• Home
  • »
  • News
  • »
  • lifestyle
  • »
  • Peach Fruit Health Care: ಈ ಹಣ್ಣು ಸೇವನೆ ಹೆಚ್ಚುತ್ತಿರುವ ಕೊಬ್ಬು ಕಡಿಮೆ ಮಾಡುತ್ತೆ!

Peach Fruit Health Care: ಈ ಹಣ್ಣು ಸೇವನೆ ಹೆಚ್ಚುತ್ತಿರುವ ಕೊಬ್ಬು ಕಡಿಮೆ ಮಾಡುತ್ತೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೇಸಿಗೆಯಲ್ಲಿ ರೋಗ ನಿರೋಧಕ ಶಕ್ತಿ ದುರ್ಬಲವಾಗುತ್ತಾ ಹೋಗುತ್ತದೆ. ಇದು ದೇಹವನ್ನು ಮತ್ತಷ್ಟು ಕುಗ್ಗಿಸುತ್ತದೆ. ಹೀಗಾಗಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಇದರಿಂದ ಅನೇಕ ರೋಗಗಳಿಗೆ ಜನರು ಸುಲಭವಾಗಿ ಗುರಿಯಾಗುತ್ತಾರೆ.

  • Share this:

    ಬೇಸಿಗೆಯಲ್ಲಿ (Summer) ರೋಗ ನಿರೋಧಕ (Immunity) ಶಕ್ತಿ ಹೆಚ್ಚಿಸಲು ಅನೇಕ ಪದಾರ್ಥಗಳು,  ಹಣ್ಣುಗಳು (Fruits) ಇವೆ. ಜನರು ಚಳಿಗಾಲಕ್ಕಿಂತ ಬೇಸಿಗೆಯಲ್ಲಿ ಹೆಚ್ಚು ಅನಾರೋಗ್ಯಕ್ಕೆ (Unhealthy) ತುತ್ತಾಗುತ್ತಾರೆ. ಇದಕ್ಕೆ ಮುಖ್ಯ ಕಾರಣವೆಂದರೆ ಬೇಸಿಗೆಯಲ್ಲಿ ಹೆಚ್ಚಿದ ತಾಪಮಾನದಿಂದ ಉಂಟಾಗುವ ಹೊಟ್ಟೆ ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು. ಅದೇ ಸಮಯದಲ್ಲಿ, ಬೇಸಿಗೆಯಲ್ಲಿ ರೋಗ ನಿರೋಧಕ ಶಕ್ತಿ ದುರ್ಬಲವಾಗುತ್ತಾ ಹೋಗುತ್ತದೆ. ಇದು ದೇಹವನ್ನು ಮತ್ತಷ್ಟು ಕುಗ್ಗಿಸುತ್ತದೆ. ಹೀಗಾಗಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಇದರಿಂದ ಅನೇಕ ರೋಗಗಳಿಗೆ ಜನರು ಸುಲಭವಾಗಿ ಗುರಿಯಾಗುತ್ತಾರೆ.  ಅಂತಹ ಸ್ಥಿತಿಯಲ್ಲಿ ನೀವು ಕಾಲೋಚಿತ ಹಣ್ಣುಗಳು ಮತ್ತು ತರಕಾರಿಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಬೇಕು.


    ಪೀಚ್ ಹಣ್ಣಿನ ಆರೋಗ್ಯ ಪ್ರಯೋಜನಗಳು


    ಬೇಸಿಗೆಯಲ್ಲಿ ಅನೇಕ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತವೆ. ಈ ಹಣ್ಣುಗಳಲ್ಲಿ ಪೀಚ್ ಕೂಡ ಒಂದು. ಪೀಚ್ ನಲ್ಲಿ ವಿಟಮಿನ್ ಎ, ಆ್ಯಂಟಿ ಆಕ್ಸಿಡೆಂಟ್ ಮತ್ತು ಮಿನರಲ್ ಹೇರಳವಾಗಿ ಕಂಡು ಬರುತ್ತದೆ. ಪೀಚ್ ಸೇವನೆ ದೃಷ್ಟಿಯ ಮಂದವಾಗುವುದರಿಂದ ರಕ್ಷಣೆ ಮಾಡುತ್ತದೆ. ಜೊತೆಗೆ ಪೀಚ್ ಸೇವನೆ ಅನೇಕ ರೋಗಗಳಿಂದ ನಿಮ್ಮ ದೇಹವನ್ನು ರಕ್ಷಣೆ ಮಾಡುತ್ತದೆ.


    ಪೀಚ್ ಸೇವನೆಯಿಂದ ಬೇಸಿಗೆಯಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಪೀಚ್ ಒಂದು ರುಚಿಕರ ಹಣ್ಣು. ಇದು ಹೊರಗಿನಿಂದ ಹಳದಿ ಮತ್ತು ಕೆಂಪು ಬಣ್ಣದಿಂದ ಕೂಡಿರುತ್ತದೆ. ಬಾದಾಮಿ ತರಹದ ಬೀಜವು ಪೀಚ್ನಲ್ಲಿ ಇರುತ್ತದೆ. ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್‌ಗಳು, ಖನಿಜಗಳು ಮತ್ತು ಫೈಬರ್‌ಗಳು ಪೋಷಕಾಂಶಗಳು ಸಾಕಷ್ಟು ಕಂಡು ಬರುತ್ತವೆ.


    ಇದನ್ನೂ ಓದಿ: ನಿಮ್ಮದು ಸೂಕ್ಷ್ಮ ತ್ವಚೆಯಾ? ಸ್ಕಿನ್ ಕೇರ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ


    ಪೀಚ್ ಸೇವನೆ ಮಾಡುವುದರಿಂದ ದೇಹಕ್ಕೆ ವಿಟಮಿನ್ ಸಿ ಸಿಗುತ್ತದೆ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಪೀಚ್ ಸೇವನೆಯ ಕೆಲವು ಪ್ರಮುಖ ಪ್ರಯೋಜನಗಳನ್ನು ತಿಳಿಯೋಣ.


    ಪೀಚ್ ಸೇವನೆಯಿಂದ ದೇಹಕ್ಕೆ ದೊರೆಯುವ ಮುಖ್ಯ ಪ್ರಯೋಜನಗಳು


    ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ


    ವಿಟಮಿನ್ ಸಿ ಪೀಚ್ ನಲ್ಲಿ ಸಮೃದ್ಧವಾಗಿ ಇದೆ. ಇದು ದೇಹದಲ್ಲಿ ಉತ್ಕರ್ಷಣ ನಿರೋಧಕವಾಗಿ ಕಾರ್ಯ ನಿರ್ವಹಿಸುತ್ತದೆ. ಪೀಚ್ ಸೇವನೆ ರೋಗ ನಿರೋಧಕ ಶಕ್ತಿ ಬಲಪಡಿಸುತ್ತದೆ. ಕಾಲೋಚಿತ ರೋಗಗಳನ್ನು ತಪ್ಪಿಸಲು ಪೀಚ್ ಹಣ್ಣು  ಸೂಕ್ತ.


    ಬೊಜ್ಜು ಕಡಿಮೆ ಮಾಡುತ್ತದೆ


    ತೂಕ ಇಳಿಸಲು ಬಯಸುವವರಿಗೆ ಪೀಚ್ ವರದಾನ. ಪೀಚ್‌ನಲ್ಲಿ ಕೆಲವೇ ಕ್ಯಾಲೊರಿಗಳಿವೆ. ಇದರಿಂದಾಗಿ ನಿಮ್ಮ ತೂಕವು ವೇಗವಾಗಿ ಕಡಿಮೆ ಆಗುತ್ತದೆ. ಬೆಳಗಿನ ಉಪಾಹಾರದಲ್ಲಿ ಪೀಚ್ ತಿಂದರೆ ಮಧ್ಯಾಹ್ನದ ಊಟದವರೆಗೂ ಹಸಿವಾಗುವುದಿಲ್ಲ. ನೀವು ಹಸಿದಾಗ ಪೀಚ್ ತಿಂದರೆ ಇತರೆ ತಿನ್ನುವ ಕ್ರೇವಿಂಗ್ ಕಡಿಮೆ ಮಾಡುತ್ತದೆ.


    ಎಲ್ಲರೂ ಫಿಟ್ ಆಗಿರಬೇಕೆಂದು ಬಯಸುತ್ತಾರೆ. ಇದಕ್ಕಾಗಿ ನಿಮ್ಮ ಆಹಾರದದಲ್ಲಿ  ತೂಕ ನಿಯಂತ್ರಿಸಲು ಪೀಚ್ ಸೇರಿಸಿ. ಪೀಚ್ ತಿನ್ನುವುದರಿಂದ ದೇಹಕ್ಕೆ ಶಕ್ತಿ ಸಿಗುತ್ತೆ. ಕೊಬ್ಬು ನಿಯಂತ್ರಣದಲ್ಲಿರುತ್ತದೆ. ತೂಕವು ಸ್ವಯಂಚಾಲಿತವಾಗಿ ನಿಯಂತ್ರಣದಲ್ಲಿರುತ್ತದೆ.


     ಮೂತ್ರಪಿಂಡದ ಆರೋಗ್ಯವನ್ನು ಕಾಪಾಡುತ್ತದೆ


    ಪೀಚ್ ತಿನ್ನುವುದರಿಂದ ಅನೇಕ ಇತರ ಪ್ರಯೋಜನ ದೇಹಕ್ಕೆ ಸಿಗುತ್ತದೆ. ಪೀಚ್ ತಿನ್ನುವುದರಿಂದ  ಪೊಟ್ಯಾಸಿಯಮ್ ಸಿಗುತ್ತದೆ. ಅದು ಮೂತ್ರಪಿಂಡಕ್ಕೆ ತುಂಬಾ ಪ್ರಯೋಜನಕಾರಿ. ಪೀಚ್ ನಿಮ್ಮ ಮೂತ್ರಕೋಶಕ್ಕೆ ಶುದ್ಧೀಕರಣ ಏಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತದೆ. ಪೀಚ್ ತಿನ್ನುವುದರಿಂದ ಮೂತ್ರಪಿಂಡದ ಕಾಯಿಲೆಗಳು ಬರುವುದಿಲ್ಲ.


    ಕಣ್ಣುಗಳಿಗೆ ಪ್ರಯೋಜನಕಾರಿ


    ದೃಷ್ಟಿ ಮಂದವಾಗುವುದನ್ನು ಕಡಿಮೆ ಮಾಡಿ, ದೃಷ್ಟಿಯ ಶಕ್ತಿ ಹೆಚ್ಚಿಸುತ್ತದೆ. ಮತ್ತು ಆರೋಗ್ಯಕ್ಕೆ ಪೀಚ್ ತಿನ್ನುವುದು ಪ್ರಯೋಜನಕಾರಿ. ಪೀಚ್ ಬೀಟಾ ಕ್ಯಾರೋಟಿನ್ ಹೊಂದಿರುತ್ತದೆ. ಇದು ದೇಹದಲ್ಲಿ ವಿಟಮಿನ್ ಎ ದೊರೆಯುವಂತೆ ಮಾಡುತ್ತದೆ. ರೆಟಿನಾವನ್ನು ಆರೋಗ್ಯಕರವಾಗಿಡಲು ವಿಟಮಿನ್ ಎ ತುಂಬಾ ಮುಖ್ಯ.


    ಇದನ್ನೂ ಓದಿ: ಕೀಲು ನೋವು ಸಮಸ್ಯೆಗೆ ಪರಿಹಾರ ನೀಡಲು ಯಾವ ಹಣ್ಣುಗಳ ಸೇವನೆ ಮಾಡುವುದು ಉತ್ತ,ಮ ಗೊತ್ತಾ?


    ಕ್ಯಾನ್ಸರ್ ತಡೆಗಟ್ಟುತ್ತದೆ


    ಪೀಚ್ ತಿನ್ನುವುದು ಕ್ಯಾನ್ಸರ್ ಅಪಾಯ ಕಡಿಮೆ ಮಾಡುತ್ತದೆ. ಪೀಚ್‌ಗಳಲ್ಲಿನ ಆಂಟಿ-ಆಕ್ಸಿಡೆಂಟ್‌ಗಳು ಕ್ಯಾನ್ಸರ್‌ನಿಂದ ರಕ್ಷಿಸುತ್ತದೆ. ಕೀಮೋಥೆರಪಿಯ ದುಷ್ಪರಿಣಾಮಗಳಿಂದ ರಕ್ಷಿಸಲು ಪೀಚ್ ಸಹ ಕೆಲಸ ಮಾಡುತ್ತದೆ.

    Published by:renukadariyannavar
    First published: