Birth Control Pills: ತಾಯಿಯಾಗಲು ಬಯಸದವರು ಹಾಗೂ ಮಾತ್ರೆ ಸೇವಿಸಲು ಆಗದವರಿಗೆ ಸಿಗಲಿದೆ ಜನನ ನಿಯಂತ್ರಣ ಅಗಿಯುವ ಮಾತ್ರೆ!

ಮಹಿಳೆಯರು ಸಂಭೋಗದ 24 ರಿಂದ 48 ಅಥವಾ 72 ಗಂಟೆಗಳ ಒಳಗೆ ಜನನ ನಿಯಂತ್ರಣ ಮಾತ್ರೆಗಳನ್ನು ಸೇವನೆ ಮಾಡಬೇಕಾಗುತ್ತದೆ. ಈಗ ಒಂದು ಮಾತ್ರೆ ಮುನ್ನೆಲೆಗೆ ಬಂದಿದೆ. ಅದನ್ನು ನೀವು ಸೇವಿಸಿ, ನೀರು ಕುಡಿಯಬೇಕಾಗಿಲ್ಲ. ಬದಲಾಗಿ ಅದನ್ನು ಬಾಯಲ್ಲಿ ಹಾಕಿಕೊಂಡು ಅಗಿಯಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕೆಲವೊಮ್ಮೆ ಹಲವು ಕಾರಣಗಳಿಂದ (Many Causes) ತಾಯಿಯಾಗಲು (Mother) ಬಯಸದ ಅನೇಕರು ಇದ್ದಾರೆ. ಅಂದರೆ ತಮಗೆ ಸದ್ಯ ತಾವಿರುವ ಸನ್ನಿವೇಶದಲ್ಲಿ (Situation) ಮಕ್ಕಳನ್ನು (Children’s) ಹೊಂದುವುದು ಸರಿಯಲ್ಲ ಎಂದು ಮನಸ್ಸು ಮಾಡಿರುತ್ತಾರೆ. ಹೀಗಾಗಿಯೇ ಅವರು ಆ ಸಂದರ್ಭದಲ್ಲಿ ತಾಯಿಯಾಗಲು ಬಯಸುವುದಿಲ್ಲ. ಹೀಗಾಗಿ ಲೈಂಗಿಕ ಸಂಪರ್ಕದ ವೇಳೆ ಕಾಂಡೋಮ್ ಬಳಸುತ್ತಾರೆ. ಇಲ್ಲವೇ ಗರ್ಭ ನಿರೋಧಕ ಮಾತ್ರೆಗಳನ್ನು ಸೇವನೆ ಮಾಡುತ್ತಾರೆ. ಆದರೆ ಇದು ಸಾಕಷ್ಟು ಅಡ್ಡ ಪರಿಣಾಮ ಬೀರುತ್ತದೆ. ಗರ್ಭಿಣಿಯಾಗಲು ಬಯಸದ ಮಹಿಳೆಯರಿಗಾಗಿಯೇ ಮಾರುಕಟ್ಟೆಯಲ್ಲಿ ವಿವಿಧ ಹೆಸರಿನ ಗರ್ಭ ನಿರೋಧಕ ಮಾತ್ರೆಗಳು ಲಭ್ಯ ಇವೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಜನನ ನಿಯಂತ್ರಣ ಮಾತ್ರೆಗಳ ಸಹಾಯದಿಂದ ಮಹಿಳೆಯರು ಗರ್ಭ ಧರಿಸುವುದನ್ನು ತಡೆಯುತ್ತಾರೆ.

    ಮಹಿಳೆಯರು ಸಂಭೋಗದ 24 ರಿಂದ 48 ಅಥವಾ 72 ಗಂಟೆಗಳ ಒಳಗೆ ಜನನ ನಿಯಂತ್ರಣ ಮಾತ್ರೆಗಳನ್ನು ಸೇವನೆ ಮಾಡಬೇಕಾಗುತ್ತದೆ. ಇಲ್ಲಿಯವರೆಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಸಂತಾನ ನಿಯಂತ್ರಣದ ಎಲ್ಲಾ ಮಾತ್ರೆಗಳನ್ನು ಸೇವಿಸಿದ ಬಳಿಕ ನೀರು ಕುಡಿಯುತ್ತಾರೆ.

    ಬಾಯಲ್ಲಿ ಹಾಕಿಕೊಂಡು ಅಗಿಯುವ ಜನನ ನಿಯಂತ್ರಣ ಮಾತ್ರೆ

    ಆದರೆ ಈಗ ಒಂದು ಮಾತ್ರೆ ಮುನ್ನೆಲೆಗೆ ಬಂದಿದೆ. ಅದನ್ನು ನೀವು ಸೇವಿಸಿ, ನೀರು ಕುಡಿಯಬೇಕಾಗಿಲ್ಲ. ಬದಲಾಗಿ ಅದನ್ನು ಬಾಯಲ್ಲಿ ಹಾಕಿಕೊಂಡು ಅಗಿಯಬೇಕು.

    ಇದನ್ನೂ ಓದಿ: ದಿನವನ್ನು ತಾಜಾ ಆಗಿರಿಸಲು ಮತ್ತು ಒತ್ತಡ ಮುಕ್ತವಾಗಿರಿಸಲು ಈ ಚಹಾ ಸೇವನೆ ಪ್ರಯೋಜನಕಾರಿ

    ಜನನ ನಿಯಂತ್ರಣದ ಈ ಮಾತ್ರೆಗಳನ್ನು ಚಿಯಿಂಗಮ್ ನಂತೆ ಅಗಿದು ತಿನ್ನಬೇಕು. ನೀರಿಲ್ಲದೆ ಜಗಿದು ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸಬಹುದು. ಅಗಿಯುವ ಜನನ ನಿಯಂತ್ರಣ ಮಾತ್ರೆಗಳು ಇತರ ಜನನ ನಿಯಂತ್ರಣ ಮಾತ್ರೆಗಳಂತೆಯೇ ಕೆಲಸ ಮಾಡುತ್ತವೆ.

    ಅಗಿಯುವ ಜನನ ನಿಯಂತ್ರಣ ಮಾತ್ರೆಗಳು

    ಅಗಿಯುವ ಜನನ ನಿಯಂತ್ರಣ ಮಾತ್ರೆಗಳು ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟಿನ್ ಎಂಬ ಎರಡು ಹಾರ್ಮೋನುಗಳನ್ನು ಹೊಂದಿರುತ್ತವೆ. ಈ ಎರಡೂ ಹಾರ್ಮೋನುಗಳು ಅಂಡೋತ್ಪತ್ತಿಯನ್ನು ತಡೆಯಲು ಮತ್ತು ಗರ್ಭಧಾರಣೆಯ ಅಪಾಯವನ್ನು ಕಡಿಮೆ ಮಾಡಲು ಕೆಲಸ ಮಾಡುತ್ತವೆ.

    ನೀವು ಸಾಮಾನ್ಯ ಜನನ ನಿಯಂತ್ರಣ ಮಾತ್ರೆಗಳನ್ನು ಅಗಿಯಲು ಅಥವಾ ಪುಡಿ ಮಾಡಿ ಸೇವಿಸಲು ಸಾಧ್ಯವಿಲ್ಲ. ಈ ಗರ್ಭ ನಿರೋಧಕ ಮಾತ್ರೆಗಳನ್ನು ನೀವು ಒಂದೇ ಬಾರಿಗೆ ಸೇವಿಸಿ ಕೂಡಲೇ ನೀರು ಕುಡಿಯಬೇಕಾಗುತ್ತದೆ. ಯಾಕೆಂದರೆ ಸಾಮಾನ್ಯವಾಗಿ ಸಿಗುವ ಜನನ ಮಾತ್ರೆಗಳು ಅಗಿಯುವುದು ಅಥವಾ ಪುಡಿ ಮಾಡುವುದರಿಂದ ಅವುಗಳ ಪರಿಣಾಮ ಕಡಿಮೆಯಾಗುತ್ತದೆ.

    ಹಾಗಾದರೆ ನಾವಿಲ್ಲಿ ಹೊಸದಾಗಿ ಬಂದಿರುವ ಅಗಿಯಬಹುದಾದ ಗರ್ಭ ನಿರೋಧಕ ಮಾತ್ರೆಗಳು ಮತ್ತು ಅದರ ಅನುಕೂಲಗಳು ಮತ್ತು ಅನಾನುಕೂಲಗಳ ಬಗ್ಗೆ ನಾವು ಇಲ್ಲಿ ತಿಳಿಯೋಣ.

    ಅಗಿಯಬಹುದಾದ ಜನನ ನಿಯಂತ್ರಣ ಮಾತ್ರೆಗಳು ಯಾವುವು?

    ಅಗಿಯಬಹುದಾದ ಜನನ ನಿಯಂತ್ರಣ ಮಾತ್ರೆಗಳ ಸೇವನೆಗೆ ನೀರು ಕುಡಿಯುವ ಅಗತ್ಯವಿಲ್ಲ. ಇದರಿಂದಾಗಿ ಇದು ಇತರ ಜನನ ನಿಯಂತ್ರಣ ಮಾತ್ರೆಗಳಿಗಿಂತ ಭಿನ್ನವಾಗಿದೆ. ಈ ಮಾತ್ರೆಗಳನ್ನು ಅಗಿಯುವ ಅಥವಾ ಪುಡಿ ಮಾಡುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

    ಚಿವೆಬಲ್ ಮಾತ್ರೆಗಳನ್ನು, ನೀರಿನಿಂದ ಮಾತ್ರೆ ನುಂಗಲು ಇಷ್ಟಪಡದ ಮಹಿಳೆಯರಿಗಾಗಿ ವಿನ್ಯಾಸ ಮಾಡಲಾಗಿದೆ. ಈ ಮಾತ್ರೆಗಳಲ್ಲಿ ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟಿನ್ ಇದೆ. ಹೀಗಾಗಿ ಇದು ಅಂಡಾಶಯದಲ್ಲಿ ಮೊಟ್ಟೆಗಳ ಉತ್ಪತ್ತಿಯನ್ನು ತಡೆಯುತ್ತದೆ.

    ನೀವು ಕೆಲವು ಜನನ ನಿಯಂತ್ರಣ ಮಾತ್ರೆಗಳನ್ನು ಅಗಿಯಬಹುದು ಅಥವಾ ನೀರಿನಿಂದ ಎರಡೂ ರೀತಿಯಲ್ಲಿ ತಿನ್ನಬಹುದು. ಹಾಗಾಗಿ ನೀವು ಚಿವೆಬಲ್ ಜನನ ನಿಯಂತ್ರಣ ಮಾತ್ರೆಗಳನ್ನು ನಿಮಗೆ ಯಾವ ರೀತಿ ಬೇಕೋ ಹಾಗೇ ಸೇವನೆ ಮಾಡಬಹುದು.

    ಅಗಿಯಬಹುದಾದ ಜನನ ನಿಯಂತ್ರಣ ಮಾತ್ರೆಗಳ ಪ್ರಯೋಜನಗಳು

    ಅಗಿಯಬಹುದಾದ ಜನನ ನಿಯಂತ್ರಣ ಮಾತ್ರೆಗಳನ್ನು ಸೇವಿಸುವುದು ತುಂಬಾ ಸುಲಭ. ಔಷಧಿ ನುಂಗಲು ಕಷ್ಟಪಡುವ ಹಾಗೂ ಇಷ್ಟವಿಲ್ಲದ ಮಹಿಳೆಯರಿಗೆ ಅಗಿಯಬಹುದಾದ ಈ ಮಾತ್ರೆಯು ತುಂಬಾ ಪ್ರಯೋಜನಕಾರಿ. ಚೆವಬಲ್ ಜನನ ನಿಯಂತ್ರಣ ಮಾತ್ರೆಗಳು ಇತರ ಜನನ ನಿಯಂತ್ರಣ ಮಾತ್ರೆಗಳಂತೆಯೇ ಪ್ರಯೋಜನಕಾರಿ ಆಗಿವೆ.

    ಅಗಿಯಬಹುದಾದ ಜನನ ನಿಯಂತ್ರಣ ಮಾತ್ರೆಗಳ ಅನಾನುಕೂಲತೆಗಳು

    ಪ್ರತಿಯೊಬ್ಬರೂ ಅಗಿಯಬಹುದಾದ ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಅನೇಕ ಮಹಿಳೆಯರು ಅದರ ರುಚಿಯನ್ನು ಇಷ್ಟ ಪಡುವುದಿಲ್ಲ. ಈ ಔಷಧಿ ತಮ್ಮ ಹಲ್ಲುಗಳಲ್ಲಿ ಸಿಲುಕಿಕೊಳ್ಳುತ್ತದೆ. ಈ ರೀತಿಯ ಗರ್ಭನಿರೋಧಕ ಮಾತ್ರೆಗಳ ಸಂಪೂರ್ಣ ಪ್ರಯೋಜನ ಪಡೆಯಲು ಸರಿಯಾಗಿ ಅಗಿಯುವುದು ಮುಖ್ಯ.

    ಇದನ್ನೂ ಓದಿ: ರಕ್ತದಲ್ಲಿ ಹೆಚ್ಚಳವಾಗುವ ಯೂರಿಕ್ ಆಮ್ಲವನ್ನು ಕಡಿಮೆ ಮಾಡಲು ಇಲ್ಲಿದೆ ಆಯುರ್ವೇದಿಕ್ ಪರಿಹಾರ

    ಸಾಮಾನ್ಯ ಜನನ ನಿಯಂತ್ರಣ ಮಾತ್ರೆಗಳಿಗೆ ಹೋಲಿಸಿದರೆ ಅಗಿಯುವ ಜನನ ನಿಯಂತ್ರಣ ಮಾತ್ರೆಗಳು ಅನೇಕ ಸಮಸ್ಯೆ ಉಂಟು ಮಾಡಬಹುದು. ಬಹಳ ಅಪರೂಪದ ಸಂದರ್ಭಗಳಲ್ಲಿ, ಅಗಿಯಬಹುದಾದ ಜನನ ನಿಯಂತ್ರಣ ಮಾತ್ರೆಗಳು ರಕ್ತ ಹೆಪ್ಪುಗಟ್ಟುವಿಕೆಯ ರಚನೆಗೆ ಕಾರಣವಾಗುತ್ತವೆ.
    Published by:renukadariyannavar
    First published: