ತೂಕನೂ ಇಳಿಸ್ಬೇಕು, ಸಿಹಿನೂ ತಿನ್ನಬೇಕು ಎನ್ನುವವರು ಈ ಪರ್ಯಾಯ ಮಾರ್ಗ ಅನುಸರಿಸಿ...!

ಸಿಹಿಯನ್ನೇ ಜೀವವಾಗಿಸಿಕೊಂಡವರಿಗೆ ಸಿಹಿ ತಿನ್ನುವುದನ್ನು ಬಿಡುವುದು ಮಾತ್ರ ಸವಾಲಿನ ಕೆಲಸ. ಅಂದರೆ ಮನಸ್ಸು ಸಿಹಿ ಬೇಡ ಎಂದು ಹೇಳಿದರೂ ನಾಲಿಗೆ ಮಾತ್ರ ಸಿಹಿಗೆ ಹಾತೊರೆಯುತ್ತದೆ. ಇಂತಹ ವ್ಯಕ್ತಿಗಳು ಸಿಹಿ ತಿನ್ನುತ್ತಲೇ ದೇಹದ ತೂಕ ಇಳಿಸಿಕೊಳ್ಳಬಹುದು

ಸ್ವೀಟ್ಸ್​

ಸ್ವೀಟ್ಸ್​

 • Share this:

  ಕೆಲವರಿಗೆ ಸಿಹಿ ಎಂದರೆ ಪಂಚಪ್ರಾಣ. ದಿನಕ್ಕೊಮ್ಮೆಯಾದರೂ ಸಿಹಿ ತಿನ್ನದಿದ್ದರೆ ನಿದ್ದೆಯೇ ಬರುವುದಿಲ್ಲ. ಆದರೆ ದೇಹದ ತೂಕ ಏರುತ್ತಲೇ ಇರುತ್ತದೆ. ಸಿಹಿ ಬಿಡಲು ಆಗುವುದಿಲ್ಲ, ದೇಹ ತೂಕ ಇಳಿಸಬೇಕು ಎಂಬ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಕೆಲವರು ಒದ್ದಾಡುತ್ತಿರುತ್ತಾರೆ. ಸಿಹಿಯನ್ನೇ ಜೀವವಾಗಿಸಿಕೊಂಡವರಿಗೆ ಸಿಹಿ ತಿನ್ನುವುದನ್ನು ಬಿಡುವುದು ಮಾತ್ರ ಸವಾಲಿನ ಕೆಲಸ. ಅಂದರೆ ಮನಸ್ಸು ಸಿಹಿ ಬೇಡ ಎಂದು ಹೇಳಿದರೂ ನಾಲಿಗೆ ಮಾತ್ರ ಸಿಹಿಗೆ ಹಾತೊರೆಯುತ್ತದೆ. ಇಂತಹ ವ್ಯಕ್ತಿಗಳು ಸಿಹಿ ತಿನ್ನುತ್ತಲೇ ದೇಹದ ತೂಕ ಇಳಿಸಿಕೊಳ್ಳಬಹುದು. ಹೌದು ಸಿಹಿ ಅಂದರೆ ಸಕ್ಕರೆ ಬದಲು ಅದರ ಪರ್ಯಾಯವಾಗಿ ಬೆಲ್ಲ ಅಥವಾ ಇತರೆ ಹಣ್ಣುಗಳನ್ನು ಬಳಸುವ ಮೂಲಕ ನಿಮ್ಮ ನಾಲಿಗೆಯಲ್ಲಿನ ಸಿಹಿಯ ಮೊಗ್ಗುಗಳನ್ನು ತಣಿಸಬಹುದು. ದೇಹದ ತೂಕವನ್ನು ಇಳಿಸಬಹುದು.


  ಹಾಗಾದ್ರೆ ಹೇಗೆ, ಯಾವ ವಿಧಾನದ ಮೂಲಕ ಸಿಹಿಯ ಹಂಬಲವನ್ನು ತಕ್ಕಮಟ್ಟಿಗೆ ಕಡಿಮೆ ಮಾಡಬಹುದು ಎಂಬುದನ್ನು ಇಲ್ಲಿ ನೋಡಿ.


  1. ದೃಢ ನಿಶ್ಚಯವಿರಲಿ
  ಹಳೆಯ ಅಭ್ಯಾಸಗಳನ್ನು ತಕ್ಷಣವೇ ಬಿಡುವುದು ಕಷ್ಟಕರ. ಆದ್ದರಿಂದ ದೃಢ ನಿಶ್ಚಯ ಕೈಗೊಳ್ಳಿ. ಉದಾಹರಣೆಗೆ ಸಿಹಿಯ ಭಯಕ್ಕೆ ಅಷ್ಟೊಂದು ಸುಲಭವಾಗಿ ಕೊನೆಗೊಳ್ಳುವಂತದ್ದಲ್ಲ. ಆದರೆ ದೃಢ ನಿಶ್ಚಯದಿಂದ ಸಕ್ಕರೆ ತಿನ್ನುವ ಅಭ್ಯಾಸವನ್ನು ಕಡಿಮೆ ಮಾಡಿಕೊಳ್ಳಿ. ಅಂದರೆ ನಿಮ್ಮ ಚಹಾ ಅಥವಾ ಕಾಫಿಗೆ ಎರಡು ಚಮಚ ಸಕ್ಕರೆ ಬಳಸುತ್ತೀರಾ ಎಂದಾದಲ್ಲಿ ಅದನ್ನು ಒಂದು ಅಥವಾ ಅರ್ಧ ಚಮಚಕ್ಕೆ ಇಳಿಸಿ. ಆಗ ಕ್ರಮೇಣ ನಿಮ್ಮ ನಾಲಗೆ ಕಡಿಮೆ ಸಿಹಿಗೆ ಒಗ್ಗಿಕೊಳ್ಳುತ್ತದೆ.


  ಇದನ್ನೂ ಓದಿ:Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿದೆ

  2. ಪರ್ಯಾಯ ಸಿಹಿ ಬಳಸಿ
  ನೀವು ಸಿಹಿ ತಿನ್ನಲೇ ಬೇಕು, ಬಳಸಲೇ ಬೇಕು ಎಂದಾದಲ್ಲಿ ಪರ್ಯಾಯ ವಸ್ತುಗಳನ್ನು ಬಳಸುವ ರೂಢಿ ಬೆಳೆಸಿಕೊಳ್ಳಿ. ಅಂದರೆ ಬೆಲ್ಲ, ಸ್ಟೀವಿಯಾ ಅಥವಾ ಪಾಮ್ ಕ್ಯಾಂಡಿ ಬಳಸಿ. ಇದರಲ್ಲಿ ಪೌಷ್ಟಿಕ ಅಂಶಗಳು ಸಮೃದ್ಧವಾಗಿವೆ. ಕಡಿಮೆ ಗ್ಲೈಸೆಮಿಕ್ ಸ್ಪಟಿಕದ ಸಿಹಿಕಾರಕವಾಗಿದ್ದು, ಇದು ಸಕ್ಕರೆಯಂತೆ ರುಚಿ ನೀಡುತ್ತದೆ. ಇದು ಸಂಪೂರ್ಣ ನೈಸರ್ಗಿಕವಾದುದಾಗಿದೆ.


  3. ನೈಸರ್ಗಿಕ ಸಿಹಿಕಾರಕ ಬಳಸಿ
  ಜೇನುತುಪ್ಪ, ಬೆಲ್ಲ, ಮೇಪಲ್ ಸಿರಪ್, ಡೇಟ್ ಶುಗರ್, ಕೋಕನೆಟ್ ಶುಗರ್, ಪಾಮ್ ಶುಗರ್ ಹೀಗೆ ನೈಸರ್ಗಿಕ ಸಿಹಿಕಾರಕಗಳನ್ನು ಸಕ್ಕರೆಗೆ ಪರ್ಯಾಯವಾಗಿ ಬಳಸಬಹುದು. ಇವುಗಳು ಸಕ್ಕರೆ ಬಯಕೆಯನ್ನು ತಣಿಸುವುದಲ್ಲದೇ ಆರೋಗ್ಯವನ್ನು ಕಾಪಾಡುತ್ತದೆ. ಇನ್ನು ಮನೆಯಲ್ಲಿ ಸಿಹಿ ತಿಂಡಿಯನ್ನು ತಯಾರಿಸಲು ಸಹ ಇವುಗಳನ್ನು ಉಪಯೋಗಿಸಬಹುದು.


  ಇದನ್ನೂ ಓದಿ:ಯಡಿಯೂರಪ್ಪ 6 ಬ್ಯಾಗ್​​ ತಗೊಂಡು ದೆಹಲಿಗೆ ಹೋಗಿದ್ದಾರೆ; ಅದರಲ್ಲಿ ಏನಿದೆ ಅಂತ ಅವರೇ ಹೇಳಲಿ; ಎಚ್​.ಡಿ.ಕುಮಾರಸ್ವಾಮಿ

  4. ಒಣಹಣ್ಣುಗಳು ಇರಲಿ
  ಒಣಹಣ್ಣುಗಳಾದ ಒಣದ್ರಾಕ್ಷಿ, ಡೇಟ್ಸ್, ಅಂಜೂರದ ಹಣ್ಣುಗಳು, ಡ್ರೈ ಪೀಚಸ್, ಪ್ಲಮ್‌ಗಳನ್ನು ಬಳಸಿ ಆರಂಭಿಸಿ. ಇದರಲ್ಲಿ ಹೆಚ್ಚು ಪೋಷಕಾಂಶಗಳಿದ್ದು, ಇವು ದೇಹದ ಪೋಷಣೆಗೆ ಸಹಕಾರಿಯಾಗುತ್ತದೆ. ಇದು ದೇಹದ ತೂಕ ಇಳಿಕೆಯಲ್ಲೂ ಪ್ರಮುಖ ಪಾತ್ರ ವಹಿಸುವುದಲ್ಲದೇ ಸಿಹಿಯ ಬಯಕೆಯನ್ನು ಈಡೇರಿಸುತ್ತದೆ.


  5. ಡಯೆಟ್‍ನಲ್ಲಿ ಋತುಮಾನದ ಹಣ್ಣುಗಳಿಗಿರಲಿ ಆದ್ಯತೆ
  ನಿಮ್ಮ ಡಯೆಟ್‍ನಲ್ಲಿ ಸೇಬು, ಚೆರ್ರಿ, ಕಿತ್ತಳೆ, ಬಾಳೆಹಣ್ಣು, ದ್ರಾಕ್ಷಿ, ದಾಳಿಂಬೆಗಳಿಗೆ ಆದ್ಯತೆ ಇರಲಿ. ಈ ಹಣ್ಣುಗಳಲ್ಲಿ ಹೆಚ್ಚು ಪೋಷಕಾಂಶಗಳು ಮತ್ತು ನೈಸರ್ಗಿಕ ಸಿಹಿ ಅಂಶವಿರುತ್ತದೆ. ಇದು ನಮ್ಮ ತೂಕ ಇಳಿಕೆಯಲ್ಲೂ ಯಾವುದೇ ನಕಾರಾತ್ಮಕ ಪರಿಣಾಮ ಬೀರುವುದಿಲ್ಲ.
   ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.

  Published by:Latha CG
  First published: