Monsoon Food Items: ಮಳೆಗಾಲದಲ್ಲಿ ಆಹಾರ ಪದಾರ್ಥಗಳನ್ನು ಹೇಗೆ ಸಂಗ್ರಹಿಸಬೇಕು? ಈ ಟ್ರಿಕ್ ಅನುಸರಿಸಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಳೆಗಾಲದಲ್ಲಿ ಆಹಾರ ಸಂಗ್ರಹಿಸುವುದು ಸವಾಲಿನ ಕೆಲಸವಾಗಿದೆ. . ಸಂಜೆ ತಿಂಡಿಗಳನ್ನು ಪೇಪರ್ ಪೊಟ್ಟಣಗಳಲ್ಲಿ ಶೇಖರಿಸಿಟ್ರೆ ಹಾಳಾಗುವ ಸಾಧ್ಯತೆ ಇರುತ್ತೆ. ಆದ ಕಾರಣ ಗಾಜಿನ ಜಾರುಗಳಲ್ಲು ಹಾಕಿ ಇಟ್ರೆ ಒಳ್ಳೆಯದು ಹೆಚ್ಚು ಕಾಲ ಸಂಗ್ರಹಿಸಿಡಬಹುದು.

  • Share this:

ಮಾನ್ಸೂನ್ (Monsoon) ಅಂದ್ರೆ ಎಲ್ಲರಿಗೂ ತುಂಬಾ ಇಷ್ಟ ಆಗುತ್ತದೆ. ಮಳೆ, ತಂಗಾಳಿ, ತಂಪಾದ ವಾತಾವರಣ ಮನಸ್ಸಿಗೆ ಉಲ್ಲಾಸ ನೀಡುತ್ತೆ. ಪ್ರತಿ ದಿನ ಹೀಗೆ ಇರಲ್ಲಪ್ಪ ಎಂದು ಅಂದು ಕೊಳ್ಳುವುದ ಸಾಮಾನ್ಯ. ತಂಪಾದ ವಾತವರಣ ಜನರಿಗೆ ಇಷ್ಟ ಆಗೇ ಆಗುತ್ತೆ. ಮನ್ಸೂನ್‍ನನ್ನು ಎಂಜಾಯ್ (Enjoy) ಮಾಡ್ತಾರೆ. ಆದ್ರೆ ಈ ರೀತಿಯ ತಂಪಾದ ವಾತಾವರಣ ಕೆಲವೊಂದು ಆಹಾರ ಪದಾರ್ಥಗಳನ್ನು ಸಂಗ್ರಹಿಸಿಡಲು ಸೂಕ್ತವಲ್ಲ. ವಾತಾವರಣ ತಂಪಾಗಿದ್ರೆ ಕೆಲವೊಂದ ಆಹಾರ (Food) ಪದಾರ್ಥಗಳು ಹಾಳಾಗುತ್ತವೆ. ಮಳೆಗಾಲದಲ್ಲಿ ಆಹಾರ ಸಂಗ್ರಹಿಸುವುದು ಸವಾಲಿನ ಕೆಲಸವಾಗಿದೆ. . ಸಂಜೆ ತಿಂಡಿಗಳನ್ನು ಪೇಪರ್ (Paper) ಪೊಟ್ಟಣಗಳಲ್ಲಿ ಶೇಖರಿಸಿಟ್ರೆ ಹಾಳಾಗುವ ಸಾಧ್ಯತೆ ಇರುತ್ತೆ. ಆದ ಕಾರಣ ಗಾಜಿನ ಜಾರುಗಳಲ್ಲು ಹಾಕಿ ಇಟ್ರೆ ಒಳ್ಳೆಯದು ಹೆಚ್ಚು ಕಾಲ ಸಂಗ್ರಹಿಸಿಡಬಹುದು. ಆದ್ರೆ ಗಾಜಿನ ಜಾರಿನಲ್ಲಿ ಸ್ನಾಕ್ಸ್  (Snacks) ಇಡಬೇಕು. ಬೇರೆ ತಿಂಡಿಗಳನ್ನು ಮಿಶ್ರಣ ಮಾಡಿದ್ರೆ ಅದು ಸಹ ಹಾಳಾಗೋ ಸಾಧ್ಯತೆಯೇ ಹೆಚ್ಚು.


ಮಾನ್ಸೂನ್‍ನಲ್ಲಿ ಆಹಾರ ಸಂಗ್ರಹಿಸುಡುವುದೇ ಸವಾಲಿನ ಕೆಲಸ
ಮಳೆಯ ದಿನಗಳಲ್ಲಿ ಗಾಳಿಯಲ್ಲಿ ಹೆಚ್ಚಿನ ತೇವಾಂಶ  ಮತ್ತು ಆದ್ರ  ಇರುತ್ತೆ. ಆ ತೇವಾಂಶವು ತಿಂಡಿಗಳು, ಕುಕೀಸ್, ಬಿಸ್ಕತ್ತುಗಳು ಮತ್ತು ಇತರ ಆಹಾರ ಪದಾರ್ಥಗಳ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತೆ. ತಂಪಾದ ವಾತಾವರಣದಿಂದ, ಹವಾಮಾನದಲ್ಲಿ ಬದಲಾವಣೆಯಾಗಿರುತ್ತೆ. ಹವಮಾನ ಬದಲಾವಣೆಯಿಂದ ಆಹಾರ ಪದಾರ್ಥಗಳು ಸಹ ತೇವವನ್ನು ಹೊಂದುತ್ತವೆ. ಆಗ ಆಹಾರ ಪದಾರ್ಥಗಳು ಮೂಲ ರುಚಿಯನ್ನು ಕಳೆದುಕೊಳ್ಳುತ್ತವೆ.


ತಿಂಡಿಗಳನ್ನು ದೀರ್ಘಕಾಲ ಸುರಕ್ಷಿತವಾಗಿಡಲು ಕೆಲವು ಸಲಹೆಗಳು ಇಲ್ಲಿವೆ..
ಮಾನ್ಸೂನ್ ಸಮಯದಲ್ಲಿ ಆಹಾರ ಪದಾರ್ಥಗಳನ್ನು ದೀರ್ಘಕಾಲ ಸುರಕ್ಷಿತವಾಗಿಡಬಹುದು. ಮನೆಯಲ್ಲಿ ಯಾವುದಾದರು ಸ್ಥಳದಲ್ಲಿ ಆಗಿರಬಹುದ, ಅಡುಗೆ ಮನೆಯಲ್ಲಾಗಿರಬಹುದು ತೇವಾಂಶ ಇದ್ರೆ ಅದು ಶಿಲೀಂಧ್ರ ಮತ್ತು ಸೂಕ್ಷ್ಮಜೀವಿಗಳ ಬೆಳವಣಿಗೆಗೆ ದಾರಿ ಮಾಡಿಕೊಡುತ್ತದೆ. ಅದು ಆಹಾರ ಪದಾರ್ಥಗಳ ಮೇಲೆ ಪರಿಣಾಮ ಬೀರುತ್ತದೆ. ಅದನ್ನು ತಿಂದ್ರೆ ಆರೋಗ್ಯವು ಹಾಳಾಗುತ್ತದೆ. ಶಿಲೀಂಧ್ರ ಅಂದ್ರೆ ಫಂಗಸ್. ಫಂಗಸ್ ಬೆಳವಣಿಗೆ ತಪ್ಪಿಸಲು ಆಹಾರ ಅಥವಾ ತಿಂಡಿಗಳನ್ನು ತೇವವಾದ ಸ್ಥಳಗಳಿಂದ ದೂರವಿಡಬೇಕು. ಸರಿಯಾದ ರೀತಿಯಲ್ಲಿ ಪ್ಯಾಕ್ ಮಾಡಿ ಸೂಕ್ತ ಸ್ಥಳದಲ್ಲಿ ಇಡಬೇಕು.


ಗಾಜಿನ ಜಾರುಗಳನ್ನು ಬಳಸಿ..
ಮಳೆಗಾಲದಲ್ಲಿ ಆಹಾರ ಪದಾರ್ಥಗಳನ್ನು ಪೇಪರ್ ಪೊಟ್ಟಗಳಲ್ಲಿ ಶೇಖರಿಸಿಟ್ಟಾಗ ಅವು ಗಾಳಿಯಲ್ಲಿನ ತೇವಾಂಶದಿಂದ ಒದ್ದೆಯಶಗುವ ಸಾಧ್ಯತೆ ಇರುತ್ತೆ. ಆದ್ದರಿಂದ ತಿಂಡಿಗಳನ್ನು ಬಿಗಿಯಾದ ಗಾಜಿನ ಜಾರಿನಲ್ಲಿಡುವುದು ಸೂಕ್ತವಾಗಿದೆ. ಗಾಳಿ ಹೋಗದಂತಹ ಗಾಜಿನ ಜಾರ್‍ನಲ್ಲಿ ತಿಂಡಿಗಳನ್ನು ಸಂಗ್ರಹಿಸುವುದರಿಂದ ಆಹಾರ ಪದಾರ್ಥಗಳ ಶೆಲ್ಫ್ () ಲೈಫ್ ಹೆಚ್ಚಾಗುತ್ತದೆ.


ಇದನ್ನೂ ಓದಿ: Benefits of Red Wine: ರೆಡ್ ವೈನ್ ಸೇವನೆಯಿಂದ ಏನೆಲ್ಲಾ ಪ್ರಯೋಜನವಿದೆ ತಿಳಿದುಕೊಳ್ಳಿ!


ಗಾಜಿನ ಜಾರಿನಲ್ಲಿ ಮಿಶ್ರಣವನ್ನು ತಪ್ಪಿಸಬೇಕು
ಮಾನ್ಸೂನ್ ವೇಳೆಯಲ್ಲಿ ನೀವು ಗಾಜಿನ ಜಾರ್‍ನಲ್ಲಿ ವಿವಿಧ ತಿಂಡಿಗಳನ್ನು ಶೇಖರಿಸಿ ಇಟ್ರು, ಅವುಗಳನ್ನು ಎಂದಿಗೂ ಮಿಶ್ರಣ ಮಾಡಬಾರದು. ಗಾಜಿನ ಜಾರ್‍ನಲ್ಲಿ ತಿಂಡಿಗಳನ್ನು ಸರಿಯಾಗಿ ಪ್ಯಾಕ್ ಮಾಡಿ ಸಂಗ್ರಹಿಸಿ ಬೇಕು. ಇಲ್ಲದಿದ್ರೆ ತಿಂಡಿಗಳಲ್ಲಿನ ಉಪ್ಪು ಮತ್ತು ಸಕ್ಕರೆಯ ಅಂಶವು ಬಿಟ್ಟುಕೊಳ್ಳತ್ತವೆ. ಆಗ ಎಲ್ಲ ಮಿಕ್ಷ್ ಆಗೋ ಸಾದ್ಯತೆ ಇದ್ದು, ಅವು ಹಾಳಾಗುತ್ತವೆ. ಆಹಾರ ಪದಾರ್ಥಗಳನ್ನು ಪ್ರತ್ಯೇಕವಾಗಿ ಇಡುವುದು ಉತ್ತಮ.


ಸೂರ್ಯನ ಬೆಳಕಿನಲ್ಲಿ ಕಾಳುಗಳು ಅಥವಾ ಧಾನ್ಯಗಳನ್ನು ಒಣಗಿಸುವುದನ್ನು ತಪ್ಪಿಸಿ
ಮಳೆಗಾಲದಲ್ಲಿ ಸೂರ್ಯನ ಬೆಳಕಿಗೆ ಧಾನ್ಯಗಳನ್ನು ಒಣಗಿಸುವುದನ್ನು ತಪ್ಪಿಸಿಬೇಕು. ಗಾಳಿಯಲ್ಲಿ ತೇವಾಂಶ ಹೆಚ್ಚಿರುವ ಕಾರಣ ಸೂರ್ಯ ಬೆಳಗಿಗೆ ಧಾನ್ಯಗಳನ್ನು ಇಟ್ಟಾಗ ಅವು ನೀರನ್ನು ಹೀರಿಕೊಳ್ಳಬಹುದು. ಇದರಿಂದ ಆಹಾರ ಪದಾರ್ಥಗಳು ಹಾಳಾಗುವ ಸಾಧ್ಯತೆಯೇ ಹೆಚ್ಚು. ಆದ್ದರಿಂದ ಸೂರ್ಯ ಬೆಳಕಿಗೆ ಕಾಳುಗಳನು ಮಳೆಗಾಲದಲ್ಲಿ ಒಣಗಿಸಬಾರದು.


ಇದನ್ನೂ ಓದಿ: Never Bath After Eating: ಊಟ ಮಾಡಿದ ತಕ್ಷಣ ಸ್ನಾನ ಮಾಡಿದ್ರೆ ಅಪಾಯವೇ? ಏನಾಗುತ್ತೆ ನೀವೇ ಓದಿ


ಪ್ರಾಣಿ, ಪಕ್ಷಿಗಳು ಹೇಗೆ ಮಳೆಗಾಲಕ್ಕಾಗಿ ತಮ್ಮ ಆಹಾರವನ್ನು ಜೋಪಾನದಿಂದ ಶೇಖರಿಸಿಕೊಳ್ಳುತ್ತವೋ.. ಅದೇ ರೀ ನಾವು ಸಹ ಆಹಾರ ಪದಾರ್ಥಗಳನ್ನು ಸರಿಯಾಗಿ ಶೇಖರಿಸಿಟ್ರೆ ನಮಗೆ ಹೆಚ್ಚು ಉಪಯುಕ್ತ.

Published by:Savitha Savitha
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು