Bridesmaid Dress : ಸ್ನೇಹಿತೆಯ ಮದುವೆಗೆ ತಯಾರಾಗಲು ಇಲ್ಲಿದೆ ಟಿಪ್ಸ್

Wedding Gide : ಮದುವೆಯಲ್ಲಿ ಸಂತಸ ಸಂಭ್ರಮದಿಂದ ಓಡಾಡಲು ಮತ್ತು ವಧುವಿನ ಜೊತೆ ಇರುವಾಗ ನೀವೇ ಸುಂದರವಾಗಿ ಕಾಣದಿದ್ದರೆ ಹೇಗೆ? ಅಲ್ಲಿ ನೀವು ವಧುವಿನ ಜೊತೆ ಇರುವ ಕಾರಣ ಹಲವಾರು ಕಣ್ಣುಗಳು ನಿಮ್ಮನ್ನ ಗಮನಿಸುತ್ತವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮದುವೆ ಸೀಸನ್ ಅಂದ ಮೇಲೆ ಅಲಂಕಾರದ ಬಗ್ಗೆ ಮಾತನಾಡದೆ ಇದ್ದರೆ ಹೇಗೆ, ಅದರಲ್ಲೂ ವಧುವಿನ ಸ್ನೆಹಿತೆಯಾಗಿದ್ದರೇ ನಿಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ನೀವು ವಧುವಿನ ಬೇಕು ಬೇಡಗಳನ್ನು ನೋಡಿಕೊಳ್ಳುವುದರ ಜೊತೆಗೆ ನೀವು ಸುಂದರವಾಗಿ ತಯಾರಾಗಬೇಕು. ಮದುವೆಯಲ್ಲಿ ಸಂತಸ ಸಂಭ್ರಮದಿಂದ ಓಡಾಡಲು ಮತ್ತು ವಧುವಿನ ಜೊತೆ ಇರುವಾಗ ನೀವೇ ಸುಂದರವಾಗಿ ಕಾಣದಿದ್ದರೆ ಹೇಗೆ? ಅಲ್ಲಿ ನೀವು ವಧುವಿನ ಜೊತೆ ಇರುವ ಕಾರಣ ಹಲವಾರು ಕಣ್ಣುಗಳು ನಿಮ್ಮನ್ನ ಗಮನಿಸುತ್ತವೆ. ಹಾಗಾದ್ರೆ ಮದುವೆಗೆ ಯಾವ ರೀತಿ ತಯಾರಾಗಬೇಕು ಎಂಬುದು ಇಲ್ಲಿದೆ.  

ಸಾಧ್ಯವಾದಷ್ಟು ಕೆಂಪು ಬಣ್ಣದಿಂದ ದೂರವಿರಿ

ಮೊದಲೆ ನೀವೆಲ್ಲ ಸ್ನೇಹಿತೆಯರು ಸೇರಿ ಬಣ್ಣವನ್ನು  ನಿರ್ಧರಿಸಿದ್ದರೆ, ಅದಕ್ಕೆ ತಕ್ಕದಾದ ಬಟ್ಟೆಯನ್ನು ಆರಿಸಿಕೊಳ್ಳಿ. ಇಲ್ಲದಿದ್ದರೆ, ಸಾಂಪ್ರದಾಯಿಕ ಕೆಂಪು ಬಣ್ಣವನ್ನು ಆಯ್ಕೆ ಮಾಡದಿರುವುದು ಉತ್ತಮ. ಏಕೆಂದರೆ ಅದು ಯಾವಾಗಲೂ ವಧುವಿಗೆ ಮೀಸಲಾಗಿರುತ್ತದೆ. ನಿಮ್ಮ ಚರ್ಮಕ್ಕೆ ಹೊಂದುವಂತೆ ಬಣ್ಣಗಳ ಬಟ್ಟೆಯನ್ನು ಆಯ್ಕೆ ಮಾಡಿಕೊಳ್ಳಿ. ನೀಲಿ, ಹಳದಿ ಹೀಗೆ ಸುಂದರವಾಗಿ ಕಾಣುವಂತೆ ಯೋಚಿಸಿ.

ಹಗುರವಾದ ಬಟ್ಟೆಗಳನ್ನು ಆರಿಸಿ

ನೀವು ಮದುವೆಯ ಮನೆಯಲ್ಲಿ ಹೆಚ್ಚು ಕೆಲಸಗಳನ್ನು ಮಾಡಬೇಕಾಗುತ್ತದೆ. ಅತ್ತಿಂದಿತ್ತ ಓಡಾಡುವ ಕೆಲಸಗಳಿರುತ್ತದೆ. ಇಂಥಹ ಸಂದರ್ಭದಲ್ಲಿ ಭಾರವಾದ ಬಟ್ಟೆಯನ್ನು ಧರಿಸಿದರೆ ನಿಮಗೆ ತೊಂದರೆಯಾಗುತ್ತದೆ. ನೀವು ಡ್ಯಾನ್ಸ್ ಮಾಡುವ ಯೋಚನೆಯಲ್ಲಿದ್ದರೆ ನಿಜಕ್ಕೂ ಹಗುರವಾದ ಬಟ್ಟೆಯನ್ನು ಧರಿಸಿ. ನೀವು ಆಯ್ಕೆ ಮಾಡಿಕೊಳ್ಳುವ ಬಟ್ಟೆ ನಿಮಗೆ ಕಷ್ಟವಾಗಬಾರದು.

ಇದನ್ನೂ ಓದಿ: ಅಡುಗೆಯಲ್ಲಿ ತಪ್ಪುಗಳಾದರೂ ಅದನ್ನು ಸರಿಪಡಿಸಲು ಇಲ್ಲಿವೆ ಟಿಪ್ಸ್

ವಿಭಿನ್ನ ಮುದ್ರಣಗಳಿರುವ ಬಟ್ಟೆ ಆಯ್ಕೆ ಮಾಡಿ.

ನಿಮ್ಮ ಹಗುರವಾದ ಬಟ್ಟೆಗಳ ಮೇಲೆ, ವಿಶಿಷ್ಟವಾಗಿ ಹೂವುಗಳ ಚಿತ್ರವನ್ನು ಹೊಂದಿರುವುದು ಒಳ್ಳೆಯ ಲುಕ್ ನೀಡುತ್ತದೆ. ಇತ್ತೀಚಿನ ದಿನಗಳಲ್ಲಿ ವಿಭಿನ್ನ ಚಿತ್ರಗಳಿರುವ ಬಟ್ಟೆ ಲಭ್ಯವಿದೆ. ನೀವು ಲೆಹೆಂಗಾ ಧರಿಸುವುದಾದರೆ ನಿಮಗೆ ಹೆಚ್ಚು ವೆರೈಟಿ ಸಿಗುತ್ತದೆ.

ಕ್ರಾಪ್ ಟಾಪ್ ಗಳನ್ನು ಬ್ಲೌಸ್ ಆಗಿ ಧರಿಸಿ

ಮದುವೆಯ ಮನೆಯಲ್ಲಿ ಕೆಲಸಗಳ ನಡುವೆ ನಿಮ್ಮ ದುಪ್ಪಟ್ಟಾವನ್ನು ಸಂಭಾಳಿಸುವುದು ಬಹಳ ಕಷ್ಟವಾಗುತ್ತದೆ. ಹಾಗಾಗಿ ಈ ಸಮಸ್ಯೆಯಿಂದ ಪಾರಾಗಲು  ಸಾಂಪ್ರದಾಯಿಕ ಬ್ಲೌಸ್ ಬದಲಿಗೆ ನೈತಿಕ ಕ್ರಾಪ್ ಟಾಪ್ ಧರಿಸಿ. ಲೆಹೆಂಗಾಗಳಿಂದ ಹಿಡಿದು ಪಲಾಜೊ ಪ್ಯಾಂಟ್‌ಗಳ ಜೊತೆಗೆ ಈ ಟಾಪ್‌ಗಳನ್ನು ಧರಿಸಬಹುದು. ಇದು ಮದುವೆ ಮನೆಗೆ ಸರಿ ಹೊಂದುತ್ತದೆ.

ಲೆಹೆಂಗಾ ಬಿಟ್ಟು ಬೇರೆ ಬಟ್ಟೆಗಳ ಬಗ್ಗೆ ಯೋಚಿಸಿ

ಮದುವೆ ಮನೆಗೆ ಕೆವಲ ಲೆಹೆಂಗಾ ಧರಿಸಬೇಕು ಎಂಬುದೇನಿಲ್ಲ. ಲೆಹೆಂಗಾವನ್ನು ಹೊರತುಪಡಿಸಿ ಬಹಳಷ್ಟು ವಿವಿಧ ಆಯ್ಕೆಗಳಿವೆ., ಸೀರೆಗಳು, ಸಲ್ವಾರ್ ಸೂಟ್‌ಗಳು ಮತ್ತು ಅನಾರ್ಕಲಿಗಳಿಂದ ಪಲಾಜೋ ಪ್ಯಾಂಟ್  ಮತ್ತು ಧೋತಿ ಪ್ಯಾಂಟ್‌ಗಳವರೆಗೆ ನಿಮಗೆ ಯಾವುದು ಬೇಕೋ ಅದನ್ನು ಆಯ್ಕೆ ಮಾಡಿ ತೆಗೆದುಕೊಳ್ಳಿ. ನೀವು ಲೆಹೆಂಗಾ ಬಿಟ್ಟು ಬೇರೆ ಬಟ್ಟೆಗಳನ್ನು ಧರಿಸಲು ನಿರ್ಧರಿಸಿದರೆ ಸಾಲು ಸಾಲು ವಿಭಿನ್ನವಾದ ಬಟ್ಟೆಗಳು ನಿಮಗೆ ಲಭ್ಯವಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

 
Published by:Sandhya M
First published: