ಉಪ್ಪಿಟ್ಟು ಎವರ್ಗ್ರೀನ್ ತಿಂಡಿ. ಹಲವು ಬಗೆಯಲ್ಲಿ ಉಪ್ಪಿಟ್ಟು (Uppittu Recipe) ಮಾಡಬಹುದು. ಈ ಹಿಂದೆ ನ್ಯೂಸ್ 18 ಕನ್ನಡ ವೆಬ್ಸೈಟ್ನಲ್ಲಿ ವಿವಿಧ ರೀತಿಯ ಉಪ್ಪಿಟ್ಟು (Upma Recipe) ಮಾಡುವ ವಿಧಾನ ಹೇಳಲಾಗಿದೆ. ಉಪ್ಪಿಟ್ಟು ಪ್ರಾದೇಶಿಕತೆಯ ರುಚಿಯನ್ನು (Upma Taste) ಒಳಗೊಂಡಿರುವ ತಿಂಡಿ. ಪ್ರತಿ ಭಾಗದಲ್ಲಿಯೂ ಒಂದೊಂದು ರೀತಿಯ ಮಾದರಿಯಲ್ಲಿ ಉಪ್ಪಿಟ್ಟು ಸಿದ್ಧಪಡಿಸಲಾಗುತ್ತದೆ. ಇನ್ನು ಋತುಮಾನದ ತಕ್ಕಂತೆ ಬರುವ ತರಕಾರಿಯನ್ನು (Vegetables) ಒಪ್ಪಿಕೊಳ್ಳುವ ತಿಂಡಿ ಅಂದ್ರೆ ಅದು ಉಪ್ಪಿಟ್ಟು. ಅವರೆಕಾಳು, ಆಲೂಗಡ್ಡೆ, ತೆಂಗಿನಕಾಯಿ, ಬೆಳ್ಳುಳ್ಳಿ ಸೇರಿದಂತೆ ಎಲ್ಲಾ ತರಕಾರಿ ಸೇರಿಸಿ ಉಪ್ಪಿಟ್ಟು ಮಾಡಬಹುದು. ಇನ್ನು ಉಪ್ಪಿಟ್ಟು ಸಿದ್ಧವಾದ ಮೇಲೆ ಅದರ ಜೊತೆಯಲ್ಲಿ ಯಾವ ಡಿಶ್ ಇರಬೇಕು ಅನ್ನೋದನ್ನು ಇಂದು ಹೇಳುತ್ತಿದ್ದೇವೆ. ಈ ಸೈಡ್ ಡಿಶ್ ಉಪ್ಪಿಟ್ಟು ಪ್ರೀತಿಸುವವರನ್ನು ಮತ್ತಷ್ಟು ಮೆಚ್ಚುವಂತೆ ಮಾಡುತ್ತದೆ.
ನೀವು ಯಾವುದೇ ಉಪ್ಪಿಟ್ಟು ಮಾಡಿದ್ರೂ ಅದಕ್ಕೆ ಹೊಂದಿಕೆಯಾಗುವ ಸೈಡ್ ಡಿಶ್ ಅಂದ್ರೆ ಗಟ್ಟಿ ಮೊಸರು. ಬಿಸಿ ಬಿಸಿ ಉಪ್ಪಿಟ್ಟಿನ ಜೊತೆ ಮೊಸರು ಮಿಶ್ರಣ ಮಾಡೋದು ಆರೋಗ್ಯಕ್ಕೆ ಉಚಿತವಲ್ಲ. ಆದ್ದರಿಂದ ಉಪ್ಪಿಟ್ಟಿನ ಬಿಸಿ ಕೊಂಚ ಕಡಿಮೆಯಾದ ಬಳಿಕ ಮೊಸರು ಸೇರಿಸಿ ತಿನ್ನಬಹುದು.
ಶೇಂಗಾ ಚಟ್ನಿ ಪುಡಿ
ಬಹುತೇಕರ ಮನೆಯಲ್ಲಿ ಶೇಂಗಾ ಚಟ್ನಿ ಇದ್ದೆ ಇರುತ್ತದೆ. ಹಾಗಾಗಿ ಬಿಸಿ ಉಪ್ಪಿಟ್ಟಿನ ಜೊತೆಯಲ್ಲಿ ಶೇಂಗಾ ಚಟ್ನಿ ಜೊತೆ ಸೇವಿಸಬಹುದು. ಇದು ಉಪ್ಪಿಟ್ಟಿನ ರುಚಿ ಮತ್ತಷ್ಟು ಹೆಚ್ಚಿಸುತ್ತದೆ. ಒಂದಿಷ್ಟು ಜನರು ಪುಟಾಣಿ (ಹುರಿಗಡಲೆ) ಚಟ್ನಿ ಇಷ್ಟಪಡುತ್ತಾರೆ.
ಚಟ್ನಿ ಪುಡಿ ಮತ್ತು ಮೊಸರು
ಸಿದ್ಧವಾಗಿರುವ ಉಪ್ಪಿಟ್ಟಿನ ಜೊತೆಯಲ್ಲಿ ನಿಮ್ಮಿಷ್ಟದ ಚಟ್ನಿಗೆ ಗಟ್ಟಿ ಮೊಸರು ಸೇರಿಸಿ ಸೇವಿಸಬಹುದು. ಎರಡು ನಿಮ್ಮಿಷ್ಟದ ಪದಾರ್ಥಗಳು ತಿಂಡಿಯೊಂದಿಗೆ ಸೇರಿದ್ರೆ ಸಹಜವಾಗಿ ಉಪ್ಪಿಟ್ಟು ನಿಮಗೆ ಇಷ್ಟವಾಗುತ್ತದೆ.
ತುಪ್ಪ
ಕೆಲವರಿಗೆ ಯಾವುದೇ ತಿಂಡಿ ಇರಲಿ ಅದರಲ್ಲಿ ತುಪ್ಪ ಸೇರಿಸಿ ತಿನ್ನುವ ಅಭ್ಯಾಸ ಇರುತ್ತದೆ. ಚಟ್ನಿ, ಮೊಸರು ಇಲ್ಲದಿದ್ರೂ ಬಿಸಿಯಾದ ಉಪ್ಪಿಟ್ಟಿಗೆ ತುಪ್ಪ ಸೇರಿಸಿ ಸೇವಿಸಬಹುದು.
ಕೊಬ್ಬರಿ ಚಟ್ನಿ
ಹಸಿ ಕೊಬ್ಬರಿ ಚಟ್ನಿಯೂ ಸಹ ಉಪ್ಪಿಟ್ಟಿಗೆ ಜೊತೆಯಾಗುತ್ತದೆ. ದಕ್ಷಿಣ ಕರ್ನಾಟಕ ಭಾಗದಲ್ಲಿ ಉಪ್ಪಿಟ್ಟಿನ ಜೊತೆ ಹಸಿ ಕೊಬ್ಬರಿ ಚಟ್ನಿ ಮಾಡೋದು ಕಾಮನ್. ಈ ಕಾಂಬಿನೇಷನ್ ಉಪ್ಪಿಟ್ಟು ಸವಿಯುವ ಜನರಿಗೆ ಹಿತವಾದ ಅನುಭವವನ್ನು ನೀಡುತ್ತದೆ.
ಇದನ್ನೂ ಓದಿ: Upma Recipe: ಮಕ್ಕಳಿಗೆ ಇಷ್ಟವಾಗುತ್ತೆ ಕಟ್ಟಾ ಮಿಟ್ಟಾ ಉಪ್ಪಿಟ್ಟು; ನೀವೂ ಟ್ರೈ ಮಾಡಿ ರೆಸಿಪಿ
ಕೆಂಪು ಮೆಣಸಿನಕಾಯಿ ಚಟ್ನಿ
ಹೆಚ್ಚು ಸ್ಪೈಸಿ ಇಷ್ಟಪಡೋರು ಕೆಂಪು ಮೆಣಸಿನಕಾಯಿ ಚಟ್ನಿ ಕಾಂಬಿನೇಷನ್ ಆಗಿ ಬಳಸಬಹುದು. ಬ್ಯಾಡಗಿ ಮೆಣಸಿನಕಾಯಿ ಮತ್ತು ಕಾಶ್ಮೀರಿ ಕೆಂಪು ಮೆಣಸಿನಕಾಯಿಯ ಚಟ್ನಿ ಉಪ್ಪಿಟ್ಟಿನ ರುಚಿಗೆ ಹೊಸ ಆಯಾಮವನ್ನು ನೀಡುತ್ತದೆ.
ಕೋಸಂಬರಿ
ಒಂದಿಷ್ಟು ಈರುಳ್ಳಿ, ಸ್ವಲ್ಪ ಕೋತಂಬರಿ ಸೊಪ್ಪು, ಸವತೆಕಾಯಿ, ಟೊಮ್ಯಾಟೋ ಸೇರಿಸಿ ಮಾಡುವ ಕೋಸಂಬರಿ ಸಹ ಉಪ್ಪಿಟ್ಟಿನ ಜೊತೆ ಒಳ್ಳೆಯ ಕಾಂಬಿನೇಷನ್.
ಮಂಡಕ್ಕಿ
ಉತ್ತರ ಕರ್ನಾಟಕ ಭಾಗದಲ್ಲಿ ಮಂಡಕ್ಕಿಯನ್ನು ಉಪ್ಪಿಟ್ಟಿನ ಜೊತೆಯಲ್ಲಿ ಕಡ್ಡಾಯವಾಗಿ ಇರುತ್ತದೆ. ಬಿಸಿ ಬಿಸಿಯಾದ ಉಪ್ಪಿಟ್ಟಿನ ಮೇಲೆ ಮಂಡಕ್ಕಿ ಸೇರಿಸಿ ತಿನ್ನಬಹುದು.
ಅವಲಕ್ಕಿ
ಎಣ್ಣೆಯಲ್ಲಿ ಫ್ರೈ ಮಾಡಿರುವ ಅವಲಕ್ಕಿ ಸಹ ಉಪ್ಪಿಟ್ಟಿನ ಒಳ್ಳೆಯ ಕಾಂಬಿನೇಷನ್ ಎಂದು ಬಹುತೇಕರು ಒಪ್ಪಿಕೊಳ್ಳುತ್ತಾರೆ. ಇದು ಸಹ ಉಪ್ಪಿಟ್ಟಿನ ರುಚಿ ಹೆಚ್ಚಿಸುತ್ತದೆ.
ಇದನ್ನೂ ಓದಿ: Upma Recipe: ಹೊಸ ಬಗೆಯ, ಭಿನ್ನ ರುಚಿಯ ಸ್ವೀಟ್ ಕಾರ್ನ್ ಉಪ್ಪಿಟ್ಟು ಮಾಡುವ ವಿಧಾನ
ಕೇಸರಿಬಾತ್
ಉಪ್ಪಿಟ್ಟು ಮತ್ತು ಕೇಸರಿಬಾತ್ ಅವಳಿ-ಜವಳಿ ಇದ್ದಂತೆ. ಖಾರದ ಜೊತೆ ಸಿಹಿ ತಿಂಡಿಗೆ ಎಲ್ಲರೂ ಫುಲ್ ಮಾರ್ಕ್ಸ್ ನೀಡುತ್ತಾರೆ. ಈ ಕಾಂಬಿನೇಷನ್ ಅನ್ನು ಚೌ ಚೌ ಅಂತಾನೂ ಕರೆಯಲಾಗುತ್ತದೆ. ಮೈಸೂರು ಭಾಗದಲ್ಲಿ ಖಾರಾ ಬಾತ್- ಕೇಸರಿಬಾತ್ ಎಂದು ಕರೆಯಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ