Health Care: 20ರ ಹರೆಯದಲ್ಲಿ ಹೆಣ್ಣು ಮಕ್ಕಳಲ್ಲಿ ಆಗೋ ಬದಲಾವಣೆ ಏನು ಗೊತ್ತಾ? ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ

ಹೆಣ್ಣಿನ 20 ಹರೆಯ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ದೈಹಿಕ ಮತ್ತು ಮಾನಸಿಕ ಚಟುವಟಿಕೆಗಳು ಈ ಅವಧಿಯನ್ನು ಸುಂದರವಾಗಿಸಲು ಸಾಧ್ಯ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಜೀವನ (Life) ಅಂದ ಮೇಲೆ ಬದಲಾವಣೆ ಆಗಲೇಬೇಕು. ದೇಹವು (Body) ಒಂದೊಂದು ವಯಸ್ಸಿನಲ್ಲಿ ಒಂದೊಂದು ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ. ದೈಹಿಕ ಬದಲಾವಣೆ ಮತ್ತು ಬೆಳವಣಿಗೆ (Growth) ಆಯಾ ವಯಸ್ಸಿನಲ್ಲಿ ಸರಿಯಾದ ರೀತಿಯಲ್ಲಿ, ಸರಿಯಾದ ಪ್ರಮಾಣದಲ್ಲಿ ಆಗಲೇಬೇಕು. ಇಲ್ಲದಿದ್ದರೆ ದೇಹದ ಭಾಗಗಳು ನಿಷ್ಕ್ರಿಯಗೊಳ್ಳುವ, ಬೆಳವಣಿಗೆ ಕುಂಠಿತಗೊಂಡು ಕಾಯಿಲೆಗೆ ತುತ್ತಾಗುವ ಸಾಧ್ಯತೆ ಹೆಚ್ಚುತ್ತದೆ. ಇನ್ನು  ವಯಸ್ಸಿನ ವಿಚಾರಕ್ಕೆ ಬಂದಾಗ ಹೆಣ್ಣು ಮಕ್ಕಳ (Female) ದೈಹಿಕ ಮತ್ತು ಮಾನಸಿಕ (Mental) ವಯೋಸಹಜ ಬದಲಾವಣೆ ಸಾಮಾನ್ಯ. 13 ವರ್ಷವಾಗುತ್ತಿದ್ದಂತೆಯೇ ಹೆಣ್ಣು ಮಕ್ಕಳಲ್ಲಿ ಋತುಚಕ್ರದ ಆರಂಭವಾಗುತ್ತದೆ. ಹೆಣ್ಣನ್ನು ತಾಯಿಯಾಗುವ ಪರಿಕಲ್ಷನೆಗೆ ಇದೇ ಮೊದಲ ಬುನಾದಿ ಎಂದರೆ ತಪ್ಪಾಗಲಿಕ್ಕಿಲ್ಲ. ಹೆಣ್ಣು ಮಕ್ಕಳು ತಮ್ಮ ಹದಿಹರೆಯದ ವಯಸ್ಸನ್ನು ದಾಟುವ ಹಂತ ಮುಖ್ಯವಾಗಿದೆ. ಹೆಣ್ಣಿನ 20ರ ಹರೆಯ ಅತ್ಯಂತ ಕಷ್ಟಕರ ಅವಧಿ ಎಂತಲೂ ಹೇಳಲಾಗುತ್ತದೆ.

    ದೇಹದಲ್ಲಿ ಉಂಟಾಗುವ ಬದಲಾವಣೆ ಸುಂದರ ದೇಹ, ಕಾಂತಿಯುತ ಚರ್ಮವನ್ನು ನೀಡುತ್ತದೆ. ಈ ಹಂತದಲ್ಲಿ ಉದ್ಭವಿಸುವ ಭಾವನೆಗಳನ್ನು ನಿಯಂತ್ರಿಸುವುದು ತುಂಬಾ ಕಷ್ಟಕರ. ಹಾಗಿದ್ದರೆ ಹೆಣ್ಣು ಮಕ್ಕಳು 20ರ ಹರೆಯದಲ್ಲಿದ್ದಾಗ ದೇಹದಲ್ಲಾಗುವ ಬದಲಾವಣೆಗಳನ್ನು ನೋಡೋಣ.

    ಸ್ನಾಯು, ಮೂಳೆಗಳ ಬಲವರ್ಧನೆ

    ಹೆಣ್ಣಿನ 20 ಹರೆಯ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಇದು ಕ್ಯಾಲೊರಿಗಳ ಪ್ರಮಾಣದಲ್ಲಿ ಏರುಪೇರಾಗಿಸುವ ಅವಧಿ. ನಿಮ್ಮ ದೈಹಿಕ ಮತ್ತು ಮಾನಸಿಕ ಚಟುವಟಿಕೆಗಳು ಈ ಅವಧಿಯನ್ನು ಸುಂದರವಾಗಿಸಲು ಸಾಧ್ಯ. ನೀವು ಅಥ್ಲೀಟ್, ಕ್ರೀಡಾಪಟು ಅಥವಾ ಯೋಗ, ವ್ಯಾಯಾಮ ಡುತ್ತಿದ್ದರೆ ಬಲಿಷ್ಠ ಸ್ನಾಯು, ಮೂಳೆಗಳ ಬಲವರ್ಧನೆ ಪಡೆಯುತ್ತೀರಿ. ಸಕ್ರಿಯ ಮತ್ತು ಒಳ್ಳೆಯ ಜೀವನಶೈಲಿ ನಿಮ್ಮನ್ನು ಆಕರ್ಷಕ ಮತ್ತು ಸುಂದರವಾಗಿಸುತ್ತದೆ.

    ಇದನ್ನೂ ಓದಿ: ತೂಕ ಕಡಿಮೆ ಆಗ್ಬೇಕು ಅಂದ್ರೆ ಈ ಬೇಳೆಗಳನ್ನು ತಿನ್ನಿ

    ಹಾರ್ಮೋನುಗಳು ಬದಲಾವಣೆ:

    ಚಯಾಪಚಯ ಕ್ರಿಯೆಯು ದೇಹದಲ್ಲಿ ಆಕರ್ಷಕ ತಿರುವು ಪಡೆಯುಂತೆ ಮಾಡುತ್ತದೆ. ಸೊಂಟ, ತೊಡೆಗಳು ಮತ್ತು ಎದೆ ಭಾಗದಲ್ಲಿ ಕೊಬ್ಬಿನ ವಿತರಣೆ ಹಾಗೂ ಶೇಖರಣೆ ಆರಂಭವಾಗುತ್ತದೆ. ಹಾರ್ಮೋನುಗಳು ಬದಲಾಗುತ್ತವೆ. ತೂಕ ಹೆಚ್ಚಾಗುವ ಸಾಧ್ಯತೆ ಹೆಚ್ಚುತ್ತದೆ. ಹದಿಹರೆಯದವರಲ್ಲಿ ತೂಕವು ಕ್ರಮೇಣ ಹೆಚ್ಚಾಗುತ್ತಿದ್ದರೆ ಚಿಂತಿಸಬೇಕಾಗಿಲ್ಲ. ಆದರೆ ಸಾಮಾನ್ಯ ತೂಕವು 18.5 ಮತ್ತು 24.9 ರ ನಡುವೆ BMI ಹೊಂದಿರಬೇಕು ಎಂಬುದು ನೆನಪಲ್ಲಿರಲಿ.

    20ರ ಹರೆಯದಲ್ಲಿ ಲೈಂಗಿಕ ಆಸಕ್ತಿ ಹೆ್ಚ್ಚುತ್ತದೆ:

    ಲೈಂಗಿಕ ಆಸಕ್ತಿ ಹೆ್ಚ್ಚುತ್ತದೆ. ಸಂತಾನೋತ್ಪತ್ತಿ ಮಾಡುವ ಜೈವಿಕ ಚಾಲನೆಯು ಈ ಸಮಯದಲ್ಲಿ ಪೂರ್ಣ ಪ್ರಮಾಣದಲ್ಲಿರುತ್ತದೆ. ಹೊಸ ಸಂಬಂಧದಲ್ಲಿ ಆಸೆ, ಆಸಕ್ತಿ ಉಂಟಾಗುತ್ತದೆ. 22ನೇ ವರ್ಷಕ್ಕೆ ಕಾಲಿಡುವ ಹೊತ್ತಿಗೆ, ನಿಮಗೆ ಮುಟ್ಟಿನ ಸಮಯದಲ್ಲಿ ಹೆಚ್ಚಿನ ನೋವು ಕಾಣಿಸಿಕೊಳ್ಳಬಹುದು. ಹೊಟ್ಟೆನೋವು, ಸೊಂಟ ನೋವು, ಕಾಲು ಹೀಗೆ ನೋವಿನ ಸೆಳೆತ ಹೆಚ್ಚುತ್ತದೆ.

    20ರ ಹರೆಯದಲ್ಲಿ ತೂಕ ನಿಯಂತ್ರಣ ಮಾರ್ಗೋಪಾಯ:

    20ರ ಹರೆಯದಲ್ಲಿ ಮೂಳೆಯ ಆರೋಗ್ಯ ಬಲಗೊಳ್ಳುತ್ತದೆ. 30ನೇ ವಯಸ್ಸನ್ನು ತಲುಪುವ ಹೊತ್ತಿಗೆ, ಮೂಳೆ ನಷ್ಟ ಅನುಭವಿಸಬಹುದು. ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಹೊಂದಿರುವ ಆಹಾರವನ್ನು ಸೇವಿಸಿ, ತೂಕ ನಿಯಂತ್ರಣ ಮಾರ್ಗೋಪಾಯ ಕಂಡುಕೊಳ್ಳಿ. ನಿಮ್ಮ ಮುಖ ತೆಳ್ಳಗಾಗುತ್ತದೆ. ಕೆನ್ನೆಯ ಸುತ್ತಲೂ ನೀವು ಹೊಂದಿದ್ದ "ಬೇಬಿ ಕೊಬ್ಬು" ಕಡಿಮೆಯಾಗುತ್ತದೆ. ವಯಸ್ಸಾದಂತೆ, ಸಬ್ಕ್ಯುಟೇನಿಯಸ್ ಕೊಬ್ಬು ಕಡಿಮೆಯಾಗುತ್ತದೆ.

    ಇದನ್ನೂ ಓದಿ: ಫ್ಯಾಷನ್ ಶೋ ಮಧ್ಯದಲ್ಲಿ ಪ್ರೇಕ್ಷಕನಿಗೆ ಕೋಟ್​ನಿಂದ ಹೊಡೆದ ಮಾಡೆಲ್​- ವೈರಲ್ ಆಯ್ತು ವಿಡಿಯೋ

    20ರ ಹರೆಯದಲ್ಲಿ ಯೋನಿಯ ಭಾಗ ಕುಗ್ಗುತ್ತದೆ:

    ಯೋನಿಯ ಭಾಗ ಕುಗ್ಗುತ್ತದೆ 20ರ ಹರೆಯದಲ್ಲಿ ಕೇವಲ ಮುಖ ಮಾತ್ರ ಸ್ವಲ್ಪ ಕುಗ್ಗುವಿಕೆಯನ್ನು ಅನುಭವಿಸುವುದಿಲ್ಲ, ಜೊತೆಗೆ ಯೋನಿಯ ಭಾಗ ಸಹ ಕುಗ್ಗುತ್ತವೆ. ಮೊಡವೆ, ಕಪ್ಪು ಕಲೆಗಳಾಗುತ್ತವೆ. 21 ರಿಂದ 30 ವರ್ಷ ವಯಸ್ಸಿನಲ್ಲಿ ಮೊಡವೆ ಹೆಚ್ಚಾಗುತ್ತವೆ. ಹಾರ್ಮೋನುಗಳ ಬದಲಾವಣೆ ಇದಕ್ಕೆ ಕಾರಣವಾಗುತ್ತದೆ. 20 ರ ಹರೆಯದ ಮಹಿಳೆಯರಿಗೆ ಮೇಕಪ್ ಕೂಡ ರಂಧ್ರಗಳನ್ನು ಮುಚ್ಚಿ ಮೊಡವೆಗಳನ್ನು ಕೆಡಿಸಬಹುದು.
    Published by:renukadariyannavar
    First published: