ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾಗಳು(Bacteria) ಎಲ್ಲೆಡೆ ಕಂಡುಬರುತ್ತವೆ. ಅವು ಬರಿಗಣ್ಣಿಗೆ ಕಾಣುವುದಿಲ್ಲ ಆದರೆ ಅಡಿಗೆಮನೆಗಳು(Kitchen), ಕಪಾಟುಗಳು ಇತ್ಯಾದಿಗಳ ಮೂಲೆಗಳಲ್ಲಿ ಅವುಗಳು ಹೆಚ್ಚಿರುತ್ತದೆ. ನಮ್ಮ ಅಡಿಗೆಮನೆಗಳಲ್ಲಿ ಕ್ರಿಮಿಕೀಟಗಳು ಹೆಚ್ಚಿರುತ್ತದೆ. ಮನೆಯ ಸದಸ್ಯರ ಆರೋಗ್ಯ ಕಾಪಾಡಲು ಅಡುಗೆಮನೆಯ ಎಲ್ಲಾ ಪ್ರದೇಶಗಳನ್ನು ಸ್ವಚ್ಛವಾಗಿ ಮತ್ತು ಅಚ್ಚುಕಟ್ಟಾಗಿ ಇಡುವುದು ಮುಖ್ಯವಾಗುತ್ತದೆ. ಈಗ, ಅಡುಗೆಮನೆಯನ್ನು ಸ್ವಚ್ಛಗೊಳಿಸುವುದು ಹೇಗೆ ಎಂಬುದು ಇಲ್ಲಿದೆ.
ವರ್ಕ್ಟಾಪ್ ಸ್ವಚ್ಛವಾಗಿರಬೇಕು
ಅಡುಗೆ ಮನೆಯ ಮುಖ್ಯ ಭಾಗವನ್ನು ಸ್ವಚ್ಛವಾಗಿಡುವುದು ಬಹಳ ಮುಖ್ಯವಾಗುತ್ತದೆ. ಹಳೆಯ ಟಿ-ಶರ್ಟ್, ವಿನೆಗರ್, ನೀರು ಮತ್ತು ಕೆಲವು ಹನಿ ಸಾರಭೂತ ತೈಲಗಳನ್ನು ಬಳಸಿ ಸ್ವಚ್ಛ ಮಾಡುವುದು ಬಹಳ ಮುಖ್ಯ. ಅಡಿಗೆ ಮನೆಯ ಕಲ್ಲುಗಳ ಸ್ವಚ್ಛ ಮಾಡುವುದು ಕಷ್ಟಕರವೇನಲ್ಲ.
ಚಾಪಿಂಗ್ ಬೋರ್ಡ್ ಅನ್ನು ಸ್ವಚ್ಛಗೊಳಿಸಲು ಹ್ಯಾಕ್ಸ್
ಟಿಂಗ್ ಬೋರ್ಡ್ಗಳನ್ನು ಬಹಳಷ್ಟು ಬಳಕೆ ಮಾಡಲಾಗುತ್ತದೆ. ಇದರ ಮೇಲೆ ಹೆಚ್ಚಿನ ಕಲೆಗಳು ಇರುತ್ತದೆ ಹಾಗೂ ಬ್ಯಾಕ್ಟೀರಿಯಾಗಳು ಸಹ ಅದರಲ್ಲೇ ಹೆಚ್ಚಿರುತ್ತದೆ. ಇದನ್ನು ಸ್ವಚ್ಛ ಮಾಡುವ ವಿಧಾನ ಎಂದರೆ, ನಿಂಬೆಹಣ್ಣನ್ನು ಅರ್ಧದಷ್ಟು ಕತ್ತರಿಸಿ, ಹಲಗೆಯ ಮೇಲೆ ಉಪ್ಪನ್ನು ಹಾಕಿ ನಿಂಬೆಯನ್ನು ಸ್ಪಂಜಿನಂತೆ ಬಳಸಿ ಸ್ವಚ್ಛ ಮಾಡಿ. ನಂತರ ನೀರಿನಿಂದ ತೊಳೆದು ಒಣಗಲು ಬಿಡಿ.
ಕಿಚನ್ ಟವೆಲ್ ಅನ್ನು ನಿಯಮಿತವಾಗಿ ತೊಳೆಯಬೇಕು
ಕೊಳಕು ಅಥವಾ ಬಣ್ಣಬಣ್ಣದ ಕಿಚನ್ ಟವೆಲ್ಗಳು ಬ್ಯಾಕ್ಟೀರಿಯಾಕ್ಕೆ ಸಂತಾನೋತ್ಪತ್ತಿ ಮಾಡಲು ಸೂಕ್ತವಾದ ಸ್ಥಳವಾಗಿದೆ ಮತ್ತು ಆದ್ದರಿಂದ ಅವುಗಳನ್ನು ಆಗಾಗ್ಗೆ ತೊಳೆಯಬೇಕು. ಹಾಗೆಯೇ ಆಗಾಗ ಟವೆಲ್ಗಳನ್ನು ಬಳಸುವುದು ಮುಖ್ಯ.
ಇದನ್ನೂ ಓದಿ: ಮಕ್ಕಳು ಎತ್ತರವಾಗಿ ಬೆಳೆಯಬೇಕು ಅಂದ್ರೆ ಈ ಆಟಗಳನ್ನು ಆಡಿಸಿ
ನಮ್ಮಲ್ಲಿ ಹೆಚ್ಚಿನವರು ಮಧ್ಯರಾತ್ರಿಯಲ್ಲಿ ನಮ್ಮ ಅಡುಗೆಮನೆಯ ದೀಪಗಳನ್ನು ಆನ್ ಮಾಡಲು ಹೆದರುತ್ತಾರೆ, ಜಿರಳೆಗಳು ಕಾಣಿಸುತ್ತವೆ ಎಂದು. ಜಿರಳೆಗಳು ತಮ್ಮ ತ್ಯಾಜ್ಯ ಮತ್ತು ಲಾಲಾರಸದಿಂದ ಆಹಾರವನ್ನು ಕಲುಷಿತಗೊಳಿಸಬಹುದು, ಇದು ಆಹಾರ ವಿಷ, ಅತಿಸಾರ ಮತ್ತು ಸ್ಟೆಫಿಲೋಕೊಕಸ್ ಸೋಂಕನ್ನು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ಹೊಂದಿರುತ್ತದೆ. ಈ ಕೀಟಗಳು ಹೆಚ್ಚಾಗಿ ರಾತ್ರಿಯಲ್ಲಿ ಹೊರಬರುತ್ತವೆ. ಇದಕ್ಕೆ ಪರಿಣಾಮಕಾರಿ ಜಿರಳೆ ಕಿಲ್ಲರ್ ಸ್ಪ್ರೇ ಬಳಸುವುದು ಬಹಳ ಮುಖ್ಯ.
ಪ್ರಿಡ್ಜ್ ಅನ್ನು ಸ್ವಚ್ಛ ಮಾಡುತ್ತಿರಿ
ನೀವು ಆಗಾಗ ಫ್ರಿಡ್ಜ್ ನ್ನು ಪರಿಶೀಲನೆ ಮಾಡಬೇಕು. ಯಾವುದಾದರೂ ಹಳೆಯ ಪದಾರ್ಥಗಳು ಅಂದರೆ ಡೇಟ್ ಮುಗಿದಿರುವ ವಸ್ತುಗಳನ್ನು ಇಟ್ಟುಕೊಳ್ಳಬಾರದು. ಹಾಗೆ ಉಳಿದಿದೆಯಾ ಎಂದು ನೋಡಿ, ಹಾಗೆ ಇದ್ದರೆ ಅದನ್ನು ತೆಗೆಯಬೇಕು. . ಇದರಿಂದ ಅಲ್ಲಿ ಯಾವುದೇ ರೀತಿಯ ಬ್ಯಾಕ್ಟೀರಿಯಾ ಬೆಳವಣಿಗೆ ಆಗುವುದು ತಪ್ಪುತ್ತದೆ.
ನಿಮ್ಮ ಫ್ರಿಜ್ ಮತ್ತು ಫ್ರೀಜರ್ನ ಕಪಾಟುಗಳು, ಡ್ರಾಯರ್ಗಳು ಮತ್ತು ಇತರ ತೆಗೆಯಬಹುದಾದ ಭಾಗಗಳನ್ನು ಸೋಪ್ ಮತ್ತು ಬಿಸಿ ನೀರಿನಿಂದ ತೊಳೆಯಿರಿ. ಅಲ್ಲದೇ ನೀವು ಪ್ರಿಡ್ಜ್ನ ಒಂದು ಮೂಲೆಯಲ್ಲಿ ಅಡುಗೆ ಸೋಡಾವನ್ನು ಇಡಿ, ಅದು ದುರ್ವಾಸನೆಯನ್ನು ತಡೆಯುತ್ತದೆ.
ಮೈಕ್ರೋವೇವ್ ನ ಫಿಲ್ಟರ್ ನಲ್ಲಿ ಇರುವುದನ್ನು ನಾವು ಯಾವಾಗಲೂ ಕಡೆಗಣಿಸುತ್ತೇವೆ. ಮೈಕ್ರೋವೇವ್ ನ್ನು ಸರಿಯಾದ ರೀತಿಯಿಂದ ನಿರ್ವಹಣೆ ಮಾಡಬೇಕು. ಅದೇ ರೀತಿಯಲ್ಲಿ ಮನೆಯಲ್ಲಿ ಚಿಮಣಿ ಇದ್ದರೂ ಅದನ್ನು ಕೂಡ ಸರಿಯಾಗಿ ನಿರ್ವಹಣೆ ಮಾಡಬೇಕು. ಮೈಕ್ರೋವೇವ್ ನ್ನು ಹಳೆ ಬಟ್ಟೆಯಿಂದ ಶುಚಿ ಮಾಡುತ್ತಿದ್ದರೆ ಆಗ ಅಲ್ಲಿ ಬ್ಯಾಕ್ಟೀರಿಯಾ ಬೆಳವಣಿಗೆ ಆಗುವುದು ತಪ್ಪುವುದು.
ನೀವು ಲಿಂಬೆ ಬಳಸಿಕೊಂಡು ಬೇಕಿಂಗ್ ಟ್ರೇ ಮತ್ತು ಪ್ಯಾನ್ ನ್ನು ಸರಿಯಾದ ರೀತಿಯಲ್ಲಿ ಶುಚಿ ಮಾಡಿ. ಶುಚಿಯಾಗಿರದ ಬೇಕಿಂಗ್ ಟ್ರೇ ಅಥವಾ ಪ್ಯಾನ್ ನ್ನು ಬಳಸಿಕೊಂಡರೆ ಅದರಿಂದ ಅತಿಸಾರ, ವಾಂತಿ ಇತ್ಯಾದಿಗಳು ಬರುತ್ತದೆ.
ಡಿಶ್ವಾಶರ್ ಅನ್ನು ಸ್ವಚ್ಛ ಮಾಡುವ ವಿಧಾನ
ಇದನ್ನೂ ಓದಿ:ಹೊಟ್ಟೆಯ ಸುತ್ತ ಟೈರ್ ಬಂದಿದ್ರೆ ಚಿಂತೆ ಬೇಡ ಇದನ್ನು ಕುಡಿದ್ರೆ ಸಾಕು ಬೊಜ್ಜು ಮಾಂಗಮಾಯವಾಗುತ್ತೆ
ಡಿಶ್ವಾಶರ್ ಕ್ಲೀನ್ ಮಾಡಲು ಒಂದು ಕಪ್ ಡಿಟರ್ಜೆಂಟ್ಗೆ ಸ್ವಲ್ಪ ನಿಂಬೆ ರಸವನ್ನು ಸೇರಿಸಿ ಕ್ಲೀನ್ ಮಾಡಬಹುದು. ಅಲ್ಲದೇ, ನೀವು ಡಿಟರ್ಜೆಂಟ್ ಜೊತೆಗೆ ವಿನೆಗರ್ ಅನ್ನು ಸಹ ಬಳಸಬಹುದು. ಒಣ ಅಡಿಗೆ ಬಟ್ಟೆಯಿಂದ ಒರೆಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ