• Home
  • »
  • News
  • »
  • lifestyle
  • »
  • Wheatgrass Benefits: ಕೆಟ್ಟ ಕೊಲೆಸ್ಟ್ರಾಲ್ ದೇಹದಿಂದ ಹೊರ ಹಾಕಲು ಈ ಪದಾರ್ಥ ಪರಿಣಾಮಕಾರಿ!

Wheatgrass Benefits: ಕೆಟ್ಟ ಕೊಲೆಸ್ಟ್ರಾಲ್ ದೇಹದಿಂದ ಹೊರ ಹಾಕಲು ಈ ಪದಾರ್ಥ ಪರಿಣಾಮಕಾರಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದೇಹದಿಂದ ಕೆಟ್ಟ ಕೊಲೆಸ್ಟ್ರಾಲ್ ನ್ನು ತೆಗೆದು ಹಾಕುವುದು ಮತ್ತು ಇತರೆ ದೇಹ ಆರೋಗ್ಯ ನೀಡಲು ಈ ಹುಲ್ಲು ತುಂಬಾ ಪರಿಣಾಮಕಾರಿ ಆಗಿದೆ. ಈ ಹುಲ್ಲು ರಸ ಸೇವನೆ ನಂತರ ಕೇವಲ 20 ನಿಮಿಷಗಳಲ್ಲಿ ದೇಹದಲ್ಲಿ ಕೆಲಸ ಮಾಡಲು ಪ್ರಾರಂಭ ಮಾಡುತ್ತದೆ.

  • Share this:

    ಪ್ರಕೃತಿ (Nature) ನಮಗೆ ಅನೇಕ ರೀತಿಯ ಸಂಪತ್ತು (Wealth) ನೀಡಿದೆ. ಅದರ ಬಗ್ಗೆ ಹಲವು ವಿಷಯಗಳು (Subjects) ಗೊತ್ತೇ ಇರುವುದಿಲ್ಲ. ಹುಲ್ಲಿನಿಂದ (Grass) ಹಿಡಿದು ಹಲವು ಗಿಡಮೂಲಿಕೆಗಳು (Herbs) ಆರೋಗ್ಯ ವರ್ಧಕವಾಗಿ (Health Booster) ಕೆಲಸ ಮಾಡುತ್ತವೆ. ಅಂತಹ ಒಂದು ಆರೋಗ್ಯ ಸಂಪತ್ತು ಸಮೃದ್ಧವಾಗಿದೆ. ಈ ಚಿಕ್ಕ ಹುಲ್ಲು. ಇದನ್ನು ವೀಟ್ ಗ್ರಾಸ್ ಎಂದು ಕರೆಯುತ್ತಾರೆ. ದೇಹದಿಂದ ಕೆಟ್ಟ ಕೊಲೆಸ್ಟ್ರಾಲ್ ನ್ನು ತೆಗೆದು ಹಾಕುವುದು ಮತ್ತು ಇತರೆ ದೇಹ ಆರೋಗ್ಯ ನೀಡಲು ಈ ಹುಲ್ಲು ತುಂಬಾ ಪರಿಣಾಮಕಾರಿ ಆಗಿದೆ. ಈ ಹುಲ್ಲು ರಸ ಸೇವನೆ ನಂತರ ಕೇವಲ 20 ನಿಮಿಷಗಳಲ್ಲಿ ದೇಹದಲ್ಲಿ ಕೆಲಸ ಮಾಡಲು ಪ್ರಾರಂಭ ಮಾಡುತ್ತದೆ.


    ಅದೇ ವೇಳೆ ಕೆಟ್ಟ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡುವ ಮೂಲಕ ಮಾತ್ರವಲ್ಲದೆ ಹೃದ್ರೋಗ ತೆಗೆದು ಹಾಕುತ್ತದೆ. ಇದು ನಿಮ್ಮ ಮುಖಕ್ಕೆ ಕನ್ನಡಿಯಂತ ಹೊಳಪು ನೀಡುತ್ತದೆ. ಇಲ್ಲಿ ನಾವು ಇಂದು ವೀಟ್ ಗ್ರಾಸ್ ಅಂದ್ರೆ ಗೋಧಿ ಹುಲ್ಲಿನ ಪ್ರಯೋಜನಗಳು ಯಾವವು ಎಂಬ ಬಗ್ಗೆ ನೋಡೋಣ. ವೀಟ್ ಗ್ರಾಸ್ ಪ್ರಯೋಜನಗಳ ಬಗ್ಗೆ ತಿಳಿದರೆ ನೀವೂ ಸಹ ಆಶ್ಚರ್ಯ ಪಡುತ್ತೀರಿ.


    ಕೊಳಕು ಕೊಲೆಸ್ಟ್ರಾಲ್ ನ್ನು ದೇಹದಿಂದ ತೆಗೆದು ಹಾಕುತ್ತದೆ


    ದೇಹದ ಕೊಳಕು ಕೊಲೆಸ್ಟ್ರಾಲ್ ಮಧ್ಯದಿಂದ ರಕ್ತ ಸಾಗಿಸುವ ರಕ್ತನಾಳ ಮುಚ್ಚುತ್ತದೆ. ಇದು ಹೃದಯ ಮತ್ತು ಮೆದುಳಿನಂತಹ ಅಗತ್ಯ ಅಂಗಗಳಿಗೆ ರಕ್ತ ಪೂರೈಕೆಯಾಗದಂತೆ ತಡೆದು ನಿಲ್ಲಿಸುತ್ತದೆ. ಗೋಧಿ ಹುಲ್ಲಿನ ಬಳಕೆ ಕೆಟ್ಟ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡುತ್ತದೆ ಎಂದು ಅನೇಕ ಪ್ರಾಣಿ ಸಂಶೋಧನೆಗಳು ಸೂಚಿಸಿವೆ.


    ಇದನ್ನೂ ಓದಿ: ತ್ವಚೆಯ ಸಮಸ್ಯೆ ಇದ್ದಾಗ ಯಾವ ಪದಾರ್ಥಗಳ ಸೇವನೆ ತಪ್ಪಿಸಬೇಕು?


    ಕೊಲೆಸ್ಟ್ರಾಲ್ ಮಟ್ಟ ಹೇಗೆ ನಿಯಂತ್ರಿಸುವುದು? ಎಂಬುದನ್ನು ತಿಳಿಯಿರಿ. ಅದೇ ವೇಳೆ ಹತ್ತು ವಾರಗಳ ಕಾಲ ಗೋಧಿ ಹುಲ್ಲಿನ ಸೇವನೆ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಜೊತೆಗೆ ಒಳ್ಳೆಯ ಕೊಲೆಸ್ಟ್ರಾಲ್ ನ್ನು ಹೆಚ್ಚಿಸುತ್ತದೆ ಎಂದು ಸಂಶೋಧನೆಯೊಂದು ಕಂಡು ಬಂದಿದೆ.


    ಮಧುಮೇಹ ಲಕ್ಷಣಗಳು ದೂರವಾಗುತ್ತವೆ


    ತಲೆನೋವು, ಅತಿಯಾದ ಬಾಯಾರಿಕೆ ಅಥವಾ ಆಗಾಗ್ಗೆ ಮೂತ್ರ ವಿಸರ್ಜನೆ ಅಂತಹ ಸಮಸ್ಯೆಗಳು ಮಧುಮೇಹ ಆರಂಭಿಕ ಲಕ್ಷಣಗಳು ಆಗಿವೆ. ಆದರೆ ಗೋಧಿ ಹುಲ್ಲಿನ ಸೇವನೆ ಮಧುಮೇಹದ ಲಕ್ಷಣ ತೆಗೆದು ಹಾಕುತ್ತದೆ.


    ಮತ್ತು ನಿಮಗೆ ಆರಾಮದಾಯಕ ಆಗಿದೆ. ಯಾಕಂದ್ರೆ ಹಲವು ಸಂಶೋಧನೆಗಳಲ್ಲಿ ಇದರೊಳಗೆ ಮಧುಮೇಹ ವಿರೋಧಿ ಗುಣಗಳು ಕಂಡು ಬಂದಿವೆ. ಇದು ರಕ್ತದ ಸಕ್ಕರೆ ನಿಯಂತ್ರಿಸುತ್ತದೆ.


    ವೇಗದ ತೂಕ ನಷ್ಟಕ್ಕೆ ಸಹಕಾರಿ


    ಅನೇಕ ಪೌಷ್ಟಿಕ ತಜ್ಞರು ವೀಟ್ ಗ್ರಾಸ್ ನ್ನು ತ್ವರಿತ ತೂಕ ಇಳಿಸಲು ಉತ್ತಮ ಮಾರ್ಗವೆಂದು ಪರಿಗಣಿಸುತ್ತಾರೆ. ಈ ಹುಲ್ಲಿನಲ್ಲಿರುವ ಸಂಯುಕ್ತಗಳು ಹಸಿವು ನಿಯಂತ್ರಿಸುವ ಮೂಲಕ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ. ತೂಕ ನಷ್ಟವು ಕೊಲೆಸ್ಟ್ರಾಲ್ ಮತ್ತು ಮಧುಮೇಹ ಕಾಯಿಲೆಯಲ್ಲೂ ಪರಿಹಾರ ನೀಡುತ್ತದೆ.


    ಮುಖದಲ್ಲಿ ಗಾಜಿನ ಹೊಳಪು ತರಲು ಸಹಕಾರಿ


    2015 ರ ಸಂಶೋಧನೆ ಪ್ರಕಾರ, ಗೋಧಿ ಹುಲ್ಲಿನ ಸೇವನೆ ದೇಹದಿಂದ ಕೊಳಕು ಮತ್ತು ವಿಷಕಾರಿ ಅಂಶಗಳು ಹೊರಬರಲು ಪ್ರಾರಂಭಿಸುತ್ತವೆ. ಇದು ಮುಖದ ಕಲೆಗಳು ನಿವಾರಣೆ ಆಗುತ್ತವೆ. ಮತ್ತು ಅದರ ಮೇಲೆ ಕನ್ನಡಿಯಂತಹ ಹೊಳಪು ತರುತ್ತದೆ. ಇದು ನೀವು ಮುಖದ ಹೊಳಪು ಹೆಚ್ಚಿಸುತ್ತದೆ.


    ಇದನ್ನೂ ಓದಿ: ಮೂಳೆಗಳ ಕಾಯಿಲೆಗೆ ಕಾರಣವಾಗುವ ಲೂಬ್ರಿಕಂಟ್ ಎಂದರೇನು? ಇದನ್ನು ಪೂರೈಸುವ ಪದಾರ್ಥಗಳಿವು!


    ವೀಟ್ ಗ್ರಾಸ್ ಸೇವನೆಯ ಸರಿಯಾದ ಮಾರ್ಗ ಯಾವುದು?


    ವೀಟ್ ಗ್ರಾಸ್ ಜ್ಯೂಸ್, ಪೌಡರ್ ಮತ್ತು ಸಪ್ಲಿಮೆಂಟ್ ರೂಪದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಮನೆಯಲ್ಲಿ ತಾಜಾ ರಸ ತೆಗೆದು ಸೇವನೆ ಮಾಡಬಹುದು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಹುಲ್ಲು ರಸ ಸೇವನೆ ಗರಿಷ್ಠ ಪ್ರಯೋಜನ ನೀಡುತ್ತದೆ. ಇದು ದೇಹದೊಳಗೆ ಹೋಗಿ ರಕ್ತದಲ್ಲಿ ಬೆರೆತು ಕೇವಲ 20 ನಿಮಿಷಗಳಲ್ಲಿ ತನ್ನ ಪರಿಣಾಮ ಬೀರಲು ಶುರು ಮಾಡುತ್ತದೆ.

    Published by:renukadariyannavar
    First published: