Weight Loss: ಥೈರಾಯ್ಡ್ ರೋಗಿಗಳು ತೂಕ ಇಳಿಸಿಕೊಳ್ಳಲು ಈ ಆಹಾರ ಸೇವಿಸಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಥೈರಾಯ್ಡ್ ಕಾಯಿಲೆಯ ಲಕ್ಷಣಗಳಿಂದಾಗಿ ಇದನ್ನು ಆಡುಮಾತಿನಲ್ಲಿ ದಪ್ಪ ಥೈರಾಯ್ಡ್ ಮತ್ತು ತೆಳು ಥೈರಾಯ್ಡ್ ಎಂದು ಕರೆಯುತ್ತಾರೆ. ಥೈರಾಯ್ಡ್ ಗ್ರಂಥಿಯು ಸಾಕಷ್ಟು ಹಾರ್ಮೋನುಗಳನ್ನು ಉತ್ಪಾದನೆ ಮಾಡದೇ ಹೋದಾಗ ತ್ವರಿತ ತೂಕ ಹೆಚ್ಚಾಗುತ್ತದೆ.

  • Share this:

    ತೂಕ ಹೆಚ್ಚಳಕ್ಕೆ (Weight Gain) ಹಲವು ಕಾರಣಗಳಿವೆ. ಅದರಲ್ಲಿ ಅನಾರೋಗ್ಯ ಹಾಗೂ ಕೆಲವು ಕಾಯಿಲೆಗಳ ಸಮಸ್ಯೆ (Disease Problem) ಕೂಡ ಒಂದು. ಅದರಲ್ಲೂ ಥೈರಾಯ್ಡ್ (Thyroid) ಸಮಸ್ಯೆ ಹಲವರನ್ನು ಇತ್ತೀಚಿನ ದಿನಗಳಲ್ಲಿ ಬಾಧಿಸುತ್ತಿದೆ. ಈ ಥೈರಾಯ್ಡ್ ಸಮಸ್ಯೆಯು ತೂಕ ಹೆಚ್ಚಳ ಮತ್ತು ತೂಕ ಕಡಿಮೆಯಾಗಲು (Weight Loss) ಕಾರಣವಾಗುತ್ತದೆ ಅಂತಾರೆ ತಜ್ಞರು. ಅಂದ ಹಾಗೇ ಥೈರಾಯ್ಡ್ ಕುತ್ತಿಗೆಯಲ್ಲಿ ಇರುವ ಒಂದು ಗ್ರಂಥಿ ಎಂಬುದು ಎಲ್ಲರಿಗೂ ತಿಳಿದ ವಿಷಯ. ದೇಹದ ಸರಿಯಾದ ಕಾರ್ಯ ನಿರ್ವಹಣೆಗೆ ಅಗತ್ಯ ಹಾರ್ಮೋನುಗಳನ್ನು ಉತ್ಪಾದಿಸಲು ಥೈರಾಯ್ಡ್ ಕೆಲಸ ಮಾಡುತ್ತದೆ. ಆದರೆ ಥೈರಾಯ್ಡ್ ಗ್ರಂಥಿಯಲ್ಲಿನ ಅಡಚಣೆಯು ಥೈರಾಯ್ಡ್ ಹಾರ್ಮೋನುಗಳನ್ನು ಕಡಿಮೆ ಅಥವಾ ಹೆಚ್ಚು ಪ್ರಮಾಣದಲ್ಲಿ ಉತ್ಪಾದಿಸಲು ಕಾರಣವಾಗುತ್ತದೆ.


    ಥೈರಾಯ್ಡ್ ಕಾಯಿಲೆ ಮತ್ತು ತೂಕ ಇಳಿಕೆ


    ಹೀಗಾಗಿ ಇದನ್ನು ಥೈರಾಯ್ಡ್ ಕಾಯಿಲೆ ಎಂದು ಕರೆಯುತ್ತಾರೆ. ಥೈರಾಯ್ಡ್ ಗ್ರಂಥಿಯಲ್ಲಿ ಮುಖ್ಯವಾಗಿ ಎರಡು ವಿಧದಲ್ಲಿದೆ. ಹೈಪೋಥೈರಾಯ್ಡಿಸಮ್ ಮತ್ತು ಹೈಪರ್ ಥೈರಾಯ್ಡಿಸಮ್. ಥೈರಾಯ್ಡ್ ಕಾಯಿಲೆಯ ಲಕ್ಷಣಗಳಿಂದಾಗಿ ಇದನ್ನು ಆಡುಮಾತಿನಲ್ಲಿ ದಪ್ಪ ಥೈರಾಯ್ಡ್ ಮತ್ತು ತೆಳು ಥೈರಾಯ್ಡ್ ಎಂದು ಕರೆಯುತ್ತಾರೆ.


    ಥೈರಾಯ್ಡ್ ಗ್ರಂಥಿಯು ಸಾಕಷ್ಟು ಹಾರ್ಮೋನುಗಳನ್ನು ಉತ್ಪಾದನೆ ಮಾಡದೇ ಹೋದಾಗ ತ್ವರಿತ ತೂಕ ಹೆಚ್ಚಾಗುತ್ತದೆ. ಇದನ್ನು ಹೈಪೋಥೈರಾಯ್ಡಿಸಮ್ ಎಂದು ಹೇಳುತ್ತಾರೆ. ಹೈಪೋಥೈರಾಯ್ಡಿಸಮ್ ಇದು ಮಕ್ಕಳು ಸೇರಿದಂತೆ ಎಲ್ಲಾ ವಯಸ್ಸಿನ ಜನರ ಮೇಲೆ ಪರಿಣಾಮ ಬೀರುತ್ತದೆ.




    ಇಂದು ನಾವು ಈ ಹೈಪೋಥೈರಾಯ್ಡಿಸಮ್ ಅನ್ನು ಕಡಿಮೆ ಮಾಡುವ ಮತ್ತು ತೂಕ ನಷ್ಟಕ್ಕೆ ಸಹಕಾರಿಯಾಗುವ ಕೆಲವು ಪರಿಣಾಮಕಾರಿ ಆಹಾರ ಪದಾರ್ಥಗಳ ಬಗ್ಗೆ ತಿಳಿಯೋಣ.


    ಬೀಜಗಳು


    ಒಂದು ವರದಿ ಪ್ರಕಾರ, ಬೀಜಗಳ ಸೇವನೆ ತೂಕ ನಷ್ಟಕ್ಕೆ ಪ್ರಯೋಜನಕಾರಿ. ಒಣ ಹಣ್ಣುಗಳು ಸೆಲೆನಿಯಮ್ ಮತ್ತು ಸತು ಹೊಂದಿವೆ. ವಿಶೇಷವಾಗಿ ಬ್ರೆಜಿಲ್ ಬೀಜಗಳು ಸೆಲೆನಿಯಮ್‌ ಹೊಂದಿವೆ. ಇದು ಥೈರಾಯ್ಡ್ ಕಾರ್ಯ ಚಟುವಟಿಕೆಗೆ ಸಹಾಯ ಮಾಡುತ್ತದೆ. ಚಿಯಾ ಬೀಜ, ಕುಂಬಳಕಾಯಿ ಬೀಜಗಳಲ್ಲಿ ಸತು ಇದೆ. ಇದು ತೂಕ ನಷ್ಟಕ್ಕೆ ಸಹಕಾರಿ ಆಗಿದೆ.


    ಥೈರಾಯ್ಡ್‌ ಇದ್ದಾಗ ತ್ವರಿತ ತೂಕ ನಷ್ಟಕ್ಕೆ ಯಾವ ಪದಾರ್ಥ ಸೇವಿಸಬೇಕು? ಬೀನ್ಸ್


    ಪ್ರೊಟೀನ್ ಸಮೃದ್ಧ ಬೀನ್ಸ್ ಮತ್ತು ಬೇಳೆ ಕಾಳುಗಳು ಥೈರಾಯ್ಡ್ ರೋಗಿಗಳಿಗೆ ಪ್ರಯೋಜನ ನೀಡುತ್ತವೆ. ಇದು ಚಯಾಪಚಯ ಸುಧಾರಿಸಲು ಸಹಾಯ ಮಾಡುತ್ತದೆ. ಇದು ತೂಕ ನಷ್ಟದ ಪ್ರಕ್ರಿಯೆ ವೇಗವಾಗಿಸಲು ಸಹಕಾರಿ.


    ತೂಕ ನಷ್ಟಕ್ಕೆ ಮೊಟ್ಟೆ ಸೇವನೆ ಮಾಡಿ


    ಅಧ್ಯಯನವೊಂದರ ಪ್ರಕಾರ, ಸ್ಥೂಲಕಾಯ ಸಮಸ್ಯೆ ಹೆಚ್ಚಿಸಲು ಹಲವು ಪದಾರ್ಥಗಳು ಕಾರಣವಾಗಿವೆ. ಅಂತಹ ಪದಾರ್ಥಗಳನ್ನು ಬದಿಗಿರಿಸಿ, ಉತ್ತಮ ತೂಕ ಕಾಪಾಡಿಕೊಳ್ಳಲು ಮೊಟ್ಟೆ ಸೇವನೆ ಮಾಡಿ.


    ಸಾಂದರ್ಭಿಕ ಚಿತ್ರ


    ಥೈರಾಯ್ಡ್‌ ಸಮಸ್ಯೆ ಕಡಿಮೆ ಮಾಡಲು ಮತ್ತು ಸೂಕ್ತ ತೂಕ ಕಾಪಾಡಿಕೊಳ್ಳಲು ಮೊಟ್ಟೆ ಸೇವನೆ ಉತ್ತಮ ಆಯ್ಕೆ ಆಗಿದೆ. ಅದರ ಹಳದಿ ಲೋಳೆ ಬಹಳಷ್ಟು ಸತು, ಸೆಲೆನಿಯಮ್ ಮತ್ತು ಪ್ರೋಟೀನ್ ಹೊಂದಿದೆ. ಇದು ಥೈರಾಯ್ಡ್ ಕಾರ್ಯ ಸುಧಾರಿಸುತ್ತದೆ. ಹಾಗೂ ತೂಕ ನಷ್ಟಕ್ಕೆ ಸಹಕಾರಿ.


    ಹಸಿರು ತರಕಾರಿ ಸೇವನೆ ಮಾಡಿ


    ಹಸಿರು ತರಕಾರಿಗಳು ವಿಟಮಿನ್ ಸಿ, ಪ್ರೋಟೀನ್, ಫೈಬರ್ ಮತ್ತು ಉತ್ಕರ್ಷಣ ನಿರೋಧಕ ಹೊಂದಿವೆ. ಇವುಗಳು ಥೈರಾಯ್ಡ್ ಕಾರ್ಯ ಸುಧಾರಿಸುತ್ತವೆ. ಇದು ತೂಕ ಹೆಚ್ಚಳ ನಿಯಂತ್ರಿಸುತ್ತದೆ. ಟೊಮೆಟೊ, ಕ್ಯಾಪ್ಸಿಕಂ, ಮೂಲಂಗಿ, ಎಲೆಕೋಸು, ಹಸಿರು ಎಲೆಗಳ ತರಕಾರಿಗಳು ಪ್ರಯೋಜನ ನೀಡುತ್ತದೆ.


    ಸಾಕಷ್ಟು ನೀರು ಕುಡಿಯಿರಿ


    ಅಧಿಕ ಕೆಫೀನ್ ಸೇವನೆಯು ಸ್ಥೂಲಕಾಯ ಸಮಸ್ಯೆ ಉಂಟು ಮಾಡುತ್ತದೆ. ಹಾಗಾಗಿ ಥೈರಾಯ್ಡ್ ಔಷಧದ ಜೊತೆ ಕೆಫೀನ್ ಸೇವನೆ ಮಾಡಿದರೆ ಅದು ಅನಾರೋಗ್ಯ ಉಂಟು ಮಾಡುತ್ತದೆ.


    ಇದನ್ನೂ ಓದಿ: ಬೆಳಗ್ಗಿನ ತಿಂಡಿಗೆ ತಯಾರಿಸಿ ವೆಜ್ ಪರೋಟ, ಸಲಾಡ್, ಇಲ್ಲಿದೆ ರೆಸಿಪಿ!


    ತೂಕ ನಷ್ಟಕ್ಕೆ ಕೆಫೀನ್ ಮುಕ್ತ ಪಾನೀಯ ಸೇವನೆ ಅಂದರೆ ನೀರು ಹೆಚ್ಚು ಕುಡಿಯುವುದು ತೂಕ ನಷ್ಟಕ್ಕೆ ಸಹಕಾರಿ ಆಗಿದೆ. ಇದು ಉರಿಯೂತ, ಹಾರ್ಮೋನು ನಿಯಂತ್ರಣಕ್ಕೆ ಸಹಕಾರಿ. ದೇಹದಿಂದ ವಿಷ ತೆಗೆದು ಹಾಕುತ್ತದೆ.

    Published by:renukadariyannavar
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು