ಸಹೋದ್ಯೋಗಿಗಳ ನಡುವಿನ ಸಮಸ್ಯೆಗಳನ್ನು ತಪ್ಪಿಸಲು ಇಲ್ಲಿವೆ ಕೆಲ ಸಲಹೆಗಳು
news18
Updated:May 22, 2018, 1:24 PM IST
news18
Updated: May 22, 2018, 1:24 PM IST
ನ್ಯೂಸ್ 18 ಕನ್ನಡ
ಸಹೋದ್ಯೋಗಿಗಳ ನಡುವೆ ಹೊಂದಾಣಿಕೆಯಿದ್ದರೆ ಮಾತ್ರ ಕಚೇರಿಯ ಕೆಲಸ ಭಾರವೆನಿಸುವುದಿಲ್ಲ. ಆದರೆ ಕಚೇರಿಗಳಲ್ಲಿ ನಿಮ್ಮ ಸಾಮರ್ಥ್ಯವನ್ನು ಬಂಡವಾಳವಾಗಿಸುವ ಸಹೋದ್ಯೋಗಿಗಳೂ ಇರುತ್ತಾರೆ. ಇದರಿಂದ ಉದ್ಯೋಗಿಗಳ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗುತ್ತದೆ. ಸದಾ ತೊಂದರೆಗೆ ಕಾರಣವಾಗುವ ಇಂತಹವರಿಂದ ಅಂತರ ಕಾಯ್ದುಕೊಳ್ಳುವುದು ಉತ್ತಮ. ಈ ರೀತಿಯ ಸಹೋದ್ಯೋಗಿಗಳನ್ನು ಗುರುತಿಸಲು ಇರುವ ಕೆಲ ಮಾರ್ಗಗಳು ಇಂತಿವೆ.
ಕೆಲವು ಸಹೋದ್ಯೋಗಿಗಳು ಪ್ರತಿ ಬಾರಿಯೂ ಸಮಸ್ಯೆಯನ್ನು ಸೃಷ್ಟಿಸುವಲ್ಲಿ ಆಸಕ್ತಿ ಹೊಂದಿರುತ್ತಾರೆ. ಸಣ್ಣ ಪುಟ್ಟ ವಿಷಯಗಳನ್ನು ಅವರು ದೊಡ್ಡದು ಮಾಡುತ್ತಾರೆ. ಹೀಗಾಗಿ ಅವರೊಂದಿಗೆ ವ್ಯವಹರಿಸುವಾಗ ಸದಾ ಎಚ್ಚರದಿಂದಿರಿ. ಇಂತಹ ಸಹೋದ್ಯೋಗಿಗಳೊಂದಿಗೆ ಸಹನೆಯಿಂದ ವರ್ತಿಸಲು ಪ್ರಯತ್ನಿಸಿ.
ಸಹೋದ್ಯೋಗಿಗಳಲ್ಲಿ ಕೆಲವರ ವರ್ತನೆಯಲ್ಲಿ ನಾಟಕೀಯತೆ ಎದ್ದು ಕಾಣುತ್ತದೆ. ಅಂತವರು ಸದಾ ಕಾಲ ಕಚೇರಿಯಲ್ಲಿ ಒಂದಲ್ಲ, ಒಂದು ನೆಪವನ್ನು ಹೇಳುತ್ತಿರುತ್ತಾರೆ.ಕಚೇರಿಗಳಲ್ಲಿ ಕೆಲ ವ್ಯಕ್ತಿಗಳು ಹಾಸ್ಯ ಚಟಾಕಿಗಳನ್ನು ಹಾರಿಸುತ್ತಾ ಮಸ್ತಿಯಲ್ಲಿರುತ್ತಾರೆ. ಅವರಿಗೆ ಕಚೇರಿ ಸಮಯದ ಬಗ್ಗೆ ಯಾವುದೇ ರೀತಿಯ ಪರಿಜ್ಞಾನವಿರುವುದಿಲ್ಲ. ಆರಂಭದಲ್ಲಿ ಅವರು ನಿಮಗೆ ಇಷ್ಟವಾಗಬಹುದು, ಅನಂತರ ಅವರ ಹಾಸ್ಯಗಳೇ ಕಿರಿಕಿರಿ ಎಂದು ಅನಿಸಿ ಬಿಡುತ್ತದೆ. ಇಂತಹ ಸಹೋದ್ಯೋಗಿಗಳಿಗೆ ನಿಮಗೆ ಆಗುವ ತೊಂದರೆಯನ್ನು ನೇರವಾಗಿ ವಿವರಿಸಿ.
ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ ದೂರು ಹೇಳುವ ಜಾಯಮಾನದವರು ಇರುತ್ತಾರೆ. ಇಂತಹ ಸಹೋದ್ಯೋಗಿಗಳೊಂದಿಗೆ ಸಮಸ್ಯೆಗಳನ್ನು ಹೇಳದಿರುವುದು ಉತ್ತಮ. ಏಕೆಂದರೆ ಅಂತಹವರು ನಿಮ್ಮ ಅಪಾದನೆಯನ್ನು ಇನ್ನೊಬ್ಬರಿಗೆ ತಿಳಿಸುತ್ತಾರೆ. ಯಾವುದೇ ಸಮಸ್ಯೆಗಳಿದ್ದರೂ ನೇರವಾಗಿ ಬಾಸ್ ಜೊತೆ ಮಾತನಾಡಿ ಪರಿಹಾರ ಕಂಡುಕೊಳ್ಳಿ.

Loading...