ತ್ವಚೆಯ ಆರೈಕೆ (Skin Care) ತುಂಬಾ ಮುಖ್ಯ. ಅದರಲ್ಲೂ ವ್ಯಾಲೆಂಟೈನ್ಸ್ ಡೇ (Valentin Day) ಬರುತ್ತಲೇ ಪ್ರತೀ ಹುಡುಗಿಯೂ ತನ್ನ ಸಂಗಾತಿ ಜೊತೆಗೆ ಚೆನ್ನಾಗಿ ಕಾಣಬೇಕು. ಚೆಂದವಾಗಿ ರೆಡಿ ಆಗಬೇಕು. ತನ್ನ ತ್ವಚೆ ಹೊಳೆಯಬೇಕೆಂದು (Skin Brightness) ಬಯಸುತ್ತಾಳೆ. ಚೆಂದದ ಬಟ್ಟೆ ಹಾಕಬೇಕು, ಸಂಗಾತಿ ಇಷ್ಟ ಪಡುವಂತೆ ರೆಡಿ ಆಗ್ಬೇಕು, ಖುಷಿಯಾಗಿರಬೇಕು ಎಂಬುದು ಪ್ರತಿಯೊಬ್ಬ ಮಹಿಳೆಯ ಕನಸು (Women’s Dream). ಸೌಂದರ್ಯ ಮತ್ತು ಹೊಳೆಯುವ ಮೈ ಕಾಂತಿಯು ಆಕೆಗೆ ಮತ್ತಷ್ಟು ಸಂತಸ ತಂದು ಕೊಡುತ್ತದೆ. ಇದು ವಿಶ್ರಾಂತಿ, ಸಂತೋಷ ಮತ್ತು ತೃಪ್ತಿ ನೀಡುತ್ತದೆ. ಇದು ವ್ಯಾಲೆಂಟೈನ್ ವೀಕ್. ಇದರಲ್ಲಿ ಹೆಚ್ಚು ಹೂವು ಮತ್ತು ಚಾಕೊಲೇಟ್ ಮಾರಾಟ ಆಗುತ್ತವೆ.
ತ್ವಚೆಯ ಕಾಳಜಿಗೆ ವಿಶೇಷ ವಿಷಯಗಳು
ಈ ಪ್ರೀತಿಯ ವಾರದಲ್ಲಿ ನೀವು ನಿಮ್ಮ ಚರ್ಮದ ಆರೈಕೆಗೆ ಮತ್ತು ದೋಷರಹಿತ ತ್ವಚೆಗಾಗಿ ಕೆಲವು ಸಲಹೆ ಇಲ್ಲಿದೆ. ಸ್ವಚ್ಛ ಮತ್ತು ಮೊಡವೆ ಮುಕ್ತ ತ್ವಚೆ ಬೇಕು ಎಂಬುದು ಎಲ್ಲರ ಕನಸು. ದೈನಂದಿನ ಚಟುವಟಿಕೆಗಳ ಕೆಲಸದ ಭರಾಟೆಯಲ್ಲಿ ನಮ್ಮ ಬಗ್ಗೆ ನಾವು ಕೇರ್ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ನೀವು ಬಯಸಿದರೆ ತ್ವಚೆಯ ಆರೈಕೆ ದಿನಚರಿ ಅಳವಡಿಸಿಕೊಳ್ಳಬೇಕು. ಕೆಲವು ಮೂಲಭೂತ ಕ್ರಮಗಳು ನಿಮ್ಮ ಚರ್ಮದ ಪೋಷಣೆಗೆ ಸಹಾಯ ಮಾಡುತ್ತದೆ. ಚರ್ಮದ ವಿನ್ಯಾಸ ಸುಧಾರಿಸುವಲ್ಲಿ ವಿಶೇಷ ಪಾತ್ರ ವಹಿಸುತ್ತವೆ.
ಚರ್ಮದ ಹೊಳಪು ಕಾಪಾಡಲು ಸಲಹೆಗಳು ಹೀಗಿವೆ
ಕ್ವಿಕ್ ಶೀಟ್ ಮಾಸ್ಕ್ ಹಾಕುವುದು
ಮುಖ ಶುಚಿಗೊಳಿಸಲು ದಿನದ ಆರೈಕೆ ಮತ್ತು ತ್ವಚೆಯ ಆರೈಕೆಗೆ ಶೀಟ್ ಮಾಸ್ಕ್ ಅನ್ನು ಬಳಸಿ. ಮುಖದ ಮೇಲೆ ತಾಜಾತನ ಮತ್ತು ಹೊಳಪು ನೀಡಲು ಇದು ಸಹಕಾರಿ. ಮಾರುಕಟ್ಟೆಯಲ್ಲಿ ಅನೇಕ ರೀತಿಯ ಶೀಟ್ ಮಾಸ್ಕ್‌ಗಳು ಇವೆ.
ಇವು ಚರ್ಮದ ಪ್ರಕಾರಕ್ಕೆ ತಕ್ಕಂತೆ ಇದೆ. ಯಾರು ಎಣ್ಣೆಯುಕ್ತ ತ್ವಚೆ ಹೊಂದಿದ್ದಾರೋ ಅವರಿಗೆ, ಶುಷ್ಕ ಚರ್ಮದವರಿಗೆ ಹೀಗೆ ಚರ್ಮದ ಪ್ರಕಾರಕ್ಕೆ ತಕ್ಕಂತಹ ಶೀಟ್ ಮಾಸ್ಕ್ ಗಳು ಲಭ್ಯ ಇವೆ.
ವಿಟಮಿನ್ ಇ, ವಿಟಮಿನ್ ಸಿ ಮತ್ತು ಹೈಲುರಾನಿಕ್ ಆಮ್ಲ ಸಮೃದ್ಧ ಶೀಟ್ ಮಾಸ್ಕ್ ಗಳು ಚರ್ಮದ ವಿನ್ಯಾಸ ಸರಿಪಡಿಸುತ್ತವೆ. ನಿಂಬೆ ರಸ, ರೋಸ್ ವಾಟರ್, ಟೊಮೆಟೊ, ಕಿತ್ತಳೆ, ಅಲೋವೆರಾ ಮತ್ತು ಪಪ್ಪಾಯಿ ಪದಾರ್ಥಗಳ ಶೀಟ್ ಮಾಸ್ಕ್‌ಗಳು ಇವೆ.
ಎಫ್ಫೋಲಿಯೇಶನ್
ಮುಖದ ಡೆಡ್ ಸ್ಕಿನ್ ತೆಗೆಯಬೇಕು. ತ್ವಚೆ ಹೊಳೆಯಲು ಇದು ಸಹಕಾರಿ. ವಾರಕ್ಕೆ ಎರಡರಿಂದ ಮೂರು ಬಾರಿ ಹಗುರ ಕೈಗಳಿಂದ ಎಫ್ಫೋಲಿಯೇಶನ್ ಪ್ರಕ್ರಿಯೆ ಮಾಡಿ. ಅಲೋವೆರಾ ಜೆಲ್, ಕಾಫಿ, ನಿಂಬೆ ರಸ, ಸಕ್ಕರೆ ಮತ್ತು ಜೇನುತುಪ್ಪ ಒಂದು ಬೌಲ್ನಲ್ಲಿ ಮಿಶ್ರಣ ಮಾಡಿ.
ಈಗ ವೃತ್ತಾಕಾರವಾಗಿ ಮುಖಕ್ಕೆ ಹಚ್ಚಿ ಮತ್ತು ಲಘು ಕೈಗಳಿಂದ ಮಸಾಜ್ ಮಾಡಿ. ಮುಖದ ಸತ್ತ ಚರ್ಮವು ಹೊರ ಬರುತ್ತದೆ. ಜೇನು ಫೇಸ್ ಸ್ಕ್ರಬ್ ಸಹ ಬಳಸಬಹುದು. 5 ನಿಮಿಷ ಮುಖಕ್ಕೆ ಮಸಾಜ್ ಮಾಡಿ. ಮುಖವನ್ನು ತೊಳೆಯಿರಿ. ತ್ವಚೆಯ ಹೊಳಪು ಕಾಪಾಡಿ, ಚರ್ಮ ಪೋಷಣೆ ಮಾಡುತ್ತದೆ.
ಜಲಸಂಚಯನ ಕಾಪಾಡಿಕೊಳ್ಳಿ
ದೇಹವನ್ನು ಹೈಡ್ರೇಟ್ ಮತ್ತು ಡಿಟಾಕ್ಸ್ ಮಾಡಿ. ನೀರಿನ ಸೇವನೆಯ ಬಗ್ಗೆ ಕಾಳಜಿ ವಹಿಸಿ. ಮೊಡವೆ ಸಮಸ್ಯೆಗೆ ದೇಹದಲ್ಲಿ ನೀರಿನ ಕೊರತೆ ಕಾರಣ. ನೀರಿನ ಸೇವನೆ ಹೆಚ್ಚಿಸಿ. ಸೌಂದರ್ಯ ಉತ್ಪನ್ನಗಳ ಮೂಲಕ ಶುಷ್ಕ ಮತ್ತು ನಿರ್ಜೀವ ತ್ವಚೆ ಹೈಡ್ರೀಕರಿಸುವ ಮೊದಲು ಅವುಗಳಲ್ಲಿ ಗ್ಲಿಸರಿನ್ ಅಂಶ ಇರಬೇಕಾಗುತ್ತದೆ. ದೇಹದಲ್ಲಿ ಸಾಕಷ್ಟು ನೀರು ಇರುವುದು ಸಹ ಅಗತ್ಯ.
ಪೌಷ್ಟಿಕ ಆಹಾರ ಸೇವಿಸಿ
ಆಹಾರದಲ್ಲಿ ಜೀವಸತ್ವಗಳು ಮತ್ತು ಖನಿಜಗಳು ಇರಬೇಕು. ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧ ಆಹಾರದಿಂದ ಮುಖದ ಮೇಲೆ ನೈಸರ್ಗಿಕ ಹೊಳಪು ಬರುತ್ತದೆ.
ಇದನ್ನೂ ಓದಿ: ಸೌಂದರ್ಯಕ್ಕೊಂದೇ ಅಲ್ಲ, ಆರೋಗ್ಯಕ್ಕೂ ಒಳ್ಳೆಯದು ರೋಸ್ ವಾಟರ್
ದೈನಂದಿನ ಆಹಾರದಲ್ಲಿ ಬಣ್ಣ ಬಣ್ಣದ ತರಕಾರಿ ಮತ್ತು ಹಣ್ಣುಗಳನ್ನು ಸೇರಿಸಿ. ಚರ್ಮದ ವಿನ್ಯಾಸ ಸರಿಪಡಿಸುತ್ತದೆ. ರಕ್ತ ಸಂಚಾರವೂ ಸರಾಗವಾಗುತ್ತದೆ. ಚರ್ಮ ಮತ್ತು ಕೂದಲು ಎರಡರಲ್ಲೂ ಬದಲಾವಣೆಯಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ