Arthritis - ಚಳಿಗಾಲದಲ್ಲಿ ಕಂಡುಬರುವ ಮೊಣಕಾಲು ನೋವಿಗೆ ಇಲ್ಲಿದೆ ಸರಳ ಪರಿಹಾರ

ಮೊಣಕಾಲು ನೋವು ಕಾಣಿಸಿಕೊಳ್ಳುವಾಗ ನಿಮ್ಮ ದೇಹ ತೂಕವನ್ನು ಸಮತೋಲನದಲ್ಲಿರಿಸಿಕೊಳ್ಳಿ. ನಿಮ್ಮ ಮೊಣಕಾಲುಗಳಿಗೆ ಇದು ಅತ್ಯುತ್ತಮ ಪರಿಹಾರ. ಏಕೆಂದರೆ ಹೆಚ್ಚಿದ ತೂಕವು ಮೊಣಕಾಲುಗಳ ಮೇಲೆ ಹೆಚ್ಚುವರಿ ಒತ್ತಡವನ್ನು ಬೀರುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಮೊಣಕಾಲು ನೋವು ಇತ್ತೀಚಿನ ದಿನಗಳಲ್ಲಿ ಸರ್ವಸಾಮಾನ್ಯವಾಗಿದೆ. ಈ ಸಮಸ್ಯೆ ಕಂಡು ಬರಲು ಹಲವು ಕಾರಣಗಳಿವೆ. ಅದರಲ್ಲಿ ಮುಖ್ಯವಾದವು ಬದಲಾಗುತ್ತಿರುವ ಜೀವನಶೈಲಿ. ಮೊಣಕಾಲು ನೋವಿನ ಸಮಸ್ಯೆ ಸಾಮಾನ್ಯವಾಗಿ ಚಳಿಗಾಲದಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಕೆಲವು ಮನೆಮದ್ದುಗಳೂ ಮಂಡಿ ನೋವಿಗೆ ಪರಿಹಾರ ಕಾಣಬಹುದು.

    ಹೆಲ್ತ್​ಲೈನ್ ವರದಿಯ ಪ್ರಕಾರ, ಅಧಿಕ ತೂಕ ಅಥವಾ ಬೊಜ್ಜು ಹೊಂದಿರುವ ಜನರಲ್ಲಿ ಮೊಣಕಾಲು ನೋವಿ ಹೆಚ್ಚಾಗಿ ಕಂಡು ಬರುತ್ತವೆ. ತೂಕ ಹೆಚ್ಚಿರುವವರು ಓಡಾಡುವಾಗ ಅಥವಾ ಮೆಟ್ಟಿಲುಗಳನ್ನು ಏರಿದಾಗ, ಮೊಣಕಾಲಿನ ಮೇಲೆ ಹೆಚ್ಚಿನ ಒತ್ತಡವನ್ನು ಉಂಟು ಮಾಡುತ್ತದೆ. ಇನ್ನು ಕಾಲಿನ ಮೇಲಿನ ದೀರ್ಘಕಾಲದ ಗಾಯವೂ ಈ ನೋವಿಗೆ ಕಾರಣವಾಗಬಹುದು. ಅದೇ ಸಮಯದಲ್ಲಿ, ಅಸ್ಥಿಸಂಧಿವಾತ, ಸಂಧಿವಾತ ಇತ್ಯಾದಿಗಳಿಂದಲೂ ಈ ಸಮಸ್ಯೆ ಉಂಟಾಗುತ್ತದೆ. ಇಂತಹ ಸಮಸ್ಯೆ ತಲೆದೂರಿದಾಗ ಆಹಾರದಲ್ಲಿ ಕೆಲವು ವಿಷಯಗಳನ್ನು ಸೇರಿಸುವ ಮೂಲಕ ಮತ್ತು ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡುವ ಮೂಲಕ ಪರಿಹಾರ ಪಡೆಯಬಹುದು.

    ಬೆಳ್ಳುಳ್ಳಿ- ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಕೀಲು ನೋವಿನ ಸಮಸ್ಯೆಗೆ ಪರಿಹಾರ ಕಾಣಬಹುದು. ಏಕೆಂದರೆ ಬೆಳ್ಳುಳ್ಳಿ ನೋವು ಮತ್ತು ಉರಿಯೂತಕ್ಕೆ ಪರಿಹಾರ ನೀಡುತ್ತದೆ. ಇದಕ್ಕಾಗಿ, ನಿಮ್ಮ ಆಹಾರದಲ್ಲಿ ಕಚ್ಚಾ ಅಥವಾ ಬೇಯಿಸಿದ ಬೆಳ್ಳುಳ್ಳಿಯನ್ನು ಸೇರಿಸಿಕೊಳ್ಳಬಹುದು.

    ಮೀನು- ದೇಹದ ಮೂಳೆಗಳಿಗೆ ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಅಗತ್ಯವಿದೆ. ಇದಕ್ಕೆ ಮೀನು ಉತ್ತಮ ಆಯ್ಕೆಯಾಗಿದೆ. ಇದಲ್ಲದೆ, ದೇಹದಲ್ಲಿನ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಕೊರತೆಯನ್ನು ಪೂರೈಸಲು ಕಡಿಮೆ ಕೊಬ್ಬಿನ ಡೈರಿ ಉತ್ಪನ್ನಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು.

    ತೂಕ ಇಳಿಕೆ: ಮೊಣಕಾಲು ನೋವು ಕಾಣಿಸಿಕೊಳ್ಳುವಾಗ ನಿಮ್ಮ ದೇಹ ತೂಕವನ್ನು ಸಮತೋಲನದಲ್ಲಿರಿಸಿಕೊಳ್ಳಿ. ನಿಮ್ಮ ಮೊಣಕಾಲುಗಳಿಗೆ ಇದು ಅತ್ಯುತ್ತಮ ಪರಿಹಾರ. ಏಕೆಂದರೆ ಹೆಚ್ಚಿದ ತೂಕವು ಮೊಣಕಾಲುಗಳ ಮೇಲೆ ಹೆಚ್ಚುವರಿ ಒತ್ತಡವನ್ನು ಬೀರುತ್ತದೆ. ಇದು ಅಸ್ಥಿಸಂಧಿವಾತದ ಅಪಾಯವನ್ನೂ ಹೆಚ್ಚಿಸುತ್ತದೆ. ಅಸ್ಥಿಸಂಧಿವಾತ, ದೀರ್ಘಕಾಲದ ಮೊಣಕಾಲು ನೋವು ಅಥವಾ ಗಾಯಗಳು ಇದ್ದರೆ, ವ್ಯಾಯಾಮ ಮಾಡುವ ವಿಧಾನವನ್ನು ಬದಲಾಯಿಸುವ ಅವಶ್ಯಕತೆಯಿದೆ.

    ನಿಯಮಿತ ವ್ಯಾಯಾಮ: ನಿಮ್ಮ ಮೊಣಕಾಲುಗಳಲ್ಲಿ ನೋವು ಇದ್ದರೆ, ಮೊಣಕಾಲು ವ್ಯಾಯಾಮ ಮಾಡಿ. ಇದನ್ನು ನಿಯಮಿತವಾಗಿ ಮಾಡುವುದರಿಂದ ಮೊಣಕಾಲು ನೋವು ಕಡಿಮೆಯಾಗುತ್ತದೆ.

    ಮಸಾಜ್: ಮಸಾಜ್ ಮಾಡುವುದರಿಂದ ಸಹ ಮೊಣಕಾಲು ಮತ್ತು ಕೀಲು ನೋವಿನಿಂದ ಪರಿಹಾರ ಕಾಣಬಹುದು. ಮೊಣಕಾಲುಗಳ ಮಸಾಜ್​ ಮಾಡುವಾಗ ಒಂದು ಚಮಚ ಒಣ ಶುಂಠಿ ಪುಡಿ ಮತ್ತು ಸಾಸಿವೆ ಎಣ್ಣೆಯನ್ನು ಮೊಣಕಾಲುಗಳ ಮೇಲೆ ಹಚ್ಚುವುದರಿಂದ ಪರಿಹಾರ ಸಿಗುತ್ತದೆ. ಇದಲ್ಲದೆ, ಬೇರೆ ಯಾವುದೇ ಉತ್ತಮ ಎಣ್ಣೆಯನ್ನು ಸಹ ಬಳಸಬಹುದು.
    Published by:zahir
    First published: