Foot Pain: ನಡೆಯಲಾಗದಷ್ಟು ಪಾದದ ನೋವಿದೆಯಾ? ಕಾರಣಗಳು ಇದೇ ಆಗಿರಬಹುದು

ಪಾದದ ನೋವಿಗೆ ದೇಹದಲ್ಲಿ ಪೋಷಕಾಂಶಗಳ ಕೊರತೆ ಜೀವಸತ್ವಗಳ ಕೊರತೆ ತೂಕ ಹೆಚ್ಚಳ ಮತ್ತು ಕಡಿಮೆ ಆಗುವುದು ಪಾದಗಳ ನೋವಿಗೆ ಕಾರಣವಾಗಬಹದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಪಾದದ (Foot) ನೋವು (Pain) ನಮ್ಮ ಜೀವನದ (Life) ಮೇಲೆ ಹೆಚ್ಚಿನ ಪರಿಣಾಮ (Effect) ಬೀರುತ್ತದೆ. ಕೆಲವರಿಗೆ ಕಾಲುಗಳಲ್ಲಿ ತುಂಬಾ ನೋವಿರುತ್ತದೆ ಎಂದರೆ ನಡೆಯಲು ಕೂಡ ತೊಂದರೆಯಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಅನೇಕ ಜನರು ಪಾದಗಳಲ್ಲಿನ ನೋವಿನ ಸಮಸ್ಯೆಯನ್ನು (Problem) ಹೋಗಲಾಡಿಸಲು ವಿವಿಧ ಕ್ರಮಗಳನ್ನು ಅನುಸರಿಸುತ್ತಾರೆ. ಆದರೆ ಆ ಕ್ರಮಗಳಿಂದ ಅವರಿಗೆ ಯಾವುದೇ ರೀತಿಯ ಪ್ರಯೋಜನ ಆಗುವುದಿಲ್ಲ. ಪ್ರತಿನಿತ್ಯವೂ ನೀವು ಹೆಚ್ಚು ಸಮಯ ನಿಂತುಕೊಂಡೇ ಕೆಲಸ ಮಾಡುವುದು ಸಹ ಪಾದಗಳಿಗೆ ನೋವುಂಟು ಮಾಡುತ್ತದೆ. ಹೆಚ್ಚು ಸಮಯ ನಿಂತುಕೊಂಡೇ ಕೆಲಸ ಮಾಡುತ್ತಿದ್ದರೆ, ನಿಮ್ಮ ಕಾಲು, ಪಾದಕ್ಕೆ  ಆಗಾಗ ವ್ಯಾಯಾಮ (Exercise) ಮಾಡುವುದು ಪಾದದ ನೋವನ್ನು ತಕ್ಕ ಮಟ್ಟಿಗೆ ಕಡಿಮೆ ಮಾಡುತ್ತದೆ. ಇನ್ನು ಪಾದದ ನೋವಿಗೆ ನಿಮ್ಮ ದೇಹದಲ್ಲಿನ (Body) ಪೋಷಕಾಂಶಗಳ ಕೊರತೆಯೂ ಕಾರಣವಾಗಿರಬಹದು.

    ಪಾದದ ನೋವಿಗೆ ಹಲವು ಕಾರಣಗಳಿರಬಹುದು. ಆದರೆ ದೇಹದಲ್ಲಿ ಪೋಷಕಾಂಶಗಳ ಕೊರತೆಯು ಇದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಪಾದಗಳಲ್ಲಿನ ನೋವಿನಿಂದಾಗಿ ದೇಹದಲ್ಲಿ ಯಾವ ಜೀವಸತ್ವಗಳ ಕೊರತೆಯಿದೆ ಎಂಬುದನ್ನು ಈ ಕೆಳಗೆ ನೋಡಿ

    ಕಬ್ಬಿಣದ ಕೊರತೆ:

    ದೇಹದಲ್ಲಿ ಕಬ್ಬಿಣದ ಕೊರತೆಯು ನಿಮ್ಮ ಪಾದಗಳಲ್ಲಿ ನೋವನ್ನು ಉಂಟು ಮಾಡಬಹುದು. ಲೆಗ್ಸ್ ಸಿಂಡ್ರೋಮ್ ದೇಹದಲ್ಲಿ ಕಬ್ಬಿಣದ ಕೊರತೆಯಿಂದಾಗಿ ನೋವನ್ನು ಉಂಟು ಮಾಡುತ್ತದೆ. ಈ ಸ್ಥಿತಿಯು ಗರ್ಭಿಣಿ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಇದಲ್ಲದೆ, ಕೆಲವು ಆಹಾರ ಮತ್ತು ಚಿಕಿತ್ಸೆಯ ಮೂಲಕ, ದೇಹದಲ್ಲಿ ಕಬ್ಬಿಣದ ಕೊರತೆಯನ್ನು ತೆಗೆದುಹಾಕಲು ಪ್ರಯತ್ನಿಸಲಾಗುತ್ತದೆ.

    ಇದನ್ನೂ ಓದಿ: ಪುರುಷರೇ ಇಲ್ಲಿ ಕೇಳಿ.. Walnuts​​​ ಸೇವಿಸೋದ್ರಿಂದ ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೇ ಅಚ್ಚರಿ ಆಗುತ್ತೆ!

    ದೇಹದಲ್ಲಿ ವಿಟಮಿನ್ ಬಿ 12 ಕೊರತೆ:

    ದೇಹದಲ್ಲಿ ವಿಟಮಿನ್ ಬಿ 12 ಕೊರತೆಯು ನಿಮ್ಮ ಕಾಲುಗಳಲ್ಲಿ ನೋವಿನ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ವಾಸ್ತವವಾಗಿ, ವಿಟಮಿನ್ ಬಿ 12 ನಮ್ಮ ದೇಹದಲ್ಲಿನ ಕೆಂಪು ರಕ್ತ ಕಣಗಳು ಮತ್ತು ನರಮಂಡಲದ ಕಾರ್ಯಗಳನ್ನು ಸುಧಾರಿಸುವುದರ ಜೊತೆಗೆ ಇತರ ಚಟುವಟಿಕೆಗಳಲ್ಲಿ ಸಹಾಯಕವಾಗಿದೆ. ಆದರೆ ದೇಹದಲ್ಲಿ ವಿಟಮಿನ್ ಬಿ 12 ಕೊರತೆ ದೌರ್ಬಲ್ಯ ಮತ್ತು ಆಯಾಸ ಉಂಟು ಮಾಡುತ್ತದೆ. ಆದ್ದರಿಂದ ಮೀನು ಮತ್ತು ಚಿಪ್ಪುಮೀನು, ಬೀನ್ಸ್, ಹಾಲು, ಮೊಟ್ಟೆಗಳಂತಹ ವಿಟಮಿನ್ 12  ಅಂಶ ಸಮೃದ್ಧವಾಗಿರುವ ಆಹಾರಗಳನ್ನು ಸೇವಿಸಿ.

    ಪಾದಗಳ ಆರೈಕೆ ಬಗ್ಗೆ ನಿರ್ಲಕ್ಷ್ಯ: 

    ನಮ್ಮ ದೇಹದ ಸಂಪೂರ್ಣ ಭಾರವನ್ನು ಹೊತ್ತುಕೊಳ್ಳುವಂತಹ ಪಾದಗಳ ಆರೈಕೆ ಬಗ್ಗೆ ನಾವೆಲ್ಲರೂ ನಿರ್ಲಕ್ಷ್ಯ ವಹಿಸುತ್ತೇವೆ. ಮಧುಮೇಹಿಗಳು ಪಾದದ ಬಗ್ಗೆ ಹೆಚ್ಚು ಕಾಳಜಿ, ಆರೈಕೆ ಮಾಡಬೇಕು. ಅಂದಾಗ ಮಾತ್ರ ಪಾದಗಳು ಆರಾಮವಾಗಿ ಇರುವುದು. ಆರೈಕೆ ಕೊರತೆಯಿಂದ ಪಾದ ಒಡೆಯುವುದು, ಪಾದಗಳಲ್ಲಿ ಪದೇ ಪದೇ ನೋವು ಕಾಣಿಸಿಕೊಳ್ಳುತ್ತದೆ. ಇದನ್ನು ಕಡೆಗಣಿಸದೇ ಹೆಚ್ಚಿನ ಕಾಳಜಿ ವಹಿಸಿ.

    ಹೆಚ್ಚು ಗಾತ್ರದ ಚಪ್ಪಲಿ ಧರಿಸುವಿಕೆ:

    ಸರಿಯಾದ ಗಾತ್ರದ ಚಪ್ಪಲಿ ಧರಿಸದೆ ಇರುವುದು ಕೂಡ ಪಾದಕ್ಕೆ ನೋವು ಉಂಟು ಮಾಡುವ ಸಾಧ್ಯತೆ ಇವೆ. ಹಿಂಗಾಲಿನ ನೋವಿನಿಂದ ಹಿಡಿದು, ಪಾದಗಳ ಊದುವಿಕೆ ತನಕ ಚಪ್ಪಲಿ ಧರಿಸುವ ರೀತಿಯು ಮತ್ತು ಹೆಚ್ಚು ಗಾತ್ರದ ಚಪ್ಪಲಿ ಧರಿಸುವಿಕೆ ಪಾದಗಳಿಗೆ ಹಾನಿಯುಂಟು ಮಾಡುತ್ತದೆ. ಬಿಗಿಯಾದ ಶೂ ಧರಿಸಿದರೆ ಹೆಬ್ಬೆರಳು ನೋವಾಗಿ ನೋವು ಕಾಣಿಸುವುದು.

    ಇದನ್ನೂ ಓದಿ: ನಿದ್ರೆ ಭಂಗವಾಗಬಾರದು ಎಂದ್ರೆ ಮಲಗುವ ಮುನ್ನ ಈ ಕೆಲಸ ಮಾಡಿ

    ತೂಕ ಹೆಚ್ಚಳ: 

    ತೂಕ ಹೆಚ್ಚಳ ಮತ್ತು ಕಡಿಮೆ ಆಗುವುದು ಪಾದಗಳ ನೋವಿಗೆ ಕಾರಣವಾಗಬಹದು. ತೂಕ ಹೆಚ್ಚಳ ಅಥವಾ ಕಡಿಮೆ ಆಗುವ ವೇಳೆ ಸ್ನಾಯುಗಳ ಸಂಕೋಚನ ಅಥವಾ ಹಿಗ್ಗುವಿಕೆಯಿಂದಾಗಿ ನೋವು ಉಂಟಾಗುವುದು. ಪಾದಗಳಿಗೆ ನಿತ್ಯವೂ ವ್ಯಾಯಾಮ ಸಿಗದಿದ್ದಾಗ ನೋವು ಕಾಣಿಸಿಕೊಳ್ಳುತ್ತದೆ. ಸಂಪೂರ್ಣ ದೇಹದ ವ್ಯಾಯಾಮದ ಜೊತೆಗೆ ಪಾದಗಳಿಗೆ ಕೂಡ ವ್ಯಾಯಾಮ ಮಾಡಿ. ಇದು ನೋವನ್ನು ಕಡಿಮೆ ಮಾಡಲು ಸಹಕಾರಿ. ಪಾದಗಳ ಆರೋಗ್ಯಕ್ಕೆ ಸ್ವಲ್ಪ ಮಟ್ಟಿನ ಸ್ಟ್ರೆಚಿಂಗ್ ಮಾಡಿ.
    Published by:renukadariyannavar
    First published: