Piles Problem: ಪೈಲ್ಸ್ ಸಮಸ್ಯೆ ಹೊಂದಿರುವವರು ಈ ಆಹಾರ ದೂರವಿರಿ!

ಗುದದ್ವಾರವು ನಮ್ಮ ನಿಯಮಿತ ದಿನಚರಿಯ ಪ್ರಮುಖ ಭಾಗ. ಹಾಗಾಗಿ ಮಲಬದ್ಧತೆ ತಡೆಯುವುದು ಮುಖ್ಯ. ನೀವು ಬಯಸಿದರೆ ಪೈಲ್ಸ್ ಆರೋಗ್ಯ ಸಮಸ್ಯೆ ಮತ್ತು ಅದರಲ್ಲಿ ಕಂಡು ಬರುವ ರೋಗ ಲಕ್ಷಣಗಳು ಮತ್ತು ನೋವನ್ನು ನಿಯಂತ್ರಿಸಬಹುದು. ಇದಕ್ಕಾಗಿ ದಿನ ನಿತ್ಯದ ದಿನಚರಿಯಿಂದ ಕೆಲವು ಆಹಾರಗಳ ಸೇವನೆ ಮಾಡಬಾರದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ದೀರ್ಘಕಾಲದ (Long Time) ಮಲಬದ್ಧತೆ ಪೈಲ್ಸ್ (Piles) ಅನಾರೋಗ್ಯಕ್ಕೆ (Unhealth) ಕಾರಣವಾಗುತ್ತದೆ. ಪೈಲ್ಸ್ ಈ ಆರೋಗ್ಯ ಸಮಸ್ಯೆಯಲ್ಲಿ (Health Problem) ಒತ್ತಡದಿಂದ ಗುದದ್ವಾರದ ರಕ್ತನಾಳಗಳು ಹಿಗ್ಗುತ್ತವೆ. ಹೀಗಾಗಿ ಊತ ಮತ್ತು ಉಬ್ಬುವಿಕೆಯ ಸಮಸ್ಯೆ ಉಂಟಾಗುತ್ತದೆ. ಅದೇ ವೇಳೆ ಗುದದ್ವಾರದಿಂದ ರಕ್ತಸ್ರಾವ, ನೋವು, ತುರಿಕೆ ಮುಂತಾದ ಇತರೆ ಸಮಸ್ಯೆಗಳು ಸಹ ನಿಮ್ಮನ್ನು ತೊಂದರೆಗೆ ಸಿಲುಕಿಸುವ ಸಾಧ್ಯತೆ ಹೆಚ್ಚು. ಪೈಲ್ಸ್ ಆರೋಗ್ಯ ಸಮಸ್ಯೆಯನ್ನು ಮನ್ನಷ್ಟು ಪ್ರಚೋದಿಸುವ ಕೆಲವು ಆಹಾರಗಳಿವೆ. ಹಾಗಾಗಿ ಅಂತಹ ಆಹಾರ ಪದಾರ್ಥಗಳ ಸೇವನೆಯಿಂದ ನೀವು ದೂರವಿರಬೇಕಾಗುತ್ತದೆ. ಪೈಲ್ಸ್ ಆರೋಗ್ಯ ಸಮಸ್ಯೆಯನ್ನು ನಿಯಂತ್ರಿಸುವುದು ತುಂಬಾ ಮುಖ್ಯ. ಇದು ನೋವನ್ನು ತಡೆಯಲಾಗದ ಸಮಸ್ಯೆ ಆಗಿದೆ.

    ಪೈಲ್ಸ್ ಆರೋಗ್ಯ ಸಮಸ್ಯೆ ಮತ್ತು ಆಹಾರ

    ಏಕೆಂದರೆ ಗುದದ್ವಾರವು ನಮ್ಮ ನಿಯಮಿತ ದಿನಚರಿಯ ಪ್ರಮುಖ ಭಾಗ. ಹಾಗಾಗಿ ಮಲಬದ್ಧತೆ ತಡೆಯುವುದು ಮುಖ್ಯ. ನೀವು ಬಯಸಿದರೆ ಪೈಲ್ಸ್ ಆರೋಗ್ಯ ಸಮಸ್ಯೆ ಮತ್ತು ಅದರಲ್ಲಿ ಕಂಡು ಬರುವ ರೋಗ ಲಕ್ಷಣಗಳು ಮತ್ತು ನೋವನ್ನು ನಿಯಂತ್ರಿಸಬಹುದು. ಇದಕ್ಕಾಗಿ ನೀವು ಕೆಲವು ದಿನ ನಿತ್ಯದ ದಿನಚರಿಯಿಂದ ಕೆಲವು ಆಹಾರಗಳ ಸೇವನೆ ಮಾಡಬಾರದು.

    ಯಾಕೆಂದರೆ ಮಲಬದ್ಧತೆ ಮತ್ತು ಕಳಪೆ ಜೀರ್ಣಕ್ರಿಯೆ ಪೈಲ್ಸ್ ಆರೋಗ್ಯ ಸಮಸ್ಯೆ ಸಮಸ್ಯೆಗಳನ್ನು ಹೆಚ್ಚು ಮಾಡುತ್ತದೆ. ಈ ಎಲ್ಲಾ ವಿಷಯಗಳನ್ನು ಪರಿಗಣಿಸಿ ನಿಮ್ಮ ಆಹಾರ ಸಮತೋಲನ ಮಾಡಿ. ಅತ್ಯಂತ ಮುಖ್ಯವಾದ ವಿಷಯ ಇದು. ಪೈಲ್ಸ್ ಸಮಸ್ಯೆ ಇರುವವರು ಕೆಲವು ಆಹಾರ ಪದಾರ್ಥಗಳನ್ನು ತಪ್ಪಿಸಬೇಕು. ಅವು ಯಾವವು ಎಂದು ತಿಳಿಯಿರಿ.

    ಇದನ್ನೂ ಓದಿ: ನಿಂಬೆ ಅಷ್ಟೇ ಅಲ್ಲ ಅದರ ಎಲೆಗಳೂ ಸಹ ಹಲವು ಆರೋಗ್ಯ ಪ್ರಯೋಜನ ನೀಡುತ್ತವೆ! ಹೇಗೆ ಎಂದು ನೋಡಿ

    ಪೈಲ್ಸ್ ಆರೋಗ್ಯ ಸಮಸ್ಯೆ ಇರುವವರು ಯಾವ ಆಹಾರ ಸೇವನೆಯಿಂದ ದೂರವಿರಬೇಕು?

    ಸಂಸ್ಕರಿಸಿದ ಆಹಾರ

    ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಯಾಬಿಟಿಸ್ ಅಂಡ್ ಡೈಜೆಸ್ಟಿವ್ ಮತ್ತು ಕಿಡ್ನಿ ಡಿಸೀಸ್ ಪ್ರಕಟಿಸಿದ ಅಧ್ಯಯನದ ಪ್ರಕಾರ ಸಂಸ್ಕರಿಸಿದ ಆಹಾರಗಳಿಂದ ದೂರವಿರಬೇಕು. ಕರಿದ ಆಹಾರ, ತ್ವರಿತ ಆಹಾರ, ಹೆಪ್ಪುಗಟ್ಟಿದ ಊಟದಂತಹ ಆಹಾರ ಪದಾರ್ಥಗಳ ಸೇವನೆಯಿಂದ ದೂರವಿರಿ. ಇದು ಪೈಲ್ಸ್ ಹೆಚ್ಚಿಸುತ್ತದೆ.

    ಈ ಎಲ್ಲಾ ಆಹಾರಗಳಲ್ಲಿ ಪೋಷಕಾಂಶಗಳ ಕೊರತೆ ಇದೆ. ಇದು ಹೆಚ್ಚಿನ ಪ್ರಮಾಣದ ಉಪ್ಪು ಮತ್ತು ಅನಾರೋಗ್ಯಕರ ಕೊಬ್ಬು ಹೊಂದಿದೆ. ಇದು ಜೀರ್ಣಿಸಿಕೊಳ್ಳಲು ಕಷ್ಟ. ಮತ್ತು ಮಲಬದ್ಧತೆ ಸಮಸ್ಯೆ  ಕಾಣಿಸುತ್ತದೆ.

    ಮಸಾಲೆ ಆಹಾರ

    ಸಂಶೋಧನೆಯೊಂದರ ಪ್ರಕಾರ, ಪೈಲ್ಸ್ ಇರುವವರು ಮಸಾಲೆಯುಕ್ತ ಆಹಾರ ಸೇವನೆ ತಪ್ಪಿಸಿ. ಅಂತಹ ಆಹಾರ ಪದಾರ್ಥಗಳನ್ನು ತಿನ್ನುವ ಮೊದಲು ಖಂಡಿತವಾಗಿ ತುಂಬಾ ಯೋಚಿಸಿ. ಇವುಗಳ ಸೇವನೆ ನೋವಿನ ಪರಿಸ್ಥಿತಿ ಹೆಚ್ಚಿಸುತ್ತದೆ. ಕಡು ಬಯಕೆ ಹೆಚ್ಚು ತೊಂದರೆ ಉಂಟು ಮಾಡುತ್ತದೆ. ಪಿಜ್ಜಾ, ಬರ್ಗರ್‌, ಮಸಾಲೆಯುಕ್ತ ಜಂಕ್ ಆಹಾರಗಳು ಪೈಲ್ಸ್ ಹೆಚ್ಚಿಸುತ್ತವೆ.

    ಹಾಲಿನ ಉತ್ಪನ್ನಗಳು

    ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಯಾಬಿಟಿಸ್ ಅಂಡ್ ಡೈಜೆಸ್ಟಿವ್ ಮತ್ತು ಕಿಡ್ನಿ ಡಿಸೀಸ್ ಮಾಹಿತಿಯ ಪ್ರಕಾರ, ನೀವು ಪೈಲ್ಸ್ ಸಮಸ್ಯೆಯಿಂದ ಬಳಲುತ್ತಿದ್ದರೆ ಸಾಧ್ಯವಾದಷ್ಟು ಡೈರಿ ಉತ್ಪನ್ನ ತ್ಯಜಿಸಿ. ಚೀಸ್ ನಂತಹ ಹಾಲು ಭರಿತ ಆಹಾರಗಳ ಅತಿಯಾದ ಸೇವನೆ ಗ್ಯಾಸ್ ಸಮಸ್ಯೆ,

    ಹೊಟ್ಟೆ ನೋವು ಮತ್ತು ಮಲಬದ್ಧತೆ ಉಂಟು ಮಾಡುತ್ತವೆ. ಇದು ಪೈಲ್ಸ್ ಸಮಸ್ಯೆ ಹೆಚ್ಚಿಸುತ್ತದೆ. ಹಾಗಾಗಿ ಡೈರಿ ಉತ್ಪನ್ನಗಳನ್ನು ಸೀಮಿತ ಪ್ರಮಾಣದಲ್ಲಿ ಸೇವಿಸುವುದು ಸೂಕ್ತ.

    ಕಬ್ಬಿಣದಂಶವಿರುವ ಆಹಾರ ಮತ್ತು ಔಷಧಿ ಸೇವನೆ ತಪ್ಪಿಸಿ

    ಪೈಲ್ಸ್‌ನಿಂದ ಬಳಲುತ್ತಿದ್ದರೆ ಕಬ್ಬಿಣದಂಶದ ಪೂರಕಗಳು ಮತ್ತು ಇತರ ಔಷಧಿಗಳ ಸೇವನೆಯಿಂದ ದೂರವಿರಿ. ಇವು ಮಲಬದ್ಧತೆ ಉಂಟು ಮಾಡುತ್ತವೆ. ಅಸಹನೀಯ ನೋವುಂಟು ಮಾಡುತ್ತವೆ. ಇತರೆ ಔಷಧಿಗಳ ಸೇವನೆ ಹಾಗೂ ಕೆಲವು ಆಹಾರಗಳಿಂದ ದೂರವಿರಿ. ವೈದ್ಯರನ್ನು ಸಂಪರ್ಕಿಸಿ ಸರಿಯಾದ ಸಲಹೆ ಪಡೆಯಿರಿ.

    ಮದ್ಯ ಸೇವನೆ

    ಆಲ್ಕೋಹಾಲ್ ಸೇವನೆ ದೇಹದಲ್ಲಿ ಅಗತ್ಯ ಪೋಷಕಾಂಶಗಳ ಕೊರತೆಯುಂಟು ಮಾಡುತ್ತದೆ. ಜೀರ್ಣಕಾರಿ ಸಮತೋಲನ ತೊಂದರೆಯುಂಟು ಮಾಡುತ್ತದೆ. ಜೀರ್ಣಕಾರಿ ಸಮಸ್ಯೆ ಉಂಟುಮಾಡಬಹುದು. ಹಾಗಾಗಿ ಪೈಲ್ಸ್ ಸಮಸ್ಯೆಯಲ್ಲಿ ಜೀರ್ಣಾಂಗ ವ್ಯವಸ್ಥೆ ಸಮತೋಲನ ಕಾಯ್ದುಕೊಳ್ಳಿ. ಆಲ್ಕೋಹಾಲ್ ಸೇವನೆ ತಪ್ಪಿಸಿ. ಇದು ಕರುಳಿನ ಮೇಲೆ ಅಡ್ಡ ಪರಿಣಾಮ ಬೀರುತ್ತದೆ.

    ಇದನ್ನೂ ಓದಿ: ಗರ್ಭಧಾರಣೆಯ ನಂತರ ಹೊಟ್ಟೆ ಕೊಬ್ಬನ್ನು ಕಡಿಮೆ ಮಾಡುವುದು ಹೇಗೆ?

    ಕೆಂಪು ಮಾಂಸ ಸೇವನೆ ತಪ್ಪಿಸಿ

    ಪೈಲ್ಸ್ ಸಮಸ್ಯೆ ಇರುವವರು ಕೆಂಪು ಮಾಂಸ ಸೇವನೆ ತಪ್ಪಿಸಿ. ಕೆಂಪು ಮಾಂಸವು ಜೀರ್ಣವಾಗಲು ಬಹಳ ಸಮಯ ಬೇಕು. ಇದು ಮಲಬದ್ಧತೆ ಸಮಸ್ಯೆ ಉಂಟು ಮಾಡುತ್ತದೆ. ಕರುಳು ಸ್ನೇಹಿ ಆಹಾರ ಸೇವಿಸಿ.
    Published by:renukadariyannavar
    First published: