ನಿದ್ರಾಹೀನತೆಯ ಸಮಸ್ಯೆಗೆ ಇಲ್ಲಿದೆ ಪರಿಹಾರ !

news18
Updated:June 13, 2018, 6:57 PM IST
ನಿದ್ರಾಹೀನತೆಯ ಸಮಸ್ಯೆಗೆ ಇಲ್ಲಿದೆ ಪರಿಹಾರ !
news18
Updated: June 13, 2018, 6:57 PM IST
-ನ್ಯೂಸ್ 18 ಕನ್ನಡ

ಇಂದಿನ ಜೀವನ ಶೈಲಿಯಲ್ಲಿ ನಿದ್ರಾಹೀನತೆಯು ಬಹುದೊಡ್ಡ ಸಮಸ್ಯೆಯಾಗಿದೆ. ಕೆಲಸದ ಒತ್ತಡ, ತಲೆ ಬಿಸಿ, ಖಿನ್ನತೆ ಮುಂತಾದವುಗಳು ನಿದ್ದೆ ಕಡಿಮೆಯಾಗಲು ಮುಖ್ಯ ಕಾರಣ. ದೇಹವು ದಣಿದಿದ್ದರೂ ಸಹ ರಾತ್ರಿಯಲ್ಲಿ ನಿದ್ದೆ ಬರದಿರುವುದು ಗಂಭೀರ ಸಮಸ್ಯೆಯಾಗಿದೆ. ಈ ಸಮಸ್ಯೆಗೆ ಪರಿಹಾರವಾಗಿ ಕೆಲವೊಂದು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

* ರಾತ್ರಿಯಲ್ಲಿ ಸುಖ ನಿದ್ರೆ ನಿಮ್ಮದಾಗಬೇಕಿದ್ದರೆ ಮೊದಲು ಆಹಾರ ಕ್ರಮವನ್ನು ಬದಲಿಸಿ. ಹೌದು ರಾತ್ರಿಯ ಭೋಜನವು ಕೂಡ ನಿದ್ರಾಹೀನತೆಯ ಸಮಸ್ಯೆಯನ್ನು ಉಂಟು ಮಾಡುತ್ತದೆ. ರಾತ್ರಿಯ ಭೋಜನವನ್ನು  ಮಲಗುವ ಎರಡು ಮೂರು ಗಂಟೆಗಳ ಮುಂಚಿತವಾಗಿ ಸೇವಿಸಬೇಕು. ಪ್ರತಿನಿತ್ಯ ನಿರ್ದಿಷ್ಟ ಸಮಯಕ್ಕೆ ಸರಿಯಾಗಿ ಈ ರೀತಿ ಆಹಾರ ಸೇವಿಸುವುದರಿಂದ ನಿದ್ರಾಹೀನತೆ ಸಮಸ್ಯೆ ಕಡಿಮೆಯಾಗುತ್ತದೆ.

* ನೀವು ಬಳಸುವ ಹಾಸಿಗೆಯಿಂದ ಕೂಡ ನಿದ್ದೆ ಸಮಸ್ಯೆ ಕಾಡಬಹುದು. ಬೆಡ್​ ಸರಿಯಾಗಿ ಇರದಿದ್ದರೆ ಆರಾಮದಾಯಕವಾಗಿ ನಿದ್ರಿಸಲು ಸಾಧ್ಯವಾಗುವುದಿಲ್ಲ. ಇದರಿಂದ ದೇಹದಲ್ಲಿ ನೋವು, ರಕ್ತ ಸಂಚಾರದ ತೊಂದರೆಗಳು ಕಾಣಿಸಿಕೊಳ್ಳಬಹುದು. ಆದರಿಂದ ಆರಾಮದಾಯಕ ನಿದ್ದೆಗೆ ಉತ್ತಮ ಹಾಸಿಗೆ ಆರಿಸಿಕೊಳ್ಳಿ.

* ನಿದ್ದೆ ಮಾಡುವ ಸಮಯದಲ್ಲಿ ಮೊಬೈಲ್ ಬಳಸುವುದರಿಂದ ಕೂಡ ನಿದ್ರೆ ಸಮಸ್ಯೆ ಎದುರಿಸಬೇಕಾದೀತು. ಮೊಬೈಲ್ ಬೆಳಕು ಮತ್ತು ಮನರಂಜನೆ ನಿದ್ರೆಯನ್ನು ದೂರ ಮಾಡುತ್ತದೆ. ಹಾಗೆಯೇ ಪರಿಮಳ ಹೊಂದಿರುವ ಮೇಣದ ಬತ್ತಿಯನ್ನು ಹಚ್ಚಿಡುವುದರಿಂದ ಕೂಡ ನಿದ್ರೆ ಹದಗೆಡಬಹುದು.

* ರಾತ್ರಿ ವೇಳೆಯಲ್ಲಿ ಶರೀರಕ್ಕೆ ವಿಶ್ರಾಂತಿ ನೀಡುವುದು ಅತ್ಯವಶ್ಯಕ. ಪ್ರತಿದಿನ ವ್ಯಾಯಾಮ ಮಾಡುವುದರಿಂದ  ದೇಹದಲ್ಲಿ ರಕ್ತ ಸಂಚಾರ ಸುಗಮಗೊಳ್ಳುತ್ತದೆ. ಇದರಿಂದ ನಿದ್ರೆ ಸಮಸ್ಯೆಯನ್ನು ಹೋಗಲಾಡಿಸಿ ಸುಖಕರ ನಿದ್ರೆಯನ್ನು ನಿಮ್ಮದಾಗಿಸಿಕೊಳ್ಳಬಹುದು.
First published:June 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ