ಇತ್ತೀಚಿನ ದಿನಗಳಲ್ಲಿ (Now a Days) ಹೃದಯಾಘಾತ (Heart Attack) ಮತ್ತು ಕ್ಯಾನ್ಸರ್ನಂತಹ (Cancer) ಅಪಾಯಕಾರಿ ಕಾಯಿಲೆಗಳು (Disease) ಸಾಮಾನ್ಯ ಎಂಬಂತಾಗಿವೆ. ತುಂಬಾ ಜನರು ಗೊತ್ತಿದ್ದೋ, ಗೊತ್ತಿಲ್ಲದೆಯೋ ಕ್ಯಾನ್ಸರ್ ಮಹಾಮಾರಿಗೆ ತುತ್ತಾಗುತ್ತಿದ್ದಾರೆ. ದೇಹದ ಯಾವುದೇ ಭಾಗದಲ್ಲಿ ಕ್ಯಾನ್ಸರ್ ಕಾಯಿಲೆ ಬರಬಹುದು. ಇಂತಹ ವೇಳೆ ನೀವು ವಿವಿಧ ರೀತಿಯ ಕ್ಯಾನ್ಸರ್ ಬಗ್ಗೆ ತಿಳಿದುಕೊಳ್ಳುವುದು ತುಂಬಾ ಮುಖ್ಯ. ಅದರಲ್ಲೂ ನಿಮಗೆ ಅನ್ನನಾಳದ ಕ್ಯಾನ್ಸರ್ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ. ಅನ್ನನಾಳವನ್ನು ಅನ್ನನಾಳ ಮತ್ತು ಆಹಾರದ ಪೈಪ್ ಎಂದೂ ಕರೆಯುತ್ತಾರೆ. ಅನ್ನನಾಳವು ನಮ್ಮ ಬಾಯಿಯನ್ನು ಹೊಟ್ಟೆಗೆ ಸಂಪರ್ಕಿಸುವ ಪೈಪ್ ಆಗಿದೆ.
ಅನ್ನನಾಳ ಕ್ಯಾನ್ಸರ್
ಈ ಕ್ಯಾನ್ಸರ್ ಅನ್ನು ತಪ್ಪಿಸಲು ಮತ್ತು ಡೇಂಜರಸ್ ಕಾಯಿಲೆಯನ್ನು ತಡೆಗಟ್ಟಲು ಸರಿಯಾದ ಸಮಯಕ್ಕೆ ಅದನ್ನು ಪತ್ತೆ ಹಚ್ಚುವುದು ತುಂಬಾ ಮುಖ್ಯ. ಅನ್ನನಾಳವು ನಮ್ಮ ಬಾಯಿ ಮತ್ತು ಹೊಟ್ಟೆಯನ್ನು ಸಂಪರ್ಕಿಸುವ ಆಹಾರ ಪೈಪ್ ಆಗಿದೆ. ಈ ರೋಗಲಕ್ಷಣಗಳನ್ನು ಸಮಯಕ್ಕೆ ಕಂಡು ಹಿಡಿಯದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.
ಅಂದ ಹಾಗೆ, ಕ್ಯಾನ್ಸರ್ ರೋಗವು ತುಂಬಾ ಸಾಮಾನ್ಯವಾಗಿದ್ದು, ಇದು ಮಾರಣಾಂತಿಕ ಕಾಯಿಲೆಯಾಗಿದೆ. ಶುರುವಾದ ಸಮಯದಲ್ಲಿ ಕ್ಯಾನ್ಸರ್ ನ ಯಾವುದೇ ರೋಗ ಲಕ್ಷಣಗಳು ಕಂಡು ಬರುವುದಿಲ್ಲ. ಸ್ತನ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್, ಚರ್ಮದ ಕ್ಯಾನ್ಸರ್, ಮತ್ತು ಅನ್ನನಾಳದ ಕ್ಯಾನ್ಸರ್ ಸೇರಿದಂತೆ ಕೆಲವು ಸಾಮಾನ್ಯವಾದ ಕ್ಯಾನ್ಸರ್ ಗಳು ಇವೆ.
ಇದನ್ನೂ ಓದಿ: ಹೇಗಪ್ಪಾ ತೂಕ ಇಳಿಸೋದು ಎಂಬ ಚಿಂತೆನಾ? ಹಾಗಿದ್ರೆ ತಜ್ಞರು ಹೇಳಿರುವ ಈ ಟಿಪ್ಸ್ ಫಾಲೋ ಮಾಡಿ
ಅನ್ನನಾಳದ ಕ್ಯಾನ್ಸರ್ಗೆ ಸಂಬಂಧಿಸಿದ ಹಲವು ರೋಗ ಲಕ್ಷಣಗಳನ್ನು ಮೊದಲೇ ಕಂಡುಕೊಳ್ಳಬಹುದು. ಆದರೆ ಆ ಲಕ್ಷಣಗಳನ್ನು ನೀವು ಕ್ಯಾನ್ಸರ್ನ ಲಕ್ಷಣಗಳು ಎಂದು ಗುರುತಿಸುವುದು ತುಂಬಾ ಕಷ್ಟಕರ. ಆದಾಗ್ಯೂ, ಈ ರೋಗಲಕ್ಷಣಗಳನ್ನು ಸಮಯಕ್ಕೆ ಕಂಡು ಹಿಡಿದರೆ ಮಾತ್ರ ಅದರ ಚಿಕಿತ್ಸೆಯನ್ನು ಸಮಯಕ್ಕೆ ಸರಿಯಾಗಿ ಪ್ರಾರಂಭಿಸಬಹುದು. ಅನ್ನನಾಳದ ಕ್ಯಾನ್ಸರ್ ಮೊದಲ ಲಕ್ಷಣ ಅಂದ್ರೆ ಆಹಾರ ನುಂಗಲು ಕಷ್ಟವಾಗುವುದು.
ಆಹಾರ ನುಂಗಲು ತೊಂದರೆ ಉಂಟಾಗುವುದು
ನೀವು ಉಸಿರುಗಟ್ಟುವಿಕೆ, ಕೆಮ್ಮು ಅಥವಾ ಏನಾದರೂ ಸೇವನೆ ಮಾಡಿದಾಗ ಅಥವಾ ಕುಡಿಯುವಾಗ ನುಂಗಲು ತೊಂದರೆ ಎದುರಿಸುತ್ತಿದ್ದರೆ ಅದು ಅನ್ನನಾಳದ ಕ್ಯಾನ್ಸರ್ ನ ಸಾಮಾನ್ಯ ಲಕ್ಷಣವಾಗಿರುವ ಡಿಸ್ಫೇಜಿಯಾದ ಸಂಕೇತ ಆಗಿರಬಹುದು.
ಕೆಲವೊಮ್ಮೆ ಆಹಾರ ನುಂಗಲು ಪ್ರಯತ್ನಿಸಿದಾಗ ಅದು ಮೂಗು ಅಥವಾ ಬಾಯಿಯ ಮೂಲಕ ವಾಪಸ್ ಬರುವುದು, ನೀವು ಮಲಗಿದಾಗ ಆಹಾರವು ಅನ್ನನಾಳಕ್ಕೆ ಹಿಂತಿರುಗಲು ಸುಲಭ ಆಗುತ್ತದೆ. ಇದು ರೋಗ ಲಕ್ಷಣಗಳನ್ನು ಇನ್ನಷ್ಟು ಹದಗೆಡಿಸುತ್ತದೆ.
ಆಹಾರ ಸರಿಯಾಗಿ ಜಗಿಯಲು ಕೂಡ ಸಮಸ್ಯೆ
ಇದರಿಂದ ಆಹಾರ ಸರಿಯಾಗಿ ಜಗಿಯಲು ಕೂಡ ಸಮಸ್ಯೆ ಉಂಟಾಗುತ್ತದೆ. ಈ ಸಮಸ್ಯೆಯಿಂದ ಸಾಕಷ್ಟು ಅನೇಕ ಬಾರಿ ವ್ಯಕ್ತಿಯು ಅಗಿಯದೆ ಆಹಾರವನ್ನು ನುಂಗಲು ಪ್ರಯತ್ನಿಸುತ್ತಾನೆ. ಅದು ಇನ್ನಷ್ಟು ನೋವನ್ನು ಉಂಟು ಮಾಡುತ್ತದೆ. ಅನೇಕ ಬಾರಿ ಒಬ್ಬ ವ್ಯಕ್ತಿಯು ತನ್ನ ಗಂಟಲಿನಲ್ಲಿ ಏನಾದರೂ ಸಿಲುಕಿಕೊಂಡಿದೆ ಎಂದು ಭಾವಿಸುತ್ತಾನೆ.
ಈ ಕ್ಯಾನ್ಸರ್ ಮುಂದುವರೆದಂತೆ ಅದು ಕೆಟ್ಟದಾಗಿ ಮತ್ತು ನೋವಿನಿಂದ ಕೂಡಿರುತ್ತದೆ. ಜೊತೆಗೆ ಅನ್ನನಾಳ ಚಿಕ್ಕದಾಗಲು ಪ್ರಾರಂಭಿಸುತ್ತದೆ.
ಅನ್ನನಾಳ ಕ್ಯಾನ್ಸರ್ ನ ಮುಖ್ಯ ಲಕ್ಷಣಗಳು
ಆಹಾರ ನುಂಗಲು ಕಷ್ಟವಾಗುವುದರ ಜೊತೆಗೆ ಮತ್ತು ಅನ್ನನಾಳದ ಕ್ಯಾನ್ಸರ್ ನ ಇತರ ಹಲವು ಲಕ್ಷಣಗಳಿವೆ. ಉದಾಹರಣೆಗೆ- ಆಯಾಸ, ವಾಂತಿ, ಆಸಿಡ್ ರಿಫ್ಲಕ್ಸ್, ಎದೆಯುರಿ, ಕಫ, ಹಸಿವಾಗದಿರುವುದು, ಎದೆ ನೋವು ಮತ್ತು ಧ್ವನಿ ಬದಲಾವಣೆಗಳು ಸೇರಿವೆ.
ಇದನ್ನೂ ಓದಿ: ಸಿಗರೇಟ್ ಸೇದುವುದರಿಂದ ಕೂದಲು ಉದುರುತ್ತವೆಯೇ? ಪೌಷ್ಟಿಕ ತಜ್ಞರು ಹೇಳಿದ್ದೇನು?
ಅನ್ನನಾಳದ ಕ್ಯಾನ್ಸರ್ ಅಪಾಯ ಕಡಿಮೆ ಮಾಡುವುದು ಹೇಗೆ?
ಕೆಟ್ಟ ಜೀವನಶೈಲಿ ಬದಲಾಯಿಸಬೇಕು. ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಇದು ಅನ್ನನಾಳದ ಕ್ಯಾನ್ಸರ್ ಅಪಾಯ ಕಡಿಮೆ ಮಾಡುತ್ತದೆ. ಧೂಮಪಾನ, ತಂಬಾಕು ಮತ್ತು ಮದ್ಯಪಾನ ಸೇವಿಸದಿರುವುದು ಮುಖ್ಯ. ಆಹಾರದಲ್ಲಿ ಹಣ್ಣುಗಳು ಮತ್ತು ತರಕಾರಿಗಳ ಸೇವನೆ ಮಾಡಿ. ತೂಕ ಅಧಿಕವಾಗದಂತೆ ನೋಡಿಕೊಳ್ಳಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ