ಶೀಘ್ರ ಸ್ಖಲನ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಇಲ್ಲಿದೆ ನೋಡಿ ಪರಿಹಾರ

ಬಾದಾಮಿ ಬೀಜಗಳನ್ನು ನೆನೆಸಿಟ್ಟು ಮರುದಿನ ಹಾಲಿನೊಂದಿಗೆ ಬೆರೆಸಿ ಕುಡಿದರೆ ಕೂಡ ಉತ್ತಮ ಪರಿಣಾಮ ದೊರಕುತ್ತದೆ.

news18
Updated:December 23, 2018, 9:32 PM IST
ಶೀಘ್ರ ಸ್ಖಲನ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಇಲ್ಲಿದೆ ನೋಡಿ ಪರಿಹಾರ
ಸಾಂದರ್ಭಿಕ ಚಿತ್ರ
news18
Updated: December 23, 2018, 9:32 PM IST
ಸಂಭೋಗ ಪೂರ್ವದಲ್ಲೇ ಸ್ಖಲನ ಉಂಟಾದರೆ ಅದನ್ನು ಶೀಘ್ರ ಸ್ಖಲನ ಎನ್ನಲಾಗುತ್ತದೆ. ಸಾಕಷ್ಟು ಪುರುಷರು ಇಂತಹದೊಂದು ಸಮಸ್ಯೆಯಿಂದ ಬಳಲುತ್ತಿದ್ದು, ಇದಕ್ಕೆ ಯಾವುದೇ ರೀತಿಯ ದೈಹಿಕ ಕಾರಣಗಳಿಲ್ಲ ಎನ್ನಲಾಗುತ್ತದೆ. ಮುಖ್ಯವಾಗಿ ಮಾನಸಿಕ ಆತಂಕ ಮತ್ತು ಲೈಂಗಿಕತೆ ಬಗ್ಗೆಗಿನ ಅವಸರವೇ ಈ ಸಮಸ್ಯೆಗೆ ಮುಖ್ಯ ಕಾರಣ ಎಂದು ಲೈಂಗಿಕ ತಜ್ಞರು ಅಭಿಪ್ರಾಯ ಪಡುತ್ತಾರೆ.

ಲೈಂಗಿಕ ಕ್ರಿಯೆ ವೇಳೆ ಬಹುಬೇಗನೆ ಉದ್ರೇಕಗೊಂಡು ಇಂತಹ ತೊಂದರೆಗೆ ಒಳಗಾಗುತ್ತಾರೆ. ನವ ವಿವಾಹಿತರಲ್ಲಿ ಮತ್ತು ಹದಿ ಹರೆಯದವರಲ್ಲಿ ಈ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಇದರಿಂದ ಪುರುಷರ ಆತ್ಮ ವಿಶ್ವಾಸ ಕುಂಠಿತವಾಗುವುದಲ್ಲದೆ, ಲೈಂಗಿಕ ಅತೃಪ್ತಿಗೆ ಕಾರಣವಾಗ ಬಹುದು.

ಆದರೆ ಇದೊಂದು ಕಾಯಿಲೆ ಅಲ್ಲದಿದ್ದರೂ, ಇಂತಹ ಸಮಸ್ಯೆ ನಿರಂತರ ಕಾಣಿಸುತ್ತಿದ್ದರೆ ನೀವು ಶೀಘ್ರ ಸ್ಖಲನದ ತೊಂದರೆಗೆ ಒಳಗಾಗಿದ್ದೀರಾ ಎಂದರ್ಥ. ಇಂತಹ ಸಮಸ್ಯೆಗಳನ್ನು ಕೆಲವು ಮನೆ ಮದ್ದುಗಳಿಂದ ನಿವಾರಿಸಿಕೊಳ್ಳಬಹುದು.

ಶುಂಠಿ ಮತ್ತು ಜೇನುತುಪ್ಪ: ಶುಂಠಿ ಮತ್ತು ಜೇನುತುಪ್ಪವನ್ನು ಮಿಶ್ರಣ ಮಾಡಿ ಸೇವಿಸುವುದರಿಂದ ಶೀಘ್ರ ಸ್ಖಲನದ ಸಮಸ್ಯೆಗೆ ತಕ್ಕ ಮಟ್ಟಿಗೆ ಪರಿಹಾರ ಕಾಣಬಹುದು. ರಾತ್ರಿ ಮಲಗುವ ಮುನ್ನ ಅರ್ಧ ಚಮಚದಷ್ಟು ಶುಂಠಿ ರಸ ಮತ್ತು ಜೇನುತುಪ್ಪವನ್ನು ಮಿಶ್ರಣ ಸೇವಿಸಿ. ಹೀಗೆ ಪ್ರತಿನಿತ್ಯ ಸೇವಿಸುತ್ತಿದ್ದರೆ ಲೈಂಗಿಕ ಸಮಸ್ಯೆ ದೂರವಾಗುತ್ತದೆ.

ಕೇಸರಿ ಮತ್ತು ಹಾಲು: ಲೈಂಗಿಕ ಆರೋಗ್ಯಕ್ಕೆ ಬಿಸಿ ಹಾಲು ಅತ್ಯುತ್ತಮ ಎನ್ನಲಾಗುತ್ತದೆ. ಇದರೊಂದಿಗೆ ಕೊಂಚ ಕೇಸರಿಯನ್ನು ಬೆರೆಸಿ ಕುಡಿದರೆ ಲೈಂಗಿಕ ಸಾಮರ್ಥ್ಯ ಹೆಚ್ಚಾಗುತ್ತದೆ. ಇದರಿಂದ ಕೂಡ ಸ್ಖಲನದ ಸಮಸ್ಯೆಗೆ ಹೋಗಲಾಡಿಸಬಹುದು.

ಮೊಟ್ಟೆ, ಕ್ಯಾರೆಟ್ ಮತ್ತು ಜೇನುತುಪ್ಪ: ಈ ಮೂರು ಪದಾರ್ಥಗಳನ್ನು ಮಿಶ್ರಣ ಮಾಡಿ ಸೇವಿಸಿದರೆ ಶ್ರೀಘ್ರ ಸ್ಖಲನದ ಸಮಸ್ಯೆಗೆ ಪರಿಹಾರ ಸಿಗಲಿದೆ. ಮೂರು ಚಮಚ ಜೇನುತುಪ್ಪಕ್ಕೆ ಬೇಯಿಸಿದ ಮೊಟ್ಟೆಯ ಅರ್ಧಭಾಗವನ್ನು ಮತ್ತು ಕ್ಯಾರೆಟ್​ನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಸೇವಿಸಿ. ಹೀಗೆ ಮೂರು ತಿಂಗಳುಗಳ ಕಾಲ ಸೇವಿಸುತ್ತಾ ಬಂದರೆ ಶೀಘ್ರ ಸ್ಖಲನದ ಸಮಸ್ಯೆ ದೂರವಾಗುತ್ತದೆ.

ಬಾದಾಮಿ, ಏಲಕ್ಕಿ ಮತ್ತು ಹಸಿ ಶುಂಠಿ: ಬಾದಾಮಿ ಬೀಜಗಳನ್ನು ನೆನೆಸಿಟ್ಟು ಮರುದಿನ ಹಾಲಿನೊಂದಿಗೆ ಬೆರೆಸಿ ಕುಡಿದರೆ ಕೂಡ ಉತ್ತಮ ಪರಿಣಾಮ ದೊರಕುತ್ತದೆ. ಈ ಹಾಲಿಗೆ ಕೊಂಚ ಏಲಕ್ಕಿ ಮತ್ತು ಹಸಿ ಶುಂಠಿಯನ್ನೂ ಬೆರೆಸಿ ಸೇವಿಸುವುದು ಇನ್ನೂ ಉತ್ತಮ. ಏಕೆಂದರೆ ಇದರಿಂದ ಲೈಂಗಿಕ ಸಾಮರ್ಥ್ಯ ಹೆಚ್ಚುವುದಲ್ಲದೆ, ಸ್ಖಲನವನ್ನು ದೀರ್ಘಾವಧಿಯವರೆಗೆ ತಡೆ ಹಿಡಿಯಲು ಇದು ಸಹಾಯಕ.
Loading...

ಇದನ್ನೂ ಓದಿ: ಕೇಂದ್ರ ಸರ್ಕಾರ ಚಾಪೆ ಕೆಳಗೆ ನುಸುಳಿದ್ರೆ, ಪೋರ್ನ್​ ಪ್ರಿಯರು ರಂಗೋಲಿ ಕೆಳಗೆ ತೂರಿ ವೀಡಿಯೊ ವೀಕ್ಷಿಸುತ್ತಿದ್ದಾರೆ..!

ಈರುಳ್ಳಿ ಬೀಜಗಳು: ಹಸಿರು ಈರುಳ್ಳಿ ಬೀಜಗಳನ್ನು ಚೆನ್ನಾಗಿ ಅರೆದು ನೀರಿನಲ್ಲಿ ಮಿಶ್ರಣ ಮಾಡಿ. ಈ ನೀರನ್ನು ಪ್ರತಿದಿನ ಊಟಕ್ಕೆ ಮುನ್ನ  ಮೂರು ಬಾರಿ ಸೇವಿಸಿ. ಹೀಗೆ ಮಾಡುವುದರಿಂದ ಕೂಡ ಶೀಘ್ರ ಸ್ಖಲನದ ಸಮಸ್ಯೆ ನಿವಾರಣೆಯಾಗುತ್ತದೆ. ಇದಾಗ್ಯೂ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದರೆ ಲೈಂಗಿಕ ತಜ್ಞರನ್ನು ಭೇಟಿಯಾಗುವುದು ಉತ್ತಮ.

First published:December 23, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ