Health Problem: ಬರೋಬ್ಬರಿ 30 ವರ್ಷಗಳಿಂದ ನಿಂತುಕೊಂಡೇ ಇದ್ದಾರೆ ಈ ಮಹಿಳೆ! ಕಾರಣ ಏನು ಗೊತ್ತಾ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹೆಚ್ಚು ಹೊತ್ತು ಒಂದೇ ಕಡೆ ನಿಂತು ಕೆಲಸ ಮಾಡುವುದು ಆರೋಗ್ಯದ ಮೇಲೆ ಸಾಕಷ್ಟು ಅಡ್ಡ ಪರಿಣಾಮ ಬೀರುತ್ತದೆ. ಇನ್ನು ಕೆಲವರು ಕುಳಿತುಕೊಂಡೇ ಕೆಲಸ ಮಾಡುತ್ತಾರೆ. ಅಂತವರು ಹೆಚ್ಚು ಹೊತ್ತು ನಿಂತುಕೊಂಡರೆ, ಅಥವಾ ಓಡಾಡಿದರೆ ಅವರ ಪಾದಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

  • Share this:

ಕೆಲವರಿಗೆ ನಿಂತುಕೊಂಡೇ ಕೆಲಸ (Standing Work) ಮಾಡುವ ಅನಿವಾರ್ಯತೆ ಇರುತ್ತದೆ. ವಾಚ್ ಮೆನ್ ಗಳು, ಟ್ರಾಫಿಕ್ ಪೊಲೀಸರು (Traffic Police), ರೆಸ್ಟೋರೆಂಟ್ ಕೆಲಸಗಾರರು (Restaurant Workers) ಹೀಗೆ ತುಂಬಾ ಜನರು (People) ಹೆಚ್ಚು ಹೊತ್ತು ನಿಂತುಕೊಂಡೇ ಕೆಲಸ ಮಾಡಬೇಕಾಗುತ್ತದೆ. ಅಂದ ಹಾಗೇ ಹೆಚ್ಚು ಹೊತ್ತು ಒಂದೇ ಕಡೆ ನಿಂತು ಕೆಲಸ ಮಾಡುವುದು ಆರೋಗ್ಯದ ಮೇಲೆ ಸಾಕಷ್ಟು ಅಡ್ಡ ಪರಿಣಾಮ ಬೀರುತ್ತದೆ. ಇನ್ನು ಕೆಲವರು ಕುಳಿತುಕೊಂಡೇ ಕೆಲಸ ಮಾಡುತ್ತಾರೆ. ಅಂತವರು ಹೆಚ್ಚು ಹೊತ್ತು ನಿಂತುಕೊಂಡರೆ, ಅಥವಾ ಓಡಾಡಿದರೆ ಅವರ ಪಾದಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಆದರೆ ಇಲ್ಲೊಬ್ಬ ಮಹಿಳೆ 30 ವರ್ಷಗಳಿಂದ ಕುಳಿತೇ ಇಲ್ಲವಂತೆ. ಯಾರು ಆ ಮಹಿಳೆ?


ಮಹಿಳೆ ಮೂವತ್ತು ವರ್ಷಗಳಿಂದ ನಿಂತೇ ಇರಲು ಕಾರಣವೇನು?


ಆ ಮಹಿಳೆ ಮೂವತ್ತು ವರ್ಷಗಳಿಂದ ನಿಂತೇ ಇರಲು ಕಾರಣವೇನು ಎಂದು ಇಲ್ಲಿ ತಿಳಿಯೋಣ. ಈ ಮಹಿಳೆ ಒಂದು ನಿಲ್ಲಬೇಕು. ಇಲ್ಲವೇ ಮಲಗಬೇಕು. ಆದರೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ಆಕೆಗೆ ಈಗ 32 ವರ್ಷ ವಯಸ್ಸು. ಆದರೆ ಅವಳು ಕೊನೆಯ ಬಾರಿ ಯಾವಾಗ ಕುಳಿತಿದ್ದಳು ಎಂಬುದು ಆಕೆಗೆ  ನೆನಪಿಲ್ಲ.


ಕುಳಿತುಕೊಳ್ಳಲು ಪ್ರಯತ್ನಿಸಿದರೆ ಸಾಕಷ್ಟು ನೋವಾಗುತ್ತದೆ. ಹೀಗಾಗಿ ಅವಳು ಕುಳಿತುಕೊಳ್ಳಲು ಪ್ರಯತ್ನಿಸುವುದಿಲ್ಲ. ಇದು ತುಂಬಾ ವಿಚಿತ್ರ ಪ್ರಕರಣ ಆಗಿದೆ. 30 ವರ್ಷಗಳಿಂದ ಕುಳಿತುಕೊಳ್ಳಲು ಸಾಧ್ಯವಾಗದೇ ಇರುವ ಈ ಮಹಿಳೆ ಪೋಲೆಂಡ್ ಮೂಲದ ಜೋನ್ನಾ ಕ್ಲಿಚ್. 32 ವರ್ಷದ ಜೊನ್ನಾ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ.


ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ ಈ ಪದಾರ್ಥಗಳನ್ನು ಸೇವಿಸಿದ್ರೆ ತೂಕ ಹೆಚ್ಚೋ ಭಯವಿಲ್ಲ, ಫಿಟ್ ಆಗಿರುತ್ತೀರಿ


ಜೊನ್ನಾ ಬೆನ್ನುಮೂಳೆಯ ಸ್ನಾಯು ಕ್ಷೀಣತೆಯಿಂದ ಬಳಲುತ್ತಿದ್ದಾರೆ. ರೋಗವು 3 ಜೀನ್‌ಗಳ (MYH7, RYR1 ಮತ್ತು CFL2) ರೂಪಾಂತರಗಳಿಂದ ಉಂಟಾಗುತ್ತದೆ. ಸಂದರ್ಶನವೊಂದರಲ್ಲಿ ಜೊನ್ನಾ ಮಾತನಾಡಿ, ಆಕೆ 1-2 ವರ್ಷದವಳಿದ್ದಾಗ ಜೊನ್ನಾಗೆ ಕುಳ್ಳಿರಿಸಲು ಅವಳ ತಾಯಿ ಪ್ರಯತ್ನಿಸಿದ್ದರು. ಆದರೆ ಅದಾದ ನಂತರ ಜೊನ್ನಾ ಮತ್ತೆ ಕುಳಿತಿರುವ ನೆನಪೇ ಇಲ್ಲವಂತೆ.


ಜೊನ್ನಾ ಸೊಂಟದ ಮೂಳೆಗಳು ಬೆಸೆದುಕೊಂಡಿವೆ


ಇಷ್ಟು ವರ್ಷ ನಿಂತೇ ಇದ್ದುದರಿಂದ ತಮ್ಮ ಪಾದಗಳು ಯಾವಾಗ ಬೇಕಾದರೂ ಹಾಳಾಗಬಹುದು ಎಂಬ ಭಯವಿದೆ. ರೋಗವು ಅವಳ ಸೊಂಟ ಮತ್ತು ಪಾದಗಳ ಕೀಲುಗಳನ್ನು ಜೋಡಿಸಿದೆ. ಹೀಗಾಗಿ ಸಪೋರ್ಟ್ ಇಲ್ಲದೇ ಆಕೆ ನಿಂತಿರಲು ಸಾಧ್ಯವಿಲ್ಲ.


ಈ ಸ್ಥಿತಿಯಲ್ಲಿ ಜೊನ್ನಾ ಬೆನ್ನುಹುರಿಯ ಸ್ನಾಯುಗಳು ದುರ್ಬಲಗೊಂಡಿವೆ, ಇದರಿಂದ ನಡೆಯಲು ಮತ್ತು ನಿಲ್ಲಲೂ ಸಾಧ್ಯವಾಗುತ್ತಿಲ್ಲ. ನಾನು ಎಂದಿಗೂ ಕುಳಿತುಕೊಳ್ಳಲು ಸಾಧ್ಯವಿಲ್ಲ. ನೇರವಾದ ಗಾಲಿಕುರ್ಚಿಗಳ ಸಹಾಯದಿಂದ ನಿಲ್ಲುವುದು ಮತ್ತು ಮಲಗುವುದು ಮಾಡುವುದಾಗಿ ಹೇಳಿದ್ದಾಳೆ.


ಆಸರೆಯಿಲ್ಲದೆ ಯಾವ ಕೆಲಸವೂ ಮಾಡುವುದಿಲ್ಲ


ದಿನನಿತ್ಯದ ಕೆಲಸ, ಶೌಚಕ್ಕೆ ಹೋಗುವಾಗ, ಸ್ನಾನ ಮಾಡುವಾಗ ಆಸರೆಯಿಲ್ಲದೆ ಮಾಡಲು ಸಾಧ್ಯವಿಲ್ಲ. ಜೊನ್ನಾ 21 ವರ್ಷ ವಯಸ್ಸಿನವರೆಗೆ ತನ್ನೆಲ್ಲಾ ಕೆಲಸಗಳನ್ನು ತಾನೇ ಮಾಡಿಕೊಂಡಿದ್ದಳು. ಆದರೆ ಈಗ ಅವಳಿಗೆ ಸಪೋರ್ಟ್ ಬೇಕೇ ಬೇಕು. 2011 ರಲ್ಲಿ ಆಗಿನ ಗೆಳೆಯ ಸ್ಟಾಫರ್ಡ್‌ಶೈರ್‌ ಜೊತೆ ಆಕೆ ಯುಕೆಗೆ ತೆರಳಿದಳು. ಆ ಸಮಯದಲ್ಲಿ ಅವಳು ವಿಶೇಷ ಗಾಲಿಕುರ್ಚಿಯಲ್ಲಿ ನಡೆಯುವುದು, ನಿಲ್ಲುವುದು ಮಾಡುತ್ತಿದ್ದಳು.


ದೇಹದಲ್ಲಿ ಯಾವಾಗಲೂ ನೋವು ಇರುತ್ತದೆ. ತೂಕವು ತುಂಬಾ ಹೆಚ್ಚಾಗಿದೆ. ನನ್ನ ಕಾಲುಗಳು, ಮೊಣಕಾಲುಗಳು ದುರ್ಬಲವಾಗಿವೆ. ನನ್ನ ಬೆನ್ನುಮೂಳೆ ಅಷ್ಟು ಭಾರ ಸಹಿಸುವುದಿಲ್ಲ. ಸ್ವಲ್ಪ ಸಮಯದ ಹಿಂದೆ ತೂಕವು 10 ಕೆಜಿಯಷ್ಟು ಹೆಚ್ಚಾಗಿದೆ. ಇದರಿಂದ ಸ್ಥಿತಿ ಇನ್ನಷ್ಟು ಹದಗೆಟ್ಟಿತು. ಅದರ ನಂತರ ನಾನು 10 ಕೆಜಿ ತೂಕ ಕಳೆದುಕೊಂಡೆ. ಆದರೆ ನನ್ನ ಸ್ಥಿತಿ ಇನ್ನೂ ತುಂಬಾ ಗಂಭೀರವಾಗಿದೆ ಎಂದಿದ್ದಾರೆ.


ಇದನ್ನೂ ಓದಿ: ಕೈಗಳಲ್ಲಿ ಮರಗಟ್ಟುವಿಕೆ, ಜುಮ್ಮೆನ್ನುವುದನ್ನು ನಿರ್ಲಕ್ಷ್ಯ ಮಾಡದೇ, ಸಮಸ್ಯೆಯ ಬಗ್ಗೆ ಅರಿಯಿರಿ


ಹಣ ಸಂಗ್ರಹಿಸಿ ಶಸ್ತ್ರಚಿಕಿತ್ಸೆ


GoFundMe ಮೂಲಕ ಹಣ ಠೇವಣಿ ಮಾಡುತ್ತಿದ್ದೇನೆ. ಹಣ ಸಂಗ್ರಹವಾದ ಮೇಲೆ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತೇನೆ. ಆ ಶಸ್ತ್ರಚಿಕಿತ್ಸೆ ನನ್ನ ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ನನ್ನ ಜೀವನವನ್ನು ಸುಲಭಗೊಳಿಸುತ್ತದೆ. ಸರ್ಜರಿಯಲ್ಲಿ ಸಾವು ಸಂಭವಿಸುವ ಅಪಾಯವಿದೆ. ಆದರೆ ರಿಸ್ಕ್ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ ಜೊನ್ನಾ.

top videos
    First published: