ಒತ್ತಡ ಕಡಿಮೆ ಮಾಡಿಕೊಳ್ಳಲು ಈ ರೀತಿ ಮಾಡಿ

news18
Updated:July 17, 2018, 7:01 PM IST
ಒತ್ತಡ ಕಡಿಮೆ ಮಾಡಿಕೊಳ್ಳಲು ಈ ರೀತಿ ಮಾಡಿ
news18
Updated: July 17, 2018, 7:01 PM IST
-ನ್ಯೂಸ್ 18 ಕನ್ನಡ

ಬೆಳಗ್ಗೆ ವ್ಯಾಯಾಮ ಮಾಡುವುದು ಆರೋಗ್ಯಕ್ಕೆ ಉತ್ತಮ ಎಂದು ಹೇಳಲಾಗುತ್ತದೆ. ಪ್ರತಿನಿತ್ಯ ಮುಂಜಾನೆ ವಾಕಿಂಗ್ ಹೋಗುವುದರಿಂದ ಮನಸ್ಸು ಉಲ್ಲಾಸಗೊಳ್ಳುತ್ತದೆ. ಆದರೆ, ಇಂದಿನ ಜೀವನ ಶೈಲಿಯಲ್ಲಿ ವ್ಯಾಯಾಮಕ್ಕಾಗಿ ಸಮಯ ಹೊಂದಿಸುವುದು ತುಸು ಕಷ್ಟವಾಗಿದ್ದರೂ, ಆರೋಗ್ಯ ಕಾಪಾಡಲು ಇದು ಅನಿವಾರ್ಯವಾಗಿದೆ.

ಕೆಲಸ ಒತ್ತಡವು ಸಾಮಾನ್ಯವಾಗಿ ಜನರನ್ನು ಹೈರಾಣವಾಗಿಸುತ್ತದೆ. ಇದಕ್ಕೆ ಪರಿಹಾರವಾಗಿ ದಿನಂಪ್ರತಿ ಮುಂಜಾನೆ ವ್ಯಾಯಾಮ ಮಾಡುವುದು ಉತ್ತಮ. ಇದರಿಂದ ಒತ್ತಡ ಕಡಿಮೆ ಆಗುವುದಲ್ಲದೆ ಆರೋಗ್ಯ ಕೂಡ ಸುಧಾರಿಸುತ್ತದೆ. ಒತ್ತಡ ಕಡಿಮೆಗೊಳಿಸಲು ಇಲ್ಲಿವೆ ಕೆಲವೊಂದು ಸಲಹೆಗಳು.

* ಬೆಳಗ್ಗೆ ಎದ್ದ ಕೂಡಲೇ ಮನೆಯ ಕಿಟಕಿಗಳನ್ನು ತೆರೆಯಿರಿ. ಇದರಿಂದ ಕೋಣೆಯೊಳಗೆ ನೈಸರ್ಗಿಕ ಬೆಳಕು ಮತ್ತು ಗಾಳಿ ಪ್ರವೇಶಿಸುತ್ತದೆ. ಹೀಗೆ ಮಾಡುವುದರಿಂದ ಶರೀರದಲ್ಲಿ ಮೆಲಟೋನಿನ್ ಕಡಿಮೆಯಾಗಿ ಎಡ್ರನಾಲಿನ್ ಹಾರ್ಮೋನ್ ದೇಹದ ಆರೋಗ್ಯವನ್ನು ಹೆಚ್ಚಿಸುತ್ತದೆ. ಇದರಿಂದ ಕಿರಿಕಿರಿ ಆಗುತ್ತಿದೆ ಎಂಬ ಭಾವನೆ ಕಡಿಮೆಯಾಗುತ್ತದೆ.* ಬೆಳಿಗ್ಗೆ ಎದ್ದು ವ್ಯಾಯಾಮ ಮಾಡಿ. ಪ್ರತಿನಿತ್ಯ ಹೀಗೆ ಮಾಡಿದರೆ ದೇಹದ ಎಂಡೊಫಿರ್ನಸ್​ ಹಾರ್ಮೋನು ಸಕ್ರೀಯವಾಗುತ್ತದೆ. ಇದರಿಂದ ಮನಸ್ಸು ಸಂತಸಗೊಳ್ಳುವುದಲ್ಲದೆ ಒತ್ತಡ ಕಡಿಮೆಯಾಗುತ್ತೆ.

* ಮುಂಜಾನೆ 10 ರಿಂದ 15 ನಿಮಿಷಗಳ ಕಾಲ ಧ್ಯಾನ ಮಾಡುವುದರಿಂದ ಕೂಡ ಆರೋಗ್ಯ ಸುಧಾರಿಸುತ್ತದೆ. ಬೆಳಿಗ್ಗೆ ಸಂಗೀತ ಕೇಳುವುದು ಅಥವಾ ನಿಯತಕಾಲಿಕೆ ಓದುವುದರಿಂದ ಸಹ ಜೀವನ ಉತ್ಸಾಹ ಹೆಚ್ಚುತ್ತದೆ.

*  ರಾತ್ರಿ ಮಲಗುವಾಗ ಆಲರ್ಮ್ ಇಟ್ಟು ಮಲಗಿಕೊಳ್ಳಿ. ಸಾಮಾನ್ಯವಾಗಿ ಎದ್ದೇಳುವುದಕ್ಕಿಂತ 15-20 ನಿಮಿಷಗಳು ಮುಂಚಿತವಾಗಿ ಎಳುವುದನ್ನು ರೂಢಿಸಿಕೊಳ್ಳಿ. ಈ ಸಮಯದಲ್ಲಿ ಕೆಲ ಸಣ್ಣ ಪುಟ್ಟ ವ್ಯಾಯಾಮ ಅಥವಾ ದಿನದ ಯೋಜನೆಗಳನ್ನು ರೂಪಿಸಿಕೊಳ್ಳಿ. ದಿನದ ಪ್ಲಾನಿಂಗ್ ಇದ್ದರೆ ಕೆಲಸವು ಸುಲಭವಾಗಿ ಒತ್ತಡ ಕಡಿಮೆಯಾಗುತ್ತದೆ.
First published:July 17, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ