Diabetes: ಗೊತ್ತಿಲ್ಲದಂಗೆ ದೊಡ್ಡ ಅಪಾಯಗಳನ್ನು ತಂದೊಡ್ಡುತ್ತೆ ಡಯಾಬಿಟಿಸ್! ಈ ಲಕ್ಷಣಗಳು ಕಾಣಿಸಿಕೊಂಡ್ರೆ ಡಾಕ್ಟರ್ ಹತ್ರ ಹೋಗಿ

ರಕ್ತದಲ್ಲಿನ ಅಧಿಕ ಸಕ್ಕರೆ ಮಟ್ಟ ಅಥವಾ ಹೈಪರ್ಗ್ಲೈಸೀಮಿಯಾ, ಸಾಮಾನ್ಯವಾಗಿ ಮಧುಮೇಹಕ್ಕೆ ಸಂಬಂಧಿಸಿದ ಅಪಾಯಕಾರಿ ಆರೋಗ್ಯ ಸ್ಥಿತಿಯಾಗಿದೆ. ಒಂದು ವೇಳೆ ಚಿಕಿತ್ಸೆ ನೀಡದೇ ಇದ್ದರೆ, ರಕ್ತದಲ್ಲಿನ ಅಧಿಕ ಸಕ್ಕರೆಯು ಪಾರ್ಶ್ವವಾಯು, ಹೃದ್ರೋಗ, ಕುರುಡುತನ ಮತ್ತು ಹೆಚ್ಚಿನವುಗಳಿಗೆ ಕಾರಣವಾಗಬಹುದು.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ರಕ್ತದಲ್ಲಿನ ಅಧಿಕ ಸಕ್ಕರೆ ಮಟ್ಟ (High blood sugar level) ಅಥವಾ ಹೈಪರ್ಗ್ಲೈಸೀಮಿಯಾ, ಸಾಮಾನ್ಯವಾಗಿ ಮಧುಮೇಹಕ್ಕೆ ಸಂಬಂಧಿಸಿದ ಅಪಾಯಕಾರಿ ಆರೋಗ್ಯ (Health) ಸ್ಥಿತಿಯಾಗಿದೆ. ಒಂದು ವೇಳೆ ಚಿಕಿತ್ಸೆ (Treatment) ನೀಡದೇ ಇದ್ದರೆ, ರಕ್ತದಲ್ಲಿನ ಅಧಿಕ ಸಕ್ಕರೆಯು ಪಾರ್ಶ್ವವಾಯು, ಹೃದ್ರೋಗ, ಕುರುಡುತನ ಮತ್ತು ಹೆಚ್ಚಿನವುಗಳಿಗೆ ಕಾರಣವಾಗಬಹುದು. ಆದ್ದರಿಂದ ಆರಂಭಿಕ ರೋಗನಿರ್ಣಯ ಮತ್ತು ಚಿಕಿತ್ಸೆಯು ನಿರ್ಣಾಯಕವಾಗಿದೆ. "ಸರಿಯಾದ ಸ್ವಯಂ-ನಿರ್ವಹಣೆ ಮತ್ತು ಉತ್ತಮವಾದ ಆ ಕುರಿತು ಹೊಂದುವ ತಿಳುವಳಿಕೆಯಿಂದ, ಮಧುಮೇಹ (Diabetes) ಹೊಂದಿರುವ ಜನರು ದೀರ್ಘ, ಆರೋಗ್ಯಕರ ಜೀವನವನ್ನು ನಡೆಸಬಹುದು" ಎಂದು ಎಂಎಚ್ಎಸ್ ನ ಎಂ.ಡಿ ರೀಟಾ ರಸ್ತೋಗಿ ಕಲ್ಯಾಣಿ ಹೇಳುತ್ತಾರೆ.

"ನಿಮ್ಮ ಈ ಸಕ್ಕರೆ ಕಾಯಿಲೆಯನ್ನು ಚೆನ್ನಾಗಿ ನಿಯಂತ್ರಿಸಲ್ಪಟ್ಟರೆ, ಅದು ನಿಮ್ಮ ಜೀವನದ ಗುಣಮಟ್ಟವನ್ನು ಇನ್ನಷ್ಟು ಸುಧಾರಿಸಿಬಹುದು. ನಿಮ್ಮ ದೈನಂದಿನ ದಿನಚರಿಗೆ ಕೆಲವು ಹೊಂದಾಣಿಕೆಗಳ ಅಗತ್ಯವಿದೆ.” ನಿಮ್ಮ ರಕ್ತದಲ್ಲಿನ ಸಕ್ಕರೆಯು ತುಂಬಾ ಹೆಚ್ಚಾಗಿದ್ದರೆ ಈ ಐದು ರೋಗಲಕ್ಷಣಗಳು ನಿಮ್ಮ ಅನುಭವಕ್ಕೆ ಬರುತ್ತವೆ.

1. ಏನೂ ಕೆಲಸ ಮಾಡದೆ ಆಯಾಸವಾಗುವುದು
ವಿಶೇಷವಾಗಿ ಊಟ ಮಾಡಿದ ನಂತರ ಆಯಾಸ ಅನುಭವಿಸುವುದು ರಕ್ತದಲ್ಲಿನ ಅಧಿಕ ಸಕ್ಕರೆ ಮಟ್ಟಗಳ ಸಂಕೇತವಾಗಿರಬಹುದು. "ನಾನು ಊಟದ ನಂತರ ನಿದ್ರೆ ಮಾಡಲು ಬಯಸುತ್ತೇನೆ' ಅಥವಾ 'ಊಟದ ನಂತರ ನನ್ನ ಕಣ್ಣ ರೆಪ್ಪೆಗಳನ್ನು ತೆರೆಯಲು ಸಾಧ್ಯವಿಲ್ಲ' ಎಂದು ಜನರು ಹೇಳುತ್ತಾರೆ. ಆಗಾಗ್ಗೆ ಸಾಕಷ್ಟು ಪಾಸ್ತಾ ಅಥವಾ ಆಲೂಗಡ್ಡೆ ಅಥವಾ ಸಿಹಿ ತಿಂಡಿಗಳಂತಹ ಏನನ್ನಾದರೂ ತಿಂದ ನಂತರ ಹೀಗಾಗುವುದು" ಎಂದು ಮೌಂಟ್ ಸಿನಾಯ್ ನಲ್ಲಿರುವ ಇಕಾನ್ ಸ್ಕೂಲ್ ಆಫ್ ಮೆಡಿಸಿನ್ ನ ಎಂಡೋಕ್ರೈನಾಲಜಿಯ ಸಹಾಯಕ ಪ್ರಾಧ್ಯಾಪಕಿ ದೀನಾ ಆದಿಮೂಲಂ ಹೇಳುತ್ತಾರೆ.

2. ನಿರಂತರವಾಗಿ ಮೂತ್ರವಿಸರ್ಜನೆ ಮಾಡಲು ಹೋಗುತ್ತೀರಿ
ಸಾಮಾನ್ಯಕ್ಕಿಂತ ಹೆಚ್ಚು ಸಲ ನೀವು ಮೂತ್ರವಿಸರ್ಜನೆ ಮಾಡಲು ಬಾತ್‌ರೂಮ್ ಗೆ ಹೋಗುತ್ತೀರಿ. ಈ ರೀತಿ ಹೆಚ್ಚು ಬಾರಿ ನೀವು ಹೋದರೆ ರಕ್ತದಲ್ಲಿನ ಅಧಿಕ ಸಕ್ಕರೆ ಮಟ್ಟದ ಸಂಕೇತವಾಗಿರಬಹುದು. "ನಿಮ್ಮ ಮೂತ್ರಪಿಂಡಗಳು ಅದನ್ನು ತೊಡೆದು ಹಾಕಲು ಹೆಚ್ಚಿನ ಸಕ್ಕರೆಯನ್ನು ನಿಯಂತ್ರಿಸಲೆಂದು ಪ್ರಯತ್ನಿಸಲು ಪ್ರಾರಂಭಿಸುತ್ತವೆ ಮತ್ತು ಅವು ಸಕ್ಕರೆಯನ್ನು ವಿಸರ್ಜಿಸುವಾಗ, ಅದರೊಂದಿಗೆ ನೀರೂ ಸಹ ಹೊರ ಹೋಗುತ್ತದೆ" ಎಂದು ಡಾ. ಆದಿಮೂಲಂ ಹೇಳುತ್ತಾರೆ.

ಇದನ್ನೂ ಓದಿ: Healthy Nails: ಹೇಗಿದೆ ನಿಮ್ಮ ಆರೋಗ್ಯ, ಉಗುರುಗಳಿಂದಲೇ ಸಿಗುತ್ತೆ ಸುಳಿವು!

3. ಬಾಯಾರಿಕೆ ಆಗುವುದು
ಅತಿಯಾದ ಬಾಯಾರಿಕೆಯು ಆಗಾಗ್ಗೆ ಮೂತ್ರವಿಸರ್ಜನೆಗೆ ಸಂಬಂಧಿಸಿದೆ ಎಂದು ವೈದ್ಯರು ವಿವರಿಸುತ್ತಾರೆ. "ಆಗಾಗ್ಗೆ ಮೂತ್ರವಿಸರ್ಜನೆ ಮಾಡುವುದರಿಂದ ಹೆಚ್ಚುವರಿ ನೀರು ದೇಹವು ಕೇಳುತ್ತಿದೆ ಎಂದು ಗ್ರಹಿಸಬಹುದು ಮತ್ತು ಸಾಮಾನ್ಯ ಪ್ರತಿಕ್ರಿಯೆಯು ಬಾಯಾರಿಕೆಯಾಗುತ್ತದೆ" ಎಂದು ಫೇಸ್ ನ ಎಫ್ಎಸಿಎಸ್ ನ ಎಂಡಿ ಜೇಮ್ಸ್ ನಾರ್ಮನ್ ಹೇಳುತ್ತಾರೆ.

4. ದೃಷ್ಟಿ ಸಮಸ್ಯೆಗಳು ಉಂಟಾಗುತ್ತವೆ
ಡಯಾಬಿಟಿಕ್ ರೆಟಿನೋಪತಿ ಯುಎಸ್ ನಲ್ಲಿ ಕುರುಡುತನಕ್ಕೆ ಪ್ರಮುಖ ಕಾರಣವಾಗಿದೆ. "ಮಧುಮೇಹ ರೆಟಿನೋಪತಿಗೆ ನಾವು ಉತ್ತಮ ಚಿಕಿತ್ಸೆಗಳನ್ನು ಹೊಂದಿದ್ದೇವೆ" ಎಂದು ಎಂ ಡಿ ಸಿಂಡಿ ಕ್ಸಿನ್ಜಿ ಕೈ ಹೇಳುತ್ತಾರೆ. "ಆದಾಗ್ಯೂ, ನಿಯಮಿತ ಕಣ್ಣಿನ ಪರೀಕ್ಷೆಗಳನ್ನು ಪಡೆಯುವುದು ಬಹಳ ಮುಖ್ಯ, ಇದರಿಂದ ನಿಮ್ಮ ವೈದ್ಯರು ನಿಮಗೆ ಈ ಚಿಕಿತ್ಸೆಗಳನ್ನು ಅಗತ್ಯವಿರುವಷ್ಟು ಬೇಗ ನೀಡಬಹುದು. ನಿಮ್ಮ ಕಣ್ಣುಗಳನ್ನು ಪರೀಕ್ಷಿಸುವುದರ ಜೊತೆಗೆ, ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡುವುದು ಸಹ ಬಹಳ ಮುಖ್ಯ. ಇದು ಒಟ್ಟಾರೆಯಾಗಿ ನಿಮಗೆ ಒಳ್ಳೆಯದು ಮಾತ್ರವಲ್ಲದೇ, ನಿಮ್ಮ ಕಣ್ಣುಗಳ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು" ಎಂದು ಹೇಳುತ್ತಾರೆ.

ಇದನ್ನೂ ಓದಿ: Bad Cholesterol: ಕೆಟ್ಟ ಕೊಲೆಸ್ಟ್ರಾಲ್ ಎಂದರೇನು? ಇಲ್ಲಿದೆ ನೀವು ತಿಳಿಯಲೇಬೇಕಾದ ವಿವರ

5. ನಿರಂತರ ಹಸಿವಾಗುವುದು
“ಸಕ್ಕರೆ ಕಾಯಿಲೆ ಇದ್ದರೆ, ಆ ವ್ಯಕ್ತಿಗೆ ನಿರಂತರವಾಗಿ ಹಸಿವಾಗುತ್ತದೆ ಮತ್ತು ಸದಾ ಏನಾದರೂ ಬಾಯಿಗೆ ಹಾಕಿಕೊಳ್ಳಬೇಕು ಎಂದೆನಿಸುವುದು ಸಹಜವಾಗುತ್ತದೆ. ಮಧುಮೇಹ ಹೊಂದಿರುವ ವ್ಯಕ್ತಿಯು ಗ್ಲೂಕೋಸ್ ಅನ್ನು ಜೀವಕೋಶಗಳೊಳಗಿನ ಶಕ್ತಿಯ ಮೂಲವಾಗಿ ಬಳಸಲು ಸಾಧ್ಯವಿಲ್ಲ. ಗ್ಲೂಕೋಸ್ ರಕ್ತದಲ್ಲಿ ಪರಿಚಲನೆಯಾಗುತ್ತದೆ, ಆದರೆ ಜೀವಕೋಶಗಳು ಅದನ್ನು ಇಂಧನವಾಗಿ ಬಳಸಲು ಅದನ್ನು ಹೀರಿಕೊಳ್ಳಲು ಸಾಧ್ಯವಿಲ್ಲ" ಎಂದು ಡಾ. ನಾರ್ಮನ್ ಅವರು ಹೇಳುತ್ತಾರೆ.
Published by:Ashwini Prabhu
First published: