Thyroid Day: ಹೃದಯ ಬಡಿತದಲ್ಲಿ ಬದಲಾವಣೆ ಅನುಭವ ಆಗ್ತಿದ್ಯಾ? ಥೈರಾಯ್ಡ್ ಲಕ್ಷಣಗಳಲ್ಲಿ ಇದೂ ಒಂದು

ಥೈರಾಯ್ಡ್ ಗ್ರಂಥಿಯು ಗಂಟಲಿನ ಮುಂಭಾಗದಲ್ಲಿರುವ ಚಿಟ್ಟೆಯ ಆಕಾರದ ಗ್ರಂಥಿ ಆಗಿದೆ. ಇದು ಹಾರ್ಮೋನ್ ಅನ್ನು ಉತ್ಪಾದನೆ ಮಾಡುತ್ತದೆ. ಅದರ ಸಹಾಯದಿಂದ ಚಯಾಪಚಯ ಪ್ರಕ್ರಿಯೆಯನ್ನು ನಿಯಂತ್ರಣದಲ್ಲಿ ಇಡಲಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಇಂದು ವಿಶ್ವ ಥೈರಾಯ್ಡ್ ದಿನ 2022 (World Thyroid Day). ಪ್ರತಿ ವರ್ಷ ಮೇ 25 ನ್ನು ವಿಶ್ವ ಥೈರಾಯ್ಡ್ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಪ್ರಪಂಚದಾದ್ಯಂತ ಸಾಕಷ್ಟು ಜನ ಥೈರಾಯ್ಡ್ ರೋಗಿಗಳು (Patients) ಇದ್ದಾರೆ. ಹಾಗಾಗಿ ವಿಶ್ವ ಥೈರಾಯ್ಡ್ ದಿನದಂದು ಸಾಕಷ್ಟು ಜಾಗೃತಿ ಮೂಡಿಸಲಾಗುತ್ತದೆ. ಈ ದಿನವನ್ನು ಆಚರಿಸುವ ಉದ್ದೇಶವು ಜನರಿಗೆ ಥೈರಾಯ್ಡ್ ಬಗ್ಗೆ ಅರಿವು (Awareness) ಮೂಡಿಸುವುದು ಆಗಿದೆ. ಥೈರಾಯ್ಡ್ ಗ್ರಂಥಿಯು ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗದ ಅಸಮರ್ಥತೆ ಸ್ಥಿತಿ ಉಂಟಾದಾಗ ಥೈರಾಯ್ಡ್ ಸಮಸ್ಯೆ ಉಂಟಾಗುತ್ತದೆ. ಥೈರಾಯ್ಡ್ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಕಂಡು ಬರುತ್ತಿವೆ. ವಿಶೇಷವಾಗಿ 60 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಲ್ಲಿ ಥೈರಾಯ್ಡ್ ಸಮಸ್ಯೆ ಹೆಚ್ಚಿದೆ.

    ಥೈರಾಯ್ಡ್ ಗ್ರಂಥಿಯು ಗಂಟಲಿನ ಮುಂಭಾಗದಲ್ಲಿರುವ ಚಿಟ್ಟೆಯ ಆಕಾರದ ಗ್ರಂಥಿ ಆಗಿದೆ. ಇದು ಹಾರ್ಮೋನ್ ಅನ್ನು ಉತ್ಪಾದನೆ ಮಾಡುತ್ತದೆ. ಅದರ ಸಹಾಯದಿಂದ ಚಯಾಪಚಯ ಪ್ರಕ್ರಿಯೆಯನ್ನು ನಿಯಂತ್ರಣದಲ್ಲಿ ಇಡಲಾಗುತ್ತದೆ. ಹಾರ್ಮೋನ್‌ಗಳ ಮಟ್ಟವು ತುಂಬಾ ಕಡಿಮೆಯಾದಾಗ ಅಥವಾ ತುಂಬಾ ಹೆಚ್ಚಾದಾಗ ದೇಹದಲ್ಲಿ ಹಲವು ರೀತಿಯ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

    ಅತಿಯಾದ ತೂಕ ಹೆಚ್ಚಾಗುವಿಕೆ ಮತ್ತು ತೂಕ ಕಳೆದುಕೊಳ್ಳುವಿಕೆ

    ತೂಕದಲ್ಲಿ ಉಂಟಾಗುವ ಬದಲಾವಣೆಯು ಥೈರಾಯ್ಡ್ ಅಸ್ವಸ್ಥತೆಯ ಸಾಮಾನ್ಯ ಲಕ್ಷಣಗಳಲ್ಲಿ ಒಂದು. ತೂಕ ಹೆಚ್ಚಾಗುವುದು ಮತ್ತು ಕಡಿಮೆ ಆಗುವುದು ಥೈರಾಯ್ಡ್ ಹಾರ್ಮೋನ್ ಅನ್ನು ಸೂಚಿಸುತ್ತದೆ, ಇದನ್ನು ಹೈಪೋಥೈರಾಯ್ಡಿಸಮ್ ಎಂದು ಕರೆಯುತ್ತಾರೆ.

    ಇದನ್ನೂ ಓದಿ: ಈ ಟಿಪ್ಸ್ ಫಾಲೊ ಮಾಡಿದ್ರೆ ನಿಮ್ಮ ಹಲ್ಲುಗಳು ಹಾಳಾಗೋದಿಲ್ಲ, ಫಳ ಫಳ ಹೊಳೆಯುತ್ತೆ!

    ಇನ್ನೊಂದೆಡೆ ಥೈರಾಯ್ಡ್ ದೇಹದಲ್ಲಿ ಹಲವು ಹಾರ್ಮೋನ್ ಉತ್ಪಾದಿಸುತ್ತದೆ. ಹಾಗಾಗಿ ತೂಕವು ಸಾಕಷ್ಟು ಕಡಿಮೆಯಾಗುತ್ತದೆ. ಇದನ್ನು ಹೈಪರ್ ಥೈರಾಯ್ಡಿಸಮ್ ಎಂದು ಕರೆಯುತ್ತಾರೆ. ಹೆಚ್ಚಿನ ಜನರಲ್ಲಿ ಹೈಪೋಥೈರಾಯ್ಡಿಸಮ್ ಕಂಡು ಬರುತ್ತದೆ.

    ಕುತ್ತಿಗೆಯಲ್ಲಿ ಊತ

    ಕುತ್ತಿಗೆಯಲ್ಲಿ ಊತ ಉಂಟಾಗುವುದು ಥೈರಾಯ್ಡ್ ಅಸ್ವಸ್ಥತೆಯ ಸ್ಪಷ್ಟ ಸಂಕೇತ ಆಗಿದೆ. ಇದರಲ್ಲಿ ಗಂಟಲಿನಲ್ಲಿ ಗಾಯಿಟರ್ ಉಂಟಾಗುತ್ತದೆ. ಇದು ಹೈಪೋಥೈರಾಯ್ಡಿಸಮ್ ಅಥವಾ ಹೈಪರ್ ಥೈರಾಯ್ಡಿಸಮ್ ಎರಡರಲ್ಲೂ ಸಂಭವಿಸುತ್ತದೆ. ಕೆಲವೊಮ್ಮೆ ಕುತ್ತಿಗೆಯಲ್ಲಿ ಊತವು ಥೈರಾಯ್ಡ್ ಕ್ಯಾನ್ಸರ್ ಅಥವಾ ಗಡ್ಡೆಯ ಕಾರಣದಿಂದ ಆಗಬಹುದು.

    ಹೃದಯ ಬಡಿತದಲ್ಲಿ ಬದಲಾವಣೆ

    ಥೈರಾಯ್ಡ್ ಹಾರ್ಮೋನ್ ದೇಹದ ಪ್ರತಿ ಭಾಗದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಹೃದಯ ಬಡಿತ ಬದಲಾಗುತ್ತದೆ. ಹೈಪೋಥೈರಾಯ್ಡಿಸಮ್ ಹೊಂದಿರುವ ಜನರು ಸಾಮಾನ್ಯ ಹೃದಯ ಬಡಿತಕ್ಕಿಂತ ನಿಧಾನ ಬಡಿತ ಹೊಂದಿರುತ್ತಾರೆ. ಆದರೆ ಹೈಪರ್ ಥೈರಾಯ್ಡಿಸಮ್ ಹೊಂದಿರುವವರು ವೇಗವಾದ ಹೃದಯ ಬಡಿತ ಹೊಂದಿರುತ್ತಾರೆ. ಇದು ರಕ್ತದೊತ್ತಡ ಹೆಚ್ಚಿಸುತ್ತದೆ.

    ಶಕ್ತಿ ಮತ್ತು ಮನಸ್ಥಿತಿಯ ಬದಲಾವಣೆ

    ಥೈರಾಯ್ಡ್ ಅಸ್ವಸ್ಥತೆ ಶಕ್ತಿಯ ಮಟ್ಟ ಮತ್ತು ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಹೈಪೋಥೈರಾಯ್ಡಿಸಮ್ ಹೊಂದಿರುವವರಲ್ಲಿ ಆಯಾಸ, ಆಲಸ್ಯ ಮತ್ತು ದುಃಖ ಇರುತ್ತದೆ. ಹೈಪರ್ ಥೈರಾಯ್ಡಿಸಮ್ ಆತಂಕ, ನಿದ್ರೆ ತೊಂದರೆ, ಚಡಪಡಿಕೆ ಮತ್ತು ಕಿರಿಕಿರಿ ಹೊಂದಿರುತ್ತಾರೆ.

    ಕೂದಲು ಉದುರುವುದು

    ಕೂದಲು ಉದುರುವುದು ಥೈರಾಯ್ಡ್ ಹಾರ್ಮೋನ್ ಅಸಮತೋಲನದ ಸಂಕೇತ.  ಹೈಪೋಥೈರಾಯ್ಡಿಸಮ್ ಮತ್ತು ಹೈಪರ್ ಥೈರಾಯ್ಡಿಸಮ್ ಎರಡರಲ್ಲೂ ಈ ಸಮಸ್ಯೆ ಉಂಟಾಗುತ್ತದೆ. ಹೆಚ್ಚಿನ ಸಂದರ್ಭದಲ್ಲಿ ಥೈರಾಯ್ಡ್ ಅಸ್ವಸ್ಥತೆಗೆ ಚಿಕಿತ್ಸೆ ನೀಡಿದ ನಂತರ ಕೂದಲು ಮತ್ತೆ ಬೆಳೆಯುತ್ತದೆ.

    ತುಂಬಾ ಶೀತ ಅಥವಾ ಬಿಸಿಯ ಅನುಭವ

    ಥೈರಾಯ್ಡ್ ಅಸ್ವಸ್ಥತೆ ತಾಪಮಾನ ನಿಯಂತ್ರಿಸುವ ದೇಹದ ಸಾಮರ್ಥ್ಯ ದುರ್ಬಲ ಮಾಡುತ್ತದೆ. ಹೈಪೋಥೈರಾಯ್ಡಿಸಮ್ ಹೊಂದಿರುವವರು ಸಾಮಾನ್ಯಕ್ಕಿಂತ ಹೆಚ್ಚು ತಂಪಾಗಿರುತ್ತಾರೆ. ಆದರೆ ಹೈಪರ್ ಥೈರಾಯ್ಡಿಸಮ್ ಹೊಂದಿರುವವರು ಬಹಳಷ್ಟು ಬೆವರುತ್ತಾರೆ.

    ಇದನ್ನೂ ಓದಿ: ಇವುಗಳನ್ನು ತಿಂದ್ರೆ ದೇಹದಲ್ಲಿ ಕ್ಯಾನ್ಸರ್ ಕೋಶಗಳು ಬೆಳೆಯೋದಿಲ್ವಂತೆ

    ಇತರೆ ಲಕ್ಷಣಗಳು

    ಹೈಪೋಥೈರಾಯ್ಡಿಸಮ್‌ನಲ್ಲಿ ಒಣ ಚರ್ಮ ಮತ್ತು ಮುರಿದ ಉಗುರು, ಕೈ ಮತ್ತು ಕಾಲುಗಳ ಮರಗಟ್ಟುವಿಕೆ, ಮಲಬದ್ಧತೆ, ಅಸಹಜ ಅವಧಿ ಸೇರಿದಂತೆ ಇತರ ರೋಗ ಲಕ್ಷಣ ಅನುಭವಿಸಬಹುದು. ಹೈಪರ್ ಥೈರಾಯ್ಡಿಸಮ್ನ ಸ್ನಾಯು ದೌರ್ಬಲ್ಯ ಅಥವಾ ಕೈಗಳ ನಡುಕ, ಕಣ್ಣಿನ ಸಮಸ್ಯೆ, ಅತಿಸಾರ, ಅನಿಯಮಿತ ಅವಧಿ.
    Published by:renukadariyannavar
    First published: