂ ಪ್ರಯತ್ನಿಸಬೇಕು, ಮಾರ್ಗೋಪಾಯ ಹುಡುಕಬೇಕು. ಈ ನಿಟ್ಟಿನಲ್ಲಿ ಒಂದಷ್ಟು ಟಿಪ್ಸ್ ಇಲ್ಲಿದೆ.

  ಎಲ್ಲಕ್ಕಿಂತ ಮೊದಲು ನಿಮ್ಮ ಆತ್ಮವಿಮರ್ಶೆ ಆಗಬೇಕು. ನೀವು ಏನು ಕೆಲಸ ಮಾಡಬಲ್ಲಿರಿ? ಯಾವ ಕೆಲಸದಲ್ಲಿ ಪರಿಣತಿ ಹೊಂದಿದ್ದೀರಿ? ಎಷ್ಟು ಸಮಯ ಕೊಡಲು ಸಿದ್ಧವಿದ್ದೀರಿ? ಎಂಬಿತ್ಯಾದಿ ಪ್ರಶ್ನೆಗಳನ್ನ ಹಾಕಿಕೊಂಡು ಉತ್ತರ ಹುಡುಕಲು ಯತ್ನಿಸಿದರೆ ಒಂದಷ್ಟು ಸುಳಿವುಗಳು ಸಿಗಬಹುದು. ನಿಮ್ಮ ಕೌಶಲ್ಯಗಳ ಪಟ್ಟಿ ಮಾಡಿರಿ. ಬೇರೆಯವರಿಗೆ ಹೋಲಿಸಿದರೆ ನಿಮ್ಮದು ಉತ್ತಮ ಎನಿಸುವ ಕೌಶಲ್ಯಗಳ ಬಗ್ಗೆ ಹೆಚ್ಚು ಗಮನ ಹರಿಸಿ.

  ಇದನ್ನೂ ಓದಿ: SBI Bank Recruitment 2020: ಖಾಲಿ ಇರುವ 2 ಸಾವಿರ ಪ್ರೊಬೆಷನರಿ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ

  ಈಗ ಮಾರುಕಟ್ಟೆಯಲ್ಲಿ ಫ್ರೀಲಾನ್ಸ್ ಕೆಲಸಗಳು ಬಹಳ ಇವೆ. ವಿವಿಧ ಕ್ಷೇತ್ರಗಳಲ್ಲಿ ಸ್ವತಂತ್ರ ಉದ್ಯೋಗಗಳು ಸಿಗುತ್ತವೆ. ಅಪ್​​ವರ್ಕ್ (Upwork), ಫ್ರೀಲಾನ್ಸರ್ (Freelancer) ಇತ್ಯಾದಿ ಹಲವು ವಿಶ್ವಾಸಾರ್ಹ ವೆಬ್​ಸೈಟ್​ಗಳಿದ್ದು, ಅಲ್ಲಿ ಅನೇಕ ಕ್ಷೇತ್ರಗಳಿಂದ ಫ್ರೀಲಾನ್ಸ್ ವರ್ಕ್​ಗಳ ಆಫರ್ ಸಿಗುತ್ತವೆ. ನಿಮಗೆ ಪರಿಣಿತಿ ಇರುವ ಮತ್ತು ನೀವು ಮಾಡಲು ಸಾಧ್ಯವಿರುವ ಕೆಲಸಗಳನ್ನ ಇಲ್ಲಿ ಹುಡುಕಬಹುದು. ಭಾಷಾಂತರ, ಡಾಟಾ ಎಂಟ್ರಿ, ಕಸ್ಟಮರ್ ಸರ್ವಿಸ್, ಕಾನೂನು ಸೇವೆ, ಡಬ್ಬಿಂಗ್, ಅಕೌಂಟಿಂಗ್, ವಾಯ್ಸ್ ಓವರ್, ಧ್ವನಿಯಿಂದ ಪಠ್ಯಕ್ಕೆ ತರ್ಜುಮೆ ಇತ್ಯಾದಿ ಅನೇಕ ರೀತಿಯ ಕೆಲಸಗಳು ಸಿಗುತ್ತವೆ

  ಕೆಲ ಸಣ್ಣಪುಟ್ಟ ಕಚೇರಿಗಳಿಗೆ ನೀವು ಮನೆಯಿಂದಲೇ ಆಫೀಸ್ ಅಸಿಸ್ಟೆಂಟ್ ಆಗಿ ಕಾರ್ಯನಿರ್ವಹಿಸಬಹುದು. ನಿಮಗೆ ಅಡುಗೆ ಕಲೆ ಇದ್ದರೆ ಕೆಟರಿಂಗ್ ಸರ್ವಿಸ್ ಕೂಡ ಮಾಡಬಹುದು. ನೀವು ಒಳ್ಳೆಯ ಟೀಚರ್ ಆಗಿದ್ದರೆ ಅದಕ್ಕೂ ಆನ್​ಲೈನ್​ನಲ್ಲಿ ಅವಕಾಶಗಳುಂಟು. ಹಣಕಾಸು ವಿಚಾರದಲ್ಲಿ ಎಕ್ಸ್​ಪರ್ಟ್ ಆಗಿದ್ದರೆ ಕನ್ಸಲ್ಟೆಂಟ್ ಆಗಬಹುದು.

  ಇದನ್ನೂ ಓದಿ: HAL Recruitment 2020: ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ; ಎಸ್​ಎಸ್​ಎಲ್​ಸಿ, ಐಟಿಐ ವಿದ್ಯಾರ್ಥಿಗಳಿಗೆ ಅವಕಾಶ

  ನೀವು ವಿಶೇಷ ಎನಿಸುವ ವಿಡಿಯೋಗಳನ್ನ ಕ್ರಿಯೇಟ್ ಮಾಡಿ ಯೂಟ್ಯೂಬ್ ಮೊದಲಾದ ವಿಡಿಯೋ ತಾಣಗಳಿಗೆ ಅಪ್​ಲೋಡ್ ಮಾಡಿ ಆ ಮೂಲಕ ಹಣ ಗಳಿಸಬಹುದು. ಒಳ್ಳೆಯ ಫೋಟೋಗ್ರಾಫರ್ ಆಗಿದ್ದರೆ ImagesBazaar ಮೊದಲಾದ ತಾಣಗಳಲ್ಲಿ ಉತ್ತಮ ಗುಣಮಟ್ಟದ ಫೋಟೋವನ್ನ ಅಪ್​ಲೋಡ್ ಮಾಡಬಹುದು. ಆ ಫೋಟೋವನ್ನ ಎಷ್ಟು ಮಂದಿ ಡೌನ್​ಲೋಡ್ ಮಾಡುತ್ತಾರೆ ಎಂಬುದರ ಮೇಲೆ ನಿಮಗೆ ಹಣ ಸಿಗುತ್ತದೆ.

  ನೀವು ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗಿದ್ದರೆ ಇನ್​ಫ್ಲುಯೆನ್ಸರ್ ರೀತಿಯ ಆಫರ್ ಸಿಗುತ್ತದೆ. ಅಂದರೆ, ನೀವು ಸೋಷಿಯಲ್ ಮೀಡಿಯಾದಲ್ಲಿ ತಕ್ಕಮಟ್ಟಿಗೆ ಫಾಲೋಯರ್ಸ್ ಹೊಂದಿದ್ದರೆ ನೀವು ಇನ್​ಫ್ಲುಯೆನ್ಸರ್ ಆಗಿರುತ್ತೀರಿ. ನಿಮ್ಮ ಪೋಸ್ಟ್​ಗಳನ್ನ ಬಹಳ ಹೆಚ್ಚು ಮಂದಿ ನೋಡುತ್ತಾರೆ ಅಥವಾ ಓದುತ್ತಾರೆ. ಆಗ ನಿಮಗೆ ಸ್ಪಾನ್ಸರ್ಡ್ ಪೋಸ್ಟ್​ನ ಆಫರ್ ಸಿಗುತ್ತದೆ. ಅಂದರೆ ಪ್ರಾಯೋಜಿತ ಪೋಸ್ಟ್ ಹಾಕಿ ಹಣ ಮಾಡಬಹುದು. ಒಂದು ಉತ್ಪನ್ನದ ವಿಮರ್ಶೆ ಬರೆದು ಹಣ ಮಾಡಬಹುದು.

  ಇದನ್ನೂ ಓದಿ: ICMR Recruitment 2020: 80 ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ; ಪದವಿ ಪೂರೈಸಿದವರಿಗೆ ಅವಕಾಶ

  ನಿಮ್ಮಲ್ಲಿ ಸಾಫ್ಟ್​ವೇರ್ ಮತ್ತು ಕೋಡಿಂಗ್ ಕೌಶಲ್ಯ ಇದ್ದರೆ ಬಹಳಷ್ಟು ಫ್ರೀಲಾನ್ಸ್ ಆಫರ್ ಸಿಗುತ್ತವೆ. ಆದರೆ, ನೀವು ಫ್ರೀಲಾನ್ಸ್ ಕೆಲಸ ಮಾಡುತ್ತಾ ನಿಮ್ಮ ಗ್ರಾಹಕರ ನೆಟ್​​ವರ್ಕ್ ಅನ್ನು ವ್ಯಾಪಿಸುತ್ತಲೇ ಇರಬಹುದು. ಹೆಚ್ಚುವರಿ ಕೆಲಸಗಳನ್ನ ನೀವು ಔಟ್​ಸೋರ್ಸ್ ಮಾಡಿ ಆ ಮೂಲಕ ನೀವು ಆಂಥ್ರಪ್ರೆನ್ಯೂರ್ ಕೂಡ ಆಗಬಹುದು. ಪರಸ್ಪರ ಪೂರಕವಾದ ವಿವಿಧ ರೀತಿಯ ಕೆಲಸಗಳನ್ನ ಮಾಡಬಲ್ಲ ನಿಮ್ಮದೇ ತಂಡವನ್ನ ಕಟ್ಟಿಕೊಂಡು ನೀವು ಸಮಗ್ರ ಸೇವೆ ನೀಡಬಲ್ಲ ನವೋದ್ಯಮವನ್ನ ಹುಟ್ಟುಹಾಕಬಹುದು.

  ಇವೆಲ್ಲದಕ್ಕೂ ನಾವು ಸಮಯ, ಮನಸ್ಸು, ಶ್ರಮ ದಾನದ ಅವಶ್ಯವಿದೆ. ಕೈ ಕೆಸರಾದರೆ ಬಾಯಿ ಮೊಸರು ಎಂಬಂತೆ ನಾವು ಆರಂಭದಲ್ಲಿ ಎದುರಾಗುವ ವೈಫಲ್ಯ, ಹತಾಶೆಯನ್ನ ಎದುರಿಸಿ ಮುನ್ನುಗ್ಗಿದರೆ ಖಂಡಿತ ಯಶಸ್ಸು ಲಭಿಸಲು ಸಾಧ್ಯ.
  Published by:Vijayasarthy SN
  First published: