Urine Smell: ನೀವು ಮೂತ್ರ ವಿಸರ್ಜನೆ ಮಾಡಿದಾಗ ವಾಸನೆ ಬರುತ್ತಿದೆಯೇ..? ಕೂಡಲೇ ಎಚ್ಚೆತ್ತುಕೊಳ್ಳಿ..

ಮೂತ್ರನಾಳದ ಸೋಂಕು ಮಹಿಳೆಯರಲ್ಲಿ ಕಂಡು ಬರುವ ಸಾಮಾನ್ಯ ಸಮಸ್ಯೆಯಾಗಿದೆ. ಸೋಂಕು ತಗುಲಿದಾಗ ಮೂತ್ರದ ವಾಸನೆಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಸಾರ್ವಜನಿಕ ಶೌಚಾಲಯಗಳಂತಹ (Public Toilet)  ಸ್ಥಳಗಳಲ್ಲಿ ಮತ್ತು  ಹೆಚ್ಚು ಜನರು ಮೂತ್ರ (Urine) ವಿಸರ್ಜಿಸುವ ಸ್ಥಳಗಳಲ್ಲಿ, ಮೂತ್ರದ ವಾಸನೆಯು (Urine Smell) ಸಹಿಸಲು ಕಷ್ಟವಾದ ಸಂದರ್ಭ ಎಲ್ಲರಿಗೂ ಎದುರಾಗಿರುತ್ತದೆ. ಸರಿಯಾಗಿ ಶೌಚಾಲಯಗಳ ನಿರ್ವಹಣೆ ಮಾಡದೇ ಇರುವುದು, ನೀರು (Water) ಹಾಕದಿರುವುದು, ಸ್ವಚ್ಛತೆ ಇಲ್ಲದಿರುವುದು ಗಬ್ಬು ವಾಸನೆಗೆ ಕಾರಣವಾಗುತ್ತದೆ. ಕೆಲವೊಮ್ಮೆ ಹೊಲಸು ನಾರುವ ಶೌಚಾಲಯಗಳಿಗೆ ಹೋದರೆ ರೋಗಗಳನ್ನು ಹೊತ್ತು ಬರುವ ಭಯ ಕಾಡುತ್ತದೆ. ಹೀಗಾಗಿ ಸಾರ್ವಜನಿಕ ಶೌಚಾಲಯಕ್ಕೆ ಹೋಗೋದೆಂದರೆ ತುಂಬಾ ಸಂದಿಗ್ಧ ಸ್ಥಿತಿಗೆ ಕಾರಣವಾಗುತ್ತದೆ. ಕೆಟ್ಟ ವಾಸನೆಯು ಸಾಕಷ್ಟು ಸಾಮಾನ್ಯವಾಗಿದೆ. ಆದರೆ ಕೆಲವೊಮ್ಮೆ ಅದರ ದುರ್ವಾಸನೆ ಕೆಲವು ಕಾಯಿಲೆಗಳ ಸಂಕೇತ ಕೂಡ ಆಗಿದೆ. ಯಾರ ಮೂತ್ರ ವಾಸನೆ ಬರುತ್ತದೆಯೋ ಅವರು ಮೊದಲು ವೈದ್ಯರನ್ನು ಭೇಟಿ ಮಾಡುವುದು ಸೂಕ್ತ. ಕೆಲ ಕಾಯಿಲೆಗಳ (Disease) ಲಕ್ಷಣಗಳು ನಿಮ್ಮ ಮೂತ್ರದ ವಾಸನೆಗೆ ಕಾರಣ ಆಗಿರಬಹುದು.

    ಯುಟಿಐ- ಮೂತ್ರನಾಳದ ಸೋಂಕು ಮಹಿಳೆಯರಲ್ಲಿ ಕಂಡು ಬರುವ ಸಾಮಾನ್ಯ ಸಮಸ್ಯೆಯಾಗಿದೆ. ಸೂಕ್ಷ್ಮ ಜೀವಿಗಳು ಮೂತ್ರದ ವ್ಯವಸ್ಥೆಗೆ ಸೋಂಕು ತಗುಲಿದಾಗ ಮೂತ್ರದ ವಾಸನೆಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಮೂತ್ರನಾಳದ ಸೋಂಕು ಮೂತ್ರಪಿಂಡಗಳು, ಮೂತ್ರಕೋಶ ಮತ್ತು ಅದಕ್ಕೆ ಸಂಪರ್ಕಗೊಂಡಿರುವ ಟ್ಯೂಬ್‌ಗಳ ಮೇಲೂ ಅಡ್ಡ ಪರಿಣಾಮ ಬೀರಬಹುದು. ಸಮಯಕ್ಕೆ ಸರಿಯಾಗಿ ಪರೀಕ್ಷಿಸದಿದ್ದರೆ, ಸೋಂಕು ಮೂತ್ರಪಿಂಡಗಳಿಗೂ ಹರಡುತ್ತದೆ. ಮೂತ್ರದ ವಾಸನೆಗೆ ಕೆಲ ಕಾರಣಗಳು ಇಲ್ಲಿವೆ.

    ಕಡಿಮೆ ನೀರು ಕುಡಿಯುವುದು: ನಮ್ಮ ದೇಹದಲ್ಲಿನ ತ್ಯಾಜ್ಯ ಉತ್ಪನ್ನಗಳು ಮೂತ್ರದ ಮೂಲಕ ಹೊರ ಬರುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಸಾಕಷ್ಟು ನೀರನ್ನು ಸೇವಿಸದಿದ್ದಾಗ, ಈ ತ್ಯಾಜ್ಯವು ಸುಲಭವಾಗಿ ಹೊರ ಬರಲು ಸಾಧ್ಯವಾಗುವುದಿಲ್ಲ, ಇದರಿಂದಾಗಿ ಮೂತ್ರ ತುಂಬಾ ದುರ್ವಾಸನೆ ಉಂಟು ಮಾಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಹೆಚ್ಚಿನ ಪ್ರಮಾಣದ ನೀರನ್ನು ಕುಡಿಯುವುದು ಅವಶ್ಯಕ.

    ಇದನ್ನೂ ಓದಿ: Reiki ಚಿಕಿತ್ಸೆ ನಿಮ್ಮ ಆರೋಗ್ಯದ ಈ ಸಮಸ್ಯೆಗಳಿಗೆ ಪರಿಹಾರವಂತೆ

    ಕಾಫಿಯ ಅತಿಯಾದ ಸೇವನೆ

    ಕಾಫಿಯನ್ನು ಅತಿಯಾಗಿ ಸೇವಿಸುವುದರಿಂದ ಮೂತ್ರದ ದುರ್ವಾಸನೆ ಉಂಟಾಗಬಹುದು. ಕಾಫಿಯು ನಿರ್ಜಲೀಕರಣದ ಸಮಸ್ಯೆಯನ್ನು ಉಂಟು ಮಾಡುತ್ತದೆ. ಇದರಿಂದಾಗಿ ನಿಮ್ಮ ಮೂತ್ರವು ಕೆಟ್ಟ ವಾಸನೆಯನ್ನು ಹೊಂದಿರುತ್ತದೆ.

    ಮಧುಮೇಹ

    ಮಧುಮೇಹ ಇದೆ ಎಂದು ಗೊತ್ತಿರದ ಜನರು ಮೂತ್ರದ ವಾಸನೆ ಹೊಂದಿರುತ್ತಾರೆ. ಮಧುಮೇಹಿಗಳ ದೇಹವು ಸಕ್ಕರೆಯನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದ ಕಾರಣ ಇದು ಸಂಭವಿಸುತ್ತದೆ. ಇದರಿಂದ ಅವರ ಮೂತ್ರ ಕೆಟ್ಟ ವಾಸನೆ ಬರುತ್ತದೆ. ಮಧುಮೇಹ ರೋಗಿಗಳು ಆಗಾಗ್ಗೆ ಮೂತ್ರ ವಿಸರ್ಜನೆ ಮಾಡುತ್ತಾರೆ.  ಇದು ಸಹ ಅದರ ಲಕ್ಷಣವಾಗಿದೆ.

    ಲೈಂಗಿಕವಾಗಿ ಹರಡುವ ಸೋಂಕು STI

    ಕೆಟ್ಟ ಮೂತ್ರಕ್ಕೆ ಒಂದು ಮುಖ್ಯ ಕಾರಣವೆಂದರೆ ಲೈಂಗಿಕವಾಗಿ ಹರಡುವ ಸೋಂಕು ಅಥವಾ STI ಆಗಿರಬಹುದು. ಕೆಲವೊಮ್ಮೆ ಈ ಸೋಂಕುಗಳು ಮೂತ್ರನಾಳದ ಉರಿಯೂತವನ್ನು ಉಂಟು ಮಾಡಬಹುದು ಮತ್ತು ಮೂತ್ರದ ವಾಸನೆ ಬದಲಾವಣೆ ಆಗುತ್ತದೆ. STI ಗಳ ಹೊರತಾಗಿ, ಮಹಿಳೆಯರ ಖಾಸಗಿ ಭಾಗದಲ್ಲಿ ಕಿರಿಕಿರಿಯುಂಟು ಮಾಡುವುದರಿಂದ, ಮೂತ್ರ ವಾಸನೆ ಬರುತ್ತದೆ.

    ಯೀಸ್ಟ್ ಸೋಂಕು

    ಕ್ಯಾಂಡಿಡಾ ಎಂಬ ಶಿಲೀಂಧ್ರವು ಸಾಮಾನ್ಯವಾಗಿ ನಮ್ಮ ಚರ್ಮದ ಮೇಲೆ ಇರುತ್ತದೆ. ಈ ಶಿಲೀಂಧ್ರವು ಮಹಿಳೆಯರ ಖಾಸಗಿ ಭಾಗ ಸೇರಿದಂತೆ ದೇಹದ ಯಾವುದೇ ಭಾಗದಲ್ಲಿ ಕಂಡು ಬರುತ್ತದೆ. ಒದ್ದೆಯಾದ ಬಟ್ಟೆಗಳನ್ನು ಧರಿಸುವುದು ಅಥವಾ ಕೊಳೆಯಲ್ಲಿ ವಾಸಿಸುವುದು ಮುಂತಾದವು ಯೀಸ್ಟ್ ಸೋಂಕು ಹೆಚ್ಚಾಗಲು ಕಾರಣವಾಗುತ್ತದೆ. ಪುರುಷರಿಗೆ ಹೋಲಿಸಿದರೆ, ಮಹಿಳೆಯರು ಯೀಸ್ಟ್ ಸೋಂಕಿನ ಸಮಸ್ಯೆಯನ್ನು ಹೆಚ್ಚು ಎದುರಿಸುತ್ತಾರೆ.

    ಇದನ್ನೂ ಓದಿ: ಗರ್ಭಧರಿಸುವ ಆಲೋಚನೆಯಲ್ಲಿದ್ರೆ ಈ ಅಂಶಗಳನ್ನು ಮರೆಯಬೇಡಿ

    ಇದರಿಂದಾಗಿ ಮೂತ್ರ ವಿಸರ್ಜನೆಯ ಸಮಯದಲ್ಲಿ ಕೆಟ್ಟ ವಾಸನೆ ಬರುತ್ತದೆ. ಖಾಸಗಿ ಭಾಗದಲ್ಲಿ ಕೆಂಪು, ಊತ ಮತ್ತು ಬಿಳಿ ಸ್ರಾವದಂತಹ ಇತರ ಲಕ್ಷಣಗಳಿವೆ. ಯೀಸ್ಟ್ ಸೋಂಕಿನ ಲಕ್ಷಣಗಳು ಪುರುಷರಲ್ಲಿಯೂ ಕಂಡುಬರುತ್ತವೆ, ಆದರೆ ಅವು ಮಹಿಳೆಯರಂತೆ ತೀವ್ರವಾಗಿರುವುದಿಲ್ಲ.
    Published by:renukadariyannavar
    First published: