New Invention: ಮಧುಮೇಹವನ್ನು ತಡೆಯಲು ಬಂದಿದೆ Ultrahuman Chip; ನಿಮ್ಮ ಫಿಟ್​ನೆಸ್​ಗೂ ಸಹಕಾರಿ

ಅಲ್ಟ್ರಾಹ್ಯೂಮನ್ ಅಪ್ಲಿಕೇಶನ್ ಗ್ಲೂಕೋಸ್ ಬಯೋಮಾರ್ಕರ್‌ಗಳನ್ನು ಬಳಸಿಕೊಂಡು ನಿಮ್ಮ ದೇಹದ ಆಹಾರ, ಚಟುವಟಿಕೆ ಮತ್ತು ಜೀವನಶೈಲಿಯ ಪರಿಣಾಮವನ್ನು ಅಳೆಯುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇತ್ತೀಚೆಗೆ ಜನ ಫಿಟ್ ಆಗಿರಲು ಮತ್ತು ಅಧಿಕ ರಕ್ತದೊತ್ತಡ, ಮಧುಮೇಹದಂತಹ ಸಮಸ್ಯೆಗಳಿಂದ ದೂರವಿರಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಾರೆ. ಇದಕ್ಕಂತಾನೇ ಫಿಟ್‌ನೆಸ್ (Fitness) ಟೆಕ್ ಸ್ಟಾರ್ಟ್‌ಅಪ್ 'ಅಲ್ಟ್ರಾಹ್ಯೂಮನ್', ಜನರು ಫಿಟ್ ಆಗಲು ಮತ್ತು ಮಧುಮೇಹವನ್ನು (Diabetes) ತಪ್ಪಿಸಲು ಹೊಸ ವಿಧಾನವನ್ನು ಕಂಡುಹಿಡಿಯುವ ಮೂಲಕ ಸುದ್ದಿಯಲ್ಲಿದೆ. ಮೋಹಿತ್ ಕುಮಾರ್ (Mohith Kumar) ಮತ್ತು ವತ್ಸಲ್ ಸಿಂಘಾಲ್ ಸ್ಥಾಪಿಸಿದ, ಅಲ್ಟ್ರಾ ಹ್ಯೂಮನ್ (Ultrahuman ) ಅಥವಾ ಅಲ್ಟ್ರಾಹ್ಯೂಮನ್ ಸೈಬೋರ್ಗ್ ಎಂಬ ಉತ್ಪನ್ನವು ರಕ್ತದ ಗ್ಲೂಕೋಸ್ ಮತ್ತು ಇತರ ಸುಧಾರಿತ ಬಯೋಮಾರ್ಕರ್‌ಗಳನ್ನು ಪತ್ತೆಹಚ್ಚುವ ಮೂಲಕ ಫಿಟ್‌ನೆಸ್‌ ಮೇಲೆ ಕೇಂದ್ರೀಕರಿಸುತ್ತದೆ. ಅಲ್ಟ್ರಾಹ್ಯೂಮನ್ ಸೈಬೋರ್ಗ್ ನಿಮ್ಮ ಕೆಳ ತೋಳಿಗೆ ಲಗತ್ತಿಸಬೇಕಾದ ಬಯೋಸೆನ್ಸರ್ ಅನ್ನು ಒಳಗೊಂಡಿದೆ.

ಈ ಜೈವಿಕ ಸಂವೇದಕವು ಮೂಲಭೂತವಾಗಿ ನಿಮ್ಮ ರಕ್ತದ ಗ್ಲೂಕೋಸ್ ಮಟ್ಟವನ್ನು ತೋರಿಸುತ್ತದೆ ಮತ್ತು Ultrahuman ಎಂಬ ಐಫೋನ್‌ನಲ್ಲಿರುವ ಅಪ್ಲಿಕೇಶನ್‌ ಅನ್ನು ಸಹ ಬೆಂಬಲಿಸುತ್ತದೆ.

ಜೊಮಾಟೊದೊಂದಿಗೆ ವಿಲೀನ

ಮೋಹಿತ್ ಕುಮಾರ್ ಮತ್ತು ವತ್ಸಲ್ ಸಿಂಘಾಲ್ ಅವರು ರನ್ನರ್ ಎಂಬ ಹೈಪರ್ ಲೋಕಲ್ ಲಾಜಿಸ್ಟಿಕ್ಸ್ ಸೇವಾ ಪೂರೈಕೆದಾರರನ್ನು ಈ ಹಿಂದೆ ಸ್ಥಾಪಿಸಿದ್ದರು, ಇದನ್ನು 2017ರಲ್ಲಿ ಜೊಮಾಟೊದೊಂದಿಗೆ ವಿಲೀನಗೊಳಿಸಲಾಯಿತು. ಜೊಮಾಟೊನಲ್ಲಿ ಕೆಲವು ವರ್ಷಗಳ ಕಾಲ ಕೆಲಸ ಮಾಡಿದ ನಂತರ, ಮೋಹಿತ್ ಮತ್ತು ವತ್ಸಲ್ ಅಲ್ಟ್ರಾಹ್ಯೂಮನ್ ಅನ್ನು ಪ್ರಾರಂಭಿಸಲು ನಿರ್ಧರಿಸಿದರು.

ನ್ಯೂಸ್ 18 ಟೆಕ್‌ನ ದೇಬಾಶಿಸ್ ಸರ್ಕಾರ್ ಅವರೊಂದಿಗಿನ ಸಂವಾದದಲ್ಲಿ ಅಲ್ಟ್ರಾಹ್ಯೂಮನ್‌ನ ಸಹ-ಸಂಸ್ಥಾಪಕ ಮತ್ತು ಸಿಟಿಒ ವತ್ಸಲ್ ಸಿಂಘಾಲ್, ಫಿಟ್‌ನೆಸ್‌ಗಾಗಿ ನೈಜ-ಸಮಯದ ಗ್ಲೂಕೋಸ್ ಅನ್ನು ಟ್ರ್ಯಾಕ್ ಮಾಡುವ ಪರಿಕಲ್ಪನೆಯನ್ನು ಹಂಚಿಕೊಂಡಿದ್ದಾರೆ.

ಅಲ್ಟ್ರಾಹ್ಯೂಮನ್ ಚಿಪ್ ಪರಿಕಲ್ಪನೆ

ಇದು ನಿಮ್ಮ ರಕ್ತದಲ್ಲಿನ ಗ್ಲೂಕೋಸ್ ಅನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡುವ ಮೂಲಕ ನೀವು ಮಧುಮೇಹ ಸಮಸ್ಯೆಗೆ ಒಳಗಾಗದಂತೆ ನೋಡಿಕೊಳ್ಳುತ್ತದೆ. "ರಕ್ತದಲ್ಲಿನ ಗ್ಲೂಕೋಸ್ ಮಟ್ಟವು ನಿಮ್ಮ ದೇಹದಲ್ಲಿ ಪ್ರತಿ ಸೆಕೆಂಡಿಗೆ ಬದಲಾಗುತ್ತದೆ ಮತ್ತು ಒತ್ತಡ, ನಿದ್ರೆ, ಹವಾಮಾನ, ಆಹಾರ ಮತ್ತು ಹೆಚ್ಚಿನ ಅಂಶಗಳಿಗೆ ಪ್ರತಿಕ್ರಿಯಿಸುತ್ತದೆ. ಮಧುಮೇಹ ಮಾತ್ರವಲ್ಲ, ನಿಮ್ಮ ದೇಹದ ಬಗ್ಗೆ ತಿಳಿದುಕೊಳ್ಳಲು ಚಿಪ್ ನಿಮಗೆ ಸಹಾಯ ಮಾಡುತ್ತದೆ ಎಂದು ಸಿಂಘಾಲ್ ಹೇಳಿದರು.

ಇದನ್ನೂ ಓದಿ: Peach Fruit: ಜೀರ್ಣಕ್ರಿಯೆಯಿಂದ ಹಿಡಿದು ಚರ್ಮದ ಆರೋಗ್ಯದವರೆಗೆ ಪೀಚ್​ ಹಣ್ಣಿನ ಪ್ರಯೋಜನಗಳಿವು

ಹೃತಿಕ್ ರೋಷನ್, ವಿಕ್ಕಿ ಕೌಶಲ್, ಕುನಾಲ್ ಕಪೂರ್ ಮತ್ತು ಅಭಿನವ್ ಬಿಂದ್ರಾ ಮತ್ತು ಪ್ರಣಯ್ ಎಚ್‌ಎಸ್‌ನಂತಹ ಅಥ್ಲೀಟ್‌ಗಳಂತಹ ಸ್ಟಾರ್‌ಗಳು ಅಲ್ಟ್ರಾಹ್ಯೂಮನ್ ಸೈಬಾರ್ಗ್ ಅನ್ನು ಬಳಸುತ್ತಿದ್ದಾರೆ ಎಂದು ಹೇಳಿದ್ದಾರೆ. ಇದು ಭಾರತ ಮತ್ತು ಯುಎಇಯಲ್ಲಿ ಲಭ್ಯವಿದೆ. ಅಲ್ಟ್ರಾಹ್ಯೂಮನ್ ಸೈಬೋರ್ಗ್ ಶೀಘ್ರದಲ್ಲೇ USA ಮತ್ತು ಯುರೋಪ್ ಪ್ರದೇಶಗಳನ್ನು ಪ್ರವೇಶಿಸಲಿದೆ ಎಂದಿದ್ದಾರೆ.

ದೇಹಕ್ಕೆ ಆಹಾರದ ಅಗತ್ಯ ತಿಳಿಸುತ್ತೆ

“ಈ ಚಿಪ್ ನಿಮ್ಮ ದೇಹಕ್ಕೆ ಆಹಾರದ ಅಗತ್ಯವಿರುವಾಗ ಹೇಳುತ್ತದೆ, ಇದು ವ್ಯಾಯಾಮ ಮಾಡಲು ಉತ್ತಮ ಸಮಯ ಮತ್ತು ನೀವು ಫಿಟ್ ಆಗಿರಲು ಯಾವ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂಬುವುದನ್ನು ಅಲ್ಟ್ರಾಹ್ಯೂಮನ್ ಪ್ಲಾಟ್‌ಫಾರ್ಮ್ ಅಥವಾ ಅಲ್ಟ್ರಾಹ್ಯೂಮನ್ ಸೈಬೋರ್ಗ್ ತಿಳಿಸುತ್ತದೆ”ಎಂದು ಸಿಂಘಾಲ್ ವಿವರಿಸಿದರು.

ನೀವು ಏನು ತಿನ್ನುತ್ತೀರೋ ಅದು ನಿಮ್ಮ ರಕ್ತದಲ್ಲಿ ಗ್ಲೂಕೋಸ್ ಆಗಿ ಪರಿವರ್ತನೆಯಾಗುತ್ತದೆ ಮತ್ತು ಶಕ್ತಿಯನ್ನು ಒದಗಿಸಲು ನಿಮ್ಮ ಜೀವಕೋಶಗಳಿಗೆ ಒಯ್ಯುತ್ತದೆ. ಅಲ್ಟ್ರಾಹ್ಯೂಮನ್ ಚಿಪ್ ರಕ್ತದ ಗ್ಲೂಕೋಸ್ ಅನ್ನು ನೈಜ ಸಮಯದಲ್ಲಿ ಸರಳವಾಗಿ ಮೇಲ್ವಿಚಾರಣೆ ಮಾಡುತ್ತದೆ.

ಎಲ್ಲಾ ಅಗತ್ಯತೆ ಬಗ್ಗೆ ಮಾಹಿತಿ

ಅಲ್ಟ್ರಾಹ್ಯೂಮನ್ ಚಿಪ್ ರಕ್ತದಲ್ಲಿನ ಗ್ಲೂಕೋಸ್ ಬಗ್ಗೆ ಮತ್ತು ನೀವು ಎಷ್ಟು ಒತ್ತಡಕ್ಕೊಳಗಾಗಿದ್ದೀರಿ ಎಂಬುದನ್ನು ತೋರಿಸುತ್ತದೆ. ರಕ್ತದಲ್ಲಿನ ಗ್ಲೂಕೋಸ್ ಕಡಿಮೆಯಾದ ಕಾರಣ ನಿಮ್ಮ ದೇಹಕ್ಕೆ ತಕ್ಷಣವೇ ಆಹಾರದ ಅಗತ್ಯವಿದೆಯೇ ಎಂಬಿತ್ಯಾದಿ ಎಲ್ಲಾ ಮಾಹಿತಿಗಳ ಬಗ್ಗೆ ಇದು ತಿಳಿಸುತ್ತದೆ.

"ಅಲ್ಟ್ರಾಹ್ಯೂಮನ್ ಅಪ್ಲಿಕೇಶನ್ ಗ್ಲೂಕೋಸ್ ಬಯೋಮಾರ್ಕರ್‌ಗಳನ್ನು ಬಳಸಿಕೊಂಡು ನಿಮ್ಮ ದೇಹದ ಆಹಾರ, ಚಟುವಟಿಕೆ ಮತ್ತು ಜೀವನಶೈಲಿಯ ಪರಿಣಾಮವನ್ನು ಅಳೆಯುತ್ತದೆ. ಇದು ಕೊಬ್ಬನ್ನು ಕಳೆದುಕೊಳ್ಳಲು ಮತ್ತು ಚಯಾಪಚಯ ಅಸ್ವಸ್ಥತೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ. ತರಬೇತುದಾರರು, ಶೈಕ್ಷಣಿಕ ವಿಷಯಗಳು ಮತ್ತು ಡಿಜಿಟಲ್ ವರ್ಕ್‌ಔಟ್‌ಗಳ ಸಹಾಯದಿಂದ ಇದನ್ನು ತಯಾರಿಸಲಾಗಿದೆ.

ಇದನ್ನೂ ಓದಿ: Skin Care: ಈ ಹಣ್ಣುಗಳ ಸಿಪ್ಪೆಯನ್ನು ಬಿಸಾಡಬೇಡಿ; ಈ ರೀತಿ ಬಳಸಿ ತ್ವಚೆಯ ಕಾಂತಿ ಹೆಚ್ಚಿಸಿಕೊಳ್ಳಿ

ಉತ್ತಮ ಅಪ್ಲಿಕೇಶನ್‌ ರಚಿಸಲು ಡೆವಲಪರ್‌ಗಳಿಗೆ ಸಹಾಯ

ಅಲ್ಟ್ರಾಹ್ಯೂಮನ್ ತಂಡವು ಆ್ಯಪ್ ಅನ್ನು ಪರಿಷ್ಕರಿಸಲು ಬೆಂಗಳೂರಿನಲ್ಲಿ ಆಪಲ್ ಆ್ಯಪ್ ಆಕ್ಸಲೇಟರ್ ಅನ್ನು ಸೇರಿಕೊಂಡಿದೆ. iOS, iPadOS, watchOS, tvOS ಮತ್ತು macOS ನಲ್ಲಿ ಉತ್ತಮ ಅಪ್ಲಿಕೇಶನ್‌ಗಳನ್ನು ರಚಿಸಲು ಡೆವಲಪರ್‌ಗಳಿಗೆ ಸಹಾಯ ಮಾಡಲು ಬೆಂಗಳೂರಿನ ತಜ್ಞರಿಂದ ಸಹಾಯವನ್ನು ಪಡೆದುಕೊಳ್ಳುತ್ತಿದೆ.

ಆಪಲ್ ಆ್ಯಪ್ ಆಕ್ಸಲೇಟರ್ನ ಭಾಗವಾಗಿರುವ ಕುರಿತು ಮಾತನಾಡಿದ ಸಿಂಘಾಲ್, “App Accelerator ಪ್ರೋಗ್ರಾಂನ ಸಹಾಯದಿಂದ, Ultrahuman ಪರಿಷ್ಕರಿಸಲು ಸಾಧ್ಯವಾಯಿತು. ತಜ್ಞರೊಂದಿಗಿನ ಸಮಾಲೋಚನೆಗಳು, ವೈಶಿಷ್ಟ್ಯ ಪ್ರಸ್ತುತಿಗಳು ಮತ್ತು ಅಪ್ಲಿಕೇಶನ್ ವಿಮರ್ಶೆಗಳು ನಮ್ಮ ಬಳಕೆದಾರರಿಗೆ ಉತ್ತಮ ಅನುಭವವನ್ನು ನೀಡಲು ನಮಗೆ ಅನುವು ಮಾಡಿಕೊಟ್ಟಿವೆ” ಎಂದರು.
Published by:Pavana HS
First published: