ಪ್ರೇಮಿಗಳ ದಿನವನ್ನು ಆಚರಿಸಲು ಕೆಲವೊಂದು ಟಿಪ್ಸ್​

news18
Updated:February 13, 2018, 4:06 PM IST
ಪ್ರೇಮಿಗಳ ದಿನವನ್ನು ಆಚರಿಸಲು ಕೆಲವೊಂದು ಟಿಪ್ಸ್​
news18
Updated: February 13, 2018, 4:06 PM IST
ನ್ಯೂಸ್ 18 ಕನ್ನಡ

ಪ್ರೀತಿ ಪಾತ್ರರಿಗೆ ಉಡುಗೊರೆ, ಹೂ ಗುಚ್ಚ ನೀಡುವ ಮೂಲಕ ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ. ಜತೆಗೆ ಒಂದಿಷ್ಟು ಸುತ್ತಾಟ, ಶಾಪಿಂಗ್​ ಹಾಗೂ ರಾತ್ರಿ ಕ್ಯಾಂಡಲ್ ಲೈಟ್ ಡಿನ್ನರ್​ ಸಹ ಈ ದಿನದ ಆಚರಣೆಯ ಭಾಗವಾಗಿರುತ್ತದೆ. ಆದರೆ ಇಷ್ಟಪಟ್ಟವರ ಜತೆ ಏಕಾಂತವಾಗಿ ಸಮಯ ಕಳೆಯಲು ಮೆಟ್ರೊ ಸಿಟಿಗಳಲ್ಲಿ ಹೇಗೆ ಸಾಧ್ಯ ಹೇಳಿ.

ನಗರಗಳಲ್ಲಿ ಇರುವ ಉದ್ಯಾನಗಳು, ರೆಸ್ಟೊರೆಂಟ್​ಗಳು ಎಲ್ಲ ತುಂಬಿ ತುಳುಕುತ್ತಿರುತ್ತವೆ. ಹೀಗಿರುವಾಗ ಬೇರೆ ರೀತಿ ಪ್ಲಾನ್​ ಮಾಡಲೇಬೇಕು. ಅದಕ್ಕೆ ಒಂದಿಷ್ಟು ಸಲಹೆಗಳು ಇಲ್ಲಿವೆ.

ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯುವ ಆಸೆ ಇದ್ದಲ್ಲಿ, ನಗರದ ಟ್ರಾಫಿಕ್​, ಗಲಾಟೆಯಿಂದ ಕೊಂಚ ದೂರ ಕರೆದುಕೊಂಡು ಹೋಗಿ. ನೀವು ಹೋಗುವ ಸ್ಥಳ ಪ್ರಶಾಂತವಾಗಿ ಹಾಗೂ ಸುಂದರವಾಗಿರುವ ಸ್ಥಳವಾದರೆ ಉತ್ತಮ.

ಸೂಯಾಸ್ತ ಅಥವಾ ಸೂರ್ಯೋದಯವನ್ನು ನೋಡಬಹುದಾದ ಸ್ಥಳವಾದರೆ ಅದು ಮತ್ತಷ್ಟು ರೊಮ್ಯಾಂಟಿಕ್​ ಆಗಿರುತ್ತದೆ.

ಒಂದುವೇಳೆ ನಗರದಿಂದ ಹೊರ ಹೋಗಲು ಸಾಧ್ಯವಾಗದೇ ಹೋದಲ್ಲಿ, ಅಲ್ಲೇ ಇರುವ ರೆಸ್ಟೊರೆಂಟ್​ಗಳಲ್ಲಿ ಕೂಗಾಟ, ಗಲಾಟೆ ಇಲ್ಲದೆ ಇರುವುದನ್ನು ಆಯ್ಕೆ ಮಾಡಿಕೊಳ್ಳಿ. ಅದರಲ್ಲೂ ಈಗ ಕ್ಯಾರಿಓಕೆ ನೈಟ್ ಬಹಳ ಪ್ರಸಿದ್ಧಿ ಪಡೆದಿದ್ದು, ರಾತ್ರಿ ಡಿನ್ನರ್​ಗೆ ಇಂತಹ ರೆಸ್ಟೊರೆಂಟ್​ಗಳನ್ನು ಆಯ್ಕೆ ಮಾಡಿಕೊಳ್ಳಿ.

ತಂತ್ರಜ್ಱಆನ ಎಷ್ಟೇ ಮುಂದುವರೆದರೂ ಪತ್ರಗಳಲ್ಲಿ ಬರೆಯುವ ಅಕ್ಷರಗಳಲ್ಲಿ ವ್ಯಕ್ತವಾಗುವ ಭಾವನೆ ಯಾವ ಎಸ್​ಎಮ್​ಎಸ್​ ಹಾಗೂ ಡಿಜಿಟಲ್​ ಸಂದೇಶಗಳಿಂದ ಆಗುವುದಿಲ್ಲ. ನಿಮ್ಮ ಪತ್ರ ಓದುತ್ತಿದ್ದಂತೆ ನೀವು ಇಷ್ಟಪಡುವವರ ಮೊಗದಲ್ಲಿ ನಗು ಮೂಡಬೇಕು.
Loading...

ಎಲ್ಲದಕ್ಕಿಂತ ಹೆಚ್ಚಾಗಿ ನೀವು ಕೊಡುವ ಉಡುಗೊರೆ ಎದುರಿನವರಿಗೆ ಇಷ್ಟವಾಗಬೇಕು ವಿನಃ ಅದು ದುಬಾರಿ ಉಡುಗೊರೆಯಾಗಿರಬೇಕೆಂದಿಲ್ಲ. ನಿಮ್ಮ ಪ್ರೀತಿಗೆ ಏನಿಷ್ಟ? ಅವರಿಷ್ಟದ ಚಿಕ್ಕ ಚಿಕ್ಕ ವಸ್ತುಗಳನ್ನು ಅವರಿಗೆ ನೀಡಿ. ಇದರಿಂದ ಅವರಿಗೆ ಖುಷಿಯಾಗೋದರಲ್ಲಿ ಅನುಮಾನವೇ ಇಲ್ಲ.
First published:February 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ