• Home
  • »
  • News
  • »
  • lifestyle
  • »
  • Fashion Tips: ಮಳೆಗಾಲದಲ್ಲೂ ಸೀರೆಯುಟ್ಟು ಕಂಗೊಳಿಸುವ ಆಸೆನಾ? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ

Fashion Tips: ಮಳೆಗಾಲದಲ್ಲೂ ಸೀರೆಯುಟ್ಟು ಕಂಗೊಳಿಸುವ ಆಸೆನಾ? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಒಂದು ವೇಳೆ ನೀವು ಸೀರೆಗಳನ್ನು ತೊಡಲು ಇಷ್ಟಪಡುವವರಾಗಿದ್ದಲ್ಲಿ, ಹತ್ತಿ ಸೀರೆಗಳನ್ನು ಒಳಗಿಟ್ಟು, ಶೀಫಾನ್, ಜಾರ್ಜೆಟ್, ನೆಟ್ ಮತ್ತಿತರ ಮೃದುವಾದ ಮತ್ತು ಆರಾಮದಾಯಕ ಸೀರೆಗಳ ಕಡೆ ಮುಖ ಮಾಡುವ ಕಾಲವಿದು. ಮಳೆಗಾಲದಲ್ಲೂ ಸೀರೆಯುಟ್ಟು ಕಂಗೊಳಿಸಬೇಕು ಎಂಬ ಇರಾದೆ ನಿಮ್ಮದಾಗಿದ್ದರೆ, ಈ ಋತುವಿನಲ್ಲಿ ಸೀರೆಯಲ್ಲಿ ಆಕರ್ಷಕವಾಗಿ ಕಾಣಲು ನೀವೇನು ಮಾಡಬಹುದು ಎಂಬ ಕುರಿತ ಒಂದಿಷ್ಟು ಸಲಹೆಗಳನ್ನು ನಾವಿಲ್ಲಿ ನೀಡಿದ್ದೇವೆ.

ಮುಂದೆ ಓದಿ ...
  • Share this:

ಪ್ರತಿಯೊಂದು ಋತುಗಳು ಬದಲಾದಂತೆ ಫ್ಯಾಷನ್ ಟ್ರೆಂಡ್‍ಗಳು (Fashion Trend) ಕೂಡ ಬದಲಾಗುತ್ತವೆ. ನಾವು ಆಯಾ ಋತುವಿನ ಫ್ಯಾಷನ್ ಟ್ರೆಂಡ್‍ಗಳಿಗೆ ತಕ್ಕಂತೆ ಉಡುಗೆಗಳನ್ನು (Gift) ತೊಟ್ಟಾಗ ಹೆಚ್ಚು ಆಕರ್ಷವಾಗಿ ಕಾಣಬಹುದು. ಸೀರೆಗಳ (Saree) ವಿಷಯದಲ್ಲೂ ಇದೇ ಮಾತನ್ನು ಹೇಳಬಹುದು. ಮಳೆಗಾಲ (Monsoon) ಮತ್ತೆ ಮರಳಿದೆ, ಮಳೆಗಾಲ ಫ್ಯಾಷನ್ ಕೂಡ. ಒಂದು ವೇಳೆ ನೀವು ಸೀರೆಗಳನ್ನು ತೊಡಲು ಇಷ್ಟಪಡುವವರಾಗಿದ್ದಲ್ಲಿ, ಹತ್ತಿ ಸೀರೆಗಳನ್ನು ಒಳಗಿಟ್ಟು, ಶೀಫಾನ್, ಜಾರ್ಜೆಟ್, ನೆಟ್ ಮತ್ತಿತರ ಮೃದುವಾದ (Soft) ಮತ್ತು ಆರಾಮದಾಯಕ (Comfortable) ಸೀರೆಗಳ ಕಡೆ ಮುಖ ಮಾಡುವ ಕಾಲವಿದು. ಮಳೆಗಾಲದಲ್ಲೂ ಸೀರೆಯುಟ್ಟು ಕಂಗೊಳಿಸಬೇಕು ಎಂಬ ಇರಾದೆ ನಿಮ್ಮದಾಗಿದ್ದರೆ, ಈ ಋತುವಿನಲ್ಲಿ ಸೀರೆಯಲ್ಲಿ ಆಕರ್ಷಕವಾಗಿ ಕಾಣಲು ನೀವೇನು ಮಾಡಬಹುದು ಎಂಬ ಕುರಿತ ಒಂದಿಷ್ಟು ಸಲಹೆಗಳನ್ನು ನಾವಿಲ್ಲಿ ನೀಡಿದ್ದೇವೆ.


ಸ್ಲೀವ್ ಲೆಸ್ ಬ್ಲೌಸ್ ಧರಿಸಿ
ಬ್ಲೌಸ್ ಬಹಳ ಮುಖ್ಯ. ಹೌದು, ಸೀರೆ ಧರಿಸುವಾಗ ನಾವು ಗಮನದಲ್ಲಿ ಇಟ್ಟುಕೊಳ್ಳಬೇಕಾದ ಮುಖ್ಯ ಸಂಗತಿಗಳಲ್ಲಿ ಇದು ಬಹಳ ಪ್ರಮುಖವಾದದ್ದು. ಏಕೆಂದರೆ, ಸೀರೆ ಉಟ್ಟ ಬಳಿಕ ನಿಮ್ಮ ಒಟ್ಟಾರೆ ಲುಕ್ ಹೇಗಿರುತ್ತದೆ ಎಂಬುದರಲ್ಲಿ ಬ್ಲೌಸ್ ಕೂಡ ದೊಡ್ಡ ಪಾತ್ರ ವಹಿಸುತ್ತದೆ.


ನೀವು ಸೀರೆಯಲ್ಲಿ ಸುಂದರವಾಗಿ ಕಾಣುವುದು ಅಥವಾ ನೀರಸವಾಗಿ ಕಾಣುವುದು, ಯಾವ ರೀತಿಯು ಬ್ಲೌಸ್ ಧರಿಸಿದ್ದೀರಿ ಎಂಬುದನ್ನು ಕೂಡ ಅವಲಂಬಿಸಿರುತ್ತದೆ. ಈ ಮಳೆಗಾಲದಲ್ಲಿ ನೀವು 'ದೀವಾ' ತರಹ ಕಾಣಬೇಕು ಎಂಬ ಆಸೆಯನ್ನು ಹೊಂದಿದ್ದರೆ, ಖಂಡಿತಾ ಸ್ಲೀವ್‍ಲೆಸ್ ಬ್ಲೌಸ್‍ಗಳನ್ನು ಟ್ರೈ ಮಾಡಿ.


ಫ್ಯಾಬ್ರಿಕ್‍ನ ಪಾತ್ರವನ್ನು ಕಡೆಗಣಿಸುವಂತಿಲ್ಲ
ಮಳೆಗಾಲದಲ್ಲಿ, ನೀವು ಯಾವ ರೀತಿಯ ಬಟ್ಟೆಯ, ಅಂದರೆ ಫ್ಯಾಬ್ರಿಕ್‍ನ ಸೀರೆಯನ್ನು ಆಯ್ಕೆ ಮಾಡಿಕೊಳ್ಳುತ್ತೀರಾ ಎಂಬುವುದು ಬಹಳ ಮುಖ್ಯ. ಹಗುರವಾದ ಫ್ಯಾಬ್ರಿಕ್‍ಗಳನ್ನು ಆಯ್ಕೆ ಮಾಡಿಕೊಳ್ಳುವುದರಿಂದ ನೀವು ಆಕರ್ಷಕವಾಗಿ ಕಾಣುವುದು ಮಾತ್ರವಲ್ಲ, ಅದು ಆರಾಮದಾಯಕವಾಗಿಯೂ ಇರುತ್ತದೆ.


ಇದನ್ನೂ ಓದಿ: Shacking Various Body Parts: ದೇಹದ ಈ ಭಾಗ ಅಲುಗಾಡಿದರೆ ಮದುವೆ ಆಗುವ ಮುನ್ಸೂಚನೆಯಂತೆ!


ಜಾರ್ಜೆಟ್, ಶಿಫಾನ್ ಮತ್ತು ನೆಟ್ ಸೀರೆಗಳು ಧರಿಸಲು ಸುಲಭ ಮತ್ತು ಹಗುರವಾಗಿ ಇರುತ್ತವೆ. ಬಹಳಷ್ಟು ಸಲ ಇಂತಹ ಸೀರೆಗಳು, ಬನಾರಸ್ ಮತ್ತು ಕಾಂಜಿವರಂ ರೇಶ್ಮೆ ಸೀರೆಗಳಿಗೆ ಹೋಲಿಸಿದರೆ, ಪಾಕೆಟ್ ಸ್ನೇಹಿಯಾಗಿರುತ್ತವೆ. ಹಾಗಾಗಿ ಈ ಫ್ಯಾಬ್ರಿಕ್‍ನ ಸೀರೆಗಳನ್ನು ಆರಿಸಿಕೊಳ್ಳುವುದು ಉತ್ತಮ.


ಜಾಣ್ಮೆಯಿಂದ ಬಣ್ಣಗಳನ್ನು ಆರಿಸಿ
ಸಾಮಾನ್ಯವಾಗಿ, ಬೇಸಿಗೆ ಕಾಲ ಮತ್ತು ಮಳೆಗಾಲದಲ್ಲಿ ಪಾಸ್ಟೆಲ್ ಬಣ್ಣಗಳ ಸೀರೆಗಳ ಆಯ್ಕೆಗೆ ಆದ್ಯತೆ ನೀಡಲಾಗುತ್ತದೆ. ಹಾಗಂತ ಇವಿಷ್ಟೇ ಬಣ್ಣಗಳು ಈ ಋತುವಿಗೆ ಸೂಕ್ತ ಎನ್ನುವಂತಿಲ್ಲ. ನೀವು ಬಿಳಿ ಮತ್ತು ಬೀಚ್ ಬಣ್ಣಗಳನ್ನು ಕೂಡ ಆಯ್ಕೆ ಮಾಡಿಕೊಳ್ಳಬಹುದು.


ಮಳೆಗಾಲದಲ್ಲಿ ಪಿಸ್ತಾ, ಮಿಂಟ್, ಬೇಬಿ ನೀಲಿ, ಗುಲಾಬಿ, ಪೀಚ್, ಬಟಾಣಿ ಬಣ್ಣ ಮತ್ತು ಸೀ ಗ್ರೀನ್ ಬಣ್ಣದ ಸೀರೆಗಳನ್ನು ಧರಿಸಿದರೆ ನೀವು ಆಕರ್ಷಕವಾಗಿ ಕಾಣಬಹುದು. ಅಲ್ಲದೇ, ಈ ಋತುವಿನಲ್ಲಿ ಸಾಧ್ಯವಾದಷ್ಟು ಗಾಢ ಬಣ್ಣದ ಸೀರೆಗಳನ್ನು ಪಕ್ಕಕ್ಕೆ ಸರಿಸುವುದು ಉತ್ತಮ ನಿರ್ಧಾರ.


ಟ್ರೆಂಡ್ ಅನ್ನು ಅನುಸರಿಸಿ
ಟ್ರೆಂಡಿಯಾಗಿ ಕಾಣಿಸಲು ಯಾರಿಗೆ ಇಷ್ಟವಿಲ್ಲ ಹೇಳಿ? ಫ್ಯಾಶನ್ ಪ್ರೀಯರಂತೂ ಸದಾ ಅದನ್ನೇ ಬಯಸುತ್ತಾರೆ. ಅನ್ಯ ಉಡುಗೆ ತೊಡುಗೆಗಳು ಮಾತ್ರವಲ್ಲ, ಸೀರೆಗಳ ವಿಷಯದಲ್ಲಿ ಕೂಡ ನೀವು ಟ್ರೆಂಡ್‍ಗೆ ತಕ್ಕ ಆಯ್ಕೆಗಳಿಗೆ ಆದ್ಯತೆ ನೀಡುವುದು ಸೂಕ್ತ. ಯಾವುದೇ ಹೊಸ ಟ್ರೆಂಡ್ ಅನ್ನು ನಿಮ್ಮದಾಗಿಸಿಕೊಳ್ಳಲು ಖಂಡಿತಾ ಹಿಂಜರಿಯಬೇಡಿ.


ಇದನ್ನೂ ಓದಿ: Home Tips: ಮನೆಯಲ್ಲಿ ಘಮ ಘಮ ಪರಿಮಳ ಇರ್ಬೇಕು ಅಂದ್ರೆ ಈ ಉತ್ಪನ್ನಗಳನ್ನು ಟ್ರೈ ಮಾಡಿ


ಧೋತಿ ಶೈಲಿ ಸೀರೆಯಾಗಿರಲಿ, ಜಾಕೆಟ್ ಶೈಲಿಯ ಸೀರೆಯಾಗಿರಲಿ ಅಥವಾ ಪ್ಯಾಂಟ್ ಶೈಲಿಯ ಸೀರೆಯಾಗಿರಲಿ, ನೀವು ಅದನ್ನು ಒಮ್ಮೆ ಟ್ರೈ ಮಾಡಿ ನೋಡಲೇಬೇಕು, ಇಲ್ಲವಾದಲ್ಲಿ ಯಾವ ಶೈಲಿ ನಿಮಗೆ ಹೊಂದುತ್ತದೆ ಎಂಬುದನ್ನು ತಿಳಿಯುವುದಾದರೂ ಹೇಗೆ ಅಲ್ಲವೇ? ಹಾಗಾಗಿ, ಸದಾ ಹೊಸ ಹೊಸ ಟ್ರೆಂಡ್‍ನ ಸೀರೆಗಳ ಬಗ್ಗೆ ಗಮನವಿಟ್ಟಿರಿ ಮತ್ತು ಅವುಗಳು ನಿಮಗೆ ಇಷ್ಟವಾದರೆ ಖಂಡಿತಾ ಧರಿಸಿ.

Published by:Ashwini Prabhu
First published: