Kitchen Hacks: ಅಡುಗೆಮನೆಯ ಕಸ ನಿರ್ವಹಣೆ ಮಾಡಲು ಸಿಂಪಲ್​​ ಟಿಪ್ಸ್ ಇಲ್ಲಿದೆ

Kitchen: ಅಡುಗೆಮನೆಗೆ ಯಾವುದಾದರೂ, ಆಹಾರ ತಯಾರಿಸಲು ಬಂದಾಗ, ಉಳಿದಿರುವ ಆಹಾರವನ್ನು ಬಳಸಲು ಮರೆಯದಿರಿ. ಹೊಸ ಖಾದ್ಯವನ್ನು ಮಾಡಲು ಅವುಗಳನ್ನು ಎಸೆಯದೇ, ಬಳಸಿ. ಅಡುಗೆಮನೆಯನ್ನು ತ್ಯಾಜ್ಯಮುಕ್ತ ಮಾಡಲು ಅಳವಡಿಸಿಕೊಳ್ಳಬಹುದಾದ ಪ್ರಮುಖ ವಿಧಾನಗಳಲ್ಲಿ ಇದು ಒಂದಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಇತ್ತೀಚಿನ ದಿನಗಳಲ್ಲಿ ತ್ಯಾಜ್ಯ ವಿಂಗಡಣೆ(Waste) ಹಾಗೂ ವಿಲೇವಾರಿ ಅತ್ಯಂತ ಕಷ್ಟದ ಕೆಲಸವಾಗಿದೆ. ಮನೆಗಳಲ್ಲಿ ತ್ಯಾಜ್ಯವನ್ನು ವಿಂಗಡಿಸಿ ಕಸ ಸಂಗ್ರಹಿಸುವವರಿಗೆ ಕೊಟ್ಟರೂ ಅದನ್ನು ಅವರು ಒಂದೇ ಕಡೆ ಶೇಖರಿಸುವುದರಿಂದ ವಿಂಗಡಣೆಯೂ(Sorting) ಪ್ರಯೋಜನವಾಗುದಿಲ್ಲ. ತ್ಯಾಜ್ಯ ಮೊದಲು ಸೃಷ್ಟಿಯಾಗುವುದೇ ನಮ್ಮ ಮನೆಗಳಲ್ಲಿ(Home), ಅದರಲ್ಲೂ ಅಡುಗೆ ಮನೆಗಳಲ್ಲಿ(Kitchen). ಉಳಿದ ಆಹಾರ(Food), ಉತ್ಪನ್ನಗಳನ್ನು ಖರೀದಿಸಿದ ವಿವಿಧ ಪ್ಯಾಕೆಟ್‌, ಪ್ಲಾಸ್ಟಿಕ್‌ ವಸ್ತುಗಳಿಂದ ಸಾಕಷ್ಟು ಕಸ ಉಂಟಾಗುತ್ತವೆ. ಇಲ್ಲಿ ನೀವು ಕಡಿಮೆ ತ್ಯಾಜ್ಯ ಅಥವಾ ಝಿರೋ ವೇಸ್ಟೇಜ್‌ ಆಗುವಂತೆ ನೋಡಿಕೊಂಡರೆ, ಸ್ವಲ್ಪ ಪ್ರಮಾಣದಲ್ಲಿ ಕಸ ಉಂಟಾಗುವುದನ್ನು ತಡೆಯಬಹುದು. ಹಾಗಾದರೆ, ಅಡುಗೆ ಮನೆಯಲ್ಲಿ ತ್ಯಾಜ್ಯ ಕಡಿಮೆಮಾಡಲು ಏನು ಮಾಡಬೇಕು ಎಂಬುದನ್ನು ನಾವಿಂದು ನೋಡೋಣ.

    ಅಡುಗೆ ಮನೆಯಲ್ಲಿನ ಕಸವನ್ನು ಹಾಗೆ ನಾವೆಲ್ಲರು ಕೊಂಡು ಹೋಗಿ ಕಸದ ಬುಟ್ಟಿಗೆ ಎಸೆಯುತ್ತೇವೆ. ಇಂತಹ ತ್ಯಾಜ್ಯವನ್ನು ಬಳಸಿಕೊಂಡು ಮನೆಯ ಕೈತೋಟಕ್ಕೆ ಗೊಬ್ಬರವನ್ನು ತಯಾರಿಸಿಕೊಳ್ಳಬಹುದು. ಕೆಲವರಿಗೆ ಹೂ ಗಿಡ, ಹಾಗೂ ತರಕಾರಿಗಳನ್ನು ನೆಡುವಂತಹ ಅಭ್ಯಾಸವು ಇರುವುದು.ಹೀಗಾಗಿ ಅಡುಗೆ ಮನೆಯಲ್ಲಿ ಸಂಗ್ರಹವಾಗುವ ಕಸದ ಹತ್ತಿರದಿಂದ ನಾವು ಹಲವಾರು ಪ್ರಯೋಜನಗಳನ್ನು ಪಡೆಯಬಹುದು ಅದು ಏನು ಎನ್ನುವುದು ಈ ಕೆಳಗಿನ ಮಾಹಿತಿಯಲ್ಲಿ ಇದೆ..ಅದರಲ್ಲೂ ಮನೆಯೊಂದರಲ್ಲಿ ಅಡುಗೆ ಕೋಣೆಯ ಸ್ವಚ್ಛತೆ ಬಹಳ ಮುಖ್ಯ. ಆದರೆ ಕಿಚನ್ (Kitchen) ಸ್ವಚ್ಛವಾಗಿಟ್ಟುಕೊಳ್ಳುವುದು ಮಾತ್ರ ಕಷ್ಟದ ಕೆಲಸ. ತರಕಾರಿಯ ತ್ಯಾಜ್ಯ, ಅಳಿದುಳಿದ ಆಹಾರ, ತಿಂಡಿಯ ಪ್ಯಾಕೆಟ್‌ಗಳು ಹೀಗೆ ಎಲ್ಲಾ ರೀತಿಯ ವೇಸ್ಟ್ ಅಡುಗೆ ಕೋಣೆಯಲ್ಲಿರುತ್ತದೆ. ಅಡುಗೆ ಕೋಣೆಯನ್ನು ಕ್ಲೀನ್ ಆಗಿ ಇಟ್ಟುಕೊಳ್ಳೋಣ ಎಂದು ಅದೆಷ್ಟು ಬಾರಿ ಅಂದುಕೊಂಡರೂ ತ್ಯಾಜ್ಯ ಮತ್ತೆ ಮತ್ತೆ ರಾಶಿ ಬೀಳುತ್ತವೆ. ಹೀಗಾಗಿ ಅಡುಗೆ ಮನೆಯಲ್ಲಿ ತ್ಯಾಜ್ಯ ಕಡಿಮೆ ಮಾಡಲು ನಾವು ಏನೆಲ್ಲಾ ಕ್ರಮ ಅನುಸರಿಸಬೇಕು ಎಂಬುದರ ಮಾಹಿತಿ ಇಲ್ಲಿದೆ.

    1)ಸ್ಥಳೀಯ ಉತ್ಪನ್ನ ಖರೀದಿ: ನಾವು ದೊಡ್ಡ ದೊಡ್ಡ ಸೂಪರ್ ಮಾರ್ಕೆಟ್ ಮಾಲ್ ಗಳ ಹೋಗಿ ಉತ್ಪನ್ನಗಳನ್ನು ಖರೀದಿ ಮಾಡುವ ಬದಲು ಸಾಧ್ಯವಾದಷ್ಟು ಸ್ಥಳೀಯರ ಮಾರುಕಟ್ಟೆಯಿಂದ ಉತ್ಪನ್ನಗಳನ್ನು ಖರೀದಿ ಮಾಡುವುದು ಉತ್ತಮ. ನಾವು ಸ್ಥಳೀಯ ಮಾರುಕಟ್ಟೆಯಿಂದ ಉತ್ಪನ್ನಗಳನ್ನು ಖರೀದಿ ಮಾಡಿದಾಗ ಅವರು ಉತ್ಪನ್ನಗಳನ್ನು ಪ್ಯಾಕ್ ಮಾಡದೇ ನಿಮ್ಮ ಸ್ವಂತ ಚೀಲಕ್ಕೆ ಹಾಕುತ್ತಾರೆ. ಅಲ್ಲದೇ ಸ್ಥಳೀಯ ರೈತರು ಮಾರುಕಟ್ಟೆಯಲ್ಲಿ ತಾಜಾ ಉತ್ಪನ್ನಗಳು ಅಗ್ಗದ ಬೆಲೆಯಲ್ಲಿ ಲಭ್ಯವಾಗುತ್ತವೆ..

    ಇದನ್ನೂ ಓದಿ: ಮಣ್ಣಿನ ಪಾತ್ರೆಯನ್ನು ಹೀಗೆ ಇಟ್ರೆ ಬೇಗ ಒಡೆಯಲ್ಲ

    2)ಮರುಬಳಕೆಯ ಬ್ಯಾಗ್‌ ಬಳಸಿ: ಈಗ ಪ್ಲಾಸ್ಟಿಕ್ ಚೀಲಗಳನ್ನು ಬಳಸುವಂತಿಲ್ಲ. ಆದ್ದರಿಂದ ನೀವು ದಿನಸಿ ಶಾಪಿಂಗ್‌ಗಾಗಿ ಹೊರಗೆ ಹೋಗುವಾಗ, ಮರುಬಳಕೆ ಮಾಡಬಹುದಾದ ಬ್ಯಾಗ್‌ಗಳನ್ನು ತೆಗೆದುಕೊಂಡು ಹೋಗಿ, ಅಲ್ಲದೆ, ನಿಮ್ಮ ಅಡುಗೆಮನೆಯಲ್ಲಿ ಆಹಾರ ಸಂಗ್ರಹಣೆಗೆ ಬಂದಾಗ ಮರುಬಳಕೆ ಮಾಡಬಹುದಾದ ಜಾರ್‌ ಮತ್ತು ಪೆಟ್ಟಿಗೆಗಳನ್ನು ಇಡಬಹುದು.

    3) ದೊಡ್ಡ ಪ್ರಮಾಣದಲ್ಲಿ ಶಾಪಿಂಗ್ ಮಾಡಿ: ಕೆಲವರಿಗೆ ಮನೆಯಲ್ಲಿ ಏನೆಲ್ಲಾ ವಸ್ತುಗಳನ್ನು ತಂದು ಇಟ್ಟು ಕೊಳ್ಳಬೇಕು ಎಂಬುದು ಮರೆತು ಹೋಗಿರುತ್ತದೆ ಹೀಗಾಗಿ ಆಗಾಗ ಶಾಪಿಂಗ್ ಮಾಡುವ ಇಟ್ಟುಕೊಂಡಿರುತ್ತಾರೆ.. ಇದರ ಬದಲು ಒಮ್ಮೆಲೆ ದಿನಿಸಿ ಖರೀದಿ ಮಾಡುವಾಗ ದೊಡ್ಡ ಪಟ್ಟಿ ಮಾಡಿಕೊಂಡು ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ದೊಡ್ಡ ಪ್ರಮಾಣದಲ್ಲಿ ಶಾಪಿಂಗ್ ಮಾಡುವುದು ಉತ್ತಮ. ಹೀಗೆ ದೊಡ್ಡ ಪ್ರಮಾಣದಲ್ಲಿ ಶಾಪಿಂಗ್ ಮಾಡುವುದರಿಂದ ಅದರಿಂದ ಉಂಟಾಗುವ ಕಸಗಳು ಕೂಡ ಕಡಿಮೆಯಾಗುತ್ತದೆ.

    4) ಕಿಚನ್ ಗಾರ್ಡನ್: ಕಿಚನ್ ಗಾರ್ಡನ್ ಪರಿಕಲ್ಪನೆಯು ನಿಮ್ಮ ಮನೆಗೆ ಬೇಕಾದ ಅನೇಕ ವಸ್ತುಗಳನ್ನು ಮಾರುಕಟ್ಟೆಯಿಂದ ತರುವುದನ್ನ ತಪ್ಪಿಸುತ್ತದೆ. ಅದರಲ್ಲೂ ಕೊತ್ತಂಬರಿ ಪುದೀನಾದಂತಹ ಸಾವಯವ ಗಿಡಮೂಲಿಕೆಗಳನ್ನು ಮನೆಯಲ್ಲಿ ಬಳಸುವುದರಿಂದ ತ್ಯಾಜ್ಯ ಕಡಿಮೆಯಾಗುವುದು

    5)ಉಳಿದಿರುವ ಆಹಾರ ಬಳಸಿ:  ಅಡುಗೆಮನೆಗೆ ಯಾವುದಾದರೂ, ಆಹಾರ ತಯಾರಿಸಲು ಬಂದಾಗ, ಉಳಿದಿರುವ ಆಹಾರವನ್ನು ಬಳಸಲು ಮರೆಯದಿರಿ. ಹೊಸ ಖಾದ್ಯವನ್ನು ಮಾಡಲು ಅವುಗಳನ್ನು ಎಸೆಯದೇ, ಬಳಸಿ. ಅಡುಗೆಮನೆಯನ್ನು ತ್ಯಾಜ್ಯಮುಕ್ತ ಮಾಡಲು ಅಳವಡಿಸಿಕೊಳ್ಳಬಹುದಾದ ಪ್ರಮುಖ ವಿಧಾನಗಳಲ್ಲಿ ಇದು ಒಂದಾಗಿದೆ.

    ಇದನ್ನೂ ಓದಿ: ಸ್ಟೀಲ್ ಪಾತ್ರೆ ಮೇಲೆ ಇರೋ ತುಕ್ಕಿನ ಕಲೆ ಹೋಗಿಸೋಕೆ ಸೂಪರ್ ಉಪಾಯ ಇಲ್ಲಿದೆ

    6) ಆಹಾರ ಸೇವನೆಯ ಮಾಡುವಾಗ ಸಣ್ಣ ತಟ್ಟೆ ಬಳಸಿ: ನೀವು ಆಹಾರ ಸೇವನೆ ಮಾಡುವಾಗ ದೊಡ್ಡ ತಟ್ಟೆ ಬಳಸುವುದರಿಂದ ನಾವು ಕಡಿಮೆ ತಿನ್ನುತ್ತಿದ್ದೇವೆ ಎಂಬ ಭಾವನೆ ನಿಮಗೆ ಬರುತ್ತದೆ. ಹೀಗಾಗಿ ತಟ್ಟೆಯಲ್ಲಿ ಹೆಚ್ಚಿನ ಆಹಾರ ಬಳಸಿಕೊಳ್ಳುವುದು ತಪ್ಪುತ್ತದೆ.. ಇದರಿಂದ ನಿಮಗೆ ಬೇಕಾದಾಗ ಬೇಕಾದಷ್ಟು ಆಹಾರವನ್ನು ತಟ್ಟೆಗೆ ಹಾಕಿಕೊಳ್ಳಬಹುದು... ಆದ್ದರಿಂದ ನೀವು ಸಣ್ಣ ತಟ್ಟೆ ಹಾಗೂ ಲೋಟಗಳನ್ನು ನಿಮ್ಮ ಆಹಾರದ ಸಮಯದಲ್ಲಿ ಬಳಸುವುದು ಸೂಕ್ತ.
    Published by:ranjumbkgowda1 ranjumbkgowda1
    First published: