Fatty Liver Disease: ಬೆಳಗ್ಗೆ ಎದ್ದ ನಂತರ ನಿಮ್ಗೆ ಹೀಗೆಲ್ಲಾ ಆಗ್ತಾ ಇದ್ಯಾ? ಹಾಗಿದ್ರೆ ಇದು ಯಕೃತ್ತಿನ ಕಾಯಿಲೆಯ ಎಚ್ಚರಿಕೆ ಸಂಕೇತ

ಆಲ್ಕೋಹಾಲ್ ಎಷ್ಟರ ಮಟ್ಟಿಗೆ ಯಕೃತ್ ಗೆ ಹಾನಿಯನ್ನು ಉಂಟು ಮಾಡುತ್ತದೆ ಎನ್ನುವ ಬಗ್ಗೆ ನಮಗೆಲ್ಲರಿಗೂ ತಿಳಿದೇ ಇದೆ. ಯಕೃತ್ ನಲ್ಲಿ ಕೊಬ್ಬು ಶೇಖರಣೆಯಾಗುವುದರ ಹಿಂದಿನ ಏಕೈಕ ಕಾರಣಗಳಲ್ಲಿ ಇದೂ ಒಂದಾಗಿದ್ದು, ಇದು ಕೊಬ್ಬಿನ ಯಕೃತ್ತಿನ ಕಾಯಿಲೆಗೆ ಕಾರಣವಾಗುತ್ತದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

 • Share this:
ಆಲ್ಕೋಹಾಲ್ (Alcohol) ಎಷ್ಟರ ಮಟ್ಟಿಗೆ ಯಕೃತ್‍ ಅನ್ನು ಹಾನಿ ಉಂಟು ಮಾಡುತ್ತದೆ ಎನ್ನುವ ಬಗ್ಗೆ ನಮಗೆಲ್ಲರಿಗೂ ತಿಳಿದೇ ಇದೆ. ಯಕೃತ್ (Liver) ನಲ್ಲಿ ಕೊಬ್ಬು (Fat) ಶೇಖರಣೆಯಾಗುವುದರ ಹಿಂದಿನ ಏಕೈಕ ಕಾರಣಗಳಲ್ಲಿ ಇದೂ ಒಂದಾಗಿದ್ದು, ಇದು ಕೊಬ್ಬಿನ ಯಕೃತ್ತಿನ ಕಾಯಿಲೆಗೆ (Fatty liver disease) ಕಾರಣವಾಗುತ್ತದೆ. ಕೊಬ್ಬಿನ ಯಕೃತ್ತಿನ ಕಾಯಿಲೆಯಲ್ಲಿ ಎರಡು ವಿಧಗಳಿವೆ, ಆಲ್ಕೊಹಾಲ್ ಮತ್ತು ಆಲ್ಕೋಹಾಲ್ ರಹಿತ ಕೊಬ್ಬಿನ ಯಕೃತ್ತಿನ ಕಾಯಿಲೆ (Non-alcoholic fatty liver disease) ಎಂದು ಹೇಳಬಹುದು. ಮೊದಲನೆಯದು ಅತಿಯಾದ ಆಲ್ಕೊಹಾಲ್ ಸೇವನೆಯಿಂದಾಗಿ ಉಂಟಾಗುತ್ತದೆ, ಆದರೆ ಎರಡನೆಯದು ಆಲ್ಕೋಹಾಲ್ ಸೇವನೆಯೊಂದಿಗೆ ಸಂಬಂಧಿಸಿಲ್ಲ.

ದೀರ್ಘಕಾಲದ ಯಕೃತ್ತಿನ ಕಾಯಿಲೆ
ಭಾರತದ ರಾಷ್ಟ್ರೀಯ ಆರೋಗ್ಯ ಪೋರ್ಟಲ್ (ಎನ್ಎಚ್‌ಪಿ) ಪ್ರಕಾರ, ಆಲ್ಕೋಹಾಲ್ ರಹಿತ ಕೊಬ್ಬಿನ ಯಕೃತ್ತಿನ ಕಾಯಿಲೆ (ಎನ್ಎಎಫ್ಎಲ್‌ಡಿ) ಜಾಗತಿಕವಾಗಿ ದೀರ್ಘಕಾಲದ ಯಕೃತ್ತಿನ ಕಾಯಿಲೆಗಳಿಗೆ ಪ್ರಮುಖ ಕಾರಣವಾಗಿದೆ. ಆಫ್ರಿಕಾದಲ್ಲಿ 13.5 ರಿಂದ ಮಧ್ಯಪ್ರಾಚ್ಯದಲ್ಲಿ 31.8 ಪ್ರತಿಶತದವರೆಗಿನ ಜಾಗತಿಕ ವಯಸ್ಕ ಜನಸಂಖ್ಯೆಯ ಸುಮಾರು 25 ಪ್ರತಿಶತದಷ್ಟು ಸಂಖ್ಯೆಯ ಮೇಲೆ ಎನ್ಎಎಫ್ಎಲ್‌ಡಿ ಪರಿಣಾಮ ಬೀರುತ್ತದೆ. ಭಾರತದಲ್ಲಿ ಎನ್ಎಎಫ್ಎಲ್‌ಡಿ ಹರಡುವಿಕೆಯು ಸುಮಾರು 9 ರಿಂದ 32 ಪ್ರತಿಶತದಷ್ಟಿದೆ ಎಂದು ಆರೋಗ್ಯ ಸಂಸ್ಥೆ ವರದಿ ಮಾಡಿದೆ.

ಆತಂಕಕಾರಿ ಅಂಕಿ ಅಂಶಗಳನ್ನು ಗಮನಿಸಿದರೆ, ಈ ಸ್ಥಿತಿ ಏನು ಎಂಬುದನ್ನು ಅರ್ಥಮಾಡಿಕೊಳ್ಳುವುದು ಮತ್ತು ಅದಕ್ಕೆ ಸಂಬಂಧಿಸಿದ ಸಾಮಾನ್ಯ ಮತ್ತು ಅಸಾಮಾನ್ಯ ರೋಗಲಕ್ಷಣಗಳನ್ನು ಗಮನಿಸುವುದು ಬಹಳ ಮುಖ್ಯವಾಗುತ್ತದೆ. ಬನ್ನಿ ಹಾಗಾದರೆ ಇದರ ಬಗ್ಗೆ ಎಲ್ಲವನ್ನೂ ವಿವರವಾಗಿ ತಿಳಿದುಕೊಳ್ಳೋಣ.

ಆಲ್ಕೋಹಾಲ್ ರಹಿತ ಕೊಬ್ಬಿನ ಯಕೃತ್ತಿನ ಕಾಯಿಲೆ (ಎನ್ಎಎಫ್ಎಲ್ಡಿ) ಎಂದರೇನು?
ಆಲ್ಕೊಹಾಲ್ ರಹಿತ ಕೊಬ್ಬಿನ ಯಕೃತ್ತಿನ ಕಾಯಿಲೆಯು ಯಕೃತ್ತಿನಲ್ಲಿ ಹೆಚ್ಚುವರಿ ಪ್ರಮಾಣದ ಕೊಬ್ಬು ಸಂಗ್ರಹವಾಗುವ ಒಂದು ಸ್ಥಿತಿಯಾಗಿದೆ. ಆದಾಗ್ಯೂ ಕೊಬ್ಬಿನ ಈ ಶೇಖರಣೆಯು ಆಲ್ಕೋಹಾಲ್ ಬಳಕೆಗೆ ಸಂಬಂಧಿಸಿದ್ದಲ್ಲ ಅಥವಾ ಸಂಬಂಧಿಸಿಲ್ಲ. ಎನ್ಎಎಫ್ಎಲ್‌ಡಿ ಎರಡು ವಿಧಗಳನ್ನು ಹೊಂದಿವೆ. ಸರಳ ಕೊಬ್ಬಿನ ಪಿತ್ತಜನಕಾಂಗ (ಎನ್ಎಎಫ್ಎಲ್) ಮತ್ತು ಆಲ್ಕೊಹಾಲಿಕ್ ಅಲ್ಲದ ಸ್ಟೀಟೊಹೆಪಾಟೈಟಿಸ್.

ಸರಳ ಕೊಬ್ಬಿನ ಯಕೃತ್ತು, ಯಕೃತ್ತಿನಲ್ಲಿ ಕೊಬ್ಬು ಶೇಖರಣೆಯಾಗುವ ಸ್ಥಿತಿಯನ್ನು ಸೂಚಿಸುತ್ತದೆ ಆದರೆ ಉರಿಯೂತ ಮತ್ತು ಯಕೃತ್ತು ಹಾನಿಯಲ್ಲಿ ಯಾವುದೇ ಚಿಹ್ನೆಗಳಿರುವುದಿಲ್ಲ.

ಇದನ್ನೂ ಓದಿ:  Health Tips: ಆರೋಗ್ಯಯುತ ತ್ವಚೆ ಮತ್ತು ಕೂದಲು ನಿಮ್ಮದಾಗಬೇಕೆ? ಹಾಗಿದ್ದರೆ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ನೋಡಿ

ನಾನ್ ಆಲ್ಕೊಹಾಲಿಕ್ ಸ್ಟೀಟೊಹೆಪಾಟಿಟಿಸ್ ಎನ್ಎಎಫ್ಎಲ್‌ಡಿಯ ಹೆಚ್ಚು ತೀವ್ರ ರೂಪವಾಗಿದೆ, ಏಕೆಂದರೆ ಇದು ಕೊಬ್ಬಿನ ಶೇಖರಣೆಯನ್ನು ಮಾತ್ರವಲ್ಲದೆ, ಪಿತ್ತಜನಕಾಂಗದ ಜೀವಕೋಶಗಳ ಉರಿಯೂತವನ್ನು ಸಹ ಒಳಗೊಂಡಿರುತ್ತದೆ, ಇದು ಫೈಬ್ರೋಸಿಸ್ ಅಥವಾ ಪಿತ್ತಜನಕಾಂಗದ ಕಾಯಿಲೆಗಳಿಗೆ ಕಾರಣವಾಗುತ್ತದೆ. ಇದು ಸಿರೋಸಿಸ್ ಅಥವಾ ಯಕೃತ್ತಿನ ಕ್ಯಾನ್ಸರ್‍‍ಗೆ ಕಾರಣವಾಗುವ ತೊಡಕುಗಳಿಗೂ ಸಹ ಕಾರಣವಾಗಬಹುದು.

ನೀವು ಬೆಳಿಗ್ಗೆ ಎದ್ದಾಗ ಈ ರೋಗಲಕ್ಷಣದ ಬಗ್ಗೆ ಜಾಗರೂಕರಾಗಿರಿ
ಈ ಕಾಯಿಲೆಯ ರೋಗಲಕ್ಷಣಗಳು ವಿಶೇಷವಾಗಿ ನಿಮಗೆ ಬೆಳಗ್ಗೆ ಹೊತ್ತು ನೀವು ಹಾಸಿಗೆಯಿಂದ ಎದ್ದಾಗ ಕಾಣಿಸಿಕೊಳ್ಳಬಹುದು.

ಎದ್ದ ತಕ್ಷಣವೇ ದಣಿವು ಅಥವಾ ಆಯಾಸದಿಂದ ಬಳಲುವುದು ನಾವೆಲ್ಲರೂ ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿದ್ದೇವೋ, ಇಲ್ಲವೋ ಎಂಬುದನ್ನು ಲೆಕ್ಕಿಸದೆ ಅನುಭವಿಸುತ್ತೇವೆ. ಆದರೆ ತಜ್ಞರು ಈ ರೋಗಲಕ್ಷಣವನ್ನು ಲಘುವಾಗಿ ತೆಗೆದುಕೊಳ್ಳುವುದರ ವಿರುದ್ಧ ಎಚ್ಚರಿಕೆ ನೀಡುತ್ತಾರೆ. ನೀವು ತುಂಬಾನೇ ದಣಿದಿದ್ದೀರಿ ಅಂತ ಅನ್ನಿಸಿದರೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

ಎನ್ಎಎಫ್ಎಲ್ಡಿ ಕಾಯಿಲೆಯ ಇತರ ಎಚ್ಚರಿಕೆ ಚಿಹ್ನೆಗಳು

 •  ಬಲ ಕಿಬ್ಬೊಟ್ಟೆಯ ಮೇಲ್ಭಾಗದಲ್ಲಿ ನೋವು

 • ಕಿಬ್ಬೊಟ್ಟೆಯ ಊತ

 • ಹಿಗ್ಗಿಸಿದ ಗುಲ್ಮ

 • ಕಾಮಾಲೆ

 • ಚರ್ಮದ ಮೇಲ್ಮೈಗಿಂತ ಕೆಳಗೆ ದೊಡ್ಡದಾದ ರಕ್ತನಾಳಗಳು

 • ವಿವರಿಸಲಾಗದ ತೂಕ ನಷ್ಟವಾಗುವುದು

 • ಕೆಂಪು ಅಂಗೈಗಳು.


ಆಲ್ಕೋಹಾಲ್ ಸಂಬಂಧಿತ ಯಕೃತ್ ಕಾಯಿಲೆಯ ಬಗ್ಗೆ ಎಚ್ಚರವಿರಲಿ
ಹೆಚ್ಚಿನ ಪ್ರಮಾಣದ ಆಲ್ಕೋಹಾಲ್ ಕುಡಿಯುವುದರಿಂದ ನಿಮ್ಮ ಯಕೃತ್ತಿಗೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಬಹುದು. ಇದು ಯಕೃತ್‍ನಲ್ಲಿ ಕೊಬ್ಬನ್ನು ಸಂಗ್ರಹಿಸಲು ಕೊಡುಗೆ ನೀಡುತ್ತದೆ, ಇದು ಆಲ್ಕೊಹಾಲಿಕ್ ಕೊಬ್ಬಿನ ಯಕೃತ್ತಿನ ಕಾಯಿಲೆ ಎಂದು ಕರೆಯಲ್ಪಡುವ ದೀರ್ಘಕಾಲದ ಅನಾರೋಗ್ಯಕ್ಕೆ ಕಾರಣವಾಗುತ್ತದೆ, ಮತ್ತು ಇದು ಎಆರ್‌ಎಲ್‌ಡಿಯ ಮೊದಲ ಹಂತವಾಗಿದೆ.

ಯುಕೆಯ ರಾಷ್ಟ್ರೀಯ ಆರೋಗ್ಯ ಸೇವೆಗಳ ಪ್ರಕಾರ, ಕೊಬ್ಬಿನ ಯಕೃತ್ತಿನ ಕಾಯಿಲೆಯು ಯಾವುದೇ ರೋಗಲಕ್ಷಣಗಳನ್ನು ಉಂಟುಮಾಡುವುದಿಲ್ಲವಾದರೂ, ಈ ಕೆಳಗೆ ಸೂಚಿಸಿರುವ ಲಕ್ಷಣಗಳನ್ನು ಆರಂಭಿಕ ಹಂತದಲ್ಲಿ ನೀವು ಗಮನಿಸಬಹುದು.

 • ಕಿಬ್ಬೊಟ್ಟೆ ನೋವು

 • ಹಸಿವು ಕಡಿಮೆಯಾಗುವುದು

 • ಆಯಾಸವಾಗುವುದು

 • ಅನಾರೋಗ್ಯದ ಭಾವನೆ

 • ಅತಿಸಾರ


ಯಾರು ಹೆಚ್ಚು ಈ ಕಾಯಿಲೆ ತಂದುಕೊಳ್ಳುವ ಅಪಾಯದಲ್ಲಿದ್ದಾರೆ?
ಆಲ್ಕೊಹಾಲ್ ರಹಿತ ಕೊಬ್ಬಿನ ಯಕೃತ್ ಕಾಯಿಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲವಾದರೂ, ಮಧುಮೇಹ ಮತ್ತು ಬೊಜ್ಜು ಹೊಂದಿರುವ ಜನರಲ್ಲಿ ಇದು ಹೆಚ್ಚು ಕಾಣಿಸಿಕೊಳ್ಳುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ಇದನ್ನೂ ಓದಿ:  Home Remedies: ತಲೆನೋವು ನಿವಾರಣೆಗೆ ಮಾತ್ರೆ ಸೇವಿಸಬೇಡಿ, ಈ ಮನೆಮದ್ದು ಸೇವಿಸಿ ನೋಡಿ

ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಗಳಂತಹ ರಕ್ತದಲ್ಲಿ ಹೆಚ್ಚಿನ ಮಟ್ಟದ ಕೊಬ್ಬು ಹೊಂದಿರುವ ಜನರು ಅಥವಾ ಅಧಿಕ ರಕ್ತದೊತ್ತಡವನ್ನು ಹೊಂದಿರುವವರು ಸಹ ಈ ರೋಗದ ಹೆಚ್ಚಿನ ಅಪಾಯದಲ್ಲಿದ್ದಾರೆ.
Published by:Ashwini Prabhu
First published: