ಶುಗರ್ ಇರುವವರಿಗೆ ಅನ್ನ ತಿನ್ನಲೇಬೇಕು ಅನಿಸುತ್ತಾ.. ಹಾಗಾದರೆ ಈ ಅಕ್ಕಿಗಳನ್ನು ಬಳಸುವುದು ಬೆಸ್ಟ್

ರಕ್ತಕ್ಕೆ ನಿಧಾನವಾಗಿ ಸಕ್ಕರೆ ಅಂಶವನ್ನು ಅಲ್ಪ ಪ್ರಮಾಣದಲ್ಲಿ ಬಿಡುಗಡೆ ಮಾಡುವ ಈ ಅಕ್ಕಿಗಳನ್ನು ಬಳಸುವುದು ಮಧುಮೇಹಿಗಳಿಗೆ ವರದಾನವಾಗಲಿದೆ.

ವಿವಿಧ ರೀತಿಯ ಅಕ್ಕಿಗಳು

ವಿವಿಧ ರೀತಿಯ ಅಕ್ಕಿಗಳು

 • Share this:
  ಅನ್ನ ಅನಾದಿ ಕಾಲದಿಂದಲೂ ನಮ್ಮ ಆಹಾರಕ್ರಮದ ಅವಿಭಾಜ್ಯ ಅಂಗ. ಅನ್ನ ಎಂದರೆ ಸಿಕ್ಕಾಪಟ್ಟೆ ಇಷ್ಟವಿದ್ದರೂ, ಮಧುಮೇಹವಿರುವವರು ಅನ್ನವನ್ನು ತ್ಯಜಿಸಬೇಕಾಗುತ್ತೆ. ನಾಲಗೆಗೆ ರುಚಿ ಎನಿಸುವ ಅನ್ನ, ರಕ್ತದಲ್ಲಿನ ಸಕ್ಕರೆ ಸಂಬಂಧಿತ ವಿಷಯದಲ್ಲಿ ವಿಲನ್​​ ಅಂತಲೇ ಹೇಳಬಹುದು. ಚಿಕ್ಕಂದಿಲಿನಿಂದಲೂ ಅನ್ನವನ್ನೇ ಮುಖ್ಯ ಆಹಾರವಾಗಿ ತಿನ್ನುತ್ತಾ ಬಂದವರಿಗೆ ಒಮ್ಮೆಲೆ ಅನ್ನ ತನ್ನಬಾರದು ಎಂದರೆ ಹಿಂಸೆ ಎನಿಸುತ್ತೆ. ತಿನ್ನಬಾರದು ಎಂದ ಮೇಲೆಯೇ ಅನ್ನದ ಮೇಲಿನ ಆಸೆ ಮತ್ತಷ್ಟು ಹೆಚ್ಚಾಗುತ್ತೆ. ಈ ಹಿನ್ನೆಲೆ ಶುಗರ್​ ಇರುವವರು ಯಾವ ಅಕ್ಕಿಯನ್ನು ಆಯ್ಕೆ ಮಾಡಬೇಕು ಎಂಬ ಮಾಹಿತಿ ಇಲ್ಲಿದೆ.

  ಮನಿಲಾ ಮೂಲದ ಅಂತಾರಾಷ್ಟ್ರೀಯ ಅಕ್ಕಿ ಸಂಶೋಧನಾ ಸಂಸ್ಥೆ ಮತ್ತು ಕ್ವೀನ್‍ಲ್ಯಾಂಡ್ ವಿಶ್ವ ವಿದ್ಯಾನಿಲಯ 2012ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಭಾರತೀಯರು ಕಡಿಮೆ ಗ್ಲೈಸಮಿಕ್ ಸೂಚ್ಯಂಕ ಹೊಂದಿರುವ ಅಗ್ರ 10 ತಳಿಯ ಅಕ್ಕಿಗಳಲ್ಲಿ ಮೂರನ್ನು ಸೇವಿಸುತ್ತಿದ್ದಾರೆ.ಯಾವುದೇ ಆಹಾರದ ಗ್ಲೈಸಮಿಕ್ ಸೂಚ್ಯಂಕ ಎಂದರೆ, ಅದನ್ನು ತಿಂದ ನಂತರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಸಾಮರ್ಥ್ಯದ ಅಳತೆಯಾಗಿದೆ.

  ಕಡಿಮೆ ಗ್ಲೈಸಮಿಕ್ ಸೂಚ್ಯಂಕ ಏಕೆ ಉತ್ತಮ?

  ಕಡಿಮೆ ಗ್ಲೈಸಮಿಕ್ ಸೂಚ್ಯಂಕ ಹೊಂದಿರುವ ಅಕ್ಕಿ  ರಕ್ತದಲ್ಲಿ ಸಕ್ಕರೆಯನ್ನು ನಿಧಾನವಾಗಿ ಬಿಡುಗಡೆ ಮಾಡುವ ಮೂಲಕ ಮಧುಮೇಹವನ್ನು ದೂರ ಇಡುತ್ತದೆ. ಇದು ಐಆರ್‌ಆರ್‌ಐ ಮತ್ತು ಆಸ್ಟ್ರೇಲಿಯಾದ ಸಿಎಸ್‍ಐಆರ್ಒ ನಡೆಸಿದ ಸಂಶೋಧನೆಯಿಂದ ತಿಳಿದು ಬಂದಿದೆ. ಹೆಚ್ಚು ಗ್ಲೈಸಮಿಕ್ ಸೂಚ್ಯಂಕ ಹೊಂದಿರುವ ಅಕ್ಕಿ ಸುಲಭವಾಗಿ ಜೀರ್ಣವಾಗಿ ಸಕ್ಕರೆ ಅಂಶ ರಕ್ತಕ್ಕೆ ಸೇರಿಕೊಳ್ಳುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಏರಿಳಿತ ಉಂಟು ಮಾಡುತ್ತದೆ ಮತ್ತು ಮಧುಮೇಹವನ್ನು ಹೆಚ್ಚಿಸುತ್ತದೆ.

  ಕಡಿಮೆ ಗ್ಲೈಸಮಿಕ್ ಸೂಚ್ಯಂಕ ಹೊಂದಿರುವ ಆಹಾರ ದೇಹದಲ್ಲಿ ನಿಧಾನವಾಗಿ ಜೀರ್ಣಗೊಳ್ಳುತ್ತದೆ ಮತ್ತು ಹೀರಿಕೊಳ್ಳಲ್ಪಡುತ್ತದೆ. ಅದರಿಂದಾಗಿ ಆಹಾರದಿಂದ ಸಕ್ಕರೆ ನಿಧಾನವಾಗಿ ಮತ್ತು ನಿರಂತರ ರೀತಿಯಲ್ಲಿ ರಕ್ತಕ್ಕೆ ಬಿಡುಗಡೆಯಾಗುತ್ತದೆ. ಇದರಿಂದ ಮಧುಮೇಹ ಬರುವ ಸಾಧ್ಯತೆ ಕಡಿಮೆ ಇರುತ್ತದೆ ಎಂದು ಸಂಶೋಧನಾ ವರದಿಯಲ್ಲಿ ತಿಳಿಸಿದೆ.

  ಕಡಿಮೆ ಗ್ಲೈಸಮಿಕ್ ಸೂಚ್ಯಂಕ ಹೊಂದಿರುವ ಭಾರತೀಯ ಅಕ್ಕಿಗಳು:
  1. ಸ್ವರ್ಣ- ಗ್ಲೈಸಮಿಕ್ ಸೂಚ್ಯಂಕ ಪ್ರಮಾಣ 55ಕ್ಕಿಂತ ಕಡಿಮೆ
  2. ಮಸೂರಿ- ಗ್ಲೈಸಮಿಕ್ ಸೂಚ್ಯಂಕ ಪ್ರಮಾಣ 55 ಕ್ಕಿಂತ ಕಡಿಮೆ
  3. ಬಾಸುಮತಿ- ಗ್ಲೈಸಮಿಕ್ ಸೂಚ್ಯಂಕ ಪ್ರಮಾಣ 60

  ಇತರ ಅಕ್ಕಿಗಳ ಗ್ಲೈಸಮಿಕ್ ಮಟ್ಟ

  1. ಸಾಮಾನ್ಯ ಬಿಳಿ ಅಕ್ಕಿ (ಬೇಯಿಸಿದ್ದು) 73+-4
  2. ಕಂದು ಅಕ್ಕಿ (ಬೇಯಿಸಿದ್ದು) 68+-4
  3. ಅಕ್ಕಿ ಗಂಜಿ 78+_9
  4. ಅಕ್ಕಿ ನೂಡಲ್ಸ್ 53+-7
  5. ಅಕ್ಕಿ ನಿಪ್ಪಟ್ಟು/ಸಂಡಿಗೆ 87+-2
  6.  ಅಕ್ಕಿ ಹಾಲು 86+-7

  ಇದನ್ನೂ ಓದಿ: ಹೊಕ್ಕುಳಿಗೆ ಎಣ್ಣೆ ಹಾಕಿದರೆ ಎಷ್ಟೊಂದು ಲಾಭ ಗೊತ್ತಾ? ಹೊಳೆಯುವ ತುಟಿಗೂ ಇದಕ್ಕೂ ಇದೆ ಸಂಬಂಧ

  ಕಡಿಮೆ ಗ್ಲೈಸಮಿಕ್ ಸೂಚ್ಯಂಕ ಹೊಂದಿರುವ ಉತ್ಪನ್ನಗಳೆಂದರೆ 55 ಮತ್ತು ಅದಕ್ಕಿಂತ ಕಡಿಮೆ ಸಕ್ಕತೆ ಅಂಶ ಹೊಂದಿರುವ ಉತ್ಪನ್ನಗಳು. ಮಧ್ಯಮ ಗ್ಲೈಸಮಿಕ್ ಸೂಚ್ಯಂಕ ಹೊಂದಿರುವ ಉತ್ಪನ್ನಗಳೆಂದರೆ 56 ರಿಂದ 69ರ ಮಧ್ಯೆ ಇರುವುದು. ಹೆಚ್ಚು ಗ್ಲೈಸಮಿಕ್ ಸೂಚ್ಯಂಕ ಹೊಂದಿರುವ ಉತ್ಪನ್ನಗಳೆಂದರೆ 70 ಮತ್ತು ಅದಕ್ಕಿಂತ ಹೆಚ್ಚು ಸಕ್ಕರೆ ಅಂಶ ಹೊಂದಿರುವವು. ಟೈಮ್ಸ್ ಇಂಡಿಯಾ ವರದಿಯ ಪ್ರಕಾರ ಭಾರತೀಯ ಮಧುಮೇಹಿಗಳು (ಸ್ವರ್ಣ, ಮಸೂರಿ ಮತ್ತು ಬಾಸ್ಮತಿ ಅಕ್ಕಿಯ ಆಯ್ಕೆ ಇರುವುದರಿಂದ) ಅಕ್ಕಿ ತಿನ್ನುವ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ.

  ಯುಎಸ್ ನ್ಯಾಷನಲ್ ಲೈಬ್ರೆರಿ ಆಫ್ ಮೆಡಿಸಿನ್‍ನಲ್ಲಿ ಪ್ರಕಟವಾದ ಅಧ್ಯಯನ ವರದಿಯ ಪ್ರಕಾರ, ಸರಳ ಆಹಾರ ಕ್ರಮ ಬದಲಾವಣೆ, ಬಿಳಿ ಅನ್ನ ಬದಲಿಗೆ ಕಂದು ಅನ್ನ ತಿನ್ನುವುದು ಅಥವಾ ಕಂದು ಅನ್ನದ ಬದಲಿಗೆ ದ್ವಿದಳ ಧಾನ್ಯ ತಿನ್ನುವುದು. ಭಾರತದಲ್ಲಿ ಬೊಜ್ಜು ಸಂಬಂಧಿತ ಚಯಾಪಚಯ ಅಸ್ವಸ್ಥತೆಯ ಅಪಾಯದಲ್ಲಿರುವ ಅತೀ ತೂಕದ ವಯಸ್ಕರ ಗ್ಲೂಕೋಸ್ ಮತ್ತು ಇನ್ಸುಲಿನ್ ಪ್ರಕ್ರಿಯೆಗಳ ಮೇಲೆ ಗಮನಾರ್ಹ ಪ್ರಭಾವ ಬೀರುತ್ತದೆ.

  2019ರ ಅಕ್ಟೋಬರ್‌ನಲ್ಲಿ ಪ್ರಕಟವಾದ ಸರಕಾರಿ ಸಮೀಕ್ಷೆಯೊಂದರ ಪ್ರಕಾರ, ಭಾರತದ ವಯಸ್ಕ ಜನಸಂಖ್ಯೆಯಲ್ಲಿ ಅಂದಾಜು 72.96 ಮಧುಮೇಹಿಗಳಿದ್ದಾರೆ, 50 ವರ್ಷಕ್ಕಿಂತ ಮೇಲ್ಪಟ್ಟ ಸುಮಾರು 12% ಭಾರತೀಯರಿಗೆ ಮಧುಮೇಹವಿದೆ.
  Published by:Kavya V
  First published: