ವ್ಯಕ್ತಿಯ ಮುಖದ ಸೌಂದರ್ಯದಲ್ಲಿ (Beauty) ಕಣ್ಣಿಗೆ ವಿಶೇಷ ಸ್ಥಾನ. ಹೊಳೆಯುವ ಕಣ್ಣುಗಳ ಆಕರ್ಷಣೆ ಅಂಥದ್ದು. ಮಿನುಗುವ ಕಣ್ಣುಗಳು ಸೌಂದರ್ಯವನ್ನು ಇಮ್ಮಡಿಗೊಳಿಸುತ್ತವೆ. ಹಾಗಾಗಿ ಕಣ್ಣಿನ ಸುತ್ತ ಚರ್ಮವನ್ನು ಪೋಷಣೆ ಮಾಡುವುದು ತುಂಬಾ ಮುಖ್ಯ. ಆದರೆ ಹೆಚ್ಚಿನ ಜನರು ಕಣ್ಣಿನ ಸುತ್ತ ಆಗುವ ಕಪ್ಪು ವರ್ತುಲ, ಕಣ್ಣಿನ ಸುತ್ತ ನೆರಿಗೆ, ಕಣ್ಣಿನ ಸುತ್ತ ಒಣಚರ್ಮ ಇಂಥ ಸಮಸ್ಯೆಗಳಿಂದ ಬೇಸತ್ತು ಹೋಗುತ್ತಾರೆ. ಹೆಚ್ಚಿನ ಸಮಯ ಕಂಪ್ಯೂಟರ್ (Computer) ಎದುರು ಕೆಲಸ ಮಾಡುವುದರಿಂದ, ನಿದ್ದೆ ಸರಿಯಾಗಿ ಆಗದೇ ಇದ್ದಾಗ, ಒತ್ತಡ ಹಾಗೂ ಇನ್ನೂ ಅನೇಕ ಕಾರಣಗಳಿಂದ ಕಣ್ಣಿನ ಸುತ್ತ ಇರುವ ಚರ್ಮವು ಸುಕ್ಕಾಗುತ್ತದೆ.
ಹೌದು, ಕಣ್ಣುಗಳ ಸುತ್ತಲಿನ ಚರ್ಮವು ಸೂಕ್ಷ್ಮವಾಗಿರುತ್ತದೆ. ಸರಿಯಾದ ಕ್ರೀಮ್‌ಗಳು ಮತ್ತು ಸೀರಮ್‌ಗಳು ಅಂಥ ಚರ್ಮವನ್ನು ಹೈಡ್ರೇಟ್ ಮಾಡಲು, ಹೊಳಪು ಮತ್ತು ಮೃದುಗೊಳಿಸಲು ಸಹಾಯ ಮಾಡುತ್ತದೆ.
ಇಂದು ಮಾರುಕಟ್ಟೆಯಲ್ಲಿ ಸಾಕಷ್ಟು ಆಯ್ಕೆಗಳಿರುತ್ತವೆ. ಆದರೆ ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಅಷ್ಟೇ ಮುಖ್ಯ. ಆದ್ದರಿಂದ ಸರಿಯಾದ ಆಯ್ಕೆ ಹೇಗೆ ಮಾಡಬೇಕು ಅನ್ನೋದನ್ನು ತಿಳಿದುಕೊಳ್ಳೋಣ. ಕಣ್ಣಿನ ಕೆಳಗೆ ಹಚ್ಚುವ ಕ್ರೀಮ್ ಅಥವಾ ಸೀರಮ್ ಆಯ್ಕೆಯಲ್ಲಿ ಈ ಅಂಶಗಳನ್ನು ಪರಿಗಣಿಸಿ
1. ಚರ್ಮದ ಪ್ರಕಾರ: ಕಣ್ಣಿನ ಕೆಳಗೆ ಹಚ್ಚುವ ಕ್ರೀಮ್ ಅಥವಾ ಸೀರಮ್ಅನ್ನು ಆಯ್ಕೆಮಾಡುವಾಗ ಪರಿಗಣಿಸಬೇಕಾದ ಮೊದಲ ವಿಷಯವೆಂದರೆ ನಿಮ್ಮ ನಿರ್ದಿಷ್ಟ ಚರ್ಮದ ಪ್ರಕಾರ.
ಇದನ್ನೂ ಓದಿ: ಸುಡುವ ಬೇಸಿಗೆಯಲ್ಲಿ ನಿಮ್ಮ ಪಾದಗಳನ್ನು ಸುಂದರವಾಗಿಟ್ಟುಕೊಳ್ಳಲು ಹೀಗೆ ಆರೈಕೆ ಮಾಡಿ!
ನೀವು ಒಣ ಚರ್ಮವನ್ನು ಹೊಂದಿದ್ದರೆ, ಹೈಲುರಾನಿಕ್ ಆಮ್ಲ, ಗ್ಲಿಸರಿನ್ ಅಥವಾ ಶಿಯಾ ಬೆಣ್ಣೆಯಂತಹ ಹೈಡ್ರೇಟಿಂಗ್ ಪದಾರ್ಥಗಳನ್ನು ಒಳಗೊಂಡಿರುವ ಕ್ರೀಮ್ ಅಥವಾ ಸೀರಮ್ ಆಯ್ಕೆ ಮಾಡಿ.
2. ಪದಾರ್ಥಗಳು: ನಿಮ್ಮ ಸರಿಹೊಂದುವಂಥ ಅಥವಾ ನಿಮ್ಮ ನಿರ್ದಿಷ್ಟ ಕಾಳಜಿಗಳನ್ನು ಪರಿಹರಿಸುವಲ್ಲಿ ಪರಿಣಾಮಕಾರಿ ಎನಿಸುವ ಕ್ರೀಮ್‌ಗಳು ಮತ್ತು ಸೀರಮ್‌ಗಳನ್ನು ಕೊಂಡುಕೊಳ್ಳಿ.
3. ಸನ್ ಪ್ರೊಟೆಕ್ಷನ್ ಫ್ಯಾಕ್ಟರ್ (ಎಸ್‌ಇಎಫ್): ಕಣ್ಣುಗಳ ಸುತ್ತಲಿನ ಚರ್ಮವು ಸೂರ್ಯನ ಕಿರಣಗಳಿಗೆ ಸೂಕ್ಷ್ಮವಾಗಿರುತ್ತದೆ. ಇದು ಸುಕ್ಕುಗಳು ಮತ್ತು ಕಪ್ಪು ವಲಯಗಳಿಗೆ ಕಾರಣವಾಗಬಹುದು. ಸೂರ್ಯನ ಹಾನಿಕಾರಕ ಪರಿಣಾಮಗಳಿಂದ ಈ ಸೂಕ್ಷ್ಮ ಪ್ರದೇಶವನ್ನು ರಕ್ಷಿಸಲು ಸನ್‌ಸ್ಕ್ರೀನ್ ಹೊಂದಿರುವ ಕ್ರೀಮ್ ಅಥವಾ ಸೀರಮ್ ಅನ್ನು ನೋಡಿ.
4. ಹೊಂದುವಂಥದ್ದನ್ನು ಆಯ್ಕೆ ಮಾಡಿ: ಕ್ರೀಮ್ ಅಥವಾ ಸೀರಮ್ ನಲ್ಲಿ ಯಾವುದನ್ನು ಕೊಂಡುಕೊಳ್ಳುತ್ತೀರಾ ಎಂಬುದನ್ನು ನಿರ್ಧರಿಸಿ. ತ್ವರಿತವಾಗಿ ಹೀರಿಕೊಳ್ಳುವ ಹಗುರವಾದ ಪರಿಹಾರ ಬಯಸಿದರೆ, ಸೀರಮ್ ಅನ್ನು ನೋಡಿ. ನೀವು ಹೆಚ್ಚು ಹೈಡ್ರೇಟ್ ಮಾಡುವಂಥದ್ದನ್ನು ಬಯಸಿದರೆ ಕ್ರೀಮ್ ಕೊಂಡುಕೊಳ್ಳಿ.
5. ಬ್ರ್ಯಾಂಡ್: ಅಂತಿಮವಾಗಿ, ಕ್ರೀಮ್ ಅಥವಾ ಸೀರಮ್ ಅನ್ನು ಆಯ್ಕೆಮಾಡುವಾಗ ಬ್ರ್ಯಾಂಡ್ಅನ್ನು ಪರಿಗಣಿಸಿ. ಉತ್ತಮ ಗುಣಮಟ್ಟದ, ಖ್ಯಾತಿಯನ್ನು ಹೊಂದಿರುವ ಮತ್ತು ಉತ್ತಮ ಪದಾರ್ಥಗಳನ್ನು ಮಾತ್ರ ಬಳಸುವ ಬ್ರ್ಯಾಂಡ್‌ಗಳನ್ನು ಆಯ್ಕೆ ಮಾಡಿ.
ಅಂಡರ್ ಐ ಕ್ರೀಮ್ ಆಯ್ಕೆ ಹೇಗೆ ?
ಸರ್ಟಿಫೈಡ್ ಡರ್ಮಟಾಲಜಿಸ್ಟ್ ಡಾ.ಜೈಶ್ರೀ ಶರದ್ ಅವರು, ತಮ್ಮ ಇನ್‌ಸ್ಟಾಗ್ರಾಂನಲ್ಲಿ ಅಂಡರ್ ಐ ಕ್ರೀಮ್ ಆಯ್ಕೆ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
1. ಡಾರ್ಕ್ ಸರ್ಕಲ್: ನಿಮ್ಮ ಕಣ್ಣುಗಳ ಕೆಳಗೆ ಕಪ್ಪು ವಲಯಗಳನ್ನು ನೀವು ಎದುರಿಸುತ್ತಿದ್ದರೆ, ಇದು ಹೈಪರ್ಪಿಗ್ಮೆಂಟೇಶನ್ ಕಾರಣದಿಂದ ಉಂಟಾಗಿರಬಹುದು.
ಈ ಸಂದರ್ಭದಲ್ಲಿ, ಅರ್ಬುಟಿನ್, ಲೈಕೋರೈಸ್, ವಿಟಮಿನ್ ಸಿ, ಕೋಜಿಕ್ ಆಸಿಡ್ ಅಥವಾ ಇತರ ರೀತಿಯ ಪದಾರ್ಥಗಳಂತಹ ಚರ್ಮವನ್ನು ಹಗುರಗೊಳಿಸುವ ಪದಾರ್ಥಗಳನ್ನು ಒಳಗೊಂಡಿರುವ ಉತ್ಪನ್ನವನ್ನು ಆಯ್ಕೆ ಮಾಡಿಕೊಳ್ಳಿ.
2. ಕಣ್ಣಿನ ಸುತ್ತ ಸುಕ್ಕುಗಳು: ಸೂಕ್ಷ್ಮ ರೇಖೆಗಳು ಮತ್ತು ಸುಕ್ಕುಗಳು ಅನೇಕರಿಗಿರುತ್ತವೆ. ಉತ್ತಮ ಕಣ್ಣಿನ ಕ್ರೀಮ್ ಅಥವಾ ಸೀರಮ್ ಈ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುತ್ತದೆ.
ರೆಟಿನಾಲ್ ಅಥವಾ ಪೆಪ್ಟೈಡ್‌ಗಳನ್ನು ಒಳಗೊಂಡಿರುವ ಉತ್ಪನ್ನವನ್ನು ಆಯ್ಕೆ ಮಾಡಿ. ಇದು ಕೊಲಾಜನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ ಮತ್ತು ಸುಕ್ಕುಗಳನ್ನು ನಿವಾರಿಸುತ್ತದೆ.
ಇದನ್ನೂ ಓದಿ: ತ್ವಚೆ ಮೃದುವಾಗಿರಬೇಕಂದ್ರೆ ಬಾಡಿ ಲೋಷನ್ ಯಾವಾಗ ಹಚ್ಚಿಕೊಳ್ಳಬೇಕು?
3. ಕಣ್ಣುಗಳ ಕೆಳಗೆ ಟೊಳ್ಳು: ನಿಮ್ಮ ಕಣ್ಣುಗಳ ಕೆಳಗೆ ನೀವು ಟೊಳ್ಳಾದ ಅಥವಾ ಗುಳಿಬಿದ್ದ ನೋಟವನ್ನು ಹೊಂದಿದ್ದರೆ, ನೀವು ಹೈಲುರಾನಿಕ್ ಆಮ್ಲವನ್ನು ಹೊಂದಿರುವ ಸೀರಮ್ ಅನ್ನು ಕೊಂಡುಕೊಳ್ಳಿ. ಇದು ಚರ್ಮವನ್ನು ಕೊಬ್ಬಲು ಮತ್ತು ಹೆಚ್ಚು ಯಂಗ್ ಆಗಿ ಕಾಣಲು ಸಹಾಯ ಮಾಡುತ್ತದೆ.
4. ನೀಲಿ ಬಣ್ಣ: ಸೂಕ್ಷ್ಮವಾದ ಕ್ಯಾಪಿಲ್ಲರಿಗಳು ಅಥವಾ ರಕ್ತನಾಳಗಳಿಂದಾಗಿ ಕಣ್ಣುಗಳ ಕೆಳಗೆ ನೀಲಿ ಬಣ್ಣ ಕಾಣಿಸುತ್ತದೆ. ಹೀಗಿದ್ದಾಗ ನೀವು ವಿಟಮಿನ್ ಕೆ ಹೊಂದಿರುವ ಉತ್ಪನ್ನವನ್ನು ಪ್ರಯತ್ನಿಸಬಹುದು. ಇದು ಕ್ಯಾಪಿಲ್ಲರಿಗಳನ್ನು ಬಲಪಡಿಸಲು ಮತ್ತು ನೀಲಿ ಬಣ್ಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
5. ಹೆಚ್ಚುವರಿ ಚಿಕಿತ್ಸೆಗಳು: ಕೆಲವೊಮ್ಮೆ ನಿಮ್ಮ ಕಣ್ಣಿನ ಸುತ್ತಲಿನ ಸಮಸ್ಯೆಗಳಿಗೆ ಅಂಡರ್ ಐ ಕ್ರೀಮ್‌ಗಳು ಮತ್ತು ಸೀರಮ್‌ಗಳು ಸಾಕಾಗುವುದಿಲ್ಲ. ಈ ಸಂದರ್ಭಗಳಲ್ಲಿ, ನಿಮ್ಮ ಕಣ್ಣಿನ ಸುತ್ತಲಿನ ಚರ್ಮವನ್ನು ಹೊಳಪಾಗಿಸಲು ನೀವು ಕ್ಯೂ-ಸ್ವಿಚ್ ND-YAG ಲೇಸರ್, ಪಿಕೊ ಲೇಸರ್, ಅರ್ಜಿನೈನ್ ಪೀಲ್ ಅಥವಾ ಗ್ಲೈಕೋಲಿಕ್ ಆಸಿಡ್ ಪೀಲ್ ನಂತಹ ಹೆಚ್ಚುವರಿ ಚಿಕಿತ್ಸೆಗಳನ್ನು ಪರಿಗಣಿಸಬಹುದು.
ಅಂದಹಾಗೆ ಕಣ್ಣಿನ ಕೆಳಗೆ ಹಚ್ಚುವ ಕ್ರೀಮ್ ಅಥವಾ ಸೀರಮ್ಅನ್ನು ಆಯ್ಕೆಮಾಡುವಾಗ, ಅದರಲ್ಲಿನ ಪ್ರಮುಖ ಪದಾರ್ಥಗಳನ್ನು ನೋಡಲು ಮರೆಯದಿರಿ. ಅಲ್ಲದೇ ಅಗತ್ಯವಿದ್ದಾಗ ಹೆಚ್ಚುವರಿ ಚಿಕಿತ್ಸೆಯನ್ನು ಪರಿಗಣಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ