• Home
  • »
  • News
  • »
  • lifestyle
  • »
  • Thyroid Problem: ಥೈರಾಯ್ಡ್​ನಿಂದ ಬಿಡುಗಡೆ ಹೊಂದಲು ಈ ಸೂಪರ್​ ಫುಡ್​​ಗಳು ಸಹಕಾರಿ

Thyroid Problem: ಥೈರಾಯ್ಡ್​ನಿಂದ ಬಿಡುಗಡೆ ಹೊಂದಲು ಈ ಸೂಪರ್​ ಫುಡ್​​ಗಳು ಸಹಕಾರಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಥೈರಾಯ್ಡ್ ಸಮಸ್ಯೆ ನಿವಾರಿಸುವ ನೈಸರ್ಗಿಕ ಮತ್ತು ರಾಮಬಾಣವಾಗಿ ಕೆಲಸ ಮಾಡುವ ಕೆಲವು ಸೂಪರ್‌ ಫುಡ್‌ ಗಳ ಚೆಟಾಲಿ ಅವರು ಮಾಹಿತಿ ಶೇರ್ ಮಾಡಿದ್ದಾರೆ. ಈ ಸೂಪರ್‌ ಫುಡ್‌ ಗಳ ನಿಯಮಿತ ಸೇವನೆ ಹೈಪೋಥೈರಾಯ್ಡಿಸಮ್ ಮತ್ತು ಹೈಪರ್ ಥೈರಾಯ್ಡಿಸಮ್ ಸಮಸ್ಯೆ ನಿಯಂತ್ರಿಸಬಹುದು ಎಂದು ಅವರು ಹೇಳಿದ್ದಾರೆ.

ಮುಂದೆ ಓದಿ ...
  • Share this:

    ಥೈರಾಯ್ಡ್ ಸಮಸ್ಯೆ (Thyroid Problem) ಕಳಪೆ ಜೀವನಶೈಲಿಯ (Bad Lifestyle) ಪರಿಣಾಮ (Effect) ಆಗಿದೆ. ಈ ಸಮಸ್ಯೆ ಮಹಿಳೆಯರಲ್ಲಿ (Women’s) ಹೆಚ್ಚು ಸಾಮಾನ್ಯ ಆಗಿದೆ. ಈ ವೇಳೆ ದೇಹದಲ್ಲಿ (Body) ಹಾರ್ಮೋನುಗಳ ಮಟ್ಟ ಏರುಪೇರಾಗಲು ಶುರು ಆಗುತ್ತದೆ. ಥೈರಾಯ್ಡ್ ನಿಮ್ಮ ಕುತ್ತಿಗೆಯಲ್ಲಿರುವ ಚಿಟ್ಟೆ ಆಕಾರದ ಗ್ರಂಥಿ ಆಗಿದೆ. ಇದರಲ್ಲಿ ಅಸಮತೋಲನವು ತೂಕ ಹೆಚ್ಚಾಗುವುದು, ಗಂಟಲಿನ ಊತ, ಮೂಡ್ ಏರಿಳಿತ, ಕೂದಲು ಉದುರುವಿಕೆ, ದೌರ್ಬಲ್ಯ, ಕಿರಿಕಿರಿ, ನಿದ್ರಾಹೀನತೆ, ಕೋಪ, ಒಣ ಚರ್ಮ, ಶೀತ, ಖಿನ್ನತೆ ಸಮಸ್ಯೆ ಹೆಚ್ಚಿಸಲು ಅಥವಾ ಉಂಟು ಮಾಡಲು ಕಾರಣ ಆಗುತ್ತದೆ. ಆಯುರ್ವೇದ ತಜ್ಞ ಡಾ. ಚೆಟಾಲಿ ಇತ್ತೀಚೆಗೆ ತಮ್ಮ ಇನ್‌ ಸ್ಟಾಗ್ರಾಮ್‌ ನಲ್ಲಿ ಥೈರಾಯ್ಡ್ ಸಮಸ್ಯೆ ನಿವಾರಿಸುವ ಸಲಹೆ ಬಗ್ಗೆ ಹೇಳಿದ್ದಾರೆ.


    ಥೈರಾಯ್ಡ್ ಸಮಸ್ಯೆ ನಿವಾರಿಸುವ ಸೂಪರ್ ಫುಡ್ ಗಳು


    ನೈಸರ್ಗಿಕ ಮತ್ತು ರಾಮಬಾಣವಾಗಿ ಕೆಲಸ ಮಾಡುವ ಕೆಲವು ಸೂಪರ್‌ ಫುಡ್‌ ಗಳ ಚೆಟಾಲಿ ಅವರು ಮಾಹಿತಿ ಶೇರ್ ಮಾಡಿದ್ದಾರೆ. ಈ ಸೂಪರ್‌ ಫುಡ್‌ ಗಳ ನಿಯಮಿತ ಸೇವನೆ ಹೈಪೋಥೈರಾಯ್ಡಿಸಮ್ ಮತ್ತು ಹೈಪರ್ ಥೈರಾಯ್ಡಿಸಮ್ ಸಮಸ್ಯೆ ನಿಯಂತ್ರಿಸಬಹುದು ಎಂದು ಅವರು ಹೇಳಿದ್ದಾರೆ.


    ಹೈಪೋ ಮತ್ತು ಹೈಪರ್ ಥೈರಾಯ್ಡ್ ಎಂದರೇನು?


    ಟಿಎಸ್ ಎಚ್ ನ ಸಾಮಾನ್ಯ ವ್ಯಾಪ್ತಿಯು 0.4 ರಿಂದ 4.0 mIU/L ನಡುವೆ ಇರುತ್ತದೆ. ಆದರೆ ಅದರ ಮಟ್ಟವು 2.0 ಕ್ಕಿಂತ ಹೆಚ್ಚಿಗೆ ಇದ್ದರೆ, ಅದನ್ನು ಹೈಪೋಥೈರಾಯ್ಡಿಸಮ್ ಎಂದು ಕರೆಯುತ್ತಾರೆ. ಮತ್ತು ಅದರ ಮಟ್ಟವು ಕಡಿಮೆ ಇದ್ದರೆ ಅದನ್ನು ಹೈಪರ್ ಥೈರಾಯ್ಡಿಸಮ್ ಎಂದು ಕರೆಯುತ್ತಾರೆ. ಥೈರಾಯ್ಡ್ ಆರಂಭದಲ್ಲಿ ಪತ್ತೆ ಹಚ್ಚಿದರೆ ಈ ಸಮಸ್ಯೆಯನ್ನು ನಿಯಂತ್ರಿಸಬಹುದು ಮತ್ತು ಅದನ್ನು ತೊಡೆದು ಹಾಕಲು ಸಾಧ್ಯ.


    ಇದನ್ನೂ ಓದಿ: ರುಚಿಗೆ ಮಾತ್ರವಲ್ಲ, ಚರ್ಮದ ಆರೋಗ್ಯ ಮತ್ತು ತೂಕ ನಿಯಂತ್ರಣಕ್ಕೂ ಬೇಕು ಬಟಾಣಿ ಕಾಳು


    ಥೈರಾಯ್ಡ್ ಸಮಸ್ಯೆ ನಿವಾರಿಸುವ ಸೂಪರ್ ಫುಡ್ ಗಳು


    ಕುಂಬಳಕಾಯಿ ಬೀಜಗಳು


    ಕುಂಬಳಕಾಯಿ ಬೀಜಗಳು ಸತುವಿನ ಸಮೃದ್ಧ ಮೂಲ ಆಗಿದೆ. ಇದು ದೇಹವು ಇತರ ಜೀವಸತ್ವಗಳು ಮತ್ತು ಖನಿಜಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ದೇಹದಲ್ಲಿ ಥೈರಾಯ್ಡ್ ಹಾರ್ಮೋನುಗಳ ಸಂಶ್ಲೇಷಣೆ ಮತ್ತು ಸಮತೋಲನ ಉತ್ತೇಜಿಸಲು ಇದು ಮುಖ್ಯವಾಗಿ ಬೇಕು.


    ನೆಲ್ಲಿಕಾಯಿ


    ಬೆಟ್ಟದ ನೆಲ್ಲಿಕಾಯಿ ಕಿತ್ತಳೆ ಹಣ್ಣಿಗಿಂತ ಎಂಟು ಪಟ್ಟು ಹೆಚ್ಚು ವಿಟಮಿನ್ ಸಿ ಮತ್ತು ದಾಳಿಂಬೆ ಹಣ್ಣಿಗಿಂತ ಸುಮಾರು 17 ಪಟ್ಟು ಹೆಚ್ಚು ವಿಟಮಿನ್ ಸಿ ಅನ್ನು ಹೊಂದಿದೆ. ಬೆಟ್ಟದ ನೆಲ್ಲಿಕಾಯಿ ಕೂದಲನ್ನು ಆರೋಗ್ಯವಾಗಿಸಲು ಕೆಲಸ ಮಾಡುತ್ತದೆ. ಮತ್ತು ನೆತ್ತಿಯ ರಕ್ತ ಪರಿಚಲನೆ ಹೆಚ್ಚಿಸಲು ಸಹಕಾರಿ ಆಗಿದೆ. ಅಲ್ಲದೆ ಥೈರಾಯ್ಡ್ ಹಾರ್ಮೋನುಗಳ ಉತ್ಪಾದನೆ ನಿಯಂತ್ರಿಸುವಲ್ಲಿ ಬೆಟ್ಟದ ನೆಲ್ಲಿಕಾಯಿ ಪರಿಣಾಮಕಾರಿ ಆಗಿದೆ.


    ಹೆಸರು ಬೇಳೆ


    ಹೆಸರು ಬೇಳೆ ಪ್ರೋಟೀನ್, ಉತ್ಕರ್ಷಣ ನಿರೋಧಕ, ಸಂಕೀರ್ಣ ಕಾರ್ಬೋಹೈಡ್ರೇಟ್ ಮತ್ತು ವಿಟಮಿನ್ ಮತ್ತು ಖನಿಜಗಳಲ್ಲಿ ಸಮೃದ್ಧ ಆಗಿದೆ. ಹೆಸರು ಬೇಳೆ ಫೈಬರ್ ಮತ್ತು ಅಯೋಡಿನ್ ನ್ನು ಹೊಂದಿದೆ. ಇದು ಮಲಬದ್ಧತೆ ಮತ್ತು ಥೈರಾಯ್ಡ್‌ ನ ಸಾಮಾನ್ಯ ರೋಗ ಲಕ್ಷಣ ನಿವಾರಿಸಲು ಪ್ರಯೋಜನಕಾರಿ ಆಗಿದೆ. ಇದು ಕಡಿಮೆ ಚಯಾಪಚಯ ದರದ ಪರಿಣಾಮ ಸಹ ತೆಗೆದು ಹಾಕುತ್ತದೆ.


    ಥೈರಾಯ್ಡ್ ಗ್ರಂಥಿ ಪುರುಷರು ಮತ್ತು ಮಹಿಳೆಯರ ಕುತ್ತಿಗೆಯಲ್ಲಿ ಇರುವ ದೊಡ್ಡ ಗ್ರಂಥಿ. ಇದು ಅಂತಃಸ್ರಾವಕ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮಾನವ ದೇಹದ ವಯಸ್ಸಾದ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಥೈರಾಯ್ಡ್ ಗ್ರಂಥಿಯಿಂದ ಸ್ರವಿಸುವ ಹಾರ್ಮೋನುಗಳು ಚಯಾಪಚಯ ನಿಯಂತ್ರಿಸುತ್ತವೆ.


    ಹೈಪೋಥೈರಾಯ್ಡಿಸಮ್ ಹೈಪರ್ ಥೈರಾಯ್ಡಿಸಮ್ಗಿಂತ ಹೆಚ್ಚು ಆಕ್ರಮಣಕಾರಿ. 50 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಮಹಿಳೆಯರಲ್ಲಿ ಪರಿಣಾಮ ಬೀರುತ್ತದೆ. ಇದು ಥೈರಾಕ್ಸಿನ್‌ನ ಕಡಿಮೆ ಉತ್ಪಾದಕತೆ ಮತ್ತು ನಿದ್ರಾಹೀನತೆ, ಆಯಾಸ, ಮಲಬದ್ಧತೆ, ಜೀರ್ಣಕಾರಿ ಅಸ್ವಸ್ಥತೆ ಉಂಟು ಮಾಡುತ್ತದೆ.


    ಇದನ್ನೂ ಓದಿ: ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳಕ್ಕೆ ಯಾವ ಅಂಶಗಳು ಮುಖ್ಯ ಕಾರಣವಾಗಿವೆ?


    ಥೈರಾಕ್ಸಿನ್ ಅಧಿಕ ಉತ್ಪಾದನೆ


    ಹೈಪರ್ ಥೈರಾಯ್ಡಿಸಮ್ ಮಹಿಳೆಯರಲ್ಲಿ ಒಂದು ಪ್ರತಿಶತಕ್ಕಿಂತ ಕಡಿಮೆ ಮತ್ತು ಪುರುಷರಿಗಿಂತ ಕಡಿಮೆ ಇರುವುದು ಕಂಡು ಬರುತ್ತದೆ. ಹಠಾತ್ ತೂಕ ನಷ್ಟ, ಅನಿಯಮಿತ ಮುಟ್ಟು, ಚರ್ಮ, ಉಗುರು ಮತ್ತು ಕೂದಲು ತೆಳುವಾಗುವುದು ಹೈಪರ್ ಥೈರಾಯ್ಡಿಸಮ್‌ನ ಲಕ್ಷಣಗಳಾಗಿವೆ.

    Published by:renukadariyannavar
    First published: