• Home
 • »
 • News
 • »
 • lifestyle
 • »
 • Butterflies: ಬಟರ್‌ಫ್ಲೈ ಗಾರ್ಡನ್ ಮಾಡೋದು ಹೇಗೆ ಗೊತ್ತೇ?

Butterflies: ಬಟರ್‌ಫ್ಲೈ ಗಾರ್ಡನ್ ಮಾಡೋದು ಹೇಗೆ ಗೊತ್ತೇ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಚಿಟ್ಟ ಉದ್ಯಾವನವನ್ನು ಮಾಡುವ ಸ್ಥಳ ಸಾಕಷ್ಟು ಸೂರ್ಯರಶ್ಮಿ ಮತ್ತು ಗಾಳಿ ಬೀಸುವಂತೆ ಸಿದ್ದತೆ ಮಾಡಿಕೊಳ್ಳಬೇಕು, ಹಾಗೂ ಗಾಳಿ ಜೋರಾಗಿ ಬೀಸಬಾರದು ಆದರೆ ಸೂರ್ಯನ ಬೆಳಕನ್ನು ಕಡಿಮೆಯಾಗದಂತೆ ನೋಡಿಕೊಳ್ಳಿ.

 • Share this:

  ಹೋ ಚಿಟ್ಟೆ ಬಣ್ಣದ ಚಿಟ್ಟೆ....(Butterflies, like flying flowers) ನೀನು ನೋಡಕೆ ಎಷ್ಟು ಚೆಂದ.... ಎಂದು ಮಕ್ಕಳು ಚಿಟ್ಟೆಯನ್ನು ನೋಡಿದ ಕೂಡಲೇ ಹಾಡಿಕುಣಿಯಲು ಶುರು ಮಾಡುತ್ತಾರೆ. ಚಿಟ್ಟೆಗಳು, ಹಾರುವ ಹೂಗಳಿದ್ದಂತೆ. ಇವುಗಳು ನೈಸರ್ಗಿಕವಾಗಿ ಸೃಷ್ಠಿಯಾಗಿರುವ ಅದ್ಭುತ ಸುಂದರ ಗುಣಗಳಿಗೆ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಮನಸೋಲದವರಿಲ್ಲ. ಅದರಲ್ಲೂ ನೀವು ಎಂದಾದರು ಬಟರ್‌ಫ್ಲೈ ಗಾರ್ಡನ್ (beautify the garden) ನೋಡಿದರೇ ಅಲ್ಲಿಂದ ಬರಲು ಹಿಂದೇಟು ಹಾಕುತ್ತೀರಿ. ಹೌದು ಬಟರ್‌ಫ್ಲೈ ಗಾರ್ಡನ್ ಕಣ್ಣಿಗೆ ಆಹ್ಲಾದಕರ ನೀಡುವ ಜೊತೆಗೆ ನಿಸರ್ಗಕ್ಕೆ ನಿಮ್ಮನ್ನು ಕರೆಕೊಂಡು ಹೋಗಿಬರುತ್ತೆ ಬಿಡಿ. ಮಕರಂದ ತುಂಬಿದ ಹೂವುಗಳು ತೋಟಕ್ಕೆ ಹಾರಿಬರಲು ಚಿಟ್ಟೆಯನ್ನು ಆಕರ್ಷಿಸುತ್ತವೆ, ಮಕರಂದವನ್ನು ಹೀರುತ್ತ ಚಿಟ್ಟೆಗಳು ಉದ್ಯಾನವನ್ನು ಸುಂದರಗೊಳಿಸುತ್ತವೆ.


  ಇದನ್ನೂ ಓದಿ:Biggest Butterfly: ಏಷ್ಯಾದಲ್ಲಿಯೇ ಅಪರೂಪದ & ಅತಿ ದೊಡ್ಡ ಚಿಟ್ಟೆ ಕರುನಾಡಲ್ಲಿ ಪತ್ತೆ, ಏನಿದರ ವಿಶೇಷತೆ?


  ಚಿಟ್ಟ ಉದ್ಯಾವನವನ್ನು ಮಾಡುವ ಸ್ಥಳ ಸಾಕಷ್ಟು ಸೂರ್ಯರಶ್ಮಿ ಮತ್ತು ಗಾಳಿ ಬೀಸುವಂತೆ ಸಿದ್ದತೆ ಮಾಡಿಕೊಳ್ಳಬೇಕು, ಹಾಗೂ ಗಾಳಿ ಜೋರಾಗಿ ಬೀಸಬಾರದು ಆದರೆ ಸೂರ್ಯನ ಬೆಳಕನ್ನು ಕಡಿಮೆಯಾಗದಂತೆ ನೋಡಿಕೊಳ್ಳಿ. ಉದ್ಯಾನವನದ ವಿನ್ಯಾಸದಲ್ಲಿ ಎತ್ತರವಾಗಿ ನೀಡುವ ಸಸ್ಯವನ್ನು ಮತ್ತು ಮಕರಂದ ಸಸ್ಯಗಳನ್ನು ನೆಡಬೇಕು. ಆದ್ದರಿಂದ ಹೆಚ್ಚು ಚಿಟ್ಟೆಗಳು ಆಕರ್ಷಿಸುತ್ತದೆ. ಅರ್ಥ್ಲಿ ಕ್ರಿಯೇಷನ್ಸ್‌ನ ಸಂಸ್ಥಾಪಕ ಮತ್ತು ಪ್ರಧಾನ ವಿನ್ಯಾಸಕರಾದ ಹರ್‌ಪ್ರೀತ್ ಅಹ್ಲುವಾಲಿಯಾ (Harpreet Ahluwalia, Founder and Chief Designer of Earthly Creations,)ಅವರು ಚಿಟ್ಟೆಗಳನ್ನು ಹೇಗೆ ಸಾಕುವುದು ಮತ್ತು ನಿಮ್ಮ ಸುತ್ತಮತ್ತಲಿಂದ ಚಿಟ್ಟೆಯನ್ನು ಉದ್ಯಾವನಕ್ಕೆ ಹೇಗೆ ಕರಸಿಕೊಳ್ಳಬೇಕೆಂದು ಕೆಲ ಸಲಹೆಗಳನ್ನು ನೀಡುತ್ತಾರೆ ನೋಡಿ.


  ಬಣ್ಣ ಬಣ್ಣದ ಹೂ ಅಗತ್ಯ(Flower colored flower is essential)
  ಮೊದಲನೇದಾಗಿ ನಿಮ್ಮ ಉದ್ಯಾನವನ ಹೊದಿಕೆಯಿಂದ ಕೂಡಿದ್ದು, ಸೂರ್ಯನ ಬೆಳಕು, ಗಾಳಿ ಎಲ್ಲಾವೂ ಚೆನ್ನಾಗಿ ಬೀಳುವಂತೆ ನೋಡಿಕೊಳ್ಳಿ, ಅಲ್ಲಿ ಕಿಟಕಿ, ಡೆಕ್‌ಗಳು ಕ್ರಮವಾಗಿ ಇರಲಿ, ಚಿಟ್ಟೆ ಮಕರಂದವನ್ನು ಬೇರೆ ಬೇರೆ ಗಿಡಗಳಿಂದ ಸಂಗ್ರಹಿಸುತ್ತವೆ. ಅವುಗಳಲ್ಲಿ ಮುಖ್ಯ ಗಿಡಗಳೆಂದರೆ ಚಿಟ್ಟೆ ಕಳೆ(Asclepias tuberose), ಚಿಟ್ಟೆ ಪೊದೆ, ಚೆಂಡು ಹೂ, ಲ್ಯಾಂಟೆನಾ, ಆಸ್ಟರ್, ಡೇ ಲಿಲ್ಲಿ, ಜೀನಿಯಾ, ಗ್ಲೋಬ್ ಅಮರಾಂತ್ರಸ್. ನೀಲಕ, ವೈಬರ್ನಮ್, ಬ್ಲೂಬೆರ್ರಿ ಇತ್ಯಾಧಿ ವಿವಿಧ ರೀತಿಯ ಚಿಟ್ಟೆಗಳು ಬೇರೆ ಬೇರೆ ಬಣ್ಣಗಳಿಗೆ ಆಕರ್ಷಿತವಾಗುತ್ತವೆ. ಹಾಗಾಗಿ ಬಣ್ಣ ಬಣ್ಣದ ಹೂವುಗಳನ್ನು(beautify the garden.) ನೆಟ್ಟು ಮಾಡುವ ಉದ್ಯಾನವನದಲ್ಲಿ ಮಕರಂದ ವರ್ಷಪೂರ್ತಿ ಸಿಗುವಂತೆ ಇರಬೇಕು, ಆಗ ಮತ್ರ ಚಿಟ್ಟೆ ಉದ್ಯಾನವನ ಯಶ್ವಸಿಯಾಗಲು ಸಾಧ್ಯ


  ರಕ್ಷಣೆಬೇಕು(Should be protected)
  ಈ ಗಿಡಗಳ ಮೇಲೆ ಹೆಣ್ಣು ಚಿಟ್ಟೆ ಮೊಟ್ಟೆಯನ್ನು ಇಡುತ್ತವೆ ಮತ್ತು ಕ್ಯಾಟರ್‌ಪಿಲ್ಲರ್‌ಗಳಿಗೆ ಆಹಾರದ ಮೂಲ ಆತಿಥೇಯ ಸಸ್ಯದ ಮೇಲೆ ಅವಲಂಬಿಸಿರುತ್ತದೆ. ಇನ್ನು ಪೊದೆಗಳು, ಮರಗಳಿಂದ ಬರುವ ಹೆಚ್ಚಾದ ಗಾಳಿಯಿಂದ ಚಿಟ್ಟೆಗಳು ಹಾರಿಹೋಗಬಹುದು, ಹಾಗಾಗಿ ಅಗತ್ಯ ಗಾಳಿ ಇರುವಂತೆ ನೋಡಿಕೊಳ್ಳಿ. ನಾಟಿ ಮಾಡುವಾಗ, ಎತ್ತರದ ಸಸ್ಯಗಳನ್ನು ಹಿಂಭಾಗದಲ್ಲಿ ಮತ್ತು ಚಿಕ್ಕದಾದ ಸಸ್ಯಗಳನ್ನು ಮುಂಭಾಗದಲ್ಲಿ ಇರಿಸಿ ಇದರಿಂದ ಅವು ಮಕರಂದವನ್ನು ಹೊರತೆಗೆಯುವಾಗ ಸುಲಭವಾಗಿ ನೋಡಬಹುದು.


  ಚಿಟ್ಟೆಗಳಿಗೆ ಮಳೆ, ಗಾಳಿ, ವಿಪರೀತ ತಾಪಮಾನ ಮತ್ತು ಪರಭಕ್ಷಕಗಳಿಂದ ರಕ್ಷಣೆಬೇಕು. ಈ ಉದ್ದೇಶಕ್ಕಾಗಿ ವ್ಯಾಪಕ ದಟ್ಟ ಪೊದೆಗಳು ಮತ್ತು ಮರಗಳನ್ನು ನೆಡುವುದು ಅವಶ್ಯಕ. ಚಿಟ್ಟೆಗಳಿಗೆ ಖನಿಜ ಮತ್ತು ನೀರು ಬೇಕಾಗುತ್ತದೆ. ಅವು ನೀರಿನ ಸುತ್ತಳಿನ ತೇವಾಂಶವುಳ್ಳ ಪ್ರದೇಶದಿಂದ ತೇವಾಂಶ ಮತ್ತು ಖನಿಜವನ್ನು ಹೀರಿಕೊಳ್ಳುತ್ತವೆ. ಇದನ್ನು ಮಣ್ಣಿನ ಕೊಚ್ಚೆಗುಂಡಿಯಂದು ಕರೆಯುತ್ತಾರೆ. ಪಕ್ಷಿ ಸ್ನಾನ ಕೊಳವನ್ನು ಮಾಡುವ ರೀತಿ ಸಣ್ಣ ಪಾತ್ರೆಯನ್ನು ಮಣ್ಣಿನಲ್ಲಿ ಊಳಬೇಕು ಮತ್ತು ಒದ್ದೆಯಾದ ಮರಳಿನಿಂದ ಅದನ್ನು ತುಂಬಿಸಿ ಮರಳಿನ ಮೇಲೆ ಕೆಲವು ಕೊಂಬೆಗಳನ್ನು ಮತ್ತು ಬಂಡೆಯನ್ನು ಇರಿಸಬೇಕಾಗುತ್ತದೆ.


  ಬಿಸಿಲು ಕಾಯುವ ಸ್ಥಳ(A sunny waiting place)
  ಚಿಟ್ಟೆಗಳಿಗೆ ರಕ್ತ ಮತ್ತು ಹಾರಾಟದ ಸ್ನಾಯುಗಳನ್ನು ಬೆಚ್ಚಗಾಗಲು ಸೂರ್ಯನ ಬೆಳಕು ಬೇಕು. ಆದುದರಿಂದ ಸೂರ್ಯನ ಬೆಳಕನ್ನು ಹೆಚ್ಚು ಹೊಂದಿರುವ ಉದ್ಯಾನದ ವಿವಿಧ ಸ್ಥಳಗಳಲ್ಲಿ ವಿವಿಧ ಆಕಾರ ಮತ್ತು ಬಣ್ಣಗಳ ಕಲ್ಲುಗಳನ್ನು ಇರಿಸುವ ಮೂಲಕ ಅಲ್ಲಿ ಚಿಟ್ಟೆಗಳು ತಮ್ಮ ಬ್ಯಾಸ್ಕಿಂಗ್ ತಾಣವಾಗಿ ಆನಂದಿಸಬಹುದಾಗಿದೆ.
  ಮಳೆಗಾಲದಲ್ಲಿ ಚಿಟ್ಟೆಗೆ ತೋಟದಲ್ಲಿ ಪೂರಕ ಆಹಾರ ಒದಗಿಸುವುದು ಬಹಳ ಮುಖ್ಯ. ಎಲ್ಲ ಚಿಟ್ಟೆಗಳು ಹೂವಿನ ಮಕರಂದವನ್ನೇ ಮಾತ್ರ ತಿನ್ನುವುದಿಲ್ಲ, ಕೆಲವು ಜೇನು ತುಪ್ಪ, ಮರದ ಸ್ಯಾಪ್, ಮಾಗಿದ ಅಥವಾ ಕೊಳೆತ ಹಣ್ಣುಗಳು, ಸಗಣಿ ಮತ್ತು ಮಣ್ಣನ್ನು ಸುಲಭವಾಗಿ ತಿನ್ನುತ್ತವೆ. ಅಂತಹ ಚಿಟ್ಟೆಯ ಆಹಾರಗಳನ್ನು ಸ್ಥಳೀಯವಾಗಿ ಅಥವಾ ಮನೆಯಲ್ಲಿ ತಯಾರಿಸಬಹುದಾಗಿದ್ದು, ಎಚ್ಚರಿಕೆ ವಹಿಸಿ ಆಹಾರ ಮಾಡಿ ನೀಡಬಹುದು.


  ಇದನ್ನೂ ಓದಿ:Butterfly: ತರಗೆಲೆಯಲ್ಲ, ಚಿಟ್ಟೆ: ಬಣ್ಣ ಬದಲಾಯಿಸುವ ಪಾತರಗಿತ್ತಿಯ ಕಂಡು ನೆಟ್ಟಿಗರು ದಂಗು


  ಮೊಟ್ಟೆಗಳನ್ನು ಇಡಲು ಚಿಟ್ಟೆಗಳನ್ನು ಉತ್ತೇಜಿಸಿ(Encourage butterflies to lay eggs)
  ಉದ್ಯಾನದಲ್ಲಿ ಮೊಟ್ಟೆಗಳನ್ನು ಇಡಲು ಚಿಟ್ಟೆಗಳನ್ನು ಉತ್ತೇಜಿಸಲು ಕೆಲವು ತರಕಾರಿಗಳು ಮತ್ತು ಗಿಡಮೂಲಿಕೆಗಳನ್ನು ಬೆಳೆಸಿ, ಮೊಟ್ಟೆಗಳು ಮರಿಹುಳುಗಳಾಗಿ ಹೊರಬರುತ್ತವೆ. ಕ್ಯಾಟರ್ಪಿಲ್ಲರ್ ಮೇವು ಸಸ್ಯಗಳಲ್ಲಿ ಪಾರ್ಸ್ಲಿ ಮತ್ತು ಅಲಂಕಾರಿಕ ಎಲೆಕೋಸು ಸೇರಿವೆ, ಇದು ಹೂವಿನ ಉದ್ಯಾನಕ್ಕೆ ಅತ್ಯುತ್ತಮವಾದ ಸಸ್ಯಗಳಾಗಿವೆ.
  ಮರಿಹುಳುಗಳು ಮತ್ತು ಚಿಟ್ಟೆಗಳೆರಡಕ್ಕೂ ಆಹಾರದ ಮೂಲಗಳಾಗಿ ಕಾರ್ಯನಿರ್ವಹಿಸುವುದರಿಂದ ಕೆಲವು ಕಳೆಗಳು ಬಿಡಿ.ಕಂಟೇನರ್‌ಗಳು, ಕಿಟಕಿ ಜಾಡಿಗಳು, ನೇತಾಡುವ ಮಡಿಕೆಗಳು, ಬುಟ್ಟಿಗಳು ಮತ್ತು ಇತರ ಕಂಟೈನರ್‌ಗಳನ್ನು ಬಳಸಿ ನೀವು ಬೇಗ ಆಕರ್ಷಿಸುತ್ತವೆ.


  ತಪ್ಪು ಕಲ್ಪನೆ


  ಪ್ರಕೃತಿಯಲ್ಲಿ ವೈವಿದ್ಯಮಯ ಹೂವು, ಹಣ್ಣುಗಳನ್ನು ಕಾಣಲು ಜೇನು ಹುಳುಗಳು ಎಷ್ಟು ಮುಖ್ಯವೊ ಅಷ್ಟೇ ಪ್ರಾಮುಖ್ಯತೆಯನ್ನು ಚಿಟ್ಟೆಗಳು ಸಹ ಹೊಂದಿವೆ. ಇವುಗಳ ಸಂರಕ್ಷಣೆ ಕುರಿತಂತೆ ರೈತರು ಒಂದಿಷ್ಟು ಮಾಹಿತಿ ತಿಳಿಯಬೇಕು. ಇದಲ್ಲದೆ ಚಿಟ್ಟೆಗಳ ಪ್ರಾಮುಖ್ಯತೆಯ ಬಗ್ಗೆ ಕೃಷಿ, ತೋಟಗಾರಿಕೆ ತಜ್ಞರು ಸಹ ತಿಳುವಳಿಕೆ ನೀಡಬೇಕು. ಎಲ್ಲಾ ರೀತಿಯ ಚಿಟ್ಟೆಗಳು ಬೆಳೆಗೆ ಹಾನಿಯುಂಟು ಮಾಡುತ್ತವೆ ಎನ್ನುವ ತಪ್ಪು ಕಲ್ಪನೆಯನ್ನು ಹೊಗಲಾಡಿಸಬೇಕಿದೆ .

  Published by:vanithasanjevani vanithasanjevani
  First published: