World Mental Health Day 2021: ನಿಮ್ಮ ಮಕ್ಕಳ ಮಾನಸಿಕ ಆರೋಗ್ಯ ನಿಮ್ಮ ಕೈಯಲ್ಲೇ ಇದೆ, ಅವರು ಚಿಕ್ಕವರಿದ್ದಾಗಲೇ ಹೀಗೆ ಮಾಡಿ!

Importance of Mental Health in Kids: ಕೆಲ ಪೋಷಕರು ಮಕ್ಕಳಿಗೆ ಶಿಸ್ತು ಹೇಳುಕೊಡುವ ಭರದಲ್ಲಿ ಮಕ್ಕಳಲ್ಲಿ ಭಯ ನಿರ್ಮಾಣ ಮಾಡಿರುತ್ತಾರೆ. ಇದರಿಂದ ಮಕ್ಕಳು ಪೋಷಕರನ್ನು ನೋಡಿ ಹೆಚ್ಚು ಹೆದರಬಹುದು. ತಮ್ಮ ಜೀವನದಲ್ಲಾಗುವ ಸಮಸ್ಯೆಗಳ ಬಗ್ಗೆ ಅವರು ತಂದೆ ತಾಯಿಯೊಂದಿಗೆ ಚರ್ಚಿಸಲು ಭಯ ಪಟ್ಟು, ಮನಸ್ಸಿನ ಮೇಲೆ ಒತ್ತಡ ಹಾಕಿಕೊಳ್ಳುತ್ತಾರೆ. ಇದರಿಂದ ದುಡುಕಿನ ನಿರ್ಧಾರ ತೆಗೆದುಕೊಳ್ಳಬಹುದು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
Mental Health in Kids: ಇತ್ತೀಚಿನ ದಿನಗಳಲ್ಲಿ ಅತಿ ಸಣ್ಣ ವಯಸ್ಸಿನ ಮಕ್ಕಳು ಸಹ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಯ ಹಾದಿ ತುಳಿಯುತ್ತಿದ್ದಾರೆ. ಪ್ರತಿ 40 ನಿಮಿಷಗಳಿಗೆ ಒಂದು ಆತ್ಮಹತ್ಯೆ (Suicide) ಆಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಅದರಲ್ಲೂ ಮಕ್ಕಳು ಮೆಚೂರಿಟಿ (Maturity in Kids) ಬರುವ ಮುನ್ನವೇ ಸಣ್ಣ ವಿಷಯಕ್ಕೂ ಮಾನಸಿಕ ನೆಮ್ಮದಿ (Peace of Mind) ಕಳೆದುಕೊಂಡು ಸಾಯುವ ಆತುರದ ನಿರ್ಧಾರಕ್ಕೆ ಮುನ್ನುಡಿ ಬರೆಯುತ್ತಿದ್ದಾರೆ. ಇಂದು ವಿಶ್ವ ಮಾನಸಿಕ ಆರೋಗ್ಯ ದಿನ(World Mental Health Day). ಇದರ ಅಂಗವಾಗಿ ಮಕ್ಕಳ ಮಾನಸಿಕ ಆರೋಗ್ಯವನ್ನು ಸಣ್ಣ ವಯಸ್ಸಿನಿಂದಲೇ ಸದೃಢಗೊಳಿಸುವ ಮಾರ್ಗವೇನು ಎಂಬುದರ ಬಗ್ಗೆ ಫೋರ್ಟಿಸ್ ಆಸ್ಪತ್ರೆಯ ಮನೋವೈದ್ಯ ಡಾ ವೆಂಕಟೇಶ್ ಬಾಬು ವಿವರಿಸಿದ್ದಾರೆ.

ಪೋಷಕರು ಮಕ್ಕಳೊಂದಿಗೆ ಸ್ನೇಹಿತರಾಗಿರಿ:

ಸಾಮಾನ್ಯವಾಗಿ ಮಕ್ಕಳ ಮನಸ್ಸು ಯಾವುದೇ ಕಲ್ಮಶ ತುಂಬಿರುವುದಿಲ್ಲ. ಅವರ ಸುತ್ತಮುತ್ತಲಿನ ವಾತಾವರಣದ ಮೇಲೆ ಅವರ ಬೆಳವಣಿಗೆ ನಿರ್ಧಾರವಾಗುತ್ತದೆ. ಮಕ್ಕಳು ಹೆಚ್ಚಾಗಿ ಕುಟುಂಬ ಹಾಗೂ ಸ್ನೇಹಿತರ ಮಧ್ಯದಲ್ಲಿಯೇ ಬೆಳಯುತ್ತಾರೆ. ಅದರಲ್ಲೂ ಕುಟುಂಬ ಮಕ್ಕಳ ಬದುಕಿನ ನಿರ್ಣಾಯವಾಗಿರುತ್ತದೆ. ಕೆಲ ಪೋಷಕರು ಮಕ್ಕಳಿಗೆ ಶಿಸ್ತು ಹೇಳುಕೊಡುವ ಭರದಲ್ಲಿ ಮಕ್ಕಳಲ್ಲಿ ಭಯ ನಿರ್ಮಾಣ ಮಾಡಿರುತ್ತಾರೆ. ಇದರಿಂದ ಮಕ್ಕಳು ಪೋಷಕರನ್ನು ನೋಡಿ ಹೆಚ್ಚು ಹೆದರಬಹುದು. ತಮ್ಮ ಜೀವನದಲ್ಲಾಗುವ ಸಮಸ್ಯೆಗಳ ಬಗ್ಗೆ ಅವರು ತಂದೆ ತಾಯಿಯೊಂದಿಗೆ ಚರ್ಚಿಸಲು ಭಯ ಪಟ್ಟು, ಮನಸ್ಸಿನ ಮೇಲೆ ಒತ್ತಡ ಹಾಕಿಕೊಳ್ಳುತ್ತಾರೆ. ಇದರಿಂದ ದುಡುಕಿನ ನಿರ್ಧಾರ ತೆಗೆದುಕೊಳ್ಳಬಹುದು.

ಇದನ್ನೂ ಓದಿ: Importance Of Sleep: ಮಕ್ಕಳಿಗೆ ನಿದ್ದೆ ಕಡಿಮೆಯಾದ್ರೆ ಈ ಎಲ್ಲಾ ಸಮಸ್ಯೆಗಳಾಗುತ್ತದೆ..

ಮಕ್ಕಳ ಅನುಮಾನ ಬಗೆಹರಿಸಿ:

ಮಕ್ಕಳು ಸಮಾಜದ ಮಧ್ಯೆ ಬೆಳೆಯುತ್ತಾ ಸಾಕಷ್ಟು ಹೊಸ ವಿಷಯಗಳನ್ನು ಕಲಿಯುತ್ತಾರೆ. ಈ ಮಧ್ಯೆ ಅವರಿಗೆ ಹಲವು ಅನುಮಾನಗಳು ಬರಬಹುದು. ಉದಾಹರಣೆಗೆ, ಸೆಕ್ಸ್, ಧೂಮಪಾನ, ಮದ್ಯಪಾನ, ಡ್ರಗ್ಸ್, ಇತ್ಯಾದಿ. ಈ ಬಗ್ಗೆ ಪೋಷಕರಲ್ಲಿ ಕೇಳಿದರೆ, ಮಕ್ಕಳನ್ನೇ ಗದರುವ ಸಂದರ್ಭವನ್ನೇ ನೋಡಿದ್ದೇವೆ. ಇದು ಪೋಷಕರ ಮೇಲೆ ಮಕ್ಕಳಲ್ಲಿ ಭಯ ನಿರ್ಮಾಣ ಮಾಡುತ್ತದೆ. ಆದರೆ, ಬೇರಾವುದೋ ಮೂಲದಿಂದ ವಿಷಯ ಅವರಿಗೆ ತಿಳಿಯಬಹುದು. ಇದರಿಂದ ಅವರು ಕೆಟ್ಟ ದಾರಿ ತುಳಿಯುವ ಸಾಧ್ಯತೆ ಹೆಚ್ಚು. ಹೀಗಾಗಿ ಮಕ್ಕಳಿಗೆ ಪೋಷಕರು ಅವರ ಎಲ್ಲಾ ಅನುಮಾನಗಳಿಗೆ ಸಮಾಧಾನ ನೀಡುವ ರೀತಿ ಉತ್ತರಿಸಿ. ಇದರಿಂದ ಪೋಷಕರು ಹಾಗೂ ಮಕ್ಕಳ ಮಧ್ಯೆ ಬಾಂಧವ್ಯ ಉತ್ತಮವಾಗುತ್ತದೆ. ಜೊತೆಗೆ ಮಕ್ಕಳು ಎಲ್ಲಾ ವಿಷಯವನ್ನು ಪೋಷಕರ ಬಳಿ ಹೇಳಿಕೊಳ್ಳಲು ಮುಜುಗರ ಪಡುವುದಿಲ್ಲ.

ಮಕ್ಕಳ ಮಾನಸಿಕ ಆರೋಗ್ಯ ಕೆಡಲು ಇವು ಕಾರಣ:

ಮಕ್ಕಳ ಬೆಳವಣಿಗೆ ಮೇಲೆ ಪೋಷಕರು ನಿಗಾ ವಹಿಸಬೇಕು. ಕೆಟ್ಟ ಸಹವಾಸ, ಪೋಷಕರು ಆತ್ಮೀಯವಾಗಿರದೇ ಇರುವುದು, ಹೆಚ್ಚು ಅಂಕ ಪಡೆಯಲು ಒತ್ತಡ ಹಾಕುವುದು, ಇತರೆ ಮಕ್ಕಳೊಂದಿಗೆ ಹೋಲಿಸುವುದು, ಮಕ್ಕಳನ್ನು ನಿರ್ಲಕ್ಷಿಸುವುದು ಸೇರಿದಂತೆ ಹಲವು ವಿಷಯಗಳಿಂದ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತಾ, ಅವರು ಮಾನಸಿಕವಾಗಿ ಕುಗ್ಗಬಹುದು.

ಒತ್ತಡ ಹಾಕಬೇಡಿ:

ಇತ್ತಿಚಿನ ದಿನಗಳಲ್ಲಿ ಮಕ್ಕಳು ಹೆಚ್ಚು ಅಂಕ ಪಡೆಯಬೇಕು ಎಂಬ ಒತ್ತಡ ಹೆಚ್ಚಾಗುತ್ತಿದೆ. ಕೆಲ ಪೋಷಕರು ಮಕ್ಕಳು ಶೇ.100ರಷ್ಟು ಅಂಕ ಪಡೆಯಬೇಕೆಂದು ಬಯಸುತ್ತಾರೆ. ಇದನ್ನೇ ಮಕ್ಕಳ ಮನಸ್ಸಿಗೂ ತುಂಬುವುದಲ್ಲದೇ ಬೇರಾವ ಚಟುವಟಿಕೆಯಲ್ಲೂ ಬೆರೆಯಲು ಅವಕಾಶ ನೀಡದೇ ಕೇವಲ ಪಠ್ಯಕ್ಕೆ ಸೀಮಿತವಾಗಿಸುತ್ತಾರೆ. ಇದರಿಂದ ಮಕ್ಕಳು ಹೆಚ್ಚು ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಪೋಷಕರು ಈ ನಡವಳಿಕೆ ಬದಲಿಸಿಕೊಳ್ಳುವುದು ಉತ್ತಮ.

ಇದನ್ನೂ ಓದಿ: Child Care: ಮಕ್ಕಳ ಮೆದುಳು, ದೈಹಿಕ ಬೆಳವಣಿಗೆ ಉತ್ತಮವಾಗಿರಬೇಕಾದ್ರೆ ದೈಹಿಕ ಚಟುವಟಿಕೆಯಲ್ಲಿ ತೊಡಗಿಸುವುದು ಮರೆಯಬೇಡಿ..!

ಸಾಮಾಜಿಕ ಜಾಲತಾಣಗಳಿಂದ ದೂರ ಇರಿಸಿ:

ಮಕ್ಕಳಿಗೆ ಮೊಬೈಲ್ ತೋರಿಸಿಯೇ ಊಟ ಮಾಡಿಸುವ ಸ್ಥಿತಿ ಇಂದು ನಿರ್ಮಾಣವಾಗಿದೆ. ಹದಿಹರಿಯದ ಮಕ್ಕಳು ಸಹ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಕ್ರಿಯಾಶೀಲರಾಗಿದ್ದಾರೆ. ಆದರೆ, ಕೆಲವೊಮ್ಮೆ ಅವರು ಯಾರ ಸಂಪರ್ಕ ಹೊಂದಿದ್ದಾರೆ ಎಂಬುದರ ಬಗ್ಗೆ ಪೋಷಕರು ನಿಗಾ ವಹಿಸಬೇಕು. ಇಲ್ಲವಾದರೆ, ಇದು ಸಹ ಮಕ್ಕಳ ಭವಿಷ್ಯವನ್ನೇ ಹಾಳು ಮಾಡುವ ಸಾಧ್ಯತೆ ಇದೆ.

ಖಿನ್ನತೆಗೊಳಗಾದ ಮಗುವನ್ನು ಹೊರ ತರುವ ಮಾರ್ಗ:

ಕೆಲ ಮಕ್ಕಳು ಖಿನ್ನತೆಯಿಂದ ಬಳಲುತ್ತಿರುತ್ತಾರೆ. ಸದಾ ಒಂಟಿಯಾಗಿರುವುದು, ಯಾರೊಂದಿಗೂ ಮಾತನಾಡದೇ ಇರುವುದು, ಯಾವುದೇ ಚಟುವಟಿಕೆಯಲ್ಲಿ ಭಾಗವಹಿಸದೇ ಇರುವುದು, ಊಟ ಮಾಡದೇ ಇರುವುದು ಇಂಥ ನಡವಳಿಕೆ ಕಂಡು ಬಂದರೆ ಆ ಮಗು ಖಿನ್ನತೆಗೆ ಒಳಗಾಗಿರಬಹುದು. ಅಂಥ ಮಕ್ಕಳೊಂದಿಗೆ ಪೋಷಕರು ಹೆಚ್ಚು ಆತ್ಮೀಯವಾಗಿ ಬೆರೆಯಲು ಪ್ರಯತ್ನಿಸಿ. ಒಂದು ವೇಳೆ ಮಕ್ಕಳು ಅದನ್ನು ಇಷ್ಟ ಪಡದೇ ಹೋದರೆ, ಆಪ್ತ ಸಮಾಲೋಚರನ್ನು ಭೇಟಿ ಮಾಡಿಸಿ. ಸ್ಥಳ ಬದಲಾವಣೆ ಮಾಡಿ. ಮಗುವಿಗೆ ಇಷ್ಟವಾಗುವ ಕೆಲಸ ಮಾಡಲು ಬಿಡಿ. ಒಂಟಿಯಾಗಿ ಬಿಡಬೇಡಿ. ಹೀಗೆ ಮಾಡುವುದರಿಂದ ಮಕ್ಕಳ ಮನಸ್ಸು ಬದಲಾಗುತ್ತದೆ.
Published by:Soumya KN
First published: