Health Tips: ಹೆಸರೇ ಹೇಳುವಂತೆ ಸರ್ವರೋಗಕ್ಕೂ ಅಮೃತ ಈ ಅಮೃತಬಳ್ಳಿ! ಯಾವೆಲ್ಲಾ ರೋಗಕ್ಕೆ ಇದು ಬೆಸ್ಟ್?

ಅಮೃತ ಬಳ್ಳಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಶಕ್ತಿಯ ಕೇಂದ್ರವಾಗಿದ್ದು, ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಹೋರಾಡುತ್ತದೆ. ನಿಮ್ಮ ಕೋಶಗಳನ್ನು ಆರೋಗ್ಯಕರವಾಗಿರಿಸಿ ರೋಗಗಳನ್ನು ತೊಡೆದು ಹಾಕುತ್ತದೆ.

ಅಮೃತಬಳ್ಳಿ

ಅಮೃತಬಳ್ಳಿ

 • Share this:
  ಆಯುರ್ವೇದದಲ್ಲಿ (Ayurveda) ಅತ್ಯುತ್ತಮ ಔಷಧೀಯ (Medicinal) ಗುಣಗಳನ್ನು ಹೊಂದಿರುವ ಗಿಡಮೂಲಿಕೆಗಳಲ್ಲಿ ಅಗ್ರಸ್ಥಾನವನ್ನು ಅಮೃತಬಳ್ಳಿಯು (Tinospora cordifolia) ಪಡೆದಿದೆ. ಹೆಸರೇ ಹೇಳುವಂತೆ ಇದು ಆರೋಗ್ಯಕ್ಕೆ (Health) ಅಮೃತವಾಗಿ ಹಲವಾರು ಖಾಯಿಲೆಗಳಿಗೆ ರಾಮಬಾಣವಾಗಿದೆ. ಇವುಗಳ ಸೂಕ್ತ ಬಳಕೆ ಹಾಗೂ ಸೇವನೆಯಿಂದ ವಿವಿಧ ವ್ಯಾದಿಗಳನ್ನು ಗುಣಪಡಿಸಬಹುದು. ಅಮೃತಬಳ್ಳಿಯ ಎಲೆ , ಕಾಂಡ, ಬೇರು ಎಲ್ಲವೂ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದರ ಎಲೆಯನ್ನು ನೀರಿನಲ್ಲಿ ಬೇಯಿಸಿ ಕುಡಿದರೆ ದೇಹಾರೋಗ್ಯಕ್ಕೆ ಬಹಳ ಉತ್ತಮ. ಅಮೃತ ಬಳ್ಳಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಶಕ್ತಿಯ ಕೇಂದ್ರವಾಗಿದ್ದು, ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಹೋರಾಡುತ್ತದೆ. ನಿಮ್ಮ ಕೋಶಗಳನ್ನು ಆರೋಗ್ಯಕರವಾಗಿರಿಸಿ ರೋಗಗಳನ್ನು ತೊಡೆದು ಹಾಕುತ್ತದೆ.

  ಮಧುಮೇಹಕ್ಕೆ ಅಮೃತಬಳ್ಳಿ ಸಹಕಾರಿ

  ಮಧುಮೇಹದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಅಮೃತಬಳ್ಳಿಯ ಅತ್ಯುತ್ತಮವಾದ ಚಿಕಿತ್ಸೆಯನ್ನು ನೀಡುತ್ತದೆ. ಇದರಲ್ಲಿ ಅಡಕವಾಗಿರುವ ಗುಣಗಳು ಹೆಚ್ಚಿನ ಮಟ್ಟದ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ ಮಧುಮೇಹ ಸಮಸ್ಯೆ ಇರುವವರು ಅಮೃತಬಳ್ಳಿಯ ಸೇವನೆ ಮಾಡುವುದು ಅಥವಾ ಅದರ ಜ್ಯೂಸ್ ಮಾಡಿ ಕುಡಿಯುವುದರಿಂದ ದೇಹದಲ್ಲಿನ ಸಕ್ಕರೆ ಮಟ್ಟವನ್ನು ವ್ಯವಸ್ಥಿತವಾಗಿ ಇಟ್ಟುಕೊಳ್ಳಬಹುದು. ಮಧುಮೇಹವನ್ನು ಉತ್ತಮವಾಗಿ ನಿರ್ವಹಿಸಲು ಸಹಾಯ ಮಾಡುವ ದೀರ್ಘಾವಧಿಯ ಸೆಲ್ಯುಲಾರ್ ಇನ್ಸುಲಿನ್ ಸೂಕ್ಷ್ಮತೆಯನ್ನು ಅಮೃತಬಳ್ಳಿ ಯಲ್ಲಿರುವ ಅಂಶಗಳು ಸುಧಾರಣೆ ಮಾಡುತ್ತವೆ.

  ಇದನ್ನೂ ಓದಿ: Weight Loss: ಸುಲಭವಾಗಿ ತೂಕ ಇಳಿಸಲು ಇಲ್ಲಿದೆ ಜಾಗಿಂಗ್ ಟ್ರಿಕ್ಸ್; ಒಮ್ಮೆ ಟ್ರೈ ಮಾಡಿ

  ಜ್ವರ ನಿವಾರಣೆಗೆ ಸಹಕಾರಿ

  ಇತ್ತೀಚೆಗೆ ಹೆಚ್ಚಾಗಿ ಎಲ್ಲರನ್ನೂ ಕಾಡುತ್ತಿರುವ ಸಮಸ್ಯೆಯೆಂದರೆ ಜ್ವರ, ವೈರಲ್ ಫೀವರ್ ಇದರ ನಿವಾರಣೆಗೆ ಅಮೃತಬಳ್ಳಿ ರಾಮಬಾಣವಾಗಿ ಸಹಾಯ ಮಾಡುತ್ತದೆ. ಅಮೃತಬಳ್ಳಿ ಯಲ್ಲಿ ತಾಮ್ರ ಕಬ್ಬಿಣ ರಂಜಕ ಮತ್ತು ಕ್ಯಾಲ್ಸಿಯಂ ಮೆಗ್ನೀಷಿಯಂ ಮತ್ತು ಅನೇಕ ಗುಣಗಳು ಒಟ್ಟಾಗಿ ಎಲ್ಲಾ ರೀತಿಯ ಜ್ವರದಿಂದ ನಮ್ಮನ್ನು ದೂರ ಇಡಲು ಸಹಾಯ ಮಾಡುತ್ತದೆ.

  ಕೂದಲು ಸೊಂಪಾಗಿ ಆರೋಗ್ಯಯುತವಾಗಿರುವುದು

  ಅಮೃತ ಬಳ್ಳಿಯನ್ನು ಬೆಳೆಸಲು ಹೆಚ್ಚಿನ ಆರೈಕೆ ಬೇಕಾಗುವುದಿಲ್ಲ. ಮನೆಯ ಸುತ್ತಮುತ್ತ ಜಾಗವಿದ್ದರೆ ಯಾವುದಾದರೂ ಮರಕ್ಕೆ ಅಥವಾ ಚಪ್ಪರಕ್ಕೆ ಇದನ್ನು ಬಿಟ್ಟರೆ ಸೊಂಪಾಗಿ ಬೆಳೆಯುತ್ತದೆ. ಕೇವಲ ಇದರ ಗಾಳಿ ಸೇವನೆಯಿಂದಲೂ ಅನೇಕ ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು‌. ಅದೇ ರೀತಿ ಅಮೃತಬಳ್ಳಿಯ ಎಣ್ಣೆಯನ್ನು ತಲೆಗೆ ಹಚ್ಚಿಕೊಳ್ಳುವುದರಿಂದ ಕೂದಲು ಸೊಂಪಾಗಿ ಬೆಳೆಯುವುದರ ಜೊತೆಗೆ ಆರೋಗ್ಯಯುತ ವಾಗಿರುವುದು.

  ಹುಳಿ ತೇಗು ಅಥವಾ ಗ್ಯಾಸ್ಟ್ರಿಕ್ ಸಮಸ್ಯೆಗೆ ರಾಮಬಾಣ

  ಸಾಮಾನ್ಯವಾಗಿ ಎಲ್ಲರನ್ನು ಕಾಡುವ ದೊಡ್ಡ ಸಮಸ್ಯೆ ಗ್ಯಾಸ್ಟ್ರಿಕ್ ಅಥವಾ ಹುಳಿತೇಗು. ಹೊರಗಿನ ಆಹಾರ ತಿಂದ ಕೂಡಲೇ ಈ ಸಮಸ್ಯೆಯು ಉಲ್ಬಣವಾಗುತ್ತದೆ. ಅತಿಯಾಗಿ ಹುಳಿತೇಗು, ಗಂಟಲು ಉರಿ, ಎದೆ ಉರಿ ಸಮಸ್ಯೆ ಎದುರಾದಾಗ ಅಮೃತಬಳ್ಳಿ ಉತ್ತಮ ರೀತಿಯಲ್ಲಿ ಸಹಕಾರಿಯಾಗುವುದು.

  ಇದನ್ನೂ ಓದಿ: Benefits of Onion: ಕಣ್ಣೀರು ತರಿಸುವ ಈರುಳ್ಳಿಯಲ್ಲಿ ಮುಖದ ಕಾಂತಿ ಹೆಚ್ಚಿಸುವ ಗುಣ ಕೂಡ ಇದೆ ಗೊತ್ತಾ?

  ತೂಕ ಇಳಿಸಿಕೊಳ್ಳಲು ಇದು ಸಹಕಾರಿ

  ಅಮೃತಬಳ್ಳಿ ಯಲ್ಲಿ ಬೊಜ್ಜನ್ನು ಕರಗಿಸುವ ದಿವ್ಯ ಗುಣ ಅಡಗಿದೆ. ಆದುದರಿಂದ ತೂಕ ಇಳಿಸಿಕೊಳ್ಳಲು ಬಯಸುವವರು ಅಮೃತಬಳ್ಳಿಯ ಸೇವನೆಯನ್ನು ನಿಯಮಿತವಾಗಿ ಮಾಡುವುದು ಒಳ್ಳೆಯದು.

  ರೋಗ ನಿರೋಧಕ ಶಕ್ತಿ  ಹೆಚ್ಚಾಗುತ್ತದೆ

  ದುರ್ಬಲ ರೋಗ ನಿರೋಧಕ ಶಕ್ತಿ ಹೊಂದಿರುವ ಜನರು ನಿಯಮಿತವಾಗಿ ಅಮೃತಬಳ್ಳಿ ಕಷಾಯವನ್ನು ತೆಗೆದುಕೊಳ್ಳಬೇಕು. ಏಕೆಂದರೆ ಹಾಗೆ ಮಾಡುವುದರಿಂದ ಕೆಲವೇ ದಿನಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

  ಅಮೃತಬಳ್ಳಿ ಕಷಾಯವನ್ನು ಕುಡಿಯಲು ಬಯಸದಿದ್ದರೆ, ಅಮೃತಬಳ್ಳಿ ಜ್ಯೂಸ್ ಅನ್ನು ಸಹ ಕುಡಿಯಬಹುದು. ಇದಕ್ಕಾಗಿ, ಅಮೃತಬಳ್ಳಿ ಕಾಂಡವನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ತೊಳೆಯಿರಿ. ಅಮೃತಬಳ್ಳಿ ಕಾಂಡವನ್ನು ಬಿಸಿ ನೀರಿನಲ್ಲಿ ಕುದಿಸಿ, ನೀರು ಅರ್ಧ ಆದಾಗ, ಆಫ್ ಮಾಡಿ ಮತ್ತು ಅದನ್ನು ತಣ್ಣಗಾಗಲು ಬಿಡಿ. ಪ್ರತಿದಿನ ಒಂದು ಲೋಟ ರಸವನ್ನು ಸೇವಿಸಬಹುದು.
  Published by:Swathi Nayak
  First published: