ಈ ಹಣ್ಣು ತಿಂದರೆ ನೈಸರ್ಗಿಕವಾಗಿ ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು

ಕ್ವೀನ್ಸ್‌ಲ್ಯಾಂಡ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಈ ಅಧ್ಯಯನದಲ್ಲಿ ದಂತ ಸುರಕ್ಷತೆಗೆ ಬೆರಿ ಹಣ್ಣು ಅತ್ಯುತ್ತಮ ಎಂಬುದನ್ನು ಕಂಡುಕೊಳ್ಳಲಾಗಿದೆ.

zahir | news18
Updated:July 24, 2019, 6:10 PM IST
ಈ ಹಣ್ಣು ತಿಂದರೆ ನೈಸರ್ಗಿಕವಾಗಿ ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು
ಬೆರಿ ಹಣ್ಣು
  • News18
  • Last Updated: July 24, 2019, 6:10 PM IST
  • Share this:
ಸುಂದರವಾದ ಹಲ್ಲುಗಳು ಸೌಂದರ್ಯವನ್ನು ಹೆಚ್ಚಿಸುತ್ತವೆ. ಆದರೆ ಇದರ ಆರೈಕೆಯನ್ನು ಸರಿಯಾಗಿ ಮಾಡಿಕೊಳ್ಳದಿದ್ದರೆ ಸಮಸ್ಯೆಯು ಸೃಷ್ಟಿಯಾಗುತ್ತದೆ. ಸಾಮಾನ್ಯವಾಗಿ ಹಲ್ಲುಗಳ ಆರೋಗ್ಯವನ್ನು ಕಾಪಾಡಲು ಪೋಷಕರು ಬಾಲ್ಯದಿಂದಲೇ ವಿಶೇಷ ಕಾಳಜಿವಹಿಸುತ್ತಾರೆ. ಏಕೆಂದರೆ ಹಲ್ಲಿನ ಸಮಸ್ಯೆ ಬಾಲ್ಯದಿಂದಲೇ ಪ್ರಾರಂಭವಾಗುತ್ತವೆ. ಇದಕ್ಕೆ ಒಂದು ಕಾರಣ ಸರಿಯಾದ ಬಾಯಿಯ ಅಶುಚಿತ್ವವಾದರೆ ಮತ್ತೊಂದು ಕಾರಣ ಟೂತ್‌ಪೇಸ್ಟ್  ಮತ್ತು ಸರಿಯಾದ ರೀತಿಯಲ್ಲಿ ಬ್ರಶ್ ಮಾಡದಿರುವುದು.

ಆದರೆ ಹಣ್ಣನ್ನು ತಿನ್ನುವುದರಿಂದ ಸಹ ನಿಮ್ಮ ಹಲ್ಲುಗಳ ಆರೋಗ್ಯವನ್ನು ಕಾಪಾಡಬಹುದು ಎಂಬುದು ನಿಮಗೆ ತಿಳಿದಿದೆಯೇ? ನೀವು ಈ ಹಣ್ಣನ್ನು ಸೇವಿಸಿದರೆ, ನಿಮ್ಮ ಹಲ್ಲುಗಳ ಸಮಸ್ಯೆ ನಿವಾರಣೆಯಾಗಗುತ್ತದೆ ಎಂದರೆ ನಂಬಲೇಬೇಕು. ಅಂತಹದೊಂದು ಹಣ್ಣಿನ ಬಗ್ಗೆ ಇಲ್ಲಿ ತಿಳಿಸಲಾಗಿದೆ.

ಟೂತ್‌ಪೇಸ್ಟ್ ಮತ್ತು ಮೌತ್‌ವಾಶ್‌ನಲ್ಲಿ ಬೆರಿ ಹಣ್ಣು (ಬೆರ್ರಿ ಹಣ್ಣು)ಗಳನ್ನು ಬಳಸುವುದರಿಂದ ಹಲ್ಲುಗಳ ಆರೋಗ್ಯದ ಗುಣಮಟ್ಟ ಹೆಚ್ಚುತ್ತದೆ ಎಂದು ದಂತ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಈ ಹಿಂದೆಯೇ ಸಂಶೋಧಕರು ಬಾಯಿಯಲ್ಲಿನ ಬ್ಯಾಕ್ಟೀರಿಯಾಗಳನ್ನು ಕಡಿಮೆ ಮಾಡಲು ಮತ್ತು ದಂತಗಳ ಮೇಲಿನ ಅಪಾಯವನ್ನು ಕಡಿಮೆಗೊಳಿಸುವಲ್ಲಿ ಬೆರಿ ಹಣ್ಣಿನಲ್ಲಿರುವ ಅಂಶಗಳು ಸಹಾಯಕ ಎಂದು ತಿಳಿಸಿದ್ದರು.ಬೆರಿ ಹಣ್ಣುಗಳಲ್ಲಿ ಪಾಲಿಫಿನೋಲ್‌ಗಳ ಅಂಶಗಳು ಹೇರಳವಾಗಿರುತ್ತವೆ. ಈ ಪಾಲಿಫಿನೋಲ್‌ಗಳು ಬಾಯಿಯಲ್ಲಿ ಆಂಟಿಆಕ್ಸಿಡೆಂಟ್‌ಗಳಾಗಿ ಕಾರ್ಯನಿರ್ವಹಿಸಲಿದ್ದು, ಇದು ದೇಹದಲ್ಲಿನ ಬ್ಯಾಕ್ಟೀರಿಯಾಗಳ ವಿರುದ್ಧ ರಕ್ಷಣೆ ನೀಡುತ್ತದೆ. ಕ್ವೀನ್ಸ್‌ಲ್ಯಾಂಡ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಈ ಅಧ್ಯಯನದಲ್ಲಿ ದಂತ ಸುರಕ್ಷತೆಗೆ ಬೆರಿ ಹಣ್ಣು ಅತ್ಯುತ್ತಮ ಎಂಬುದನ್ನು ಕಂಡುಕೊಳ್ಳಲಾಗಿದೆ. ಕ್ರ್ಯಾನ್‌ಬೆರಿ, ಬೆರಿ ಹಣ್ಣುಗಳು ಮತ್ತು ಸ್ಟ್ರಾಬೆರಿಗಳ ಬಳಸಿ ನಡೆಸಲಾದ ಈ ಪರೀಕ್ಷೆಯಲ್ಲಿ ಬೆರಿ ಹಣ್ಣು ಸೇವಿಸಿದಾಗ ಬಾಯಿಯಲ್ಲಿನ ಬ್ಯಾಕ್ಟೀರಿಯಾಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡಿದೆ. ಇದು ನೈಸರ್ಗಿಕವಾಗಿ ಹಲ್ಲುಗಳ ಆರೋಗ್ಯವನ್ನು ಹೆಚ್ಚಿಸುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಒಎಚ್‌ಎಫ್ ವರದಿಯ ಪ್ರಕಾರ, ಈ ಹಣ್ಣುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತಿನ್ನುವುದರಿಂದ ಆರೋಗ್ಯದ ಸಮಸ್ಯೆಗಳು ಸಹ ಕಾಣಿಸಿಕೊಳ್ಳಬಹುದು. ಹೀಗಾಗಿ ಇದನ್ನು ಇತರೆ ಆಹಾರಗಳೊಂದಿಗೆ ಮಿಶ್ರಣ ಮಾಡಿ ಸೇವಿಸುವುದು ಉತ್ತಮ. ಪಾಶ್ಚಾತ್ಯ ದೇಶಗಳಲ್ಲಿ ಸಾಮಾನ್ಯವಾಗಿ ಬೆರಿ ಹಣ್ಣುಗಳನ್ನು ಬೆಳಗಿನ ಉಪಾಹಾರ ಕಾರ್ನ್‌ ಫ್ಲೇಕ್ಸ್​, ಮೊಸರು ಅಥವಾ ಹಲವು ವಿಧಗಳಲ್ಲಿ ಸೇವಿಸುತ್ತಾರೆ. ಇದನ್ನೇ ಫಾಲೋ ಮಾಡಿದರೂ ನೈಸರ್ಗಿಕವಾಗಿ ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.
First published:July 24, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ