Thyroid Problem: ಥೈರಾಯ್ಡ್ ಕಾಯಿಲೆಯ ಅಪಾಯ ಕಡಿಮೆ ಮಾಡಲು ಯಾವ ಪದಾರ್ಥಗಳ ಸೇವನೆ ಉತ್ತಮ?

ನೀವು ಯಾವಾಗಲೂ ಆತಂಕ, ಉದ್ವಿಗ್ನತೆ ಅಥವಾ ಕಿರಿಕಿರಿ ಅನುಭವಿಸುತ್ತಿದ್ದರೆ, ಅನಗತ್ಯವಾಗಿ ತೂಕ ಕಳೆದುಕೊಳ್ಳುತ್ತಿದ್ದರೆ, ಯಾವಾಗಲೂ ಆಯಾಸ ಮತ್ತು ದುರ್ಬಲತೆ ಅನುಭವಿಸುತ್ತಿದ್ದರೆ ನೀವು ಥೈರಾಯ್ಡ್ ಕಾಯಿಲೆಯ ಅಪಾಯ ಎದುರಿಸುತ್ತಿದ್ದೀರಿ ಎಂಬುದರಲ್ಲಿ ಆಶ್ಚರ್ಯವಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಅನಾರೋಗ್ಯಕರ ಆಹಾರ (Unhealthy Food), ನಿಷ್ಕ್ರಿಯ ಜೀವನಶೈಲಿ (Bad Lifestyle) ಮತ್ತು ಒತ್ತಡ (Stress) ಇದೆಲ್ಲವೂ ಕಾಯಿಲೆಯ (Disease) ಪ್ರಮುಖ ಲಕ್ಷಣಗಳು ಮತ್ತು ಕಾರಣಗಳು ಆಗಿರುತ್ತವೆ. ಹಲವು ಕಾಯಿಲೆಗಳಿಂದ ಜನರು ಬಳಲಲು ಕಾರಣ ಆಹಾರ ಕ್ರಮ ಮತ್ತು ಜೀವನಶೈಲಿ. ಜನರು ಇತ್ತೀಚಿನ ದಿನಗಳಲ್ಲಿ ಥೈರಾಯ್ಡ್ ಸಮಸ್ಯೆಯನ್ನು ಹೆಚ್ಚು ಎದುರಿಸುತ್ತಿದ್ದಾರೆ. ಆರೋಗ್ಯವಾಗಿರಲು ಥೈರಾಯ್ಡ್ ಹಾರ್ಮೋನ್ ಅನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ತುಂಬಾ ಮುಖ್ಯ. ಜನರು ಅದನ್ನು ನಿಯಂತ್ರಣದಲ್ಲಿಡಲು ವಿವಿಧ ರೀತಿಯ ಔಷಧಿ ಸೇವನೆ ಮಾಡುತ್ತಾರೆ. ಆದರೆ ಆರೋಗ್ಯಕರ ಆಹಾರ ಪದ್ಧತಿಯಿಂದ ಥೈರಾಯ್ಡ್ ಕಾಯಿಲೆಯನ್ನು ನಿಯಂತ್ರಿಸಬಹುದು. ಅಂತಹ ವೇಳೆ ನೀವು ಥೈರಾಯ್ಡ್ ಅನ್ನು ಹೇಗೆ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು ಎಂದು ಇಲ್ಲಿ ತಿಳಿಯಿರಿ.

    ಥೈರಾಯ್ಡ್ ಕಾಯಿಲೆಯ ಅಪಾಯ

    ನೀವು ಯಾವಾಗಲೂ ಆತಂಕ, ಉದ್ವಿಗ್ನತೆ ಅಥವಾ ಕಿರಿಕಿರಿ ಅನುಭವಿಸುತ್ತಿದ್ದರೆ, ಅನಗತ್ಯವಾಗಿ ತೂಕ ಕಳೆದುಕೊಳ್ಳುತ್ತಿದ್ದರೆ, ಯಾವಾಗಲೂ ಆಯಾಸ ಮತ್ತು ದುರ್ಬಲತೆ ಅನುಭವಿಸುತ್ತಿದ್ದರೆ ಇಷ್ಟೆಲ್ಲಾ ಸಮಸ್ಯೆಗಳು ನಿಮ್ಮನ್ನು ಕಾಡುತ್ತಿದ್ದರೆ, ನೀವು ಥೈರಾಯ್ಡ್ ಕಾಯಿಲೆಯ ಅಪಾಯ ಎದುರಿಸುತ್ತಿದ್ದೀರಿ ಎಂಬುದರಲ್ಲಿ ಆಶ್ಚರ್ಯವಿಲ್ಲ.

    ಥೈರಾಯ್ಡ್ ಕುತ್ತಿಗೆಯಲ್ಲಿರುವ ಗ್ರಂಥಿಯಾಗಿದೆ. ಥೈರಾಯ್ಡ್ ಎಂಬ ಹಾರ್ಮೋನ್ ಅನ್ನು ಉತ್ಪಾದಿಸುವುದು ಮತ್ತು ನಿಯಂತ್ರಿಸುವುದು ಇದರ ಕೆಲಸ. ದೇಹದ ಉತ್ತಮ ಕಾರ್ಯ ನಿರ್ವಹಣೆಗೆ ಈ ಹಾರ್ಮೋನ್ ಅತ್ಯಗತ್ಯ. ಥೈರಾಯ್ಡ್ ಕಾಯಿಲೆಯು ಅದರ ಅಸಮರ್ಪಕ ಕಾರ್ಯದಿಂದಾಗಿ ಸಂಭವಿಸುತ್ತದೆ. ದೇಹದಲ್ಲಿ ಥೈರಾಯ್ಡ್ ಹಾರ್ಮೋನ್ ಹೆಚ್ಚಳ ಮತ್ತು ಇಳಿಕೆ ಎರಡೂ ಹಾನಿಕಾರಕ.

    ಇದನ್ನೂ ಓದಿ: ಸಿಗರೇಟ್ ಸೇದುವುದರಿಂದ ಕೂದಲು ಉದುರುತ್ತವೆಯೇ? ಪೌಷ್ಟಿಕ ತಜ್ಞರು ಹೇಳಿದ್ದೇನು?

    ಹೈಪರ್ ಥೈರಾಯ್ಡಿಸಮ್

    ಥೈರಾಯ್ಡ್ ಗ್ರಂಥಿಯು ಹೆಚ್ಚು ಥೈರಾಯ್ಡ್ ಹಾರ್ಮೋನ್ ಅನ್ನು ಉತ್ಪಾದಿಸಿದಾಗ, ನಿಮ್ಮ ದೇಹವು ಬೇಗನೆ ಶಕ್ತಿ ಬಳಸುತ್ತದೆ. ಇದನ್ನು ಹೈಪರ್ ಥೈರಾಯ್ಡಿಸಮ್ ಎಂದು ಕರೆಯುತ್ತಾರೆ. ಶಕ್ತಿಯ ಅತಿಯಾದ ಬಳಕೆಯು ನಿಮಗೆ ದಣಿವು, ಹೃದಯ ಬಡಿತ, ತೂಕ ನಷ್ಟ ಮತ್ತು ಹೆದರಿಕೆ ಉಂಟು ಮಾಡುತ್ತದೆ.

    ಹೈಪೋಥೈರಾಯ್ಡಿಸಮ್

    ನಿಮ್ಮ ಥೈರಾಯ್ಡ್, ಥೈರಾಯ್ಡ್ ಹಾರ್ಮೋನ್ ಅನ್ನು ಕಡಿಮೆ ಮಾಡಿದಾಗ, ಅದನ್ನು ಹೈಪೋಥೈರಾಯ್ಡಿಸಮ್ ಎಂದು ಕರೆಯುತ್ತಾರೆ. ನಿಮ್ಮ ದೇಹದಲ್ಲಿ ತುಂಬಾ ಕಡಿಮೆ ಥೈರಾಯ್ಡ್ ಹಾರ್ಮೋನ್ ಇದ್ದಾಗ, ಅದು ನಿಮಗೆ ಆಯಾಸ ಉಂಟು ಮಾಡುತ್ತದೆ. ನೀವು ತೂಕ ಹೆಚ್ಚಿಸಬಹುದು ಮತ್ತು ಶೀತ ತಾಪಮಾನ ಸಹಿಸಿಕೊಳ್ಳಲು ನಿಮಗೆ ಸಾಧ್ಯವಾಗದೇ ಇರಬಹುದು.

    ಅಮೆರಿಕದ ಖ್ಯಾತ ವೈದ್ಯ ಡಾ. ಜೋಶ್ ಆಕ್ಸ್ ಥೈರಾಯ್ಡ್‌ಗೆ ಕೆಲವು ನೈಸರ್ಗಿಕ ಪರಿಹಾರ ಕ್ರಮಗಳನ್ನು ಹಂಚಿಕೊಂಡಿದ್ದಾರೆ. ಥೈರಾಯ್ಡ್ ಕಾರ್ಯ ಸುಧಾರಿಸುವಾಗ ಈ ಪರಿಹಾರಗಳು ಸುರಕ್ಷಿತ. ಆರೋಗ್ಯಕರ ಮತ್ತು ಪರಿಣಾಮಕಾರಿ ಎಂದು ಅವರು ಹೇಳುತ್ತಾರೆ.

    ಅಶ್ವಗಂಧ ಸೇವಿಸಿ

    ಥೈರಾಯ್ಡ್ ಚಿಕಿತ್ಸೆಯಲ್ಲಿ ಅಶ್ವಗಂಧ ಬಹಳ ಪರಿಣಾಮಕಾರಿ ಎಂದು ವೈದ್ಯರು ನಂಬುತ್ತಾರೆ. ಇದು ಹೈಪೋಥೈರಾಯ್ಡಿಸಮ್ ಹೊಂದಿರುವ ಜನರಲ್ಲಿ ಥೈರಾಯ್ಡ್ ಮಟ್ಟ ಕಡಿಮೆ ಮಾಡಲು ಮತ್ತು ಸುಧಾರಿಸಲು ಸಹಕಾರಿ ಆಗಿದೆ.

    ಪ್ರೋಬಯಾಟಿಕ್

    ಥೈರಾಯ್ಡ್ ಸಮಸ್ಯೆ ತಪ್ಪಿಸಲು ಅಥವಾ ನಿಯಂತ್ರಿಸಲು, ನಿಮ್ಮ ಆಹಾರದಲ್ಲಿ ಪ್ರೋಬಯಾಟಿಕ್‌ಗಳಲ್ಲಿ ಸಮೃದ್ಧವಾಗಿರುವ ಆಹಾರ ಪದಾರ್ಥಗಳ ಸೇವನೆ ಮಾಡಿ. ಈ ವಸ್ತುಗಳು ಡೈರಿ ಉತ್ಪನ್ನಗಳನ್ನು ಒಳಗೊಂಡಿವೆ.

    ಥಯಾಮಿನ್ ಮತ್ತು ವಿಟಮಿನ್ ಬಿ

    ನಿಮ್ಮ ಆಹಾರದಲ್ಲಿ ಥಯಾಮಿನ್ ಮತ್ತು ವಿಟಮಿನ್ ಬಿ 12 ಸಮೃದ್ಧವಾಗಿರುವ ಹೆಚ್ಚಿನ ಆಹಾರ ಪದಾರ್ಥಗಳನ್ನು ಸೇರಿಸಿ. ಇದು ಹಾರ್ಮೋನುಗಳನ್ನು ಸಮತೋಲನಗೊಳಿಸುವ ಮೂಲಕ ನಿಮ್ಮ ಥೈರಾಯ್ಡ್ ಕಾರ್ಯ ನಿರ್ವಹಣೆಯನ್ನು ಸುಧಾರಿಸುತ್ತದೆ.

    ಸೆಲೆನಿಯಂ ಭರಿತ ಪದಾರ್ಥ

    ನಿಮ್ಮ ಆಹಾರದಲ್ಲಿ ಯೆಲ್ಲೋಫಿನ್ ಟ್ಯೂನ, ದನದ ಯಕೃತ್ತು, ಮೊಟ್ಟೆಗಳು ಮುಂತಾದ ಸೆಲೆನಿಯಮ್ ಭರಿತ ವಸ್ತುಗಳ ಸೇವನೆ ಮಾಡಿ. ಸೆಲೆನಿಯಮ್ ನಿಮ್ಮ ದೇಹದ ಹಾರ್ಮೋನುಗಳೊಂದಿಗೆ ನಿಮ್ಮ T4 ಅನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.

    ಇದನ್ನೂ ಓದಿ: ಹೇಗಪ್ಪಾ ತೂಕ ಇಳಿಸೋದು ಎಂಬ ಚಿಂತೆನಾ? ಹಾಗಿದ್ರೆ ತಜ್ಞರು ಹೇಳಿರುವ ಈ ಟಿಪ್ಸ್ ಫಾಲೋ ಮಾಡಿ

    ಆಸ್ಟ್ರಾಗಲಸ್

    ಆಸ್ಟ್ರಾಗಲಸ್ ಒಂದು ರೀತಿಯ ತರಕಾರಿ. ಇದು ಥೈರಾಯ್ಡ್ ಉರಿಯೂತ ಕಡಿಮೆ ಮಾಡುತ್ತದೆ. ಇದು ಜೀರ್ಣಕ್ರಿಯೆ ಸರಿಯಾಗಿಡುತ್ತದೆ. ಥೈರಾಯ್ಡ್ ಅನ್ನು ನಿಯಂತ್ರಣದಲ್ಲಿಡಲು ನೀವು ಈ ಮೂಲಿಕೆ ಸೇವಿಸಬೇಕು.
    Published by:renukadariyannavar
    First published: