ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳದಿದ್ದರೆ ಯೌವ್ವನ ಕಳೆದು ಹೋಗಬಹುದು!; ಇಲ್ಲಿದೆ ಆತಂಕಕಾರಿ ವಿಚಾರ

ಲೈಂಗಿಕ ಜೀವನ ಉತ್ತಮವಾಗಿದ್ದರೆ ಅದರಿಂದ ದೇಹಕ್ಕೆ ಸಾಕಷ್ಟು ಲಾಭಗಳಿವೆ. ಅಂತೆಯೇ ಅದರಿಂದ ದೂರ ಉಳಿದರೆ ದೇಹಕ್ಕೆ ಅಪಾಯವೂ ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ ತಜ್ಞರು.

news18
Updated:January 23, 2019, 6:58 PM IST
ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳದಿದ್ದರೆ ಯೌವ್ವನ ಕಳೆದು ಹೋಗಬಹುದು!; ಇಲ್ಲಿದೆ ಆತಂಕಕಾರಿ ವಿಚಾರ
ಸಾಂದರ್ಭಿಕ ಚಿತ್ರ
news18
Updated: January 23, 2019, 6:58 PM IST
ಲೈಂಗಿಕ ಕ್ರಿಯೆಯಲ್ಲಿ ಅನೇಕರು ಮಡಿವಂತಿಕೆ ಅನುಸರಿಸುತ್ತಾರೆ. ಆ ವಿಚಾರ ಮಾತನಾಡಿದರೆ ಸಾಕು ಮಾರು ದೂರ ಹೋಗಿ ನಿಲ್ಲುವವರೂ ಇದ್ದಾರೆ. ಆದರೆ, ಲೈಂಗಿಕ ಜೀವನ ಉತ್ತಮವಾಗಿದ್ದರೆ ಅದರಿಂದ ದೇಹಕ್ಕೆ ಸಾಕಷ್ಟು ಲಾಭಗಳಿವೆಯಂತೆ. ಅಂತೆಯೇ ಅದರಿಂದ ದೂರ ಉಳಿದರೆ ದೇಹಕ್ಕೆ ಅಪಾಯವೂ ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ ತಜ್ಞರು. ಅದರ ಬಗ್ಗೆ ಇಲ್ಲಿದೆ ಮಾಹಿತಿ.

ಯೌವ್ವನ ಬಸಿದು ಹೋಗಬಹುದು!

ಲೈಂಗಿಕ ಪ್ರಕ್ರಿಯೆ ವೇಳೆ ದೇಹ ಸಾಕಷ್ಟು ದಣಿಯುತ್ತದೆ. ಹಾಗಾಗಿ, ಈ ವೇಳೆ ದೇಹಕ್ಕೆ ಸಾಕಷ್ಟು ವ್ಯಾಯಾಮವಾಗುತ್ತದೆ. ಸೆಕ್ಸ್ ಮಾಡುವುದರಿಂದ ದೇಹದ ಒತ್ತಡ ಕೂಡ ಕಡಿಮೆ ಆಗುತ್ತದೆ. ಒಂದೊಮ್ಮೆ ಲೈಂಗಿಕ ಜೀವನದಿಂದ ದೂರ ಉಳಿದರೆ, ದೇಹಕ್ಕೆ ಸಮಸ್ಯೆ ಎದುರಾಗುತ್ತದೆ. ಅಲ್ಲದೆ, ಬಹುಬೇಗ ಯೌವ್ವನ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆಯಂತೆ. ತಿಂಗಳಿಗೆ ಕನಿಷ್ಟ 2-3 ಬಾರಿ ಲೈಂಗಿಕ ಪ್ರಕ್ರಿಯೆಯಲ್ಲಿ ತೊಡಗಿಕೊಂಡರೆ, ಬೇಗ ಮುಪ್ಪು ಬರುವುದಿಲ್ಲ ಎನ್ನುತ್ತದೆ ಅಧ್ಯಯನ.

ಹಸ್ತ ಮೈಥುನದ ಬಗ್ಗೆ ನಿರ್ಲಕ್ಷ್ಯ ತೋರಿದರೂ ಅಪಾಯ!

ಹಸ್ತ ಮೈಥುನದಿಂದ ದೇಹಕ್ಕೆ ಅಪಾಯವೇ? ಅನೇಕ ಯುವಕರಲ್ಲಿ ಹೀಗೊಂದು ಪ್ರಶ್ನೆ ಕಾಡುತ್ತಿರುತ್ತದೆ. ಆದರೆ, ಇದನ್ನು ಮಾಡದೆ ಇದ್ದರೇ ಅಪಾಯ ಎನ್ನುತ್ತಾರೆ ವೈದ್ಯರು. ಹಸ್ತಮೈಥುನ ಮಾಡದೆ ಇದ್ದರೆ, ಕ್ಯಾನ್ಸರ್​ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆಯಂತೆ. ಹಾಗಾಗಿ, ವಾರದಲ್ಲಿ 5-6 ಬಾರಿ ಹಸ್ತಮೈಥುನ ಮಾಡುವುದು ಆರೋಗ್ಯಕರ ಎಂಬ ಅಭಿಪ್ರಾಯ ತಜ್ಞರದ್ದು.

ಬಿಪಿ ಸಮಸ್ಯೆಗೆ ಪರಿಹಾರ

ರಕ್ತದೊತ್ತಡ ಸಮಸ್ಯೆ ಎದುರಿಸುತ್ತಿರುವವರು ಅನೇಕರಿದ್ದಾರೆ. ಅಚ್ಚರಿ ಎಂದರೆ, ಲೈಂಗಿಕ ಜೀವನಕ್ಕೂ ಇದಕ್ಕೂ ಸಂಬಂಧವಿದೆಯಂತೆ. ಹೀಗೆನ್ನುತ್ತಾರೆ ತಜ್ಞರು. ಲೈಂಗಿಕ ಪ್ರಕ್ರಿಯೆಯಲ್ಲಿ ತೊಡಗುವ ವ್ಯಕ್ತಿಗಳಿಗೆ ಹೋಲಿಸಿದರೆ, ಅದರಲ್ಲಿ ತೊಡಗಿಕೊಳ್ಳದೇ ಇರುವವರಲ್ಲಿ ರಕ್ತದೊತ್ತಡ ಸಮಸ್ಯೆ ಹೆಚ್ಚಂತೆ.
Loading...

ಇದನ್ನೂ ಓದಿ: ಈ ದೇಶದವರಿಗೆ ಮದುವೆ ಭಯ!; ಇಲ್ಲಿ ಹುಡುಗ-ಹುಡುಗಿಯರು ಜೊತೆಯಾಗಿ ಓಡಾಡಲ್ಲ

ಒತ್ತಡ ಹೆಚ್ಚುತ್ತೆ!

ಒತ್ತಡಕ್ಕೆ ಸೆಕ್ಸ್​ ಉತ್ತಮ ಔಷಧಿ ಎಂಬುದು ಬಹುತೇಕರಿಗೆ ಗೊತ್ತಿರುವುದೇ ಇಲ್ಲ. ಲೈಂಗಿಕ ಕ್ರಿಯೆ ವೇಳೆ ಎಂಡಾರ್ಫಿನ್​ ಹೆಸರಿನ ಕೆಮಿಕಲ್​ ಬಿಡುಗಡೆ ಆಗುತ್ತದೆ. ಇದರಿಂದ, ನಿಮಗೆ ಚೈತನ್ಯ ಬರುತ್ತದೆ. ಆದರೆ, ಲೈಂಗಿಕ ಕ್ರಿಯೆ ಮಾಡದರೆ ಇದ್ದರೆ, ಒತ್ತಡ ಸಮಸ್ಯೆಗೆ ಪರಿಹಾರ ಸಿಗದು ಎನ್ನುತ್ತದೆ ಸಂಶೋಧನೆ.

ನೀವು ಕುಗ್ಗಬಹುದು!

ಸೆಕ್ಸ್​ ಮಾಡದೇ ಇದ್ದರೆ ನೀವು ಕುಗ್ಗಿ ಹೋಗುವ ಸಾಧ್ಯತೆ ಇರುತ್ತದೆ! ಹೀಗಾಗಬಹುದು ಎಂಬ ವಿಚಾರ ಬಹುತೇಕರಿಗೆ ತಿಳಿದೇ ಇರುವುದಿಲ್ಲ. ಇದು ನಿಜ ಎನ್ನುತ್ತದೆ ವೈದ್ಯಲೋಕ. ವಾರದಲ್ಲಿ ಎರಡು ಬಾರಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವವರು ಹೆಚ್ಚು ಸದೃಢ ದೇಹ ಹೊಂದಿರುತ್ತಾರಂತೆ.

ಇದನ್ನೂ ಓದಿ: ಪುರುಷರ ಕಣ್ಣೀರಿಗೆ ಕಾರಣವಾಗುತ್ತಿದೆ ಲೈಂಗಿಕ ಜೀವನ!

ಕಚೇರಿಯಲ್ಲಿ ನಿಮ್ಮ ಪರ್ಫಾರ್ಮೆನ್ಸ್​ ಕಳಪೆಯಾಗಬಹುದು!


ಕಚೇರಿಯಲ್ಲಿ ಸದಾ ಚಟುವಟಿಕೆಯಿಂದ ಓಡಾಡಿಕೊಂಡಿದ್ದರೆ, ಉತ್ತಮವಾಗಿ ಕೆಲಸ ಮಾಡಬಹದು. ನಿಮ್ಮ ಚೈತನ್ಯಕ್ಕೆ ಲೈಂಗಿಕ ಕ್ರಿಯೆ ಕೂಡ ಕಾರಣವಾಗಬಹುದು. ಸೆಕ್ಸ್​ ಮಾಡುವುದರಿಂದ ವ್ಯಕ್ತಿ ಸದಾ ಸಂತೋಷದಿಂದ ಇರುತ್ತಾನಂತೆ. ಹಾಗಾಗಿ, ಲೈಂಗಿಕ ಜೀವನದಿಂದ ದೂರ ಉಳಿದರೆ, ಈ ಅವಕಾಶವನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆಯಂತೆ.

First published:January 23, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...