Palm Jaggery benefits: ಈ ಬೆಲ್ಲ ಬರೀ ರುಚಿಗಷ್ಟೇ ಅಲ್ಲ, ಆರೋಗ್ಯಕ್ಕೂ ತುಂಬಾ ಒಳ್ಳೆಯದು!

ತಾಳೆ ಬೆಲ್ಲವು ಕಬ್ಬಿಣ, ಮೆಗ್ನೀಶಿಯಮ್, ರಂಜಕ ಮತ್ತು ಪೊಟ್ಯಾಸಿಯಮ್ ನಂತಹ ಖನಿಜಗಳ ಮಿಶ್ರಣವಾಗಿದೆ ಎಂದು ಅವರು ಹೇಳಿದರು. ತಾಳೆ ಬೆಲ್ಲವು ರಕ್ತಹೀನತೆಯ ವಿರುದ್ಧ ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ. ಬೆಲ್ಲದ ಆರೋಗ್ಯ ಪ್ರಯೋಜನಗಳ ಬಗ್ಗೆ ಹೇಳುವುದಾದರೆ, ಇದು ಆಮ್ಲೀಯತೆ, ಹೊಟ್ಟೆ ಉಬ್ಬರವನ್ನು ಕಡಿಮೆ ಮಾಡುತ್ತದೆ ಮತ್ತು ಅಧಿಕ ರಕ್ತದೊತ್ತಡ ಹೊಂದಿರುವವರಿಗೂ ಇದು ತುಂಬಾನೇ ಸಹಾಯಕವಾಗಿದೆ.

ತಾಳೆ ಬೆಲ್ಲ

ತಾಳೆ ಬೆಲ್ಲ

 • Share this:
  ಈಗಂತೂ ಬಹುತೇಕ ಜನರು ಮಧುಮೇಹದಿಂದ ಬಳಲುತ್ತಿರುವುದರಿಂದ ಹೆಚ್ಚಾಗಿ ಈ ಸಂಸ್ಕರಿಸಿದ ಸಕ್ಕರೆಯನ್ನು ಬಳಸಿಕೊಂಡು ತಯಾರಿಸಿದಂತಹ ಸಿಹಿ ತಿಂಡಿಗಳನ್ನು ಬಿಟ್ಟು, ಬೆಲ್ಲದಿಂದ (Jaggery) ತಯಾರಿಸಿದಂತಹ ಸಿಹಿ ತಿಂಡಿಯನ್ನು ಹೆಚ್ಚಾಗಿ ಸೇವಿಸಲು ಇಷ್ಟ ಪಡುತ್ತಾರೆ. ಏಕೆಂದರೆ ಈ ಬೆಲ್ಲವು ಅಪಾರ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ನಮ್ಮ ಮನೆಯಲ್ಲಿ ನಮ್ಮ ಅಜ್ಜಿಯಂದಿರು ಬೆಲ್ಲದ ಪ್ರಯೋಜನಗಳ ಬಗ್ಗೆ ಮಾತನಾಡುವುದನ್ನು ನಾವು ಚಿಕ್ಕವರಾಗಿದ್ದಾಗ ಕೇಳಿರುತ್ತೇವೆ ಮತ್ತು ಬೆಲ್ಲವನ್ನು ಬಳಸಿಕೊಂಡು ತಯಾರಿಸಿದಂತಹ ಲಾಡುಗಳನ್ನು ಮತ್ತು ಕೆಲವೊಮ್ಮೆ ಚಹಾ ತಯಾರಿಸುವಾಗ ಸಕ್ಕರೆಯ ಬದಲು ಬೆಲ್ಲವನ್ನು ಹಾಕಿ ಚಹಾ ಮಾಡಿರುವುದನ್ನು ಸಹ ನೋಡಿರುತ್ತೇವೆ.

  ಅನೇಕ ಆರೋಗ್ಯ ತಜ್ಞರು ಸಹ, ಈ ಸಿಹಿ ತಿಂಡಿಗಳಲ್ಲಿ ಸಂಸ್ಕರಿಸಿದ ಸಕ್ಕರೆಯ ಬದಲಾಗಿ ಬೆಲ್ಲವನ್ನು ಉಪಯೋಗಿಸಲು ಸಲಹೆ ನೀಡುತ್ತಾರೆ. ಆದರೆ ಅನೇಕರಿಗೆ ಬೆಲ್ಲದ ರುಚಿ ಇಷ್ಟವಾಗುವುದಿಲ್ಲ. ಅದರಲ್ಲಿ ನೀವು ಒಬ್ಬರಾಗಿದ್ದರೆ ಪೌಷ್ಟಿಕ ತಜ್ಞ ಮತ್ತು ಫಿಟ್ನೆಸ್ ತಜ್ಞ ಮುನ್ಮುನ್ ಗನೇರಿವಾಲ್ (Nutritionist Munmun Ganeriwal) ಅವರು ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಅವರು ತಾಳೆ ಬೆಲ್ಲ (Palm Jaggery) ತುಂಬಿದ ಒಂದು ಚಿಕ್ಕ ಬುಟ್ಟಿಯ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ತಾಳೆ ಬೆಲ್ಲದ ಅದ್ಭುತ ಆರೋಗ್ಯ ಪ್ರಯೋಜನಗಳು ಬಹುತೇಕರಿಗೆ ತಿಳಿದಿರುವುದಿಲ್ಲ. ಈ ಫೋಟೋವನ್ನು ಈಗಾಗಲೇ ಒಂದು ಸಾವಿರಕ್ಕೂ ಹೆಚ್ಚು ಜನರು ನೋಡಿ ಇಷ್ಟ ಪಟ್ಟಿದ್ದಾರೆ.

  ನೀವು ತಿಳಿದುಕೊಳ್ಳಬೇಕಾದ ತಾಳೆ ಬೆಲ್ಲದ ಆರೋಗ್ಯ ಪ್ರಯೋಜನಗಳು

  “ರುಚಿಯಲ್ಲಿ ಚಾಕೊಲೇಟ್‌ನಂತೆ ಅನ್ನಿಸಿದರೂ, ಈ ತಾಳೆ ಬೆಲ್ಲ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿಯಾಗಿದೆ. ಈ ‘ಪಾಮ್’ ಬೆಲ್ಲ ಎಂದು ಕರೆಯಲ್ಪಡುವ ಈ ಬೆಲ್ಲದ ಬಗ್ಗೆ ಹೆಚ್ಚಿನರಿಗೆ ತಿಳಿದಿರುವುದಿಲ್ಲ" ಎಂದು ಪೌಷ್ಟಿಕ ತಜ್ಞರು ತಮ್ಮ ಪೋಸ್ಟ್ ನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನು ಮೂಲತಃ ಪಲ್ಮೈರಾ ತಾಳೆಯ ಸಕ್ಕರೆ ಯುಕ್ತ ಸಪ್ಪೆಯಿಂದ ತಯಾರಿಸಲಾಗುತ್ತದೆ. ತಾಳೆ ಬೆಲ್ಲವು ಅನೇಕ ವಿಟಮಿನ್‌ಗಳು ಮತ್ತು ಖನಿಜಗಳನ್ನು ಹೊಂದಿದೆ ಎಂದು ಅವರು ಹೇಳುತ್ತಾರೆ.

  ಮಧುರೈನಲ್ಲಿ ತನ್ನ ಯೋಗ ಶಿಕ್ಷಕರ ತರಬೇತಿ ಸಮಯದಲ್ಲಿ ತಾನು ಇದನ್ನು ಕಂಡು ಕೊಂಡಿದ್ದೇನೆ ಎಂದು ಅವರು ಬಹಿರಂಗ ಪಡಿಸಿದ್ದಾರೆ. ಗನೆರಿವಾಲ್ ಸಂಸ್ಕರಿಸಿದ ಸಕ್ಕರೆಯನ್ನು ತಾಳೆ ಬೆಲ್ಲಕ್ಕೆ ಹೋಲಿಸಿದ್ದಾರೆ ಮತ್ತು ಉತ್ಪಾದನಾ ಪ್ರಕ್ರಿಯೆ ಪೂರ್ಣಗೊಂಡ ನಂತರವೂ ಬೆಲ್ಲದಲ್ಲಿನ ಖನಿಜಾಂಶ ಹಾಗೇ ಉಳಿದಿವೆ ಎಂದು ಹೇಳಿದರು.

  ತಾಳೆ ಬೆಲ್ಲವು ಕಬ್ಬಿಣ, ಮೆಗ್ನೀಶಿಯಮ್, ರಂಜಕ ಮತ್ತು ಪೊಟ್ಯಾಸಿಯಮ್ ನಂತಹ ಖನಿಜಗಳ ಮಿಶ್ರಣವಾಗಿದೆ ಎಂದು ಅವರು ಹೇಳಿದರು. ತಾಳೆ ಬೆಲ್ಲವು ರಕ್ತಹೀನತೆಯ ವಿರುದ್ಧ ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ. ಬೆಲ್ಲದ ಆರೋಗ್ಯ ಪ್ರಯೋಜನಗಳ ಬಗ್ಗೆ ಹೇಳುವುದಾದರೆ, ಇದು ಆಮ್ಲೀಯತೆ, ಹೊಟ್ಟೆ ಉಬ್ಬರವನ್ನು ಕಡಿಮೆ ಮಾಡುತ್ತದೆ ಮತ್ತು ಅಧಿಕ ರಕ್ತದೊತ್ತಡ ಹೊಂದಿರುವವರಿಗೂ ಇದು ತುಂಬಾನೇ ಸಹಾಯಕವಾಗಿದೆ.

  ಇದನ್ನು ಓದಿ: Sleep Tips: ರಾತ್ರಿ ನಿದ್ರೆ ಬರುತ್ತಿಲ್ಲವೇ? ಉತ್ತಮ ನಿದ್ರೆಗೆ 6 ಸರಳ ಸೂತ್ರಗಳು ಇಲ್ಲಿದೆ

  ಗನೆರಿವಾಲ್ ಅವರು ಇದೆ ರೀತಿಯ ಬೆಲ್ಲವನ್ನು ಬೇರೆ ರಾಜ್ಯಗಳಾದ ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಏನೆಂದು ಕರೆಯುತ್ತಾರೆ ಮತ್ತು ಇದರಿಂದ ಯಾವ ಯಾವ ತಿಂಡಿಗಳನ್ನು ತಯಾರಿಸುತ್ತಾರೆ ಎನ್ನುವುದರ ಬಗ್ಗೆ ಸಹ ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

  ಬೆಲ್ಲ(Jaggery) ಒಂದು ಶಕ್ತಿವಾಹಕ. ಇಂದಿಗೂ ಕೆಲವು ಗ್ರಾಮಗಳ ಮನೆಗಳಲ್ಲಿ ಹೊರಗಡೆಯಿಂದ ದಣಿವಾಗಿ ಬಂದವರಿಗೆ ಒಂದು ಲೋಟ ನೀರು ಮತ್ತು ಬೆಲ್ಲ ಕೊಡುವ ಸಂಪ್ರದಾಯವಿದೆ. ಏಕೆಂದರೆ ಇದು ತಕ್ಷಣವೇ ದೇಹಕ್ಕೆ ಶಕ್ತಿ ನೀಡಿ ಆಯಾಸವನ್ನು ಕಡಿಮೆ ಮಾಡುತ್ತದೆ. ಇನ್ನು ಅಡುಗೆ ಮನೆಯಲ್ಲಿ ಟೀ, ಕಾಫಿ, ಸಿಹಿ ಪದಾರ್ಥಗಳಲ್ಲಿ ಬೆಲ್ಲ, ಸಕ್ಕರೆಗೆ ಅಗ್ರಸ್ಥಾನ. ಇವೆರಡು ಇಲ್ಲದೇ ಯಾವ ಸಿಹಿ ಅಡುಗೆಗಳು ಪೂರ್ಣಗೊಳ್ಳುವುದೇ ಇಲ್ಲ. ಇತ್ತೀಚಿನ ದಿನಗಳಲ್ಲಿ ಎಲ್ಲಾ ವಯೋಮಾನದವರಿಗೂ ಹೊಂದಿಕೆಯಾಗಲಿ ಎಂದು ಆರೋಗ್ಯದ(Health) ದೃಷ್ಟಿಯಿಂದ ಜನರು ಸಕ್ಕರೆ ಬಳಕೆ ಕಡಿಮೆ ಮಾಡಿ ಬೆಲ್ಲವನ್ನು ಯಥೇಚ್ಛವಾಗಿ ಬಳಸಲಾಗುತ್ತಿದೆ. ಬೆಲ್ಲದಲ್ಲಿ ಖನಿಜಾಂಶ, ಮೆಗ್ನೀಷಿಯಂ, ಪೊಟ್ಯಾಶಿಯಂ, ಮ್ಯಾಂಗನೀಸ್ ಅಂಶ ಹೆಚ್ಚಾಗಿರುತ್ತದೆ. ಸಕ್ಕರೆ(sugar)ಯ ಪರ್ಯಾಯವಾಗಿ ಬಳಕೆಯಾಗುತ್ತಿರುವ ಬೆಲ್ಲದಲ್ಲೂ ಹಲವು ವಿಧಗಳಿವೆ. ಹೌದು ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಬೆಲ್ಲಗಳು ದೊರಕುತ್ತದೆ. ಬೆಲ್ಲಕ್ಕೆ ಹಿಂದಿಯಲ್ಲಿ ಗುರ್, ತೆಲುಗಿನಲ್ಲಿ ಬೆಲ್ಲಮ್, ತಮಿಳಿನಲ್ಲಿ ವೆಲ್ಲಮ್, ಮಲಯಾಳಿಯಲ್ಲಿ ಶರ್ಕರ, ಕನ್ನಡದಲ್ಲಿ ಬೆಲ್ಲ, ಮರಾಠಿಯಲ್ಲಿ ಗುಲ್ ಎಂದು ಕರೆಯುತ್ತಾರೆ.
  First published: