• Home
  • »
  • News
  • »
  • lifestyle
  • »
  • Face pack: ಮುಖದ ಸೌಂದರ್ಯ ಕಾಪಾಡಲು ಮನೆಯಲ್ಲಿಯೇ ತಯಾರಿಸಿ ಈ ಸರಳ ಫೇಸ್ ಪ್ಯಾಕ್

Face pack: ಮುಖದ ಸೌಂದರ್ಯ ಕಾಪಾಡಲು ಮನೆಯಲ್ಲಿಯೇ ತಯಾರಿಸಿ ಈ ಸರಳ ಫೇಸ್ ಪ್ಯಾಕ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬಾಡುವ ಮುಖ, ಟ್ಯಾನ್, ಮೊಡವೆ, ಸುಕ್ಕಾದ ಚರ್ಮ, ನೆರಿಗೆ ಅನೇಕ ಸಮಸ್ಯೆಗಳನ್ನು ಹೋಗಲಾಡಿಸುವ ಸಾಕಷ್ಟು ಫೇಸ್ ಪ್ಯಾಕ್ ಗಳನ್ನು ನಾವು ಮನೆಯಲ್ಲಿಯೇ ಮಾಡಿಕೊಳ್ಳಬಹುದು.

  • Share this:

    ಮುಖದ (Face) ಸೌಂದರ್ಯಕ್ಕೆ (Beauty) ಮತ್ತು ಆರೋಗ್ಯಕ್ಕೆ (Health) ಫೇಸ್ ಪ್ಯಾಕ್ ಮಾಡಿಕೊಳ್ಳುವುದು ಹೆಚ್ಚು ರೂಢಿಯಲ್ಲಿದೆ. ಪುರುಷ, ಮಹಿಳೆ ಎಂಬ ಭೇದವಿಲ್ಲದೆ ಫೇಸ್ ಪ್ಯಾಕ್ ಮಾಡಿಕೊಂಡು, ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ಈಗ ಹೆಚ್ಚಿದೆ. ಸಲೂನ್ ಗಳಲ್ಲಿ ಫೇಸ್ ಪ್ಯಾಕ್ (Face pack) ಮಾಡಿಸಿಕೊಳ್ಳುವವರು, ಮನೆಯಲ್ಲಿ ಸಿಗುವ ವಸ್ತುಗಳನ್ನು ಬಳಸಿಕೊಂಡು ಫೇಸ್ ಪ್ಯಾಕ್ ಮಾಡಿಕೊಂಡು ತಮ್ಮ ಅಂದವನ್ನು ಕಾಪಾಡುವವರು ಇದ್ದಾರೆ. ಬಿಸಿಲಿಗೆ ಬಾಡುವ ಮುಖ, ಟ್ಯಾನ್ (Tan), ಮೊಡವೆ, ಸುಕ್ಕಾದ ಚರ್ಮ, ನೆರಿಗೆ ಅನೇಕ ಸಮಸ್ಯೆಗಳನ್ನು ಹೋಗಲಾಡಿಸುವ ಸಾಕಷ್ಟು ಫೇಸ್ ಪ್ಯಾಕ್ ಗಳನ್ನು ನಾವು ಮನೆಯಲ್ಲಿಯೇ ಮಾಡಿಕೊಳ್ಳಬಹುದು. ಮುಖದ ಅಂದವನ್ನು ದುಪ್ಪಟ್ಟುಗೊಳಿಸುವ ಕೆಲವು ಫೇಸ್ ಪ್ಯಾಕ್ ಗಳನ್ನು ಈ ಕೆಳಗೆ ನೋಡೋಣ.  


     ಮುಖದ ಸೌಂದರ್ಯ ಹೆಚ್ಚಿಸಲು ದ್ರಾಕ್ಷಿ ಹಣ್ಣಿನ ಫೇಸ್ ಪ್ಯಾಕ್:


    ಎರಡು ಟೇಬಲ್ ಸ್ಪೂನ್ ದ್ರಾಕ್ಷಿ ಹಣ್ಣಿನ ರಸ, ಒಂದು ಟೇಬಲ್ ಸ್ಪೂನ್ ಗೋಧಿ ಹಿಟ್ಟು ಮತ್ತು ಒಂದು ಚಮಚ ನಿಂಬೆ ರಸವನ್ನು ಒಂದು ಬಟ್ಟಲಿಗೆ ಹಾಕಿ ಮಿಶ್ರಣ ಮಾಡಿಕೊಂಡು, ಮುಖಕ್ಕೆ ಲೇಪಿಸಿ. 15 ನಿಮಿಷ ಬಿಟ್ಟು ತಣ್ಣೀರಿನಿಂದ ಮುಖವನ್ನು ತೊಳೆಯಿರಿ.


    ದ್ರಾಕ್ಷಿ ಹಣ್ಣಿನಲ್ಲಿ ಸಾಕಷ್ಟು ಪ್ರಮಾಣದ ಒಳ್ಳೆಯ ಆಂಟಿಆಕ್ಸಿಡೆಂಟ್ ಅಂಶಗಳು ಇವೆ. ಇವು ನಿಮ್ಮ ಚರ್ಮವನ್ನು ಫ್ರೀ ರಾಡಿಕಲ್ ಹಾನಿಯಿಂದ ತಪ್ಪಿಸುತ್ತವೆ. ಮನೆಯ ಹೊರಗಡೆ ಹೋದಾಗ ಸೂರ್ಯನ ಅತಿನೇರಳೆ ಕಿರಣಗಳು ಚರ್ಮದ ಕೊಲಾಜನ್ ಮತ್ತು ಎಲಾಸ್ಟಿಕ್ ಅಂಗಾಂಶಗಳಿಗೆ ಹಾನಿ ಮಾಡುವ ಸಾಧ್ಯತೆ ಹೆಚ್ಚು. ಆದರೆ ದ್ರಾಕ್ಷಿ ಹಣ್ಣಿನ ಫೇಸ್ ಪ್ಯಾಕ್ ಇದನ್ನು ತಡೆದು ಆರೋಗ್ಯಕರ ಹಾಗೂ ಮೃದುವಾದ ಚರ್ಮವನ್ನು ನಿಮ್ಮದಾಗಿಸುತ್ತದೆ.


    ಇದನ್ನೂ ಓದಿ: ಈ ಟಿಪ್ಸ್ ಫಾಲೋ ಮಾಡಿದ್ರೆ ಸಾಕು ಮೊಡವೆಗಳು ಮಾಯವಾಗುತ್ತೆ


     ಮುಖದ ಸೌಂದರ್ಯ ಹೆಚ್ಚಿಸಲು ಕಲ್ಲಂಗಡಿ ಫೇಸ್ ಪ್ಯಾಕ್ :


    ಬೇಸಗೆಯಲ್ಲಿ ಹೆಚ್ಚು ಕಲ್ಲಂಗಡಿ ಸಿಗುತ್ತದೆ. ಹೊಟ್ಟೆಯನ್ನು ತಂಪಾಗಿಸುವ ಕಲ್ಲಂಗಡಿ ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ಇದರಲ್ಲಿರುವ ವಿಟಮಿನ್ ಎ ಮತ್ತು ವಿಟಮಿನ್ ಸಿ ಅಂಶಗಳು ಮುಖದ ಅಂದವನ್ನು ಹೆಚ್ಚಿಸುತ್ತವೆ.


    ಕಲ್ಲಂಗಡಿ ಹಣ್ಣಿನ ರಸವನ್ನು ರಾತ್ರಿ ಮಲಗುವ ಮೊದಲು ಕಾಟನ್ ಮೂಲಕ ನಿಮ್ಮ ಮುಖಕ್ಕೆ ಲೇಪನ ಮಾಡಿಕೊಳ್ಳಿ. ಮರುದಿನ ಬೆಳಗ್ಗೆ ತಣ್ಣೀರಿನಲ್ಲಿ ತೊಳೆಯಿರಿ. ಇದರಿಂದ ನಿಮ್ಮ ಮುಖದ ಮೇಲಿನ  ಸುಕ್ಕುಗಳು ಕಡಿಮೆಯಾಗುತ್ತವೆ.


    ಮುಖದ ಸೌಂದರ್ಯ ಹೆಚ್ಚಿಸಲು ರೋಸ್ ವಾಟರ್ ಲೇಪನ :


    ಮುಖದ ಕಾಂತಿ ಹಾಗೂ ಅಂದವನ್ನು ಹೆಚ್ಚಿಸುವಲ್ಲಿ ರೋಸ್ ವಾಟರ್ ಮುಖ್ಯವಾಗಿದೆ. ಮುಖವನ್ನು ಚೆನ್ನಾಗಿ ತೊಳೆಯಿರಿ. ನಂತರ ರಾತ್ರಿ ಮಲಗುವ ಮೊದಲು ಕಾಟನ್ ಮೂಲಕ ನಿಮ್ಮ ಮುಖಕ್ಕೆ ರೋಸ್ ವಾಟರ್ ನ್ನು ಲೇಪನ ಮಾಡಿಕೊಳ್ಳಿ. ಬೆಳಿಗ್ಗೆ ತಣ್ಣೀರಿನಲ್ಲಿ ತೊಳೆಯಿರಿ. ಇದು ತ್ವಚೆಯಲ್ಲಿ ಅಡಗಿರುವ ಕೊಳೆಯನ್ನು ತೆಗೆಯುತ್ತದೆ. ತ್ವಚೆಯನ್ನು ಮೃದು ಮತ್ತು ಹೊಳೆಯುವಂತೆ ಮಾಡುತ್ತದೆ.


     ಮುಖದ ಸೌಂದರ್ಯ ಹೆಚ್ಚಿಸಲು ಆಲೂಗಡ್ಡೆ ಜ್ಯೂಸ್ ಮತ್ತು ಗ್ರೀನ್ ಟೀ:


    ತಣ್ಣನೆಯ ಗ್ರೀನ್ ಟೀ ಮತ್ತು ಆಲೂಗಡ್ಡೆ ರಸವನ್ನು ಒಂದು ಬಟ್ಟಲಿಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ರಾತ್ರಿ ಮಲಗುವ ಮೊದಲು ಕಾಟನ್ ಮೂಲಕ ನಿಮ್ಮ ಮುಖಕ್ಕೆ ಮಿಶ್ರಣವನ್ನು ಮುಖಕ್ಕೆ ಹಚ್ಚಿ,ರಾತ್ರಿಯಿಡೀ ಬಿಡಿ. ಬೆಳಗ್ಗೆ ಮುಖವನ್ನು ತೊಳೆಯಿರಿ. ಇದು ನಮ್ಮ ಆರೋಗ್ಯ ಮತ್ತು ಚರ್ಮಕ್ಕೆ ಲಾಭದಾಯಕವಾಗಿದೆ.


    ಮುಖದ ಸೌಂದರ್ಯ ಹೆಚ್ಚಿಸಲು ನಿಂಬೆ-ಕ್ರೀಮ್ ಫೇಸ್ ಪ್ಯಾಕ್:


    ನಿಂಬೆ ರಸವು ಬ್ಲೀಚಿಂಗ್ ಗುಣಲಕ್ಷಣಗಳನ್ನು ಹೊಂದಿದೆ. ಇದು ಚರ್ಮವನ್ನು ಟೋನಪ್ ಮಾಡಲು ಮತ್ತು ಎಣ್ಣೆ ರಹಿತವಾಗಿಡಲು ಸಹಕಾರಿ. ಕ್ರೀಮ್‌ನಲ್ಲಿರುವ ಕೊಬ್ಬಿನಾಮ್ಲಗಳು ನಿಮ್ಮ ಚರ್ಮವನ್ನು ಹೈಡ್ರೀಕರಿಸುತ್ತವೆ. ಒಂದು ಬಟ್ಟಲಿಗೆ ಒಂದು ಚಮಚ ಕೆನೆ ತೆಗೆದುಕೊಂಡು ಅದಕ್ಕೆ ನಿಂಬೆ ರಸ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಪೇಸ್ಟ್ ನ್ನು ಮುಖಕ್ಕೆ ಹಚ್ಚಿ ಮಸಾಜ್ ಮಾಡಿ. ರಾತ್ರಿಯಿಡೀ ಬಿಡಿ, ನಂತರ ಬೆಳಗ್ಗೆ ಮುಖವನ್ನು ತೊಳೆಯಿರಿ.


    ಇದನ್ನೂ ಓದಿ: ಕೆಂಪು ಸೇಬಿಗಿಂತ ಹಸಿರು ಸೇಬು ಹೆಚ್ಚು ಆರೋಗ್ಯಕರವಂತೆ.. ಚರ್ಮಕ್ಕೂ ಒಳ್ಳೆಯದಂತೆ


    ಮುಖದ ಸೌಂದರ್ಯ ಹೆಚ್ಚಿಸಲು ಹಾಲು ಮತ್ತು ಅರಿಶಿನ:


    ಮುಖದ ಟ್ಯಾನ್ ತೆಗೆದು ಹಾಕಲು ಹಾಲು ಮತ್ತು ಅರಿಶಿನದ ಪ್ಯಾಕ್ ಸಹಕಾರಿ. ಅರಿಶಿನದಲ್ಲಿರುವ ಆಂಟಿಸೆಪ್ಟಿಕ್ ಮುಖಕ್ಕೆ ಹೊಳಪು ನೀಡುತ್ತದೆ. ಅರ್ಧ ಚಮಚ ಅರಿಶಿನ ಮತ್ತು ಹಸಿ ಹಾಲನ್ನು ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯದ ನಂತರ ತಣ್ಣೀರಿನಿಂದ ತೊಳೆಯಿರಿ.

    Published by:renukadariyannavar
    First published: