Work And Fitness: ದೀರ್ಘಕಾಲ ಕಂಪ್ಯೂಟರ್ ಎದುರು ಕುಳಿತೇ ಕೆಲಸ ಮಾಡುವವರು ಹೀಗೆ ಫಿಟ್ನೆಸ್ ಕಾಪಾಡಿ!

ದೀರ್ಘಕಾಲ ಕಂಪ್ಯೂಟರ್ ಕೆಲಸ ಮಾಡುವವರು ಅವರ ಆರೋಗ್ಯದ ಚಿಂತೆ ಮಾಡುತ್ತಿದ್ದಾರೆ. ಯಾಕೆಂದರೆ ಒಂದೇ ಸ್ಥಳದಲ್ಲಿ ಕೆಲಸ ಮಾಡುವುದರಿಂದ ಹಲವು ಅನಾನುಕೂಲತೆಗಳು ಉಂಟಾಗುವ ಸಾಧ್ಯತೆ ಹೆಚ್ಚು. ಇದು ದೈಹಿಕ ಮಾತ್ರವಲ್ಲ ಮಾನಸಿಕ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಇಂದಿನ ದಿನಗಳಲ್ಲಿ ಬಹುತೇಕರು ದೀರ್ಘಕಾಲ (Long Time) ಕಂಪ್ಯೂಟರ್ (Computer) ಮತ್ತು ಲ್ಯಾಪ್ ಟಾಪ್ ಮುಂದೆ ಕುಳಿತು ಕೆಲಸ (Work) ಮಾಡ್ತಾರೆ. ದಿನದ ದೀರ್ಘ ಹೊತ್ತನ್ನು ಕುಳಿತುಕೊಂಡೇ (Sitting) ಕಳೆಯುತ್ತಾರೆ. ಬೆಳಗ್ಗೆ 9 ರಿಂದ 5 ಗಂಟೆಯವರೆಗೆ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುತ್ತಿದ್ದಾರೆ. ಆದರೆ ಇಂತವರಿಗೆ ಗಂಭೀರ ಆರೋಗ್ಯ ಸಮಸ್ಯೆ (Health Problem) ಅಪಾಯ ಎದುರಿಸುತ್ತಿದ್ದಾರೆ. ದೀರ್ಘಕಾಲ ಕಂಪ್ಯೂಟರ್ ಕೆಲಸ ಮಾಡುವವರು  ಅವರ ಆರೋಗ್ಯದ ಚಿಂತೆ ಮಾಡುತ್ತಿದ್ದಾರೆ. ಯಾಕೆಂದರೆ ಒಂದೇ ಸ್ಥಳದಲ್ಲಿ ಕೆಲಸ ಮಾಡುವುದರಿಂದ ಹಲವು ಅನಾನುಕೂಲತೆಗಳು ಉಂಟಾಗುವ ಸಾಧ್ಯತೆ ಹೆಚ್ಚು. ಇದು ದೈಹಿಕ ಮಾತ್ರವಲ್ಲ, ಮಾನಸಿಕ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.

    ಫಿಟ್ನೆಸ್ ಬಗ್ಗೆ ಗಮನ ಹರಿಸುವುದು

    ದೀರ್ಘಕಾಲ ಕುಳಿತು ಕೆಲಸ ಮಾಡುವುದು ಕ್ರಮೇಣ ನಿಮ್ಮ ಒಟ್ಟಾರೆ ಆರೋಗ್ಯ ಹಾಳು ಮಾಡುತ್ತದೆ. ಅದಕ್ಕಾಗಿ ನೀವು ಕಚೇರಿಯಲ್ಲಿ ನಿಮ್ಮ ಫಿಟ್ನೆಸ್ ಬಗ್ಗೆ ಗಮನ ಹರಿಸುವುದು ಮುಖ್ಯ. ಇಲ್ಲಿ ಕೆಲವು ಫಿಟ್‌ನೆಸ್ ಸಲಹೆ ಶೇರ್ ಮಾಡ್ತಿದ್ದಾರೆ. ಇದು ಡೆಸ್ಕ್ ಕೆಲಸದಲ್ಲಿದ್ದವರಿಗೆ ಬೊಜ್ಜು ಹೆಚ್ಚಿಸುತ್ತದೆ.

    ದೈಹಿಕ ಚಟುವಟಿಕೆ ಕೊರತೆ ಹೃದ್ರೋಗ, ಮಧುಮೇಹ ಮತ್ತು ಸ್ತನ ಅಥವಾ ಕರುಳಿನ ಕ್ಯಾನ್ಸರ್‌ನಂತಹ ಆರೋಗ್ಯ ಸಮಸ್ಯೆಗೆ ಸಂಬಂಧಿಸಿದೆ. ದುರದೃಷ್ಟವಶಾತ್ ಡೆಸ್ಕ್ ಉದ್ಯೋಗಿಗಳಲ್ಲಿ ಇದು ಹೆಚ್ಚು ಸಾಮಾನ್ಯವಾಗಿದೆ.

    ಇದನ್ನೂ ಓದಿ: ಮೆಕ್ಕೆಜೋಳ ತಿಂದ್ರೆ ತೂಕ ಇಳಿಸೋದು ಬಹಳ ಸುಲಭವಂತೆ

    ನಿಮ್ಮ ಡೆಸ್ಕ್ ಕೆಲಸ ಮತ್ತು ನಿಮ್ಮ ಫಿಟ್‌ನೆಸ್ ನಡುವೆ ನೀವು ಹೇಗೆ ಸಮತೋಲನ ಸಾಧಿಸಬಹುದು ಎಂಬುದನ್ನು ತಿಳಿಯುವುದು ತುಂಬಾ ಮುಖ್ಯ. ಡೆಸ್ಕ್ ನಲ್ಲಿ ಕೆಲಸ ಮಾಡುವವರಿಗೆ ಫಿಟ್ನೆಸ್ ಸಲಹೆ ಹೀಗಿದೆ..

    ಮಿನಿ ಬ್ರೇಕ್ ತೆಗೆದುಕೊಳ್ಳಿ

    ನೀವು ಡೆಸ್ಕ್ ಕೆಲಸ ಮಾಡುತ್ತಿದ್ದೀರಿ ಎಂದ ಮಾತ್ರಕ್ಕೆ ನೀವು ಇಡೀ ದಿನ ನಿಮ್ಮ ಮೇಜಿನ ಮೇಲೆ ಅಂಟಿಕೊಂಡಿರಬೇಕು ಎಂದೇನಿಲ್ಲ. ಹಾಗಾಗಿ ಕೆಲಸದ ನಡುವೆ ಎದ್ದು ನಿಂತು. ಗಂಟೆಗೆ ಒಮ್ಮೆಯಾದರೂ ಎದ್ದೇಳಿ. ಸ್ವಲ್ಪ ಅಡ್ಡಾಡಿ. ಚಹಾ ಕುಡಿಯಿರಿ. ಏನು ಬೇಕಾದರೂ ಮಾಡಿ. ಆದರೆ ಪ್ರತಿ ಗಂಟೆಗೆ ಒಮ್ಮೆ ನಿಮ್ಮ ಆಸನದಿಂದ ಎದ್ದೇಳಿ.

    ಊಟದ ವಿರಾಮ ಲಾಭ ಪಡೆಯಿರಿ

    ನಿಮ್ಮ ಊಟದ ವಿರಾಮದಲ್ಲಿ ಕುಳಿತು ವಿಶ್ರಾಂತಿ ಪಡೆಯಲು ಇದು ಪ್ರಚೋದಿಸುತ್ತದೆ. ಊಟದ ಸಮಯದಲ್ಲಿ ಸ್ವಲ್ಪ ನಡಿಗೆ ದೇಹಕ್ಕೆ ಪ್ರಯೋಜನ ನೀಡುತ್ತದೆ. ಇದು ಪರಿಣಾಮಕಾರಿಯಾಗಿರಲು ನೀವು ಹೆಚ್ಚು ದೂರ ಹೋಗಬೇಕಾಗಿಲ್ಲ. ಸಹೋದ್ಯೋಗಿಗಳ ಜೊತೆ ಮಾತಾಡಿ. ದೈನಂದಿನ ದಿನಚರಿಯಲ್ಲಿ ನಡಿಗೆ ಸೇರಿಸಿ.

     ಸ್ವಲ್ಪ ಬ್ರೇಕ್ ತೆಗೆದುಕೊಂಡು ವ್ಯಾಯಾಮ ಮಾಡಿ

    ನಿಮ್ಮ ಮೇಜಿನ ಬಳಿ ದೇಹ ಹಿಗ್ಗಿಸಿ, ಮುಂದಕ್ಕೆ ಬಾಗಿ. ಜೊತೆಗೆ 30 ಸೆಕೆಂಡುಗಳ ಕಾಲ ಬಾಗಿ ಕುಳಿತುಕೊಳ್ಳಿ. ನಿಮ್ಮ ಕಾಲ್ಬೆರಳುಗಳನ್ನು ಸ್ಪರ್ಶಿಸಿ. ಜಂಪಿಂಗ್ ಜ್ಯಾಕ್‌ ಮಾಡಿ. ನೀವು ಬಯಸಿದರೆ ನೀವು ಸಿಟ್ ಅಪ್ ಕೂಡ ಮಾಡಬಹುದು. ನಿಮ್ಮ ರಕ್ತ ಪಂಪ್ ಮಾಡಲು ಇದು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ೆಂಬುದನ್ನು ನೀವು ನೆನಪಿಡಿ.

    ಕಚೇರಿ ಸಭೆಗಳಲ್ಲಿ ಸ್ವಲ್ಪ ಹೊತ್ತು ನಿಂತುಕೊಳ್ಳಿ

    ಪ್ರತಿ ಕಚೇರಿಯಲ್ಲಿ ಸಭೆಗಳು ನಡೆಯುತ್ತವೆ. ಆದ್ದರಿಂದ ನೀವು ಸಭೆ ನಡೆಸುತ್ತಿದ್ದರೆ ಅಲ್ಲಿ ಕುಳಿತುಕೊಳ್ಳುವ ಬದಲು ಸಭೆಯಲ್ಲಿ ನಿಂತುಕೊಳ್ಳಿ. ನೀವು ಯಾರೊಂದಿಗಾದರೂ ಫೋನ್‌ನಲ್ಲಿ ಏನನ್ನಾದರೂ ಚರ್ಚಿಸುತ್ತಿದ್ದರೆ ಯಾವಾಗಲೂ ಸ್ವಕ್ಪ ಓಡಾಡುತ್ತಾ ಇರಿ. ಇದರೊಂದಿಗೆ ನೀವು ಎಲ್ಲಾ ಸಮಯದಲ್ಲೂ ಕುಳಿತುಕೊಳ್ಳಬೇಕಾಗಿಲ್ಲ.

    ಇದನ್ನೂ ಓದಿ: ದಿನಕ್ಕೊಂದು ಎಸಳು ಬೆಳ್ಳುಳ್ಳಿ ತಿಂದ್ರೆ ಸಾಕು ಲಿವರ್ ಆರೋಗ್ಯ ಚೆನ್ನಾಗಿರುತ್ತೆ

    ಲಿಫ್ಟ್ ಬಳಸಬೇಡಿ

    ನೀವು ಮನೆಯ ಮಹಡಿ, ಕಚೇರಿ ತಲುಪಲು ಸ್ಟೆಪ್ ಹತ್ತಿರಿ. ಲಿಫ್ಟ್ ಬಳಕೆ ತಪ್ಪಿಸಿ. ಹೀಗೆ ಸ್ಟೆಪ್ ಹತ್ತುವುದನ್ನು ನಿಮ್ಮ ದಿನಚರಿಯ ಭಾಗವನ್ನಾಗಿ ಮಾಡಿ. ಲಿಫ್ಟ್ ಬಳಸಿದರೆ ಇದು ನಿಮ್ಮ ಆರೋಗ್ಯದ ಮೇಲೂ ಭಾರಿ ಪರಿಣಾಮ ಬೀರುತ್ತದೆ. ಹಾಗಾಗಿ ಮೆಟ್ಟಿಲು ಹತ್ತಿಳಿಯಿರಿ.
    Published by:renukadariyannavar
    First published: