ದೇಹದಲ್ಲಿ ವಿಟಮಿನ್ ಡಿ ಕೊರತೆಯಿಂದ ಏನಾಗಬಹುದು? ಬೆಚ್ಚಿ ಬೀಳಿಸಿದೆ ಹೊಸ ವರದಿ

ವಿಟಮಿನ್ ಡಿ ಕೊರತೆಯಾದರೆ ಮೂಳೆಗಳು ದುರ್ಬಲಗೊಳ್ಳುತ್ತವೆ. ದೇಹದಲ್ಲಿನ ಕ್ಯಾಲ್ಸಿಯಂ ಮಟ್ಟವನ್ನು ನಿಯಂತ್ರಿಸುವ ಮೂಲಕ ವಿಟಮಿನ್ ಡಿ ಕಾರ್ಯನಿರ್ವಹಿಸುತ್ತದೆ. 

zahir | news18-kannada
Updated:August 25, 2019, 3:14 PM IST
ದೇಹದಲ್ಲಿ ವಿಟಮಿನ್ ಡಿ ಕೊರತೆಯಿಂದ ಏನಾಗಬಹುದು? ಬೆಚ್ಚಿ ಬೀಳಿಸಿದೆ ಹೊಸ ವರದಿ
ಸಾಂದರ್ಭಿಕ ಚಿತ್ರ
  • Share this:
ನಮ್ಮ ದೇಹದ ಆರೋಗ್ಯ ಕಾಪಾಡಲು ವಿಟಮಿನ್ ಜೀವಸತ್ವಗಳು ತುಂಬಾ ಅವಶ್ಯಕ. ಅದರಲ್ಲೂ ಇಂದಿನ ಜೀವನ ಶೈಲಿಯಲ್ಲಿ ಸಾಮಾನ್ಯವಾಗಿ ಅನೇಕರಲ್ಲಿ ವಿಟಮಿನ್ ಡಿ ಕೊರತೆ ಕಾಡುತ್ತಿರುತ್ತದೆ. ಬಾಲ್ಯದಲ್ಲೇ ಇಂತಹದೊಂದು ಸಮಸ್ಯೆ ಕಾಣಿಸಿಕೊಂಡರೆ ರಿಕೆಟ್ಸ್ ತೊಂದರೆಗೆ ಒಳಗಾಗಬಹುದು. ಅಂದರೆ ಶಿಶುಗಳಲ್ಲಿ ಮೂಳೆಗಳು ರೂಪು ಗೊಳ್ಳುತ್ತಿರುವಾಗಲೇ ವಿಟಮಿನ್ ಡಿ ಕೊರತೆಯಾದರೆ   ರಿಕೆಟ್ಸ್ (ಕುಟಿಲ ವಾತ) ರೋಗಕ್ಕೆ ಕಾರಣವಾಗುತ್ತದೆ.

ವಿಟಮಿನ್ ಡಿ ಕೊರತೆಯಾದರೆ ಮೂಳೆಗಳು ದುರ್ಬಲಗೊಳ್ಳುತ್ತವೆ. ದೇಹದಲ್ಲಿನ ಕ್ಯಾಲ್ಸಿಯಂ ಮಟ್ಟವನ್ನು ನಿಯಂತ್ರಿಸುವ ಮೂಲಕ ವಿಟಮಿನ್ ಡಿ ಕಾರ್ಯನಿರ್ವಹಿಸುತ್ತದೆ.  ಹಾಗೆಯೇ ದೇಹದ ರೋಗನಿರೋಧಕ ಹೆಚ್ಚಿಸುವಲ್ಲಿ ವಿಟಮಿನ್ ಡಿ ಅತ್ಯವಶ್ಯಕ. ಇದರ ಕೊರತೆಯಿಂದಾಗಿ, ಮಧುಮೇಹ, ರಕ್ತಹೀನತೆ, ರಿಕೆಟ್ಸ್ ಮುಂತಾದ ಅನೇಕ ರೀತಿಯ ಕಾಯಿಲೆಗಳು ಉಂಟಾಗಬಹುದು.

ಇತ್ತೀಚೆಗೆ ಜರ್ನಲ್ ಆಫ್ ನ್ಯೂಟ್ರಿಷನ್‌ನಲ್ಲಿ ಪ್ರಕಟವಾದ ಅಧ್ಯಯನವೊಂದರಲ್ಲಿ ವಿಟಮಿನ್ ಡಿ ಕೊರತೆಯಿರುವ ಮಕ್ಕಳು ತುಂಬಾ ಕಿರಿಕಿರಿ, ಕೋಪ, ಒತ್ತಡಕ್ಕೆ ಒಳಗಾಗುತ್ತಾರೆ ಎಂದು ತಿಳಿದುಬಂದಿದೆ. ಮಿಚಿಗನ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಈ ಅಧ್ಯಯನದಲ್ಲಿ ಇಂದಿನ ಮಕ್ಕಳ ಮೇಲೆ ವಿಟಮಿನ್ ಡಿ ಕೊರತೆ ದೊಡ್ಡ ಮಟ್ಟದ ಪ್ರಭಾವ ಬೀರುತ್ತಿದೆ ಎಂದು ತಿಳಿಸಲಾಗಿದೆ.

"ಬಾಲ್ಯ ದಿನಗಳಲ್ಲಿ ವಿಟಮಿನ್ ಡಿ ಕೊರತೆಯಿರುವ ಮಕ್ಕಳು ಹದಿಹರೆಯದ ವಯಸ್ಸನ್ನು ತಲುಪಿದಾಗ ಹೆಚ್ಚು ಒತ್ತಡ, ಕಿರಿಕಿರಿ ಮತ್ತು ಕೋಪಕ್ಕೆ ಒಳಗಾಗುತ್ತಾರೆ" ಎಂದು ಯು-ಎಂ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಸಾಂಕ್ರಾಮಿಕ ರೋಗಶಾಸ್ತ್ರದ ಪ್ರಾಧ್ಯಾಪಕರು ತಿಳಿಸಿದ್ದಾರೆ.

ಇದರಿಂದ ಮಾನಸಿಕ ಸಮಸ್ಯೆಗಳು, ಖಿನ್ನತೆ ಮತ್ತು ಸ್ಕಿಜೋಫ್ರೇನಿಯಾದಂತಹ ಮಾನಸಿಕ ಕಾಯಿಲೆಗಳು ಕಾಣಿಸಿಕೊಳ್ಳುತ್ತದೆ ಎಂದು ಎಚ್ಚರಿಸಿದ್ದಾರೆ.  ಇತ್ತೀಚಿನ ಮಕ್ಕಳಲ್ಲಿ ಕೋಪ, ಖಿನ್ನತೆ, ಮಾನಸಿಕ ಅಸ್ವಸ್ಥತೆ ಕಾಣಿಸಲು ಇದು ಒಂದು ಕಾರಣ ಎಂದು ತಿಳಿಸಲಾಗಿದೆ. ಹಾಗಾಗಿ ಬಾಲ್ಯದಲ್ಲಿ ಮಕ್ಕಳಿಗೆ ಮತ್ತು ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿರುವವರಿಗೆ ಈ ಜೀವಸತ್ವ ಹೆಚ್ಚು ಹೊಂದಿರುವ ಆಹಾರಗಳನ್ನು ಹೆಚ್ಚಾಗಿ ನೀಡಬೇಕೆಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ವಿಟಮಿನ್ 'ಡಿ' ಹೆಚ್ಚಾಗಿರುವ ಆಹಾರಗಳು:
- ಮೊಸರು
Loading...

- ಹಾಲು
- ಅಣಬೆ
- ಚೀಸ್
- ಮೊಟ್ಟೆಯ ಹಳದಿ ಭಾಗ
- ಕಿತ್ತಳೆ ರಸ
- ಕೊಬ್ಬಿನ ಮೀನು (ಒಮೆಗಾ ಆಮ್ಲ ಹೊಂದಿರುವ ಸೀ ಫುಡ್)

First published:August 25, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...